Basavaraj Bommai: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಬೊಂಬೆ ಸಿಎಂ ಎಂದ ಕಾಂಗ್ರೆಸ್!

ಬೊಮ್ಮಾಯಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ಮತ್ತೆ ಸಿಎಂ ಬದಲಾವಣೆ ಆಗತ್ತೆ ಅನ್ನೋ ವದಂತಿ ಹಬ್ಬಿ ನಂತರ ಕೊಂಚ ತಣ್ಣಗಾಗಿತ್ತು. ಈಗ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಸಿಎಂ ಬದಲಾವಣೆ ಚರ್ಚೆಗೆ ರೆಕ್ಕೆಪುಕ್ಕ ಬಂದಿದೆ.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ಕರ್ನಾಟಕದಲ್ಲಿ (Karnataka) ಯಡಿಯೂರಪ್ಪ (BSY), ಬಸವರಾಜ ಬೊಮ್ಮಾಯಿ ಬಳಿಕ ಮತ್ತೊಬ್ಬ ಮುಖ್ಯಮಂತ್ರಿ (Chief Minister) ಆಯ್ಕೆಯಾಗಲಿದ್ದಾರಾ? ಹೀಗೊಂದು ಅನುಮಾನ ಮೂಡೋಕೆ ಕಾರಣವಾಗಿರೋದು ಕಾಂಗ್ರೆಸ್​​ನ (Congress) ಟ್ವೀಟ್. ಕಾಂಗ್ರೆಸ್​​ ಮಾಡಿದ ಟ್ವೀಟ್ (Tweet) ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್‌ ಪೇಜ್‌ನಲ್ಲಿ ಮಾಡಿರುವ ಆ ಒಂದು ಟ್ವೀಟ್ ಸಿಎಂ ಬೊಮ್ಮಾಯಿ ಸೇರಿ ಬಿಜೆಪಿ ಮುಖಂಡರ ನಿದ್ದೆಗೆಡಿಸಿದೆ. ಒಂದು ಟ್ವೀಟ್​ನ ಬೆನ್ನಲ್ಲೇ ಬಿಜೆಪಿ (BJP) ರಾಜ್ಯಾಧ್ಯಕ್ಷರಾದಿ ಎಲ್ಲರೂ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮಾತ್ರವಲ್ಲ ಇದು ಕಾಂಗ್ರೆಸ್​-ಬಿಜೆಪಿ ನಾಯಕರ ನಡುವಿನ ವಾಕ್ಸಮರಕ್ಕೂ (Talk war) ಕಾರಣವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸ್ಥಾನ ಬಿಜೆಪಿ ಹೈಕಮಾಂಡ್​ಗೆ ಬೊಂಬೆ ಇದ್ದ ಹಾಗೇ ಅಂತಾ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಯಡಿಯೂರಪ್ಪ ರಾಜೀನಾಮೆಯ ಬಳಿಕ ಅಧಿಕಾರ ಸ್ವೀಕರಿಸಿದ್ದ ಬಸವರಾಜ ಬೊಮ್ಮಾಯಿ ಒಂದು ವರ್ಷ ಪೂರ್ಣಗೊಳಿಸಿದ್ದಾರೆ. ಬೊಮ್ಮಾಯಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ಮತ್ತೆ ಸಿಎಂ ಬದಲಾವಣೆ ಆಗತ್ತೆ ಅನ್ನೋ ವದಂತಿ ಹಬ್ಬಿ ನಂತರ ಕೊಂಚ ತಣ್ಣಗಾಗಿತ್ತು. ಈಗ ಕಾಂಗ್ರೆಸ್ ಟ್ವೀಟ್​ಮಾಡಿದ್ದು ಸಿಎಂ ಬದಲಾವಣೆ ಚರ್ಚೆಗೆ ರೆಕ್ಕೆಪುಕ್ಕ ಬಂದಿದೆ.

ಕಾಂಗ್ರೆಸ್ ಟ್ವೀಟ್‌ನಲ್ಲೇನಿದೆ?
ರಾಜ್ಯಕ್ಕೆ ಸಂಕಟ, ಬಿಜೆಪಿಗೆ ಅಧಿಕಾರದಾಟ. ಅತಿವೃಷ್ಟಿಯಿಂದ ಜನತೆ ಪರದಾಡುತ್ತಿರುವಾಗ ನೆರವು ನೀಡೋದು ಬಿಟ್ಟು ಬಿಜೆಪಿ ಪಕ್ಷ 3ನೇ ಸಿಎಂ ಪ್ರತಿಷ್ಠಾಪನೆಗೆ ಕಸರತ್ತು ನಡೆಸುತ್ತಿದೆ. ರಾಜ್ಯಕ್ಕೆ ಸಂಕಷ್ಟ ಎದುರಾದಾಗಲೆಲ್ಲ ಬಿಜೆಪಿ ರಾಜಕೀಯದಾಟಕ್ಕೆ ಚಾಲನೆ ಕೊಡುತ್ತದೆ ಅಂತಾ ಕಾಂಗ್ರೆಸ್ ಟ್ವೀಟ್ ಮಾಡಿತ್ತು.

Karnataka Politics congress tweet Puppet Chief Minister Bommai bjp shock
ಸಿಎಂ ಬಸವರಾಜ ಬೊಮ್ಮಾಯಿ


ಬೊಂಬೆ ಬೊಮ್ಮಾಯಿ ಎಂದ ಕಾಂಗ್ರೆಸ್​!
ಕಾಂಗ್ರೆಸ್ ಬೊಮ್ಮಾಯಿಯವರನ್ನು ​ಬೊಂಬೆ ಸಿಎಂ ಅಂತಾ ವ್ಯಂಗ್ಯವಾಡಿದೆ. ಹೈಕಮಾಂಡಿಗೆ ಕರ್ನಾಟಕದ ಸಿಎಂಗಳೆಂದರೆ ಬೊಂಬೆ ಇದ್ದಹಾಗೆ. ಆಡಿಸಿಯೂ ನೋಡುತ್ತಾರೆ, ಬೀಳಿಸಿಯೂ ನೋಡುತ್ತಾರೆ. ಯಡಿಯೂರಪ್ಪರನ್ನೇ ಮನೆಗೆ ಕಳಿಸಿರುವಾಗ ಬೊಂಬೆ  ಬೊಮ್ಮಾಯಿ ಯಾವ ಲೆಕ್ಕ ಅಂತಾ ಟ್ವೀಟ್ ಮಾಡಿದೆ.

ಕಾಂಗ್ರೆಸ್ ಟ್ವೀಟ್​ಗೆ ಬಿಎಸ್​ವೈ ಕಿಡಿ
ಚುನಾವಣೆಗೆ 7-8 ತಿಂಗಳು ಇರುವಾಗ ಸಿಎಂ ಬದಲಾವಣೆ ಪ್ರಶ್ನೆ ಬರುವುದಿಲ್ಲ. ಮುಖ್ಯಮಂತ್ರಿಗಳಾಗಿ ಬೊಮ್ಮಾಯಿಯವರೇ ಮುಂದುವರಿತಾರೆ. ಯಾರು ಏನೇ ಹೇಳಿದ್ರು ಆ ರೀತಿಯ ಬದಲಾವಣೆಗಿಳಿಲ್ಲ ಅಂತಾ ಗರಂ ಆಗಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದೇ ನಮ್ಮ ಉದ್ದೇಶ ಅಂತಾ ಎಚ್ಚರಿಸಿದ್ದಾರೆ.

ಇದನ್ನೂ ಓದಿ: 8ನೇ ಬಾರಿಗೆ ಬಿಹಾರ ಸಿಎಂ ಆದ ನಿತೀಶ್ ಕುಮಾರ್; ತೇಜಸ್ವಿ ಯಾದವ್ ಉಪಮುಖ್ಯಮಂತ್ರಿ

ಕಾಂಗ್ರೆಸ್​ನಿಂದ ಸರಣಿ ಟ್ವೀಟ್​
ಕಾಂಗ್ರೆಸ್​ ಸರಣಿ ಟ್ವೀಟ್​ ಮಾಡಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕ್ತಿದೆ. ಅಮಿತ್ ಶಾ ಬೆಂಗಳೂರಿಗೆ ಭೇಟಿ ನೀಡಿದ ನಂತರ ರಾಜ್ಯವು 3ನೇ ಸಿಎಂನ್ನು ನೋಡಲು ಸಿದ್ಧವಾಗಿದೆ. ಬೊಮ್ಮಾಯಿ ಕುರ್ಚಿ ಬಿಡಲು ಗಂಟೆಗಳನ್ನು ಎಣಿಸುತ್ತಿರುವಂತೆ ಕಾಣುತ್ತಿದೆ ಅಂತಾ ಹೇಳಿದೆ.

ಬಿಜೆಪಿ ನಾಯಕರು ಕೆಂಡ
ಸಿಎಂ ಸ್ಥಾನ ಬದಲಾವಣೆ ಆಗಲಿದೆ ಎಂದು ಕಾಂಗ್ರೆಸ್‌ ಪಕ್ಷದ ಯಾವ ಮುಖಂಡರೂ ಗಟ್ಟಿ ಧ್ವನಿಯಲ್ಲಿ ಹೇಳಿಲ್ಲ. ಆದರೆ ಕೇವಲ ಒಂದು ಟ್ವೀಟ್‌ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಘಟಾನುಘಟಿ ನಾಯಕರು ಸರಣಿ ಹೇಳಿಕೆಗಳನ್ನು ನೀಡುವ ಮೂಲಕ ಸಿಎಂ ಸ್ಥಾನ ಬದಲಾವಣೆ ಇಲ್ಲ ಎಂದು ಸಾರಿ ಸಾರಿ ಹೇಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಜನರಿಗೆ ಶುಭಸುದ್ದಿ! ವಿಶೇಷ ರೈಲು ಆರಂಭ

ಆರ್.ಅಶೋಕ್ ಕಾಂಗ್ರೆಸ್​ಗೆ ಸವಾಲ್ ಹಾಕಿದ್ದಾರೆ. ಸಿದ್ದು ಕಾಂಗ್ರೆಸ್, ಡಿಕೆ ಕಾಂಗ್ರೆಸ್ ಆಗಿ ಇಬ್ಭಾಗ ಆಗುತ್ತದೆ. ನಿಮ್ಮ ತಟ್ಟೆಯ ಹೆಗ್ಗಣ ನೋಡಿ, ನಮ್ಮ ನೋಣ ನೋಡಬೇಡಿ. ನಿಮಗೆ ತಾಖತ್ ಇದ್ರೆ, ಧೈರ್ಯ ಇದ್ದರೆ ನಿಮ್ಮ ಸಿಎಂ ಅಭ್ಯರ್ಥಿ ಘೋಷಣೆ ಮಾಡಿ ಅಂತಾ ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಆಕ್ರೋಶ ಹೊರಹಾಕಿದ್ದಾರೆ. ಸುಳ್ಳು ಕಾಂಗ್ರೆಸ್ ನಾಯಕರ ಮನೆ ದೇವರು. ಸಿಎಂ ಬದಲಾವಣೆ ಅಂತಾ ಸುಳ್ಳು ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಹಿಟ್ & ರನ್ ಮಾಡುವವರು. ಪರಮೇಶ್ವರ್ ಅವರನ್ನ ಸಿದ್ದರಾಮಯ್ಯ ಸೋಲಿಸಿದರು. 2023ರಲ್ಲಿ ಸಿದ್ದರಾಮಯ್ಯ ಅವರನ್ನು ಡಿಕೆಶಿ ಸೋಲಿಸುತ್ತಾರೆ ಅಂತಾ ಕಿಡಿಕಾರಿದ್ರು.
Published by:Thara Kemmara
First published: