• Home
  • »
  • News
  • »
  • state
  • »
  • Karnataka Politics: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ, ಕಾಂಗ್ರೆಸ್ ಬಳಿ ಮಹತ್ವದ ಅಸ್ತ್ರ!

Karnataka Politics: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಸಂಕಷ್ಟ, ಕಾಂಗ್ರೆಸ್ ಬಳಿ ಮಹತ್ವದ ಅಸ್ತ್ರ!

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಬಿಜೆಪಿ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್​ ಒಂದಾದ ಬಳಿಕ ಮತ್ತೊಂದರಂತೆ ಸರ್ಕಾರದ ವಿರುದ್ಧ ದಾಳ ಉರುಳಿಸುತ್ತಿದೆ. ಸದ್ಯ ಕೈ ನಾಯಕರಿಗೆ ಶಿವಮೊಗ್ಗದ ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ವಿಚಾರ ಸಿಕ್ಕಿದೆ.

  • News18 Kannada
  • Last Updated :
  • Shimoga, India
  • Share this:

ಶಿವಮೊಗ್ಗ(ನ.18): ಕರ್ನಾಟಕದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ (Karnataka Assembly Elections) ನಡೆಯಲಿದೆ. ಸದ್ಯ ಎಲ್ಲಾ ರಾಜಕೀಯ ನಾಯಕರು ಹಾಗೂ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲುವ ಸಿದ್ಧತೆ ಪ್ರಾರಂಭಿಸಿವೆ. ಈ ನಿಟ್ಟಿನಲ್ಲಿ ಅನೇಕ ರೀತಿಯ ರಣತಂತ್ರಗಳನ್ನು ಹೆಣೆಯುತ್ತಿದೆ. ವಿರೋಧ ಪಕ್ಷಗಳು ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿದರೆ ಸರ್ಕಾರ ಇವುಗಳಿಂದ ಹೊರ ಬರುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದೆ. ಸದ್ಯ ಈ ರಾಜಕೀಯ ಜಟಾಪಟಿಯಲ್ಲಿ ಕಾಂಗ್ರೆಸ್​ (Congress) ಕೈಗೆ ಸರ್ಕಾರದ ವಿರುದ್ಧ ಸೆಣಸಾಡಲು ಶಿವಮೊಗ್ಗದ ಸಮಸ್ಯೆಯೊಂದು ಅಸ್ತ್ರವಾಗಿ ಲಭಿಸಿದೆ.


ಹೌದು ಬಿಜೆಪಿ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್​ ಒಂದಾದ ಬಳಿಕ ಮತ್ತೊಂದರಂತೆ ಸರ್ಕಾರದ ವಿರುದ್ಧ ದಾಳ ಉರುಳಿಸುತ್ತಿದೆ. ಸದ್ಯ ಕೈ ನಾಯಕರಿಗೆ ಶಿವಮೊಗ್ಗದ ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ವಿಚಾರ ಸಿಕ್ಕಿದೆ. ಸದ್ಯ ಸಂತ್ರಸ್ಥರ ಈ ಸಮಸ್ಯೆ ಮುಂದಿಟ್ಟುಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾಗಿವೆ. ಶರಾವತಿ ಸಂತ್ರಸ್ಥರಿಗೆ ನೀಡಿದ ಹಕ್ಕುಪತ್ರವನ್ನು ಸರ್ಕಾರ ರಜಾ ಮಾಡಿದ್ದು, ಈ ವಿಚಾರವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್​ ಹೋರಾಟ ಆರಂಭಿಸಿದೆ.


Bengaluru: ಆಟವಾಡುವಾಗ ಆಯತಪ್ಪಿ ರಾಜಕಾಲುವೆಗೆ ಬಿದ್ದ ಮಗು; ಶೋಧಕಾರ್ಯ ಮಾಡಿದ್ರು ಪತ್ತೆಯಾಗದ ಕಂದ


ಮಲೆನಾಡಿನಲ್ಲಿ ಅರಣ್ಯ ಹಕ್ಕು ಕಾಯ್ದೆ, ಶರಾವತಿ ಸಂತ್ರಸ್ಥರ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಚುನಾವಣಾ ಸಮಯದಲ್ಲಿ ಹೋರಾಟ ರೂಪಿಸಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ನೇರಾ ನೇರ ಆರೋಪ ಮಾಡುತ್ತಿದೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಸದ್ಯ ಬಿಜೆಪಿ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ ಶರಾವತಿ ಸಂತ್ರಸ್ಥರ ಸಮಸ್ಯೆ ಇತ್ಯರ್ಥಕ್ಕೆ ಸಮಿತಿ ರಚನೆ ಮಾಡುವಂತೆ ಒತ್ತಾಯಿಸಿದೆ.


Bharat Jodo yatra 17 day in karnataka mrq


ಶರಾವತಿ ಮುಳುಗಡೆ ಸಂತ್ರಸ್ಥರ ಪರವಾಗಿ ಕೆಪಿಸಿಸಿ ಈಗಾಗಲೇ ಕಾಂಗ್ರೆಸ್ ವಿಧಾನ ಪರಿಷತ್ ಮಾಜಿ ಸದಸ್ಯ ಅರ್.ಪ್ರಸನ್ನಕುಮಾರ್ ನೇತೃತ್ವದಲ್ಲಿ ಜಾಗೃತ ಸಮಿತಿ ರಚಿಸಿದೆ. ಇತ್ತೀಚೆಗೆ ಶಿವಮೊಗ್ಗ ಈಡಿಗರ ಭವನದಲ್ಲಿ ಈ ಸಮಿತಿಯ ಮೊದಲ ಸಭೆಯೂ ನಡೆದಿದೆ. ಈ ಸಭೆಯಲ್ಲಿ ಇದೇ ತಿಂಗಳ 28 ರಂದು ಸಂತ್ರಸ್ತರ ಪಾದಯಾತ್ರೆ ಮತ್ತು ಬಹಿರಂಗ ಸಭೆಯನ್ನು ಆಯೋಜಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.


ಇನ್ನು ಬಿಜೆಪಿಯ ನಡೆ ಖಂಡಿಸಿ ಆಯೋಜಿಸಲಾದ ಈ ಪಾದಯಾತ್ರೆಯಲ್ಲಿ ಸುರ್ಜೆವಾಲಾ, ಡಿಕೆಶಿ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಒಟ್ಟಾರೆಯಾಗಿ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ಕಾಂಗ್ರೆಸ್​ ನಾಯಕರು ಭರ್ಜರಿಯಾಗೇ ಸ್ಪರ್ಧೆ ನೀಡುತ್ತಿದ್ದಾರೆ.

Published by:Precilla Olivia Dias
First published: