• Home
 • »
 • News
 • »
 • state
 • »
 • Karnataka Elections: 'ನಾ ನಾಯಕಿ'ಗೆ ಟಾಂಗ್ ಕೊಡುತ್ತಲೇ ತಮ್ಮ ಸರ್ಕಾರದ ಯೋಜನೆಗಳ ಪಟ್ಟಿ ಕೊಟ್ಟ ಸಿಎಂ ಬೊಮ್ಮಾಯಿ!

Karnataka Elections: 'ನಾ ನಾಯಕಿ'ಗೆ ಟಾಂಗ್ ಕೊಡುತ್ತಲೇ ತಮ್ಮ ಸರ್ಕಾರದ ಯೋಜನೆಗಳ ಪಟ್ಟಿ ಕೊಟ್ಟ ಸಿಎಂ ಬೊಮ್ಮಾಯಿ!

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ನಿತಿನ್ ಗಡ್ಕರಿಗೆ ಧಮ್ಕಿ ಕಾಲ್ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಖಂಡಿತಾ ಥ್ರೆಟ್ ಕಾಲ್ ಮಾಡಿದವರನ್ನು ಹಿಡಿದೇ ತೀರುತ್ತೇವೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 • Share this:

  ಹುಬ್ಬಳ್ಳಿ(ಜ.17):  ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ (Union Minister Ntin Gadkari) ಬೆದರಿಕೆ ಕರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM< Basavaraj Bommai) ತಿಳಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಜೈಲಿನಿಂದಲೇ ಕರೆ ಹೋಗಿರೋದ್ರಿಂದ ಖಂಡಿತಾ ಆರೋಪಿಗಳು ಸಿಗ್ತಾರೆ. ಕರೆ ಮಾಡಿದವರ ಹಿನ್ನೆಲೆ ಏನು, ಯಾರು ಅವರ ಹಿಂದೆ ಇದ್ದಾರೆ ಎನ್ನುವುದು ಬಹಳ ಮುಖ್ಯ ಅದನ್ನು ನಾವು ಹೊರ ತೆಗೆಯುತ್ತೇವೆ ಎಂದರು. ಇಂದಿನ ದೆಹಲಿ ಭೇಟಿಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಬೊಮ್ಮಾಯಿ, ಸಂಪುಟ ವಿಸ್ತರಣೆ (Cabinet Ecxpansion) ಬಗ್ಗೆಯೂ ಪ್ರತಿಕ್ರಿಯೆ ನೀಡಲಿಲ್ಲ.


  ಪ್ರಿಯಾಂಕ್ ವಾದ್ರಾ ಇಲ್ಲಿವರೆಗೂ ನಾಯಕಿಯಾಗಿಲ್ವಾ?


  ನಾ.. ನಾಯಕಿ.. ನಾ.. ನಾಯಕಿ.. ಅಂತ ಕಾಂಗ್ರೆಸ್ ಕಾರ್ಯಕ್ರಮದ ಹೆಸರು ಇಟ್ಟಿದ್ದು, ಅಂದ್ರೆ ಇವ್ರು ಇಲ್ಲಿವರೆಗೂ ಪ್ರಿಯಾಂಕಾ ವಾದ್ರಾ ನಾಯಕಿಯಾಗಿರಲಿಲ್ಲವೇ? ಎಂದು ಸಿಎಂ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ನಿಂದ ನಾ ನಾಯಕಿ ಕಾರ್ಯಕ್ರಮ ವಿಚಾರಕ್ಕೆ ಟಾಂಕ್ ಕೊಟ್ಟಿದ್ದಾರೆ. ನಾ ನಾಯಕಿ ಅಂತ ಘೋಷಿಸಿಕೊಳ್ಳೋ ಅನಿವಾರ್ಯತೆ ಕಾಂಗ್ರೆಸ್ ಗೆ ಬಂದಿದೆ. ಕಾಂಗ್ರೆಸ್ ನವರು ಪ್ರಿಯಾಂಕ್ ವಾದ್ರಾ ನಾಯಕಿ ಅಂದುಕೊಳ್ಳಬಹುದು. ಆದ್ರೆ ನಮ್ಮ ಕರ್ನಾಟಕದಲ್ಲಿ ಪ್ರಿಯಾಂಕ್ ವಾದ್ರಾಳನ್ನು ನಾಯಕಿಯಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಪ್ರಿಯಾಂಕ ವಾದ್ರಾ ರಾಜ್ಯಕ್ಕೆ ಬರಲಿ ಎಂದಿದ್ದಾರೆ,


  ಇದನ್ನೂ ಓದಿ: CM Basavaraj Bommai: ಹಣೆಗೆ ಹಚ್ಚಿದ್ದ ಕುಂಕುಮ ಅಳಿಸಿಕೊಂಡ ಬೊಮ್ಮಾಯಿ; ಹುಬ್ಬಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಎಂ


  ನಾ ನಾಯಕಿಗೆ ಬಗ್ಗೆ ಸಿಎಂ ಲೇವಡಿ


  ಅಲ್ಲದೇ ಪ್ರಿಯಾಂಕಾ ಗಾಂಧಿಯವರ ನಾ ನಾಯಕಿ ಕಾರ್ಯಕ್ರಮವೇ ವಿಚಿತ್ರವಾಗಿದೆ ಎಂದಿದ್ದಾರೆ ಬೊಮ್ಮಾಯಿ. ನಾ.. ನಾಯಕಿ.. ನಾ.. ನಾಯಕಿ.. ಎಂದು ಕಾರ್ಯಕ್ರಮದ ಹೆಸರು ಇಟ್ಟಿದ್ದಾರೆ. ಅಂದ್ರೆ ಇವರು ಇಲ್ಲಿವರಗೂ ನಾಯಕಿಯಾಗಿರಲಿಲ್ಲವೇ..? ನಾ.. ನಾಯಕಿ ಅಂತ ಹೇಳಿಕೊಳ್ಳುವಷ್ಟು ಅನಿವಾರ್ಯತೆ ಕಾಂಗ್ರೆಸ್​ಗೆ ಬಂದಿತೇ..? ಪ್ರಿಯಾಂಕ್ ರನ್ನು ನಾಯಕಿ ಮಾಡೋಕೆ ನಮ್ಮ ಕರ್ನಾಟಕದ ಮಹಿಳೆಯರು ಸಿದ್ಧರಿಲ್ಲ. ಜನ ಶಕ್ತಿ ಕಾಂಗ್ರೆಸ್ ಪರವಾಗಿ ಇಲ್ಲದೇ ಇರೋದ್ರಿಂದ ಸ್ವಯಂ ಘೋಷಿತ ನಾಯಕಿ ಅಂತ ಘೋಷಿಸಿಕೊಳ್ತಿದಾರೆ ಎಂದು ಬೊಮ್ಮಾಯಿ ಲೇವಡಿ ಮಾಡಿದರು. ಮಹಿಳೆಯರಿಗೆ ಪ್ರತ್ಯೇಕ ಬಜೆಟ್ ಮಂಡನೆ ವಿಚಾರಕ್ಕೆ ಪ್ರತಿಕ್ರಿಯಿಸಿದಿ ಸಿಎಂ, ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತ ಗೊತ್ತಿರೋದ್ರಿಂದ ಸುಳ್ಳು ಭರವಸೆ ನೀಡ್ತಿದೆ ಎಂದರು.


  ಬಸವರಾಜ್ ಬೊಮ್ಮಾಯಿ, ಸಿಎಂ


  ಕಾಂಗ್ರೆಸ್ ಗೆ ವಿನಾಶದ ಕನಸು ಬೀಳ್ತಿವೆ ಎಂದ ಸಿಎಂ


  ಯಥಾ ಬುದ್ದಿ ತಥಾ ಮಾತು, ಕಾಂಗ್ರೆಸ್ ಗೆ ವಿನಾಶದ ಕನಸುಗಳು ಬೀಳ್ತಿವೆ. ಹೀಗಾಗಿ ಕಾಂಗ್ರೆಸ್ ನವರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡ್ತಿದಾರೆ ಎಂದು ಬೊಮ್ಮಾಯಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಯುವಜನೋತ್ಸವ ಅಲ್ಲ ವಿನಾಶೋತ್ಸವ ಎಂದ ಕಾಂಗ್ರೆಸ್ ಗೆ ಸಿಎಂ ತಿರುಗೇಟು ನೀಡಿದರು. ಹುಬ್ಬಳ್ಳಿ ಕ್ಯಾ ಬೋಲತಾ ಹೈ ಎಂದು ಮಾತು ಆರಂಭಿಸಿದ ಸಿಎಮ್, ಇವತ್ತು ಯುವಜನೋತ್ಸವ ಸಮಾರೋಪ ಸಮಾರಂಭ ಮಾಡ್ತಿದೀವಿ. ಅನುರಾಗ್ ಸಿಂಗ್ ಠಾಕೂರ್ ಬಂದಿದಾರೆ. ಬಹಳ ಅದ್ಭುತ ಯುವಜನೋತ್ಸವ ಆಗಿದೆ. ಬಹಳ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಈ ಭಾಗದಲ್ಲಿ ಈ ರೀತಿ ಕಾರ್ಯಕ್ರಮವಾದರೆ ಯುವಕರಿಗೆ ಸ್ಪೂರ್ತಿ ಸಿಗುತ್ತದೆ ಎಂದಿದ್ದಾರೆ.  ಇದನ್ನೂ ಓದಿ: CM Bommai: ಗಡಿನಾಡಿನ ಅಭಿವೃದ್ಧಿಗೆ 100 ಕೋಟಿ,  3 ಕೋಟಿ ವೆಚ್ಚದಲ್ಲಿ ಹಾವೇರಿಯಲ್ಲಿ ಕಸಾಪ ಭವನ; ಸಿಎಂ ಬೊಮ್ಮಾಯಿ


  ಇದೇ ವೇಳೆ ತಾವು ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ ನಾವು ಯುವಕರಿಗಾಗಿ ಹೊಸ ಪಾಲಿಸಿ ಮಾಡಿದ್ದೇವೆ. ಗ್ರಾಮೀಣ ಕ್ರೀಡೆಗಳಿಗೆ ಅವಕಾಶ ಕೊಟ್ಟಿದ್ದೇವೆ. ಯುವಕರಿಗಾಗಿ ನಾವು ಕ್ರೀಡೆ, ಶಿಕ್ಷಣದಲ್ಲಿ ಅವಕಾಶ. ಗ್ರಾಮೀಣ ಸೊಗಡಿನ ಕ್ರೀಡೆಗಳಿಗೆ ಅವಕಾಶ ಕೊಟ್ಟು ಪ್ರತಿಭೆ ಗುರುತಿಸಿದ್ದೇವೆ. ಆದರೆ ಇದಕ್ಕೆ ಕಾಂಗ್ರೆಸ್​ನವರು ಟೀಕೆ ಮಾಡುತ್ತದ್ದಾರೆ. ಯಥಾ ಬುದ್ದಿ ತಥಾ ಮಾತು, ಕಾಂಗ್ರೆಸ್​ಗೆ ವಿನಾಶದ ಕನಸುಗಳೇ ಬಿಳ್ತೀವೆ. ಇತ್ತೀಚೆಗೆ ಅವರ ಮಾತು ನಡುವಳಿಕೆ ಕೆಳ ಮಟ್ಟದ ಮಾತುಗಳನ್ನು ಆಡ್ತಿದಾರೆ. ಅವರು ಬಹಳ ಹತಾಶೆದಿಂದ ಹೀಗೆ ಮಾತಾಡ್ತಿದಾರೆ ಎಂದು ಬೊಮ್ಮಾಯಿ ಕಿಡಿಕಾರಿದರು.

  Published by:Precilla Olivia Dias
  First published: