Karnataka Politics: ಸಿದ್ದರಾಮಯ್ಯ ವರ್ಸಸ್ ಯಡಿಯೂರಪ್ಪ; ಕೆಲಸ ಮಾಡದ ಶಾಸಕರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

ರೋಗಿಗಳ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಸತ್ಯ ಏನು ಅಂತ ಗೊತ್ತಾಗುತ್ತದೆ. ಸಿದ್ದರಾಮಯ್ಯ ಬೇರೆ ಕೆಲಸವಿಲ್ಲದ ಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಯಡಿಯೂರಪ್ಪ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್

ಯಡಿಯೂರಪ್ಪ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್

  • Share this:
ಬಳ್ಳಾರಿಯ (Ballary) ವಿಮ್ಸ್ ಆಸ್ಪತ್ರೆಯಲ್ಲಿ ದುರಂತದ (VIMS Tragedy) ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕ್ರಮ ಆಗಬೇಕು. ಈ ಬಗ್ಗೆ ಈಗಾಗಲೇ ಅಧಿವೇಶನದಲ್ಲಿ ಹೇಳಿದ್ದೇನೆ. ಸಚಿವ ಶ್ರೀರಾಮುಲು (Minister Sriramulu) ಈ ವಿಚಾರವಾಗಿ ಸುಳ್ಳು ಹೇಳಿದ್ದಾರೆ.  ಈ ಬಗ್ಗೆ ವಿಚಾರಣೆ ಮಾಡಲು ಈಗ ಕಮಿಟಿ ಮಾಡಿದ್ದಾರೆ. ಸಚಿವರೇ ಜನರೇಟರ್​ ಇಲ್ಲದೇ ಸತ್ತಿದ್ದಾರೆ ಎಂದು ಹೇಳಿದ ಮೇಲೆ ಪರಿಹಾರ ಯಾಕೆ ಕೊಟ್ಟರು ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು. ಇದುವರೆಗೂ ಯಾವುದೇ ಸಚಿವರು ಆಸ್ಪತ್ರೆಗೆ ಭೇಟಿ ಕೊಟ್ಟಿಲ್ಲ. ಈ ಸರ್ಕಾರ ಬರೇ ಸುಳ್ಳು ಹೇಳುತ್ತಿದೆ. ಆರೋಗ್ಯ ಸಚಿವ ಡಾ ಸುಧಾಕರ್ (Health Minister Sudhakar) ಬಳ್ಳಾರಿಗೆ ಹೋಗಿ ಪರಿಶೀಲನೆ ನಡೆಸಬೇಕಿತ್ತು ಎಂದು ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದರು.

ಪ್ರಧಾನಿ ನರೇಂದ್ರ ಮೋದಿ 72ನೇ ಹುಟ್ಟುಹಬ್ಬದ ಹಿನ್ನೆಲೆ ಬಿಜೆಪಿ ಸೇವಾ ಪಾಕ್ಷಿಕದ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂಪ್ಪವರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಸಿದ್ದರಾಮಯ್ಯ ಹೇಳಿಕೆಗೆ ಬಿಎಸ್​​ವೈ ತಿರುಗೇಟು

ಈ ವೇಳೆ ಮಾತನಾಡಿದ ಯಡಿಯೂರಪ್ಪ, ಮೋದಿಯವರ ಜನ್ಮ ದಿನ ಪ್ರಯುಕ್ತ ಅನೇಕ ಕಡೆ ಆರೋಗ್ಯ ತಪಾಸಣೆ, ರಕ್ತದಾನ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿಯವರಿಗೆ 72 ವರ್ಷ ವಯಸ್ಸು. ಅವರು ನೂರು ವರ್ಷ ಕಾಲ ಬದುಕಿ ಈ ದೇಶದ ಸೇವೆ ಮಾಡಬೇಕು ಎಂದು ಹುಟ್ಟುಹಬ್ಬದ ಶುಭಾಶಯ ತಿಳಿಸಿದರು.

Karnataka Politics BS Yediyurappa reacts Siddaramaiah allegation mrq
ಬಿಎಸ್​ವೈ, ಮೋದಿ


ಬಳ್ಳಾರಿಯ ವಿಮ್ಸ್​​ನಲ್ಲಿ ರೋಗಿಗಳ ಸಾವು ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ರೋಗಿಗಳ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಸತ್ಯ ಏನು ಅಂತ ಗೊತ್ತಾಗುತ್ತದೆ. ಸಿದ್ದರಾಮಯ್ಯ ಬೇರೆ ಕೆಲಸವಿಲ್ಲದ ಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಬಳ್ಳಾರಿ ಭಾಗದಲ್ಲಿ ದೊಡ್ಡ ಸಮಾವೇಶ ಆಯೋಜನೆ ಆಗುತ್ತಿದ್ದು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ಬರುವ ಮಾಹಿತಿ ಇದೆ. ಸಮಾವೇಶ ಸಂಬಂಧ ಕೆಲವುಸ ಸಮಿತಿಗಳ ರಚನೆ ಮಾಡಲಾಗಿದೆ. ನನ್ನ ಕೆಲಸದ ವೇಗ ಹೆಚ್ಚಿರಬಹುದು, ಆದ್ರೆ ನನ್ನೊಬ್ಬನ ಕೈಯಿಂದಲೇ ಎಲ್ಲವೂ ಮಾಡೋದಕ್ಕೆ ಆಗಲ್ಲ.

ಇದನ್ನೂ ಓದಿ:  BSY ಪರ ಪ್ರಹ್ಲಾದ್​ ಜೋಶಿ ಬ್ಯಾಟಿಂಗ್​; ಸಿದ್ದು ವಿರುದ್ಧ ಸಚಿವರು ಸಿಡಿಮಿಡಿ!

ಕಾರ್ಯಕರ್ತರಿಗೆ ಡಿಕೆಶಿ ಸಂಘಟನೆ ಸಂದೇಶ

ಸಂಘಟನೆ ಬಹಳ ಮುಖ್ಯ. ಯಾವ ಅಸಹಕಾರವೂ ಇಲ್ಲ. ಅಸೆಂಬ್ಲಿಯಲ್ಲಿ ಸಿದ್ದರಾಮಯ್ಯ ಮಾತ್ರ ವಿರೋಧ ಪಕ್ಷದ ಕೆಲಸ ಮಾಡಲು ಆಗುತ್ತಾ? ನನ್ನನ್ನೂ ಸೇರಿದಂತೆ ಎಲ್ಲಾ ಶಾಸಕರು ಸಹಕರಿಸಬೇಕು. ಆಗ ಮಾತ್ರ ವಿರೋಧ ಪಕ್ಷವಾಗಿ ನಾವು ಕೆಲಸ ಮಾಡಬಹುದು ಎಂದು ಕಾರ್ಯಕರ್ತರಿಗೆ ಸಂಘಟನೆಯ ಸಂದೇಶ ರವಾನಿಸಿದರು.

ನೋಟಿಸ್​ ಹಿನ್ನೆಲೆ ದೆಹಲಿಗೆ ತೆರಳಿ ವಿಚಾರಣೆ ಹಾಜರಾಗುತ್ತೇನೆ. ಯಾವ ಕಾರಣಕ್ಕೆ ಹೊಸದಾಗಿ ನೋಟಿಸ್ ಕೊಟ್ಟಿದ್ದಾರೋ ಗೊತ್ತಿಲ್ಲ. ಅವರ ಬಳಿ ಎಲ್ಲ ಡಿಟೇಲ್ಸ್ ಇತ್ತೂ. ಆದರೂ ಹೊಸ ರೀತಿಯಲ್ಲಿ ಕೇಳಿದ್ದಾರೆ. ನಾನು ವಿಚಾರಣೆಗೆ ಗೈರಾಗಬಹುದಿತ್ತು. ಆದರೆ ವಿಚಾರಣೆಯಿಂದ ಓಡಿ ಹೋದಂತಾಗುತ್ತದೆ. ಹಾಗೆ ಮಾಡುವುದಕ್ಕೆ ನಾನು ತಯಾರಿಲ್ಲ. ಮೈಸೂರಿನಿಂದ ಬಂದ ಬಳಿಕ ದೆಹಲಿಗೆ ತೆರಳಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದರು.

Karnataka Politics BS Yediyurappa reacts Siddaramaiah allegation mrq
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ


ಕೆಲಸ ಮಾಡದ ಶಾಸಕರಿಗೆ ಡಿಕೆಶಿ ಎಚ್ಚರಿಕೆ

ಕೆಲಸ ಮಾಡದ ಶಾಸಕರಿಗೆ ಡಿಕೆ ಶಿವಕುಮಾರ್ ಮತ್ತೆ ಎಚ್ಚರಿಕೆ ನೀಡಿದರು.  ಶಾಸಕರು ಏನೇನು ಮಾಡಬೇಕು ಅಂತ ಸುರ್ಜೆವಾಲಾ ಟಾರ್ಗೆಟ್ ಕೊಟ್ಟಿದ್ದಾರೆ. ನಾನಲ್ಲ ಸುರ್ಜೆವಾಲಾ ಅವರೇ ಶಾಸಕರಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಕೆಲಸ ಮಾಡದವರಿಗೆ ಯಾಕೆ ಟಿಕೆಟ್ ಕೊಡಬೇಕು?. ನನಗೆ  ಚುನಾವಣೆಯಲ್ಲಿ ನಂಬರ್ ಬೇಕು ಮತ್ತು ನಮ್ಮ ಸರ್ಕಾರ ರಚನೆ ಆಗಬೇಕು ಎಂದರು.

ಇದನ್ನೂ ಓದಿ:  Love Jihad Case: ನಮ್ದು ಲವ್ ಜಿಹಾದ್ ಅಲ್ಲ; ನಾನೇ ಮೆಚ್ಚಿ ಮದುವೆಯಾಗಿದ್ದು ಎಂದ ಚೈತ್ರಾ!

ಸುಮ್ಮನೆ ಶಾಸಕರು ಕ್ಷೇತ್ರದಲ್ಲಿ ಮದುವೆ ಅಟೆಂಡ್ ಮಾಡ್ಕೊಂಡು ಟೇಪ್ ಕಟ್ ಮಾಡ್ಕೊಂಡು ಇದ್ರೆ ಆಗಲ್ಲ. ಬೂತ್ ಮಟ್ಟಕ್ಕೆ ಹೋಗಿ ಕೆಲಸ ಮಾಡಬೇಕು ಅನ್ನೋದು ಪರಿಕಲ್ಪನೆ. ಆ ರೀತಿ ಕೆಲಸ ಮಾಡಿದರೆ ಮಾತ್ರ ಸಂಘಟನೆ ಆಗುತ್ತದೆ ಎಂದು ಹೇಳಿದರು.
Published by:Mahmadrafik K
First published: