• Home
 • »
 • News
 • »
 • state
 • »
 • Karnataka Politics: ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ; ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ; ನಳಿನ್​ಕುಮಾರ ಕಟೀಲ್

Karnataka Politics: ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ; ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ; ನಳಿನ್​ಕುಮಾರ ಕಟೀಲ್

ನಳೀನ್ ಕುಮಾರ್ ಕಟೀಲ್.

ನಳೀನ್ ಕುಮಾರ್ ಕಟೀಲ್.

ಬಿಎಸ್​ವೈ  ಸಿಎಂ ಆದ ಮರುದಿನದಿಂದ ಮುಖ್ಯಮಂತ್ರಿ ಬದಲಾವಣೆ, ಮುಖ್ಯಮಂತ್ರಿ ಬದಲಾವಣೆ ಅಂತಿದ್ದಾರೆ. ಎರಡು ವರ್ಷ ಆಯ್ತು, ಅವರೇ ಸಿಎಂ ಆಗಿದ್ದಾರೆ. ಈ ಪ್ರಶ್ನೆ ಅಪ್ರಸ್ತುತ ಎಂದು ಕಟೀಲ್ ಹೇಳಿದರು.

 • Share this:

  ಹಾವೇರಿ(ಜೂ.07): ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ, ನಮ್ಮೆಲ್ಲರ ಸರ್ವಸಮ್ಮತಿಯ ನಾಯಕ ಯಡಿಯೂರಪ್ಪನವರು. ನಮ್ಮ‌ ಪಾರ್ಟಿಯ ಕರ್ನಾಟಕದ ಹಿರಿಯ ನಾಯಕರು ಯಡಿಯೂರಪ್ಪನವರು.  ರಾಜ್ಯದ ಜನರು ಆಶೀರ್ವಾದ ಮಾಡಿ ಸಿಎಂ ಸ್ಥಾನವನ್ನ ಕೊಟ್ಟಿದ್ದಾರೆ.  ಮುಖ್ಯಮಂತ್ರಿಯ ಬದಲಾವಣೆ, ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ. ಈ ಚರ್ಚೆಗಳು ಅಪ್ರಸ್ತುತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿದ್ದಾರೆ.


  ಯಡಿಯೂರಪ್ಪನವರು ಬಹಳ ಒಳ್ಳೆಯ ಸಂದೇಶವನ್ನ ಕೊಟ್ಟಿದ್ದಾರೆ. ಭಾರತೀಯ ಜನತಾ ಪಾರ್ಟಿಯ ವಿಶಿಷ್ಟತೆ ಅದು. ಕಾರ್ಯಕರ್ತರಿಂದ ಹಿಡಿದು ನಾಯಕರವರೆಗೆ ಯಾರೂ ಅಧಿಕಾರಕ್ಕಾಗಿ ಅಂಟಿ ಕೂತವರಲ್ಲ. ಪಾರ್ಟಿಯ ಸೂಚನೆಯ ಆಧಾರದ ಮೇಲೆ ಕಾರ್ಯಕರ್ತ ಕೆಲಸ ಮಾಡ್ತಾನೆ. ಅದನ್ನ ಯಡಿಯೂರಪ್ಪ ನಮ್ಮೆಲ್ಲ ಕಾರ್ಯಕರ್ತರಿಗೆ ಆದರ್ಶಪ್ರಾಯರಾಗಿ ಹೇಳಿದ್ದಾರೆ ಎಂದರು.


  ನಿನ್ನೆ ಸಚಿವ ಯೋಗೇಶ್ವರ ಅವರೂ ಹೇಳಿಕೆ ಕೊಟ್ಟಿದ್ದಾರೆ. ನಮ್ಮಲ್ಲಿ ಯಾವುದೇ ರೀತಿಯಲ್ಲಿ ಮುಖ್ಯಮಂತ್ರಿಗಳ ಬಗ್ಗೆ ಚರ್ಚೆ ಇಲ್ಲ. ಚರ್ಚೆ ಎಲ್ಲಿಂದ‌ ಸೃಷ್ಟಿ ಆಗ್ತಿದೆ ಅಂತಾ ಆಶ್ಚರ್ಯ ಆಗ್ತಿದೆ. ಬಿಎಸ್​ವೈ  ಸಿಎಂ ಆದ ಮರುದಿನದಿಂದ ಮುಖ್ಯಮಂತ್ರಿ ಬದಲಾವಣೆ, ಮುಖ್ಯಮಂತ್ರಿ  ಬದಲಾವಣೆ ಅಂತಿದ್ದಾರೆ. ಎರಡು ವರ್ಷ ಆಯ್ತು, ಅವರೇ ಸಿಎಂ ಆಗಿದ್ದಾರೆ. ಈ ಪ್ರಶ್ನೆ ಅಪ್ರಸ್ತುತ ಎಂದು ಕಟೀಲ್ ಹೇಳಿದರು.


  ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ


  ಶಾಸಕ ಯತ್ನಾಳ ಮೇಲೆ ಕ್ರಮದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು,  ನಮ್ಮದೊಂದು ಪ್ರಜಾಪ್ರಭುತ್ವ ಆಧಾರಿತ ಸಂಘಟನೆ. ನಮ್ಮಲ್ಲಿ‌ ವ್ಯವಸ್ಥೆಗಳಿವೆ. ನಮ್ಮಲ್ಲಿನ ಶಿಸ್ತು ಸಮಿತಿ ಈಗಾಗಲೇ ಎಚ್ಚರಿಕೆ ನೊಟೀಸ್ ನ್ನ ಕೊಟ್ಟಿದೆ. ಒಬ್ಬ ಶಾಸಕನಿಗೆ ಮೂರು ಹಂತದ‌ ನೊಟೀಸ್​ಗಳನ್ನ ಕೊಡಬೇಕಿದೆ.  ಆ ಎಲ್ಲಾ ಕಾರ್ಯವನ್ನ ಮಾಡುತ್ತಿದೆ. ಇನ್ನಷ್ಟು ತಪ್ಪು ಮಾಡಿದರೆ ಮುಂದಿನ ಎಲ್ಲ ನಿರ್ಧಾರಗಳನ್ನ ಕೇಂದ್ರ ತೆಗೆದುಕೊಳ್ಳುತ್ತದೆ ಎಂದು ಹೇಳುವ ಮೂಲಕ ಯತ್ನಾಳ್​ಗೆ ಎಚ್ಚರಿಕೆ ನೀಡಿದರು.


  ಪೆಟ್ರೋಲ್, ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಕುರಿತು ಮಾತನಾಡಿದ ಕಟೀಲ್,  ಕಾಂಗ್ರೆಸ್ ಟೀಕೆ ಮಾಡಲಿಕ್ಕೇ ಇರುವ ಪಾರ್ಟಿ. ವಿರೋಧ ಮಾಡೋದೆ ಅವರ ಪಕ್ಷದ ಗುಣ ಆಗಿದೆ. ದೇಶದಲ್ಲಿ ಕೋವಿಡ್ ನಿಯಂತ್ರಣ ಮಾಡೋ ಕೆಲಸ‌ ಮಾಡಲಾಗ್ತಿದೆ. ದೇಶದಲ್ಲಿ ಒಂದನೇ ಅಲೆ ಬಂದಾಗಲೂ ಆರ್ಥಿಕ ಕುಸಿತ ಕಾಣಲಿಲ್ಲ. ಈಗಲೂ ಆರ್ಥಿಕ ಕುಸಿತ‌ ಕಂಡಿಲ್ಲ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ವಿಪರೀತ ಬೆಲೆ ಏರಿಕೆ ಇತ್ತು. ಆಗ ಯಾವುದೇ ಕೋವಿಡ್ ಇರಲಿಲ್ಲ ಎಂದು ಸಮರ್ಥಿಸಿಕೊಂಡರು.


  ಇದನ್ನೂ ಓದಿ:Rohini Sindhuri: ತವರು ಮನೆ ತೊರೆದು ಹೋಗ್ತಿದ್ದೀನಿ: ಮೈಸೂರಿಗೆ ಭಾವುಕ ವಿದಾಯ ಹೇಳಿದ ರೋಹಿಣಿ ಸಿಂಧೂರಿ


  ನಿನ್ನೆ ಸಿಎಂ ಬಿಎಸ್​ ಯಡಿಯೂರಪ್ಪ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಕುರಿತು ಪ್ರತಿಕ್ರಿಯಿಸಿ, ಹೈ ಕಮಾಂಡ್ ಬಯಸಿದರೆ ನಾನು ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿದ್ದರು. ಇವರ ಹೇಳಿಕೆ ಬಳಿಕ ರಾಜ್ಯ ರಾಜಕೀಯದಲ್ಲಿ ಚರ್ಚೆಗಳು ಶುರುವಾಗಿದ್ದವು.  ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗೆ ಇಳಿಯುತ್ತಾರೆ ಎಂಬ ಗುಮಾನಿಗಳು ಹರಿದಾಡಲು ಪ್ರಾರಂಭವಾಗಿವೆ. ಆದರೆ ಯಡಿಯೂರಪ್ಪ ಪರ ಇರುವ ನಾಯಕರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಿದ್ದಾರೆ.


  ಒಂದು ವೇಳೆ ಹೈಕಮಾಂಡ್​ ಸೂಚನೆ ನೀಡಿದರೆ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುವುದು ಖಚಿತ ಎನ್ನಲಾಗ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಯಾವ ಬದಲಾವಣೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:Latha CG
  First published: