• Home
  • »
  • News
  • »
  • state
  • »
  • JDS Future: ಮಾಡು ಇಲ್ಲವೇ ಮಡಿ ಕಾದಾಟಕ್ಕೆ ಸಿದ್ಧವಾಗಿರುವ ಜೆಡಿಎಸ್!

JDS Future: ಮಾಡು ಇಲ್ಲವೇ ಮಡಿ ಕಾದಾಟಕ್ಕೆ ಸಿದ್ಧವಾಗಿರುವ ಜೆಡಿಎಸ್!

JDS ನಾಯಕರು

JDS ನಾಯಕರು

2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಪ್ರಕಟಿಸಿದೆ.

  • Share this:

2023 ರ ವಿಧಾನಸಭೆ ಚುನಾವಣೆಯು ಜೆಡಿಎಸ್‌ಗೆ ನಿರ್ಣಾಯಕವಾಗಲಿದ್ದು ಹೆಚ್‌.ಡಿ ದೇವೇಗೌಡ ನೇತೃತ್ವದ ಜೆಡಿಎಸ್ ಇದೀಗ ಕರ್ನಾಟಕದಲ್ಲಿ ತನ್ನ ಸ್ಥಾನಕ್ಕಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಪ್ರಬಲ ಹೋರಾಟ (BJP vs Congress vs JDS) ನಡೆಸುತ್ತಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 61 ಕ್ಷೇತ್ರಗಳನ್ನು ಹೊಂದಿರುವ ಹಳೇ ಮೈಸೂರು ಪ್ರದೇಶದಲ್ಲಿ (Old Mysuru Region) ಒಕ್ಕಲಿಗ ಸಮುದಾಯದ ಮೇಲೆ ಪ್ರಾಬಲ್ಯ ಹೊಂದಿರುವ ಗೌಡರ ಕುಟುಂಬದ (Gowda Family) ಹಿಡಿತವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಮುರಿಯಲು ಮುಂದಾಗುವುದರೊಂದಿಗೆ ಪಕ್ಷದ ಮತ ಹಂಚಿಕೆಯು ನಿಶ್ಚಲಗೊಂಡಿದೆ.


ತನ್ನದೇ ಸಾಮರ್ಥ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ
1999 ರಲ್ಲಿ ಪಕ್ಷ ಪ್ರಾರಂಭವಾದಾಗಿನಿಂದ ಜನತಾ ದಳವನ್ನು ವಿಭಜಿಸಿ ಗೌಡರು ತಮ್ಮದೇ ಆದ ಪಕ್ಷ (ಜೆಡಿಎಸ್) ಅನ್ನು ರಚಿಸಿದಾಗಲೂ ಪಕ್ಷ ತನ್ನದೇ ಸಾಮರ್ಥ್ಯದ ಮೇಲೆ ಅಧಿಕಾರವನ್ನು ಹೊಂದಲಿಲ್ಲ. 2006 ರಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿಯವರು ಬಿಜೆಪಿ ಜತೆಗೂಡಿ ರಾಜ್ಯದ ಮುಖ್ಯಮಂತ್ರಿಗಳಾದರು. ನಂತರ 2018 ರಲ್ಲಿ ಕಾಂಗ್ರೆಸ್‌ನೊಂದಿಗೆ ಒಗ್ಗೂಡಿ ಉನ್ನತ ಹುದ್ದೆಯನ್ನು ಅಲಂಕರಿಸಿದರು. ಹೀಗೆ ಕಾಂಗ್ರೆಸ್ ಹಾಗೂ ಬಿಜೆಪಿಯ ನೆರವಿನಿಂದಲೇ ಜೆಡಿಎಸ್ ಅಧಿಕಾರವನ್ನು ಪಡೆದುಕೊಂಡಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.


ಸಾಕಷ್ಟು ಕ್ಷೇತ್ರದಲ್ಲಿ ಪಕ್ಷಕ್ಕೆ ಹಿಡಿತವಿದೆ
2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯನ್ನು ಪ್ರಕಟಿಸಿದೆ. ರಾಜಕೀಯ ಪರಿಣಿತರು ಜೆಡಿಎಸ್ ಹೀಗೆ ಹೇಳುವ ಮೂಲಕ ಹಗಲುಗನಸು ಕಾಣುತ್ತಿದೆ ಎಂದು ಹಾಸ್ಯಮಾಡಿದ್ದಾರೆ. ಆದರೂ ಕಿಂಗ್‌ಮೇಕರ್ ಆಗುವ ಪಕ್ಷದ ಜಾಣ್ಮೆಯು ಈ ಲೇವಡಿಗಳನ್ನೆಲ್ಲಾ ಬುಡಮೇಲು ಮಾಡಬಹುದು. ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ. ಆದರೆ ಸಾಕಷ್ಟು ಕ್ಷೇತ್ರಗಳಲ್ಲಿ ತಮ್ಮ ಹಿಡಿತವನ್ನು ಹೊಂದಿದೆ ಎಂದು ರಾಜಕೀಯ ವಿಶ್ಲೇಷಕ ಡಿ. ಜೀವನ್ ಕುಮಾರ್ ತಿಳಿಸಿದ್ದಾರೆ.


ಜೆಡಿಎಸ್‌ನ ಬೇಡಿಕೆ ಕುಗ್ಗಿಲ್ಲ
ಜನಾದೇಶವು ವಿಭಜನೆಗೊಂಡರೆ ಜೆಡಿಎಸ್‌ ಕಿಂಗ್‌ಮೇಕರ್ ಆಗಿರುತ್ತದೆ ಎಂದು ತಿಳಿಸಿರುವ ಜೀವನ್, ಎರಡು ರಾಷ್ಟ್ರೀಯ ಪಕ್ಷಗಳು ಪ್ರಬಲವಾಗಿದ್ದರೂ ಜೆಡಿಎಸ್ ಇಂದಿಗೂ ತನ್ನ ಬೇಡಿಕೆಯನ್ನು ಕುಗ್ಗಿಸಿಕೊಂಡಿಲ್ಲ.  ಇದರಿಂದ ಒಂದು ಅಂಶ ಸ್ಪಷ್ಟವಾಗಿದ್ದು ಚುನಾವಣೆಯಲ್ಲಿ 40 ಸ್ಥಾನಗಳ ಗಡಿಯನ್ನು ಜೆಡಿಎಸ್ ತಲುಪಲಿದ್ದು ಸರಕಾರ ರಚನೆಯಲ್ಲಿ ನಿರ್ಣಾಯಕ ಅಂಶವಾಗಿ ಪರಿಣಮಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. 


ಜೆಡಿಎಸ್ ಸಾಧನೆಗಳು
2004 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 58 ಸ್ಥಾನಗಳನ್ನು ಗೆದ್ದಾಗ ಜೆಡಿಎಸ್ ತನ್ನ ಚುನಾವಣಾ ಸಾಧನೆಯ ಉತ್ತುಂಗಕ್ಕೇರಿತ್ತು. 2013ರಲ್ಲಿ 40 ಸ್ಥಾನಗಳನ್ನು ಗೆದ್ದುಕೊಂಡಿದ್ದು ಜೆಡಿಎಸ್‌ನ ಎರಡನೇ ಅತ್ಯುತ್ತಮ ಸಾಧನೆಯಾಗಿದೆ.


ಪಕ್ಷದೊಳಗೆ ಹೊಗೆಯಾಡುತ್ತಿರುವ ಅಸಮಾಧಾನ
ಕರ್ನಾಟಕ ರಾಜಕೀಯದ ದೀರ್ಘಕಾಲದ ವೀಕ್ಷಕ ಲಂಡನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೇಮ್ಸ್ ಮ್ಯಾನರ್ ಜೆಡಿಎಸ್ ಪಕ್ಷದ ಮೇಲೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಜೆಡಿಎಸ್ ಸರ್ವಾಧಿಕಾರಿ ನಾಯಕತ್ವದಿಂದ ಬಳಲುತ್ತಿದೆ. ಕೌಟುಂಬಿಕ ಕೇಂದ್ರಿತ ರಾಜಕಾರಣದಿಂದ ಪಕ್ಷದೊಳಗೆ ಅಸಮಾಧಾನ ಹೊಗೆಯಾಡುತ್ತಿದ್ದು ನಾಯಕರುಗಳು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ: Karnataka Assembly Elections: ಗೌಡರ ಕೋಟೆಯಲ್ಲಿ ರೇವಣ್ಣಗೆ ಯಾರಾಗ್ತಾರೆ ಎದುರಾಳಿ? ಇಲ್ಲಿದೆ ಹೊಳೆನರಸೀಪುರ ಕ್ಷೇತ್ರದ ವರದಿ

ಒಕ್ಕಲಿಗ ಸಮುದಾಯದ ಪ್ರಬಲ ನಾಯಕ
ಜೆಡಿಎಸ್‌ನ ರಾಜಕೀಯ ನೆಲೆಯು ಒಕ್ಕಲಿಗ ಪ್ರಾಬಲ್ಯದ ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗಿದೆ ಎಂದು ಹಿರಿಯ ವಿಶ್ಲೇಷಕ ಪಿ.ಎಸ್.ಜಯರಾಮು ತಿಳಿಸಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿರುವ ದೇವೇಗೌಡರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನ ಮಂತ್ರಿಯಾಗಿ ಅಧಿಕಾರ ಗದ್ದುಗೆಯಲ್ಲಿದ್ದ ಸಮಯದಲ್ಲಿ ಪಕ್ಷವನ್ನು ರಾಜ್ಯದಲ್ಲಿ ಸಮರ್ಥ ರಾಜಕೀಯ ಘಟಕವಾಗಿ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿತು ಎಂಬುದು ಜಯರಾಮು ಹೇಳಿಕೆಯಾಗಿದೆ.


ಜೆಡಿಎಸ್ ರಾಜಕೀಯದಲ್ಲಿ ಪ್ರಮುಖ ಸ್ಥಾನಕ್ಕೆ ಹೇಗೆ ಬಂದಿತು?
ಜಾತಿ ಇಲ್ಲಿ ಮುಖ್ಯ ಅಂಶವಾಗಿದ್ದು ಇದರೊಂದಿಗೆ ಪಕ್ಷವು ಕೃಷಿ ಹಾಗೂ ನೀರಾವರಿಗೆ ಒತ್ತು ನೀಡಿರುವುದು ರಾಜ್ಯ ರಾಜಕೀಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳಲು ನೆರವಾಯಿತು ಎಂಬುದು ಜಯರಾಮು ಮಾತಾಗಿದೆ. ರಾಜ್ಯ ರಾಜಕೀಯದಲ್ಲಿ ಮೂರನೇ ಸ್ತಂಭವಾಗಿರುವ ಜೆಡಿಎಸ್, ಒಂದೇ ಪಕ್ಷದ ನೇತೃತ್ವವಿರುವ ಸರಕಾರದ ಮೂಲಕ ಅಧಿಕಾರಕ್ಕೆ ಬಂದಿದೆ. ಇದು ಕಾಂಗ್ರೆಸ್ ಹಾಗೂ ಬಿಜೆಪಿ ಎರಡಕ್ಕೂ ಸಾಧ್ಯವಿರದ ಮಾತಾಗಿದೆ. ಹಾಗಾಗಿ ಜೆಡಿಎಸ್ ಈ ವಿಷಯದಲ್ಲಿ ಪ್ರಾಬಲ್ಯ ಸಾಧಿಸಿದೆ ಎನ್ನುತ್ತಾರೆ ಜಯರಾಮು.


ಇದನ್ನೂ ಓದಿ: Vande Bharat Express Train: ಬೆಂಗಳೂರಿನಿಂದ ಬೆಳಗಾವಿಯವರೆಗೂ ವಂದೇ ಭಾರತ್!

ಪಕ್ಷದ ಅಳಿವು ಉಳಿವಿನ ಪ್ರಶ್ನೆ
ಇದೀಗ ಒಕ್ಕಲಿಗರಾದ ಡಿ ಕೆ ಶಿವಕುಮಾರ್ ಅವರು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿರುವುದರಿಂದ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಹೊಸ ಸವಾಲು ಎದುರಾಗಿದೆ. ಪಕ್ಷದ ಅಳಿವು ಉಳಿವಿನ ಪ್ರಶ್ನೆ ದೇವೇಗೌಡರ ವಯಸ್ಸು, ಕುಟುಂಬ ರಾಜಕಾರಣ ಹಾಗೂ ಸಕ್ರಿಯ ನಾಯಕರ ಕೊರತೆಯನ್ನು ಆಧರಿಸಿದೆ ಎಂಬುದು ಜಯರಾಮು ಹೇಳಿಕೆಯಾಗಿದೆ.


Published by:ಗುರುಗಣೇಶ ಡಬ್ಗುಳಿ
First published: