• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Politics: ಸಿಎಂ ಮಾತ್ರವಲ್ಲ ನೂತನ ಸಚಿವರ ಆಯ್ಕೆ ಕೂಡಾ ಫೈನಲ್! ಇಲ್ಲಿದೆ 49 ಸಂಭಾವ್ಯರ ಪಟ್ಟಿ

Karnataka Politics: ಸಿಎಂ ಮಾತ್ರವಲ್ಲ ನೂತನ ಸಚಿವರ ಆಯ್ಕೆ ಕೂಡಾ ಫೈನಲ್! ಇಲ್ಲಿದೆ 49 ಸಂಭಾವ್ಯರ ಪಟ್ಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಾಂಗ್ರೆಸ್​ ಹಿರಿಯ ನಾಯಕರಾದ ವೇಣುಗೋಪಾಲ್, ಸುರ್ಜೇವಾಲ 27 ಜಿಲ್ಲೆಗಳಿಂದ ಸಂಭಾವ್ಯರ ಪಟ್ಟಿ ತಗೆದುಕೊಂಡು ಹೋಗಿದ್ದು, ಇದರಲ್ಲಿ ಒಟ್ಟು 49 ಮಂದಿ ಸಂಭಾವ್ಯ ಸಚಿವರ ಹೆಸರು ಇದೆ ಎನ್ನಲಾಗಿದೆ. ಹಾಗಾದ್ರೆ ಆ ಪಟ್ಟಿಯಲ್ಲಿರುವ ಹೆಸರು ಯಾವುದು? ಇಲ್ಲಿದೆ ನೋಡಿ ವಿವರ

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections) ಮುಗಿದಿದ್ದು, ಕಾಂಗ್ರೆಸ್​ (Congress) ಬಹುಮತ ಗಳಿಸಿದೆ. ಹೀಗಿದ್ದರೂ ರಾಜಕೀಯ ಹೈಡ್ರಾಮಾ ಮಾತ್ರ ಇನ್ನೂ ಮುಗಿದಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಿಎಂ ಯಾರೆಂಬ ಗೊಂದಲ ನಿವಾರಣೆಯಾಗದೇ ಸದ್ಯ ಈ ರಾಜಕೀಯದಾಟ ದೆಹಲಿಗೆ ಶಿಫ್ಟ್​ ಆಗಿದೆ. ಒಂದಾದ ಬಳಿಕ ಮತ್ತೊಂದರಂತೆ ಸಭೆಗಳು ನಡೆಯುತ್ತಿದ್ದು, ಇಂದು ಸಂಜೆಯೊಳಗೆ ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಆದರೀಗ ಸಿಎಂ ಯಾರೆಂಬ ಗೊಂದಲ ನಿವಾರಣೆ ಜೊತೆ ನೂತನ ಸಚಿವರ (Ministers) ಆಯ್ಕೆ ಕೂಡ ಫೈನಲ್ ಆಗಲಿದೆ ಎಂಬ ವಿಚಾರ ಸದ್ದು ಮಾಡಲಾರಂಭಿಸಿದೆ.


ಸದ್ಯ ಜಿಲ್ಲಾವಾರು ಸಂಭಾವ್ಯ ಸಚಿವರ ಪಟ್ಟಿಯೂ ದೆಹಲಿ ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್​ ಹಿರಿಯ ನಾಯಕರಾದ ವೇಣುಗೋಪಾಲ್, ಸುರ್ಜೇವಾಲ 27 ಜಿಲ್ಲೆಗಳಿಂದ ಸಂಭಾವ್ಯರ ಪಟ್ಟಿ ತಗೆದುಕೊಂಡು ಹೋಗಿದ್ದು, ಇದರಲ್ಲಿ ಒಟ್ಟು ಒಟ್ಟು 49 ಮಂದಿ ಸಂಭಾವ್ಯ ಸಚಿವರ ಹೆಸರು ಇದೆ ಎನ್ನಲಾಗಿದೆ. ಹಾಗಾದ್ರೆ ಆ ಪಟ್ಟಿಯಲ್ಲಿರುವ ಹೆಸರು ಯಾವುದು? ಇಲ್ಲಿದೆ ನೋಡಿ ವಿವರ


ಇದನ್ನೂ ಓದಿ: Karnataka Next CM: ಕಷ್ಟಪಟ್ಟು ಕೆಲಸ ಮಾಡಿದ್ದೇವೆ, ಕೂಲಿ ಕೊಡಿ ಎಂದು ಕೇಳಿದ ಡಿಕೆ ಸುರೇಶ್


ಸಿಎಂ‌ ಆಯ್ಕೆ ಜೊತೆಗೆ ನೂತನ ಸಚಿವರ ಪಟ್ಟಿ ಕೂಡ ಫೈನಲ್ ಆಗಲಿದೆ


* ಬೆಳಗಾವಿ ಜಿಲ್ಲೆ
1. ಲಕ್ಷ್ಮಣ್ ಸವದಿ
2. ಲಕ್ಷ್ಮೀ ಹೆಬ್ಬಾಳ್ವರ್
3. ಸತೀಶ್ ಜಾರಕಿಹೊಳಿ


* ಬಾಗಲಕೋಟೆ
1. ಆರ್.ಬಿ. ತಿಮ್ಮಾಪುರ್.


* ವಿಜಯಪುರ
1. ಎಂ.ಬಿ. ಪಾಟೀಲ್
2. ಶಿವಾನಂದ ಪಾಟೀಲ್‌
3. ಯಶವಂತ ರಾಯಗೌಡ ಪಾಟೀಲ್‌


* ಕಲಬುರ್ಗಿ
1. ಪ್ರಿಯಾಂಕ್ ಖರ್ಗೆ
2. ಅಜಯ್ ಸಿಂಗ್
3. ಶರಣ ಪ್ರಕಾಶ್ ಪಾಟೀಲ್


* ರಾಯಚೂರು
1. ಬಸನಗೌಡ ತುರುವಿಹಾಳ


* ಯಾದಗಿರಿ
1. ಶರಣಪ್ಪ ದರ್ಶನಾಪೂರ್


* ಬೀದರ್
1. ರಹೀಮ್ ಖಾನ್
2. ಈಶ್ವರ್ ಖಂಡ್ರೆ


* ಕೊಪ್ಪಳ
1. ರಾಘವೇಂದ್ರ ಹಿಟ್ನಾಳ್
2. ಬಸವರಾಜ್ ರಾಯರೆಡ್ಡಿ


* ಗದಗ
1. ಹೆಚ್‌.ಕೆ. ಪಾಟೀಲ್


* ಧಾರವಾಡ
1. ವಿನಯ್ ಕುಲಕರ್ಣಿ
2. ಪ್ರಸಾದ್ ಅಬ್ಬಯ್ಯ


* ಉತ್ತರ ಕನ್ನಡ
1. ಬೀಮಣ್ಣ ನಾಯಕ


* ಹಾವೇರಿ
1. ರುದ್ರಪ್ಪ ಲಮಾಣಿ


* ಬಳ್ಳಾರಿ
1. ತುಕಾರಾಮ್
2. ನಾಗೇಂದ್ರ


ಇದನ್ನೂ ಓದಿ: Mallikarjun Kharge: ಪಿಎಫ್‌ಐ ಜೊತೆ ಭಜರಂಗದಳ ಹೋಲಿಕೆ, ಮಲ್ಲಿಕಾರ್ಜುನ ಖರ್ಗೆ ಕೋರ್ಟ್‌ನಿಂದ ಸಮನ್ಸ್!


* ಚಿತ್ರದುರ್ಗ
1. ರಘುಮೂರ್ತಿ


* ದಾವಣಗೆರೆ
1. ಶಾಮನೂರು ಶಿವಶಂಕರಪ್ಪ
2. ಎಸ್.ಎಸ್ ಮಲ್ಲಿಕಾರ್ಜುನ್


* ಶಿವಮೊಗ್ಗ
1. ಮಧುಬಂಗಾರಪ್ಪ
2. ಬಿ.ಕೆ. ಸಂಗಮೇಶ್


* ಚಿಕ್ಕಮಗಳೂರು
1. ಟಿ.ಡಿ. ರಾಜೇಗೌಡ


* ತುಮಕೂರು
1. ಡಾ. ಪರಮೇಶ್ವರ್
2 ಟಿ.ಬಿ.ಜಯಚಂದ್ರ
3. ಕೆ.ಎನ್. ರಾಜಣ್ಣ


* ಚಿಕ್ಕಬಳ್ಳಾಪುರ
1. ಸುಬ್ಬಾರಡ್ಡಿ.


* ಕೋಲಾರ
1. ರೂಪ ಶಶಿಧರ್
2. ನಾರಾಯಣಸ್ವಾಮಿ


* ಬೆಂಗಳೂರು
1. ಕೆ.ಜೆ. ಜಾರ್ಜ್
2. ರಾಮಲಿಂಗಾರೆಡ್ಡಿ
3. ಹ್ಯಾರಿಸ್
4. ಎಂ.ಕೃಷ್ಣಪ್ಪ
5. ದಿನೇಶ್ ಗುಂಡೂರಾವ್
6. ಜಮೀರ್
7. ಬಿ. ಶಿವಣ್ಣ


* ಮಂಡ್ಯ
1. ಎನ್. ಚೆಲುವರಾಯಸ್ವಾಮಿ


* ಮಂಗಳೂರು
1. ಯು.ಟಿ. ಖಾದರ್


* ಮೈಸೂರು
1. ಎಚ್‌.ಸಿ. ಮಹದೇವಪ್ಪ
2. ತನ್ವಿರ್ ಸೇ‌ಠ್


* ಚಾಮರಾಜನಗರ
1. ಪುಟ್ಟರಂಗಶೆಟ್ಟಿ


* ಕೊಡಗು
1. ಎ.ಎಸ್ ಪೊನ್ನಣ್ಣ


* ಬೆಂಗಳೂರು ಗ್ರಾಮಾಂತರ
1. ಕೆ.ಎಚ್‌. ಮುನಿಯಪ್ಪ.
ಇನ್ನು ವಿಧಾನ ಪರಿಷತ್‌ನಿಂದಲೂ ಸಚಿವರಾಗುವವರ ಸಂಭಾವ್ಯ ಪಟ್ಟಿ ಸಿದ್ಧವಾಗಿದೆ ಎನ್ನಲಾಗಿದ್ದು, ಒಟ್ಟು ರು ಮಂದಿಯ ಹೆಸರು ಇದರಲ್ಲಿದೆ ಎನ್ನಲಾಗಿದೆ.


ವಿಧಾನ ಪರಿಷತ್ತಿನಿಂದ ಸಂಪುಟ ಸೇರಲಿರುವ ಸಂಭಾವ್ಯ ಅಭ್ಯರ್ಥಿಗಳು


1. ಬಿ.ಕೆ. ಹರಿಪ್ರಸಾದ್
2. ಸಲೀಂಮ್ ಅಹಮದ್‌
3. ನಜೀರ್ ಅಹಮದ್‌
4. ಮಂಜುನಾಥ್ ಬಂಡಾರಿ
5. ದಿನೇಶ್ ಗೂಳಿಗೌಡ
6. ಎಸ್. ರವಿ


ದೆಹಲಿಯ ವಿಶೇಷ ಪ್ರತಿನಿಧಿಯಾಗಿ ಎಂ.ಪಿ.ನರೇಂದ್ರಸ್ವಾಮಿ ನೇಮಕ ಸಾಧ್ಯತೆ ಇದ್ದು, ನರೇಂದ್ರ ಸ್ವಾಮಿ ಮಳವಳ್ಳಿ ಶಾಸಕ, ದಲಿತ ಬಲಗೈ ಸಮುದಾಯಕ್ಕೆ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

First published: