‘ನಿರಾಣಿಯನ್ನು ಮಂತ್ರಿ ಮಾಡಲೇಬೇಕೆಂದು ಸಿಎಂಗೆ ಸ್ವಾಮೀಜಿ ಬೆದರಿಕೆ ಹಾಕುವುದು ಸರಿಯಲ್ಲ‘: ದಿನೇಶ್​​ ಗುಂಡೂರಾವ್​​

ಇನ್ನೂ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಮೀನಮೇಷ ಎಣಿಸುತ್ತಿರುವ ಹೈಕಮಾಂಡ್​​ ನಡೆ ಬಗ್ಗೆಯೂ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದರು. ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಇಷ್ಟು ವಿಳಂಬ ಮಾಡುವುದು ಸರಿಯಲ್ಲ ಎಂದರು.

news18-kannada
Updated:January 15, 2020, 1:42 PM IST
‘ನಿರಾಣಿಯನ್ನು ಮಂತ್ರಿ ಮಾಡಲೇಬೇಕೆಂದು ಸಿಎಂಗೆ ಸ್ವಾಮೀಜಿ ಬೆದರಿಕೆ ಹಾಕುವುದು ಸರಿಯಲ್ಲ‘: ದಿನೇಶ್​​ ಗುಂಡೂರಾವ್​​
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
  • Share this:
ಬೆಂಗಳೂರು(ಜ.15): ಮುರುಗೇಶ್ ನಿರಾಣಿಗೆ ಮಂತ್ರಿ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪಗೆ ಶ್ವಾಸಗುರು ವಚನಾನಂದ ಬೆದರಿಕೆ ಹಾಕಿರುವುದು ಖಂಡನೀಯ ಎಂದು ಮಾಜಿ ಸಚಿವ ದಿನೇಶ್​​ ಗುಂಡೂರಾವ್​ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನಿನ್ನೆ ಹರಿಹರದಲ್ಲಿ ವೇದಿಕೆ ಮೇಲೆಯೇ ಯಡಿಯೂರಪ್ಪಗೆ ಶ್ವಾಸಗುರು ವಚನಾನಂದ ಎಚ್ಚರಿಕೆ ನೀಡಿರುವುದು ತಪ್ಪು. ಮುರುಗೇಶ್​​ ನಿರಾಣಿಗೆ ಮಂತ್ರಿ ಮಾಡದಿದ್ದರೆ ಇಡೀ ಸಮಾಜವೇ ನಿಮ್ಮ ಕೈಬಿಡುತ್ತದೆ ಎಂದು ಹೇಳಬಾರದಿತ್ತು ಎಂದರು. 

ಕಾಂಗ್ರೆಸ್​​-ಜೆಡಿಎಸ್​​ ರಾಜೀನಾಮೆ ನೀಡಿದ 17 ಮಂದಿಗೂ ಮಂತ್ರಿ ಸ್ಥಾನ ನೀಡುತ್ತೇನೆ ಎಂದು ಸಿಎಂ ಬಿ.ಎಸ್​​ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ. ಹಾಗಾಗಿ ಸಹಜವಾಗಿ 17 ಶಾಸಕರಿಂದ ಮತ್ತು ಬಿಜೆಪಿಯಿಂದಲೂ ಯಡಿಯೂರಪ್ಪ ಮೇಲೆ ಭಾರೀ ಒತ್ತಡ ಇದೆ. ಈ ಮಧ್ಯೆ ಹೀಗೆ ಶ್ವಾಸಗುರು ವಚನಾನಂದ ಬೆದರಿಕೆ ಹಾಕಿರುವುದು ಯಡಿಯೂರಪ್ಪರನ್ನು ಕೆರಳಿಸಿದೆ. ಎರಡು ಕಡೆಯಿಂದ ಒತ್ತಡ ಇರುವುದರಿಂದ ರಾಜ್ಯದ ಯಾವುದೇ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ. ಬಿ.ಎಸ್​ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇಷ್ಟು ತಿಂಗಳಾದರೂ ಇದುವರೆಗೂ ಪೂರ್ಣ ಪ್ರಮಾಣದ ಅಧಿವೇಶನ ನಡೆಸಿಯೇ ಇಲ್ಲ ಎಂದು ದಿನೇಶ್​ ಗುಂಡೂರಾವ್​​ ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: ‘ಹಸು ಸಗಣಿಯ ಮೇಲೆ ಹೆಚ್ಚಿನ ಸಂಶೋಧನೆಗಳು ನಡೆಯಲಿ‘; ವಿಜ್ಞಾನಿಗಳಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಲಹೆ

ಇನ್ನೂ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಮೀನಮೇಷ ಎಣಿಸುತ್ತಿರುವ ಹೈಕಮಾಂಡ್​​ ನಡೆ ಬಗ್ಗೆಯೂ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದರು. ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಇಷ್ಟು ವಿಳಂಬ ಮಾಡುವುದು ಸರಿಯಲ್ಲ. ನಾನಂತೂ ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ. ಹೈಕಮಾಂಡ್ ಯಾರನ್ನೇ ನೇಮಿಸಿದರು ಸಹಕಾರ ಕೊಡುತ್ತೇನೆ ಎಂದು ಹೇಳಿದರು.

ಮೊದಲೇ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅಭಿವೃದ್ದಿ ಕೆಲಸಗಳು ಹಳ್ಳ ಹಿಡಿದಿವೆ. ಈ ಸಂದರ್ಭದಲ್ಲೇ ವಿರೋಧ ಪಕ್ಷವಾದ ಕಾಂಗ್ರೆಸ್​​ ಎಲ್ಲವನ್ನೂ ಗಟ್ಟಿಯಾಗಿ ಎದುರಿಸಬೇಕಾಗುತ್ತದೆ. ಹೀಗಾಗಿ ತಕ್ಷಣವೇ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮಾಡುವುದು ಒಳ್ಳೆಯದು. ಎಚ್.ಕೆ ಪಾಟೀಲ್, ಕೆ.ಎಚ್ ಮುನಿಯಪ್ಪ ಸೇರಿದಂತೆ ಹಿರಿಯ ನಾಯಕರು ಸಭೆ ಸೇರಿದ್ದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು.
Published by: Ganesh Nachikethu
First published: January 15, 2020, 12:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading