ಇಸ್ರೋ, ಇಳಿಸ್ರೋ, ಉಳಿಸ್ರೋ; ಟ್ರೋಲಿಗರಿಗೆ ಆಹಾರವಾದ ರಾಜ್ಯ ರಾಜಕೀಯ ಬೆಳವಣಿಗೆ

ದಿನಕ್ಕೊಂದು ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗುತ್ತಿರುವ ರಾಜ್ಯ ರಾಜಕೀಯದಲ್ಲಿ ಶಾಸಕರು ನಿತ್ಯ ರೆಸಾರ್ಟ್​ ಸೇರುತ್ತಿದ್ದಾರೆ. ಇದು ಜನರ ಕೋಪಕ್ಕೆ ಕಾರಣವಾಗಿದೆ. ಕೆಲವರು ಈ ಆಕ್ರೋಶವನ್ನು ಮೀಮ್​ಗಳ ಮೂಲಕ ಹೊರ ಹಾಕಿದ್ದಾರೆ.

Rajesh Duggumane | news18
Updated:July 23, 2019, 11:16 AM IST
ಇಸ್ರೋ, ಇಳಿಸ್ರೋ, ಉಳಿಸ್ರೋ; ಟ್ರೋಲಿಗರಿಗೆ ಆಹಾರವಾದ ರಾಜ್ಯ ರಾಜಕೀಯ ಬೆಳವಣಿಗೆ
ಟ್ರೋಲ್​
  • News18
  • Last Updated: July 23, 2019, 11:16 AM IST
  • Share this:
ಬೆಂಗಳೂರು (ಜು.23): ಅತೃಪ್ತ ಶಾಸಕರ ರಾಜೀನಾಮೆ ಪರ್ವ ಆರಂಭವಾದ ಬೆನ್ನಲ್ಲೇ ಸರ್ಕಾರ ಬದಲಾಗಲಿದೆಯೇ? ಎನ್ನುವ ಪ್ರಶ್ನೆಯೊಂದಿಗೆ ರಾಜ್ಯದ ಜನರು ನಿತ್ಯ ಟಿವಿ ಎದುರು ಹಾಜರಾಗಲು ಆರಂಭಿಸಿದ್ದರು. ಮೊದಲನೇ ದಿನ ಇದ್ದ ಆಸಕ್ತಿ ದಿನಕಳೆದಂತೆ ಕಡಿಮೆಯಾಗುತ್ತಿದೆ. ಆದರೂ, ರಾಜಕೀಯ ಡೊಂಬರಾಟ ಮಾತ್ರ ತುಸು ಜೋರಾಗಿಯೇ ಇದ್ದು ಜನರಲ್ಲಿ ಹೇಸಿಗೆ ಹುಟ್ಟಿಸಿದೆ. ಬರೋಬ್ಬರಿ 22 ದಿನಗಳ ರಾಜಕೀಯ ಮೇಲಾಟ ಮುಗಿಯದ ಕತೆಯಂತೆ ಸಾಗುತ್ತಲೇ ಇದೆ. ಇದೊಂದು ಮುಗಿಯದ ಮೆಗಾ ಧಾರಾವಾಹಿ ಎಂಬ ಕುಹಕದ, ಅಸಹ್ಯದ, ಅಪಹಾಸ್ಯದ ಮಾತುಗಳು ಇದೀಗ ಜನರ ನಡುವಿನಿಂದ ಜೋರಾಗಿಯೇ ಕೇಳಿಬರುತ್ತಿದೆ.

ಜು.6ರ ಬೆಳಗ್ಗೆ ಮೈತ್ರಿ ಪಕ್ಷದ ಅತೃಪ್ತ ಶಾಸಕರು ದಂಡು ದಂಡಾಗಿ ವಿಧಾನಸೌಧಕ್ಕೆ ಬಂದು ರಾಜೀನಾಮೆ ಪತ್ರ ನೀಡಿದ್ದರು. ಈ ಬೆಳವಣಿಗೆಗೆ ಇಡೀ ರಾಜ್ಯ ರಾಜಕೀಯ ವಲಯ ಒಂದು ಕ್ಷಣ ಅವಾಕ್ಕಾಗಿತ್ತು. ರಾಜೀನಾಮೆ ನೀಡಿದ್ದ ಬೆನ್ನಿಗೆ ಎಲ್ಲಾ ಅತೃಪ್ತರು ಮುಂಬೈ ವಿಮಾನ ಏರಿದ್ದರು. ನಂತರ ಈ ಕಡೆ ಮುಖ ಹಾಕಲೇ ಇಲ್ಲ. ಅತೃಪ್ತರ ಸಾಮೂಹಿಕ ರಾಜೀನಾಮೆಯಿಂದ ಎಚ್ಚೆತ್ತ ಮೂರೂ ಪಕ್ಷದ ನಾಯಕರು ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ತಮ್ಮ ತಮ್ಮ ಶಾಸಕರನ್ನು ಸೇಫ್​ ಮಾಡಿಕೊಳ್ಳಲು ರೆಸಾರ್ಟ್​​ ಮೊರೆ ಹೋಗಿದ್ದರು.

ದಿನಕ್ಕೊಂದು ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗುತ್ತಿರುವ ರಾಜ್ಯ ರಾಜಕೀಯದಲ್ಲಿ ಶಾಸಕರು ನಿತ್ಯ ರೆಸಾರ್ಟ್​ ಸೇರುತ್ತಿದ್ದಾರೆ. ಇದು ಜನರ ಕೋಪಕ್ಕೆ ಕಾರಣವಾಗಿದೆ. ಕೆಲವರು ಈ ಆಕ್ರೋಶವನ್ನು ಮೀಮ್​ಗಳ ಮೂಲಕ ಹೊರ ಹಾಕಿದ್ದಾರೆ.. ಹಾಕುತ್ತಿದ್ದಾರೆ. ಸದ್ಯಕ್ಕಂತೂ ಸೋಷಿಯಲ್​ ಮೀಡಿಯಾಗಳಲ್ಲಿ ರಾಜಕೀಯ ವಿಚಾರಗಳ ಕುರಿತ​ ಟ್ರೋಲ್​ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಅತೃಪ್ತ ಶಾಸಕರು ತಂಗಿದ್ದ ಹೋಟೆಲ್​ ಮುಂದೆ ಬೆಳಗ್ಗೆಯಿಂದ ಕಾಯುತ್ತಿದ್ದ ಡಿಕೆ ಶಿವಕುಮಾರ್​ ಪೊಲೀಸರ ವಶಕ್ಕೆ

‘ಅಯ್ಯೋ ಮಾರಾಯ ನಾಲ್ಕು ವರ್ಷದ ಹಿಂದೆ ಆರಂಭವಾಗಿದ್ದ ಧಾರಾವಾಹಿ ಮುಗಿದಿದೆ. ಆದರೆ, ರಾಜಕೀಯ ಎಪಿಸೋಡ್​ ಮುಗಿಯುವ ಲಕ್ಷಣ ಕಾಣುತ್ತಿಲ್ಲ,’ ಎಂದು ಕೆಲವರು ಬರೆದುಕೊಂಡಿದ್ದರೆ, ಇನ್ನೂ ಕೆಲವರು ಅಸ್ತಿ ಪಂಜರದ ಫೋಟೋ ಹಾಕಿ, ‘ಕರ್ನಾಟಕ ಜನರು ಕಾದು ಕಾದು ಇಂಥ ಸ್ಥಿತಿಗೆ ಬಂದಿದ್ದಾರೆ,’ ಎಂದು ಪಸ್ತುತ ರಾಜಕೀಯವನ್ನು ವ್ಯಂಗ್ಯವಾಡಿದ್ದಾರೆ. ದೇವೇಗೌಡ ಅವರು ಮನೆಯಲ್ಲಿ ಕುಳಿತು ಸೆಷನ್​ ನೋಡುವುದನ್ನೂ ಟ್ರೋಲ್​ ಮಾಡಲಾಗಿದೆ. ಕಳೆದ ಮೂರು ವಾರದ ರಾಜಕೀಯ ದೊಂಬರಾಟದಿಂದ ಬೇಸತ್ತಿರುವ ಜನರಿಗೆ ಈ ಟ್ರೋಲ್​ಗಳು ಒಂದಷ್ಟು ಮನರಂಜನೆ ನೀಡುತ್ತಿರುವುದಂತೂ ಸುಳ್ಳಲ್ಲ.

First published: July 23, 2019, 10:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading