ಬೆಂಗಳೂರಿನತ್ತ ಅತೃಪ್ತರು: ಸಿದ್ದರಾಮಯ್ಯ ರೆಬೆಲ್ಸ್​​ ಮನವೊಲಿಕೆ ಸಾಧ್ಯತೆ; ಬಿಎಸ್​ವೈ ಸಿಎಂ ಕನಸು ಭಗ್ನ?

ಇಂದೂ ಅಂತಹ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ರಾಜ್ಯ ರಾಜಕಾರಣದಲ್ಲಿ ಇಂದು ಏನೆಲ್ಲ ಆಗಲಿದೆ? ರಾಷ್ಟ್ರಮಟ್ಟದ ಪ್ರತಿಕ್ರಿಯೆ ಹೇಗಿರಲಿದೆ? ಎಂದು ಕಾದು ನೋಡಬೇಕಿದೆ.

Ganesh Nachikethu
Updated:July 11, 2019, 3:22 PM IST
ಬೆಂಗಳೂರಿನತ್ತ ಅತೃಪ್ತರು: ಸಿದ್ದರಾಮಯ್ಯ ರೆಬೆಲ್ಸ್​​ ಮನವೊಲಿಕೆ ಸಾಧ್ಯತೆ; ಬಿಎಸ್​ವೈ ಸಿಎಂ ಕನಸು ಭಗ್ನ?
ಬಿ.ಎಸ್​. ಯಡಿಯೂರಪ್ಪ.
  • Share this:
ಬೆಂಗಳೂರು(ಜುಲೈ.11): ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕಗಳು ಇಂದು ನಿರ್ಣಾಯಕ ಘಟ್ಟ ತಲುಪುವ ಸಾಧ್ಯತೆಯಿದೆ. ಮುಂಬೈನಲ್ಲಿ ಬೀಡುಬಿಟ್ಟಿದ್ದ ಅತೃಪ್ತರು ಮರಳಿ ಬೆಂಗಳೂರಿಗೆ ಬರುತ್ತಿದ್ದಾರೆ. ಇತ್ತ ಹೇಗಾದರೂ ಮಾಡಿ ರೆಬೆಲ್ ಶಾಸಕರ ಮನವೊಲಿಸಲೇಬೇಕೆಂದು ದೋಸ್ತಿ ನಾಯಕರು ಮುಂದಾಗಿದ್ಧರೇ, ಅತ್ತ ಎಲ್ಲಿ ವರಿಷ್ಠರ ಮಾತಿಗೆ ಬೆಲೆಕೊಟ್ಟು ರಾಜೀನಾಮೆ ವಾಪಸ್ಸು ಪಡೆಯುತ್ತಾರೋ? ಎಂಬ ಆಂತಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪನವರಲ್ಲಿ ಮಡುಗಟ್ಟಿದೆ.

ಇತ್ತೀಚೆಗಷ್ಟೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಅತೃಪ್ತರು ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸಂಜೆ ಆರು ಗಂಟೆಯೊಳಗೆ ಸ್ಪೀಕರ್ ರಮೇಶ್ ಕುಮಾರ್ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ಇದಕ್ಕಾಗಿ ಆಗಲೇ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಬೆಂಗಳೂರಿನತ್ತ ರೆಬೆಲ್​​ ಶಾಸಕರು ಪ್ರಯಾಣ ಬೆಳೆಸಲಿದ್ಧಾರೆ.

ಇನ್ನು ರೆಬೆಲ್​​ ಶಾಸಕರು ಬೆಂಗಳೂರಿಗೆ ಆಗಮಿಸುತ್ತಿದ್ದು, ಸದ್ಯ ಬಿ.ಎಸ್​​ ಯಡಿಯೂರಪ್ಪ ಭಾರೀ ಆಂತಕಗೊಂಡಿದ್ದಾರೆ. ಒಂದು ವೇಳೆ ಕಾಂಗ್ರೆಸ್​​-ಜೆಡಿಎಸ್​​ ವರಿಷ್ಠರು ಇವರನ್ನು ಮನವೊಲಿಸಿದರೇ, ನನಗೆ ಕೈಕೊಡುವುದು ಬಹುತೇಕ ಖಚಿತ. ಹಾಗಾಗಿ ಈ ಬಾರಿಯೂ ನನ್ನ ಸಿಎಂ ಕನಸು ಭಗ್ನವಾಗಲಿದೆಯೇ? ಎಂದು ಚಿಂತಗೀಡಾಗಿದ್ಧಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ನಮಗೆ ನ್ಯಾಯ ಕೊಡಿಸಿ; ಸ್ಪೀಕರ್​​ ವಿರುದ್ಧ ಅತೃಪ್ತ ಶಾಸಕರು ಸುಪ್ರೀಂಕೋರ್ಟ್​​ ಮೊರೆ

ಅತೃಪ್ತರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ, ಈಗಲೂ ಕಾಂಗ್ರೆಸ್​​​ ಸದಸ್ಯರಾಗಿಯೇ ಇದ್ದಾರೆ. ಹಾಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​​ ಹಿರಿಯ ನಾಯಕರು ರೆಬೆಲ್​​​ ಶಾಸಕರನ್ನು ಮನವೊಲಿಸುವ ಸಾಧ್ಯತೆಯಿದೆ. ಹೀಗಾದಲ್ಲಿ ಬಿಜೆಪಿ ಇನ್ಯಾವುದೇ ಕಾರಣಕ್ಕೂ ಮತ್ತೊಮ್ಮೆ ಆಪರೇಷನ್​​ ಕಮಲ ವಿಚಾರಕ್ಕೆ ಕೈಹಾಕುವ ಮಾತೇ ಇಲ್ಲ ಎಂದು ತಿಳಿದು ಬಂದಿದೆ.

ನಿನ್ನೆಯಷ್ಟೇ ಮುಂಬೈಗೆ ತೆರಳಿದ್ದ ಸಚಿವ ಡಿ.ಕೆ ಶಿವಕುಮಾರ್​​​ ಅತೃಪ್ತರನ್ನೂ ಭೇಟಿ ಮಾಡಿಯೇ ತೀರುತ್ತೇನೆ ಎಂದು ಕೊನೆಗೂ ಬರಿಗೈಯಲ್ಲಿ ವಾಪಸ್ಸಾಗಿರುವುದು ಮೈತ್ರಿ ನಾಯಕರಲ್ಲಿ ದುಗುಡು ಹೆಚ್ಚಿಸಿತ್ತು. ಇದರಿಂದ  ಬೇಸತ್ತು ವಿಧಾನಸೌಧದಲ್ಲಿಯೇ ರಾಜಕೀಯ ನಾಯಕರು ಅಸಹ್ಯಕರ ರೀತಿಯಲ್ಲಿ ಜಗಳ, ಹೊಡೆದಾಟ ನಡೆಸಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಿತ್ತು.

ಇದನ್ನೂ ಓದಿ: ಆದೇಶಕ್ಕೆ ತಡೆ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ ಸ್ಪೀಕರ್; ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದ ನ್ಯಾಯಾಲಯಇಂದೂ ಅಂತಹ ಬೆಳವಣಿಗೆಗಳು ನಡೆಯುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ರಾಜ್ಯ ರಾಜಕಾರಣದಲ್ಲಿ ಇಂದು ಏನೆಲ್ಲ ಆಗಲಿದೆ? ರಾಷ್ಟ್ರಮಟ್ಟದ ಪ್ರತಿಕ್ರಿಯೆ ಹೇಗಿರಲಿದೆ? ಎಂದು ಕಾದು ನೋಡಬೇಕಿದೆ.
-------------
First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading