ಅತೃಪ್ತ ಶಾಸಕರ ವಿವರಣೆ ಆಲಿಸುತ್ತಿರುವ ಸ್ಪೀಕರ್; ರಾಜೀನಾಮೆ ಬಗ್ಗೆ ವಿಧಾನ ಸಭಾಧ್ಯಕ್ಷರಿಂದ ಅಂತಿಮ ನಿರ್ಧಾರ

ಈ ಮಧ್ಯೆ ಸರ್ಕಾರಕ್ಕೆ ಬಹುಮತ ಕಳೆದುಕೊಂಡಿದೆ ಎಂದು ಬಿಜೆಪಿ ಆರೋಪ ಮಾಡುತ್ತಲೇ ಇದೆ. ಶುಕ್ರವಾರದ ಕಲಾಪದ ವೇಳೆ ಬಹುಮತ ಸಾಬೀತು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲು ಸಜ್ಜಾಗಿದೆ.

Ganesh Nachikethu
Updated:July 11, 2019, 10:26 PM IST
ಅತೃಪ್ತ ಶಾಸಕರ ವಿವರಣೆ ಆಲಿಸುತ್ತಿರುವ ಸ್ಪೀಕರ್; ರಾಜೀನಾಮೆ ಬಗ್ಗೆ ವಿಧಾನ ಸಭಾಧ್ಯಕ್ಷರಿಂದ ಅಂತಿಮ ನಿರ್ಧಾರ
ಮೈತ್ರಿ ಸರ್ಕಾರದ ರೆಬೆಲ್​​ ಶಾಸಕರು.
  • Share this:
ಬೆಂಗಳೂರು(ಜುಲೈ.11): ಸುಪ್ರೀಂಕೋರ್ಟ್​ ನಿರ್ದೇಶನದ ಮೇರೆಗೆ ಸ್ಪೀಕರ್​ ರಮೇಶ್​​ ಕುಮಾರ್ ಅವರು, ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ರಮೇಶ್​​ ಕುಮಾರ್​​ ಕಚೇರಿಗೆ ಶಾಸಕರು ಆಗಮಿಸಿದ್ದು, ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕರು ನೀಡಿರುವ ರಾಜೀನಾಮೆ ಕುರಿತು ಸ್ಪೀಕರ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಮುಂಬೈನಿಂದ ವಿಶೇಷ ವಿಮಾನಗಳಲ್ಲಿ ಬೆಂಗಳೂರು ಏರ್ಪೋರ್ಟ್​​ಗೆ ಬಂದಿಳಿದ ಅತೃಪ್ತರು, ಝೀರೋ ಟ್ರಾಫಿಕ್​ ಮೂಲಕ ಮೂರು ನಿಮಿಷಗಳ ಕಾಲ ತಡವಾಗಿ ವಿಧಾನಸಭಾಧ್ಯಕ್ಷರ ಕಚೇರಿ ತಲುಪಿದರು.

ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ರಾಜೀನಾಮೆ ಅಂಗೀಕಾರವಾಗದ ಕಾರಣ ಎರಡು ಪಕ್ಷಗಳ ಶಾಸಕರಿಗೆ ಸರ್ಕಾರ ವಿಪ್​ಜಾರಿ ಮಾಡಿದೆ. ಸ್ಪೀಕರ್​ ಇಂದೇ ಶಾಸಕರ ರಾಜೀನಾಮೆ ಅಂಗೀಕರಿಸುತ್ತಾರೋ, ಇಲ್ಲವೋ, ನಾಳೆಯ ವಿಧಾನಸಭೆ ಅಧಿವೇಶನಕ್ಕೆ ಅತೃಪ್ತ ಶಾಸಕರು ಬರುತ್ತಾರೋ ಇಲ್ಲವೋ ಎಂಬುದು ಎಲ್ಲವೂ ಸ್ಪೀಕರ್​ ತೀರ್ಮಾನದ ಮೇಲೆ ನಿಂತಿದೆ.

16 ಶಾಸಕರ ರಾಜೀನಾಮೆ ಬಳಿಕ ಸಿಎಂ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿದೆ. ಮುಂಗಾರು ಅಧಿವೇಶನದ ಮೊದಲ ದಿನವಾದ ಶುಕ್ರವಾರ ವಿಶ್ವಾಸ ಮತಯಾಚನೆ ಹೇಗೆ ಮಾಡಬೇಕೆಂದು? ಆತಂಕ ಶುರುವಾಗಿದೆ.

ಇದನ್ನೂ ಓದಿ: ರಮೇಶ್​​ ಜಾರಕಿಹೊಳಿ, ಮಹೇಶ್​​ ಕುಮಟಳ್ಳಿ ಅನರ್ಹತೆ?; ಸಂಜೆ ವೇಳೆಗೆ ಸ್ಪೀಕರ್​​ ಮಹತ್ವದ ಆದೇಶ

ವಿಧಾನಸೌಧದ ಸುತ್ತಮುತ್ತ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೇ ನೋಡಿಕೊಳ್ಳಲು ವಿಧಾನಸೌಧದ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ. ಸುಪ್ರೀಂಕೋರ್ಟ್​ ಸೂಚನೆ ಮೇರೆಗೆ ಅತೃಪ್ತ ಶಾಸಕರಿಗೆ ಸಕಲ ಭದ್ರತೆಯನ್ನು ಒದಗಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನತ್ತ ಅತೃಪ್ತರು: ಸಿದ್ದರಾಮಯ್ಯ ರೆಬೆಲ್ಸ್​​ ಮನವೊಲಿಕೆ ಸಾಧ್ಯತೆ; ಬಿಎಸ್​ವೈ ಸಿಎಂ ಕನಸು ಭಗ್ನ?

---------------
First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ