HOME » NEWS » State » KARNATAKA POLITICAL CRISIS MLC H VISHWANATH URGES IN FRONT OF ARUN SINGH ABOUT CHANGING LEADERSHIP IN KARNATAKA LG

Karnataka Political Crisis: ಸಿಎಂ ಬದಲಾವಣೆಗೆ ಅರುಣ್​ ಸಿಂಗ್​ ಮುಂದೆ ಬೇಡಿಕೆ ಇಟ್ಟ ಹೆಚ್.ವಿಶ್ವನಾಥ್

ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಅರುಣ್ ಸಿಂಗ್ ಬಳಿ ಹೇಳಿದ್ದೇನೆ. ನಾಯಕತ್ವ ಬದಲಾವಣೆ ಆಗಲೇಬೇಕು. ಅದಕ್ಕೆ ಕಾರಣವನ್ನೂ ಕೊಟ್ಟಿದ್ದೇನೆ. ಅರುಣ್ ಸಿಂಗ್ ಪಾಸಿಟಿವ್ ರೆಸ್ಪಾನ್ಸ್ ಮಾಡಿದ್ದಾರೆ ಎಂದರು.

news18-kannada
Updated:June 17, 2021, 12:36 PM IST
Karnataka Political Crisis: ಸಿಎಂ ಬದಲಾವಣೆಗೆ ಅರುಣ್​ ಸಿಂಗ್​ ಮುಂದೆ ಬೇಡಿಕೆ ಇಟ್ಟ ಹೆಚ್.ವಿಶ್ವನಾಥ್
ಹೆಚ್. ವಿಶ್ವನಾಥ್.
  • Share this:
ಬೆಂಗಳೂರು(ಜೂ.17): ರಾಜ್ಯ ರಾಜಕೀಯದಲ್ಲಿ ಮತ್ತೆ ಬದಲಾಣೆಯ ಗಾಳಿ ಬೀಸುತ್ತಿದೆ. ನಾಯಕತ್ವ ಬದಲಾವಣೆ ವಿಚಾರ ಮತ್ತಷ್ಟು ಚರ್ಚೆಯಾಗುತ್ತಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ರಾಜ್ಯಕ್ಕೆ ಆಗಮಿಸಿದ ಬಳಿಕ ಇನ್ನಷ್ಟು ರಾಜಕೀಯ ವಿಷಯಗಳು ಗರಿಗೆದರಿವೆ.  ಬಿಎಸ್​ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಮಾತುಗಳು ಮತ್ತೆ ಮತ್ತೆ ಕೇಳಿ ಬರುತ್ತಿವೆ. ಈ ವಿಚಾರವಾಗಿ ಮಾಜಿ ಸಚಿವ ಹೆಚ್​.ವಿಶ್ವನಾಥ್​ ಸಿಎಂ ಬದಲಾವಣೆ ಮಾಡಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಎಲ್​ಸಿ ಹೆಚ್​.ವಿಶ್ವನಾಥ್​, ಪಕ್ಷ ಮುಂದೆ ಬರಬೇಕಾದರೆ ಸಿಎಂ ಬದಲಾವಣೆ ಮಾಡಲೇಬೇಕು ಎಂದು ಒತ್ತಾಯಿಸಿದರು. ಸಿಎಂ ಬಿಎಸ್​ವೈಗೆ ವಯಸ್ಸಾಗಿದೆ. ಇಲಾಖೆಯಲ್ಲಿ ಸಿಎಂ ಪುತ್ರ ವಿಜಯೇಂದ್ರ, ಇಡೀ ಕುಟುಂಬ ಹಸ್ತಕ್ಷೇಪ ಮಾಡುತ್ತಿದೆ. ಕೊರೋನಾ ನಿರ್ವಹಣೆ ಮಾಡುವಲ್ಲಿ ಸಿಎಂ ವಿಫಲರಾಗಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಅವರ ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ಯಡಿಯೂರಪ್ಪ  ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅವರು ಮಾಡಿರುವ ಅಭಿವೃದ್ಧಿ ಕೆಲಸ ಶೂನ್ಯ ಎಂದು ಆರೋಪಗಳ ಸುರಿಮಳೆಗೈದರು.

ಇದನ್ನೂ ಓದಿ:Bengaluru Unlock: ಆಟೋ-ಟ್ಯಾಕ್ಸಿ ಚಾಲಕರಿಗೆ, ಚಿಲ್ಲರೆ ವ್ಯಾಪಾರಿಗಳಿಗೆ ಅನ್​ಲಾಕ್​​​​​ ಕಂಡೀಷನ್ಸ್​​​​ ಹಾಕಿದ BBMP

ಮುಂದುವರೆದ ಅವರು, ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದೇನೆ. ರಾಜ್ಯದ ರಾಜಕಾರಣದ ಬೆಳವಣಿಗೆ ಬಗ್ಗೆ ತಿಳಿಸಿದ್ದೇನೆ. ನಾನು ಯಾವುದೇ ಬಣದವನೂ‌ ಅಲ್ಲ. ನಾನು ಪಕ್ಷದ ಕಾರ್ಯಕರ್ತನಷ್ಟೇ. ಪಕ್ಷದ ಒಬ್ಬ ಎಂ ಎಲ್ ಸಿಯಷ್ಟೇ. ನಾನು ಯಾರ ವಿರೋಧಿಯೂ ಅಲ್ಲ.  ನಾನು ಹೇಳಿದ ಮಾತನ್ನು ಅವರು ಗಂಭೀರವಾಗಿ ಕೇಳಿದ್ದಾರೆ ಎಂದು ಹೇಳಿದರು.

ನಾನು ಜೆಡಿಎಸ್ ಅಧ್ಯಕ್ಷನಾಗಿಯೂ ಕೆಲಸ ಮಾಡಿದ್ದವನು. ರಾಜೀನಾಮೆ ಕೊಟ್ಟಾಗ ಹಲವು ವಿಚಾರಗಳಿದ್ದವು. ಅದನ್ನು ವಿರೋಧಿಸಿಯೇ ಇಲ್ಲಿಗೆ ಬಂದೆವು. ಇಲ್ಲಿಯೂ ಕುಟುಂಬ ರಾಜಕಾರಣವೇ ಕಾಣ್ತಿದೆ. ರಾಜ್ಯದ ಜನರಿಗೆ ಯಡಿಯೂರಪ್ಪ ಬಗ್ಗೆ ಅಪಾರ ಗೌರವವಿದೆ.  ಸಿಎಂ ಆಗಿ ಅವರು ಮಾಡಿದ ಕೆಲಸದ ಬಗ್ಗೆ ಗೌರವವಿದೆ. ಆದರೆ ಸರ್ಕಾರ ಹೇಗೆ ನಡೆಯುತ್ತಿದೆ ಎಂಬುದನ್ನು ಗಮನಿಸಬೇಕು. ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ವಿಶ್ವನಾಥ್​ ಒತ್ತಿ ಹೇಳಿದರು.

ನಾನು ಅಧಿಕಾರದ ಅಪೇಕ್ಷೆಗಾಗಿ ಮಾತನಾಡಲ್ಲ. ವಸ್ತುಸ್ಥಿತಿಯನ್ನ ವಿವರಿಸಿದ್ದೇನೆ. ನನಗೆ ಮಂತ್ರಿಗಿರಿ ಸಿಗಲಿಲ್ಲ ಅಂತ ಹೇಳಿಲ್ಲ. ನಮ್ಮ ಪಕ್ಷದವರು ಏನು ಬೇಕಾದರೂ ತಿಳಿದುಕೊಳ್ಳಲಿ. ನಮಗೆ ರಾಜ್ಯದ ಆಡಳಿತ ಮುಖ್ಯ. ಪಕ್ಷದ ಸಿದ್ಧಾಂತಗಳೂ ಮುಖ್ಯ. ಯಡಿಯೂರಪ್ಪನವರಿಗೆ ಮೊದಲಿನ ಸ್ಪಿರಿಟ್ ಬೇಕಾಗಿದೆ. ಆ ಶಕ್ತಿ ಅವರಲ್ಲಿ ಈಗಲೂ ಇದೆ. ಆದರೆ ಅವರ ಪ್ರಭಾವ ಈಗ ಮಬ್ಬಾಗುತ್ತಿದೆ ಎಂದರು.

ಇದನ್ನೂ ಓದಿ:Vijay Krishna Passed Away: ಮಾಜಿ ಕ್ರಿಕೆಟಿಗ ವಿಜಯ್​ಕೃಷ್ಣ ನಿಧನ; ಸಿಎಂ ಯಡಿಯೂರಪ್ಪ ಸಂತಾಪಹೈಕಮಾಂಡ್ ಹೇಳಿದ್ರೆ ರಾಜೀನಾಮೆ ಕೊಡ್ತೇನೆ ಅಂದಿದ್ದಾರೆ. ಆ ಪ್ರಕಾರವಾಗಿ ಅವರು ಮಾರ್ಗದರ್ಶಕರಾಗಿರಲಿ. ಪಂಚಮಸಾಲಿ ಸಮುದಾಯದವರಿಗೆ ಸಿಎಂ ಸ್ಥಾನ ಕೊಡಲಿ. ಅವರಿಗೆ ಒಂದು ಉತ್ತಮ ಟೀಂ ಕೊಡಲಿ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಲಿ ಎಂದು ಎಂಲ್​ಸಿ ವಿಶ್ವನಾಥ್​ ಸಲಹೆ ನೀಡಿದರು.

ವಿಜಯೇಂದ್ರ ವಿರುದ್ಧ ಆರೋಪ

ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಹೆಚ್ ವಿಶ್ವನಾಥ್ ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ನೇರ ಆರೋಪ ಮಾಡಿದರು. ಸಿಎಂ ಪುತ್ರ ಬಿ ವೈ ವಿಜಯೇಂದ್ರ ನೀರಾವರಿ ಇಲಾಖೆಯ 16 ಸಾವಿರ ಕೋಟಿ ಟೆಂಡರ್ ಗೆ ಕೈ ಹಾಕಿದ್ದಾರೆ. ಫೈನಾನ್ಸ್ ಡಿಪಾರ್ಟಮೆಂಟ್ ಒಪ್ಪಿಗೆ ಪಡೆದಿಲ್ಲ.  ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಅರುಣ್ ಸಿಂಗ್ ಬಳಿ ಹೇಳಿದ್ದೇನೆ. ನಾಯಕತ್ವ ಬದಲಾವಣೆ ಆಗಲೇಬೇಕು. ಅದಕ್ಕೆ ಕಾರಣವನ್ನೂ ಕೊಟ್ಟಿದ್ದೇನೆ. ಅರುಣ್ ಸಿಂಗ್ ಪಾಸಿಟಿವ್ ರೆಸ್ಪಾನ್ಸ್ ಮಾಡಿದ್ದಾರೆ ಎಂದರು.
Youtube Video

ಸಿಎಂ ಬದಲಾವಣೆಗೆ ವಿಶ್ವನಾಥ್ ಬೇಡಿಕೆ

ಸಿಎಂ ಬದಲಾವಣೆ ಮಾಡಿ ಎಂದು ವಿಶ್ವನಾಥ್ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​​ ಮುಂದೆ ಬೇಡಿಕೆ ಇಟ್ಟಿದ್ದಾರೆ. ಯಡಿಯೂರಪ್ಪ ಮಾರ್ಗದರ್ಶಕರಾಗಿರಲಿ. ಪಂಚಮಸಾಲಿ ಸಮುದಾಯದವರಿಗೆ ಅವಕಾಶ ಕೊಡಲಿ. ಒಂದು ಉತ್ತಮ ತಂಡವನ್ನ ಕೊಡಲಿ. ಯಡಿಯೂರಪ್ಪ ಮಾರ್ಗದರ್ಶಕರಾಗಿರಲಿ. ಅವರ ಜಾಗಕ್ಕೆ ಮತ್ತೊಬ್ಬ ನಾಯಕರು ಬರಲಿ. ಎಲ್ಲರನ್ನು ಒಟ್ಟುಗೂಡಿಸಿಕೊಂಡು ಹೋಗಲಿ ಎಂದು ಸಲಹೆ ನೀಡಿದ್ದಾರೆ.
Published by: Latha CG
First published: June 17, 2021, 12:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories