LIVE NOW

Karnataka Political Crisis LIVE: ಜೆಡಿಎಸ್​​​-ಬಿಜೆಪಿ ಸರ್ಕಾರ ರಚನೆ ವಿಚಾರ; ವದಂತಿ ಎಂದ ಸಿಎಂ ಎಚ್​​ಡಿಕೆ

Karnataka Politics News LIVE Updates: ಅತೃಪ್ತರ ಮನವೊಲಿಕೆಗೆ ಸಚಿವರಾದ ಡಿ.ಕೆ. ಶಿವಕುಮಾರ್​, ಜಿ.ಟಿ. ದೇವೇಗೌಡರ ತಂಡ ಮುಂಬೈಗೆ ತೆರಳಿತ್ತು. ನಿನ್ನೆ ಮುಂಬೈ ಹೋಟೆಲ್ ಮುಂದೆ ಹೈಡ್ರಾಮ ಸೃಷ್ಟಿಯಾಗಿ ಡಿಕೆಶಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಡಿಕೆಶಿ ಬರಿಗೈಯಲ್ಲಿ ಬೆಂಗಳೂರಿಗೆ ವಾಪಾಸಾಗಿದ್ದು, ಮೈತ್ರಿ ನಾಯಕರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

Kannada.news18.com | July 11, 2019, 10:54 PM IST
facebook Twitter Linkedin
Last Updated July 11, 2019
auto-refresh
Karnataka Political Crisis LIVE: ರಾಜ್ಯ ರಾಜಕಾರಣ ದೇಶದೆಲ್ಲೆಡೆ ಭಾರೀ ಕುತೂಹಲ ಮೂಡಿಸಿದ್ದು, ಈಗಾಗಲೇ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್​- ಜೆಡಿಎಸ್​ ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ನಿನ್ನೆ ರಾಜೀನಾಮೆ ನೀಡಿದ ಇಬ್ಬರು ಶಾಸಕರೂ ಸೇರಿದಂತೆ ಒಟ್ಟು 17 ಶಾಸಕರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಸಚಿವರ ಬದಲು ಅತೃಪ್ತರಿಗೆ ಮಂತ್ರಿ ಪದವಿ ನೀಡುವುದಾಗಿ ಮೈತ್ರಿ ನಾಯಕರು ಘೋಷಿಸಿದ್ದಾರೆ. ಆದರೂ ಮುಂಬೈನಲ್ಲಿರುವ ಅತೃಪ್ತ ಶಾಸಕರು ವಾಪಾಸ್​ ಬರುವ ಮನಸು ಮಾಡಿರಲಿಲ್ಲ.

ಹೀಗಾಗಿ, ಅತೃಪ್ತರ ಮನವೊಲಿಕೆಗೆ ಸಚಿವರಾದ ಡಿ.ಕೆ. ಶಿವಕುಮಾರ್​, ಜಿ.ಟಿ. ದೇವೇಗೌಡರ ತಂಡ ಮುಂಬೈಗೆ ತೆರಳಿತ್ತು. ನಿನ್ನೆ ಮುಂಬೈ ಹೋಟೆಲ್ ಮುಂದೆ ಹೈಡ್ರಾಮ ಸೃಷ್ಟಿಯಾಗಿ ಡಿಕೆಶಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಡಿಕೆಶಿ ಬರಿಗೈಯಲ್ಲಿ ಬೆಂಗಳೂರಿಗೆ ವಾಪಾಸಾಗಿದ್ದು, ಮೈತ್ರಿ ನಾಯಕರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ನಾಳೆ ವಿಧಾನಮಂಡಲ ಅಧಿವೇಶನ ಆರಂಭವಾಗುವುದರಿಂದ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಲೇಬೇಕಾದ ಪರಿಸ್ಥಿತಿ ಉಂಟಾಗಿದೆ. ಕಳೆದ ಒಂದು ವಾರದಿಂದ ಬೆಳವಣಿಗೆಗಳು ನಡೆಯುತ್ತಿದ್ದು, ರಾಜ್ಯ ರಾಜಕೀಯ ಕ್ಲೈಮಾಕ್ಸ್​ ಹಂತಕ್ಕೆ ತಲುಪಿದೆ. ಇಂದಿನ ಬೆಳವಣಿಗೆಗಳ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ... Read More
10:35 pm (IST)

ರಾಜೀನಾಮೆ ಪರ್ವ ಹಿನ್ನಲೆ

ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಬಿಜೆಪಿ ನಾಯಕರಿಗೆ ಕರೆ

ಕರೆ ಮಾಡಿ ಮಾತನಾಡಲು ಬರುವಂತೆ ಹೇಳಿದ್ದ ಸಾ.ರಾ.ಮಹೇಶ್

ಜೆಡಿಎಸ್ ನಿಂದ  ಸರ್ಕಾರ ರಚನೆ ಮಾಡಲು ಸಫೊರ್ಟ್  ನೀಡುತ್ತೇವೆ ಎಂದಿದ್ದ ಸಾ.ರಾ.ಮಹೇಶ್ 

ಸಾ.ರಾ.ಮಹೇಶ್ ಭೇಟಿಗೆ ಬಂದಿದ್ದ ಮುರುಳಿಧರ್ ರಾವ್ ಹಾಗೂ ಈಶ್ವರಪ್ಪ 

ಅಧಿಕಾರ ಕಳೆದುಕೊಳ್ಳುತ್ತೀದ್ಧೆವೆ ಕೊನೆಗಳಿಗೆಯಲ್ಲಿ ಬಿಜೆಪಿ ಜೊತೆ ಸರ್ಕಾರ ರಚನೆಗೆ ಕಸರತ್ತು

ಸಾ.ರಾ.ಮಹೇಶ್ ಆಫರ್ ತಿರಸ್ಕರಿಸಿದ ಮುರುಳಿಧರ್ ರಾವ್ 

ಉಭಯ ನಾಯಕರ ಸಭೆ ವಿಫಲ 

ಈ ಹಂತದಲ್ಲಿ ಸಾಧ್ಯವಿಲ್ಲ ಎಂದು ಮುರುಳಿಧರ್ ರಾವ್

ಆಪರೇಷನ್ ಕಮಲ ಮುಂಚೆ ಹೇಳಿದ್ರೇ ಹಾಕ್ತಾ ಇತ್ತು..ಆಗ ಅಸಾಧ್ಯ ಎಂದು ಹೊರ ನಡೆದಿರುವ ಮುರುಳಿಧರ್ ರಾವ್ 

ಸಿಎಂ ಸೂಚನೆ ಮೇರೆಗೆ ಬಿಜೆಪಿ ನಾಯಕರ ಜೊತೆ ಮಾತುಕತೆಗೆ ತೆರಳಿದ್ದ ಸಾ.ರಾ.ಮಹೇಶ್

ಗುಪ್ತಚರ ಇಲಾಖೆ ಉನ್ನತ್ತ ಮೂಲಗಳಿಂದ ನ್ಯೂಸ್ 18 ಗೆ ಮಾಹಿತಿ

Load More


corona virus btn
corona virus btn
Loading