LIVE NOW

Karnataka Political Crisis LIVE: ಶಾಸಕರು ಬಂದ್ರೆ ವಿಚಾರಣೆ ಮಾಡ್ತೀನಿ, ಇಲ್ಲಾಂದ್ರೆ ಮನೆಗೆ ಹೋಗಿ ಮಲಗ್ತೀನಿ; ಸ್ಪೀಕರ್ ರಮೇಶ್ ಕುಮಾರ್

ಇಂದಿನಿಂದ ಮಳೆಗಾಲದ ಅಧಿವೇಶನ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್​- ಜೆಡಿಎಸ್​ ಅತೃಪ್ತರ ಶಾಸಕರಿಗೆ ವಿಪ್ ಜಾರಿಗೊಳಿಸಲಾಗಿದೆ. ಅತೃಪ್ತರು ಸ್ಪೀಕರ್ ವಿರುದ್ಧ ನೀಡಿರುವ ದೂರಿನ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್​ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಈ ಮೂಲಕ ಅತೃಪ್ತ ಶಾಸಕರ ರಾಜೀನಾಮೆಯೂ ಅಂಗೀಕರಿಸುವುಂತೆಯೂ ಇಲ್ಲ, ಶಾಸಕರನ್ನು ಅನರ್ಹಗೊಳಿಸುವಂತೆಯೂ ಇಲ್ಲ ಎಂಬ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಒಳಗೊಂಡ ಪೀಠ ನೀಡಿದೆ. ಅದರ ಬೆನ್ನಲ್ಲೇ ಮಳೆಗಾಲದ ಸದನದಲ್ಲಿ ಸ್ವಪ್ರೇರಣೆಯಿಂದ ಸಿಎಂ ಕುಮಾರಸ್ವಾಮಿ ಬಹುಮತ ಸಾಬೀತಿಗೆ ಸಮಯ ಕೋರಿದ್ದಾರೆ

Kannada.news18.com | July 12, 2019, 3:25 PM IST
facebook Twitter Linkedin
Last Updated July 12, 2019
auto-refresh

Highlights

Karnataka Political Crisis LIVE: ಅತೃಪ್ತರು ಸ್ಪೀಕರ್ ವಿರುದ್ಧ ನೀಡಿರುವ ದೂರಿನ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್​ ಜುಲೈ 16ರ ವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಈ ಮೂಲಕ ಸ್ಪೀಕರ್​ ರಮೇಶ್​ ಕುಮಾರ್​, ರಾಜೀನಾಮೆ ಅಂಗೀಕರಿಸುವಂತೆಯೂ ಇಲ್ಲ, ಶಾಸಕರನ್ನು ಅನರ್ಹಗೊಳಿಸುವಂತೆಯೂ ಇಲ್ಲ. ಆದರೆ ಈ ಎಲ್ಲದರ ನಡುವೆ, ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಮಳೆಗಾಲದ ಸದನದಲ್ಲಿ ವಿಶ್ವಾಸ ಮತಯಾಚನೆಗೆ ಸಮಯ ಕೋರಿದ್ದಾರೆ. ಈ ಬೆಳವಣಿಗೆಯನ್ನು ಬಿಜೆಪಿ ನಾಯಕರು ಊಹಿಸಿರಲೂ ಸಾಧ್ಯವಿಲ್ಲ. ಈ ಎಲ್ಲ ವಿದ್ಯಮಾನಗಳ ಕುರಿತು ಕ್ಷಣ ಕ್ಷಣದ ಮಾಹಿತಿಯನ್ನು ನ್ಯೂಸ್​18 ಕನ್ನಡ ನೀಡಲಿದೆ.
Load More