Karnataka Political Crisis LIVE: ಕಲಾಪ ಮಂಗಳವಾರಕ್ಕೆ ಮುಂದೂಡಿಕೆ; ಸಂಜೆ 4ರೊಳಗೆ ವಿಶ್ವಾಸಮತ ಕಡ್ಡಾಯ; ಸ್ಪೀಕರ್ ಸ್ಪಷ್ಟ ಸೂಚನೆ
Vidhansabha Session Highlights: ಇಂದು ನಡೆಯುವ ಕಲಾಪದಲ್ಲಿ ಬಹುಮತ ಸಾಬೀತಪಡಿಸುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ. ಹೀಗಾಗಿ, ಇಂದಿನ ಅಧಿವೇಶನ ಸರ್ಕಾರದ ಅಳಿವು-ಉಳಿವನ್ನು ನಿರ್ಧರಿಸಲಿರುವುದರಿಂದ ತೀವ್ರ ಕುತೂಹಲ ಮೂಡಿಸಿದೆ.

ಸ್ಪೀಕರ್ ರಮೇಶ್ ಕುಮಾರ್
- News18
- Last Updated: July 23, 2019, 5:15 PM IST
Karnataka Political Crisis LIVE: ಕಳೆದ 5 ದಿನಗಳ ಹಿಂದೆಯೇ ಸಿಎಂ ಕುಮಾರಸ್ವಾಮಿಯವರಿಗೆ ವಿಶ್ವಾಸ ಮತಯಾಚನೆ ಮಾಡಲು ಅಧಿವೇಶನದಲ್ಲಿ ಸಮಯ ನಿಗದಿ ಮಾಡಲಾಗಿತ್ತು. ಆದರೆ, ಚರ್ಚೆಗೆ ಅವಕಾಶ ಕೇಳಿದ್ದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಶುಕ್ರವಾರದವರೆಗೂ ಚರ್ಚೆಯನ್ನು ಮುಂದುವರಿಸಿದ್ದರು. ಇದರ ನಡುವೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಬಹುಮತ ಸಾಬೀತುಪಡಿಸಲು ಎರಡು ಡೆಡ್ಲೈನ್ ನೀಡಿದ್ದರು. ಆದರೆ, ಅದಕ್ಕೆ ಸೊಪ್ಪು ಹಾಕದ ಮೈತ್ರಿ ಸರ್ಕಾರದ ನಾಯಕರು ಬಿಜೆಪಿಯ ವಿರೋಧದ ನಡುವೆಯೂ ಚರ್ಚೆಯನ್ನು ಮುಂದುವರೆಸಿದ್ದರು. ಇಂದು ನಡೆಯುವ ಕಲಾಪದಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ. ಹೀಗಾಗಿ, ಇಂದಿನ ಅಧಿವೇಶನ ಸರ್ಕಾರದ ಅಳಿವು-ಉಳಿವನ್ನು ನಿರ್ಧರಿಸಲಿರುವುದರಿಂದ ತೀವ್ರ ಕುತೂಹಲ ಮೂಡಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ...