LIVE NOW

Karnataka Political Crisis LIVE: ಅಖಾಡಕ್ಕಿಳಿದ ರಾಜ್ಯಪಾಲರು, ಬಹುಮತ ಸಾಬೀತಿಗೆ ನಾಳೆ ಮಧ್ಯಾಹ್ನ 1.30ರ ವರೆಗೆ ಸಿಎಂಗೆ ಗಡುವು

Karnataka Trust Vote: ಈಗಾಗಲೇ ಜೆಡಿಎಸ್​- ಕಾಂಗ್ರೆಸ್​ ವಿಪ್ ಜಾರಿ ಮಾಡಿದೆ. ಆದರೆ, ವಿಪ್ ಜಾರಿಗೊಳಿಸಿದ್ದರೂ ಅಧಿವೇಶನಕ್ಕೆ ಆಗಮಿಸಲೇಬೇಕೆಂದೇನೂ ಇಲ್ಲ ಎಂದು ನಿನ್ನೆ ಸುಪ್ರೀಂಕೋರ್ಟ್​ ತೀರ್ಪಿನಲ್ಲಿ ತಿಳಿಸಿದೆ. ಹೀಗಾಗಿ, ಮುಂಬೈನಲ್ಲಿರುವ ಅತೃಪ್ತ ಶಾಸಕರಾರೂ ಸದನದಲ್ಲಿ ಭಾಗವಹಿಸುತ್ತಿಲ್ಲ. ಇಂದಿನ ಅಧಿವೇಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚಿಸಲಿದ್ದಾರೆ.

Kannada.news18.com | July 19, 2019, 10:14 PM IST
facebook Twitter Linkedin
Last Updated July 19, 2019
auto-refresh
Karnataka Political Crisis LIVE: ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಸುಪ್ರೀಂಕೋರ್ಟ್​ ಮೊರೆಹೋಗಿದ್ದ 15 ಅತೃಪ್ತ ಶಾಸಕರಿಗೆ ಸದ್ಯಕ್ಕೆ ರಿಲೀಫ್​ ಸಿಕ್ಕಂತಾಗಿದೆ. ಇಂದು ನಡೆಯುವ ಮುಂಗಾರು ಅಧಿವೇಶನದಲ್ಲಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಜೆಡಿಎಸ್​- ಕಾಂಗ್ರೆಸ್​ ವಿಪ್ ಜಾರಿ ಮಾಡಿದೆ. ಆದರೆ, ವಿಪ್ ಜಾರಿಗೊಳಿಸಿದ್ದರೂ ಅಧಿವೇಶನಕ್ಕೆ ಆಗಮಿಸಲೇಬೇಕೆಂದೇನೂ ಇಲ್ಲ ಎಂದು ನಿನ್ನೆ ಸುಪ್ರೀಂಕೋರ್ಟ್​ ತೀರ್ಪಿನಲ್ಲಿ ತಿಳಿಸಿದೆ. ಹೀಗಾಗಿ, ಮುಂಬೈನಲ್ಲಿರುವ ಅತೃಪ್ತ ಶಾಸಕರಾರೂ ಸದನದಲ್ಲಿ ಭಾಗವಹಿಸುತ್ತಿಲ್ಲ. ಇಂದು ನಡೆಯುವ ಅಧಿವೇಶನ ಮತ್ತು ರಾಜಕೀಯ ವಿದ್ಯಮಾನಗಳ ಸಂಪೂರ್ಣ ಮಾಹಿತಿ ಇಲ್ಲದೆ... Read More
10:14 pm (IST)
9:40 pm (IST)

RPT136_19072019_Breaking_ramesh

ಸರ್ಕಾರಕ್ಕೆ ಬಹುಮತ ಇಲ್ಲಎಂದು ಸ್ಪಷ್ಟ ಆಗಿದೆ
ಆದ್ರೂ ರಾಜ್ಯಪಾಲರು ಮೂರನೇ ಬಾರಿ ವಿಶ್ವಾಸ ಮತ ಯಾಚಸಲು ಸ್ಪೀಕರ್ ಗೆ ಪತ್ರ ಬರೆದಿದ್ದಾರೆ
ಅದನ್ನ ಸ್ಪೀಕರ್ ಸದನದಲ್ಲಿ ಹೇಳಿಯೂ ಶಾಸಕರಿಗೆ ಮತಾಡಲು ಹೆಚ್ಚು ಸಮಯ ನೀಡಿ ಕಾಲಾಹರಣ ಮಾಡಿದ್ದಾರೆ
ಈಗ ಸ್ಪೀಕರ್ ಯಾವ ಕಾರಣಕ್ಕೂ ಸೋಮವಾರ ಮುಂದೂಡಲ್ಲ
ಸೋಮವಾರ ವಿಶ್ವಾಸ ಮತ ಯಾಚನೆಗೆ ಅಂತ್ಯ ಹಾಡ್ತೇವೆ ಎಂದಿದ್ದಾರೆ
ಸ್ಪೀಕರ್, ಸಿದ್ದರಾಮಯ್ಯ ಎಲ್ಲರೂ ಒಪ್ಪಿದ್ದಾರೆ
ತಾವೂ ಸರ್ಕಾರ ನಾಡ್ತಿಲ್ಲ, ನಮಗೂ ಬಿಡ್ತಿಲ್ಲ
ಇದನ್ನ ದೇಶದ, ರಾಜ್ಯದ ಜನ ಗಮನಿಸ್ತಾ ಇದ್ದಾರೆ
ಅದೇ ಕಾರಣಕ್ಕೆ ಜನಕ್ಕೆ ಗೊತ್ತಾಗಲಿ ಎಂದು ನಿನ್ನೆ ಅಹೋರಾತ್ರಿ ಧರಣಿ ಮಾಡಿದ್ವಿ.
ಸುಪ್ರೀಂ ಕೋರ್ಟ್ ಕೂಡ ಅತೃಪ್ತರ ಬೆಂಬಲಕ್ಕೆ ನಿಂತಿದೆ, ಬಲವಂತ ಮಾಡುವಂತಿಲ್ಲ ಎಂದು ಹೇಳಿದೆ
ಸೋಮವಾರ ಏನಾಗುತ್ತೆ ನೋಡಿಕೊಂಡು ಮುಂದಿನ ಹೆಜ್ಜೆ ಇಡ್ತೇವೆ
ವಿಧಾನ ಸೌಧದಲ್ಲಿ ಯಡಿಯೂರಪ್ಪ ಮಾದ್ಯಮಗಳಿಗೆ ಹೇಳಿಕೆ
====
ರಾಜ್ಯಪಾಲರು ಏನು ಮಾಡಬೇಕು ಅಂತ ಅವರಿಗೆ ಗೊತ್ತಿದೆ.
ಅದನ್ನ ನಾನು ಹೇಳಲ್ಲ
ಆದ್ರೆ ರಾಜ್ಯಪಾಲರು ಈಗಾಗಲೇ ಕೇಂದ್ರಕ್ಕೆ ಏನೇನು ವರದಿ ಮಾಡಬೇಕೋ ಮಾಡಿದ್ದಾರೆ.
ನಾವು ಮತ್ತೆ ರಾಜ್ಯಪಾಲರ ಬಳಿ ಹೋಗಲ್ಲ.
ಯಡಿಯೂರಪ್ಪ ಹೇಳಿಕೆ

8:53 pm (IST)

ಸಾಂವಿಧಾನಿಕ ಬಿಕ್ಕಟ್ಟು, ಗವರ್ನರ್ ಮತ್ತು ಗವರ್ನಮೆಂಟ್ ನಡುವಿನ 

ಸಂಘರ್ಷದಿಂದ ಪಾರಾದ ಸಿಎಂ, ಸ್ಪೀಕರ್ ಕಚೇರಿ
ಗವರ್ನರ್ 2ನೇ ಪತ್ರಕ್ಕೆ ಸಿಎಂ, ಸ್ಪೀಕರ್ ಪ್ರತಿಕ್ರಿಯೆ
ಇಂದೇ ವಿಶ್ವಾಸಮತ ಯಾಚನೆಗೆ ಗವರ್ನರ್ ಗಡುವು
ಸಿಎಂ ಹೆಚ್ಡಿಕೆಗೆ ಗಡುವು ನೀಡಿದ್ದ ರಾಜ್ಯಪಾಲರು
ಎರಡನೇ ಗಡುವು ಮೀರಿದ್ದರೆ ರಾಜ್ಯಪಾಲರಿಗೆ ಸರ್ಕಾರದ ವಿರುದ್ಧ ಏಕಾಏಕಿ ಕ್ರಮ ಕೈಗೊಳ್ಳುವ ಅಧಿಕಾರವಿತ್ತು
ಆದರೆ ರಾಜಭವನ ಮತ್ತು ಸರ್ಕಾರದ ಸಂಘರ್ಷಕ್ಕೆ ಮದ್ದು ಹುಡುಕಿದ ಸಿಎಂ ಮತ್ತು ಸ್ಪೀಕರ್
ರಾಜ್ಯಪಾರು ಸರ್ಕಾರವನ್ನು ಅಮಾನತಯ ಇಡುವ ಮುನ್ಸೂಚನೆ
ಮುನ್ಸೂಚನೆ ಹಿನ್ನಲೆ ಮಹತ್ವದ ಸಲಹೆ ಪಡೆದ ಸಿಎಂ
ಕಾನೂನು ತಜ್ಞರ ಸಲಹೆ ಪಡೆದ ಸಿಎಂ
ರಾಜ್ಯಪಾಲರಿಗೆ ಸಿಎಂ ಪತ್ರ
ವಿಶ್ವಾಸಮತಯಾಚನೆ ಮಂಡಿಸಿದ್ದೇನೆ
ಚರ್ಚೆ ಆರಂಭವಾಗಿದೆ
ಚರ್ಚೆಗೆ ಅವಕಾಶ ಕಲ್ಪಿಸಿಬೇಕಿದೆ
ಬಹುತೇಕ ಸದಸ್ಯರು ಚರ್ಚೆಯಲ್ಲಿ ಭಾಗವಹಸುವ ಇಚ್ಚೆ ಹೊಂದಿದ್ದಾರೆ
ಚರ್ಚೆ ಮುಗಿದ ಬಳಿಕ ವಿಶ್ವಾಸಮತಯಾಚನೆ ಮಾಡುತ್ತೇವೆ
ವಿಶ್ವಾಸಮತಯಾಚನೆ ನಡೆಯುತ್ತಿದೆ
ನಡೆದೆ ನಡೆಯುತ್ತೆ
ಸದನದ ನಡಾವಳಿಗಳ ಪ್ರಕಾರ ನಡೆಯುತ್ತಿದೆ
ಚರ್ಚೆ ಬಳಿಕ ವಿಶ್ವಾಸಮತಯಾಚನೆ ಮಾಡುವುದಾಗಿ ಕುಮಾರಸ್ವಾಮಿ ಪತ್ರ
ರಾಜ್ಯಪಾಲರಿಗೆ ಪತ್ರ ಮುಖೇನಾ ಸ್ಪಷ್ಟನೆ

Load More