ಅತೃಪ್ತರ ಮನವೊಲಿಸಲು ಕೈ ನಾಯಕರ ಒಗ್ಗಟ್ಟು ಪ್ರದರ್ಶನ; ಹಾವು-ಏಣಿ ಆಟದಲ್ಲಿ ಗೆಲ್ಲೋರ್ಯಾರು?

ಅತೃಪ್ತರ ಮನವೊಲಿಕೆಗೆ ಮುಂದಾಗಿರುವ ಕಾಂಗ್ರೆಸ್​ ನಾಯಕರು ಇಂದು ಬೆಳಗ್ಗೆಯಿಂದಲೇ ಕಾರ್ಯಾಚರಣೆ ಶುರುಮಾಡಿದ್ದಾರೆ. ಸೋಮವಾರ ಅಧಿವೇಶನ ಇರುವುದರಿಂದ ಅಷ್ಟರೊಳಗೆ ಅತೃಪ್ತರ ಮನವೊಲಿಸಲು ಸಿದ್ದರಾಮಯ್ಯ, ಸಚಿವ ಡಿ.ಕೆ. ಶಿವಕುಮಾರ್​, ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ.

Sushma Chakre | news18
Updated:July 13, 2019, 3:23 PM IST
ಅತೃಪ್ತರ ಮನವೊಲಿಸಲು ಕೈ ನಾಯಕರ ಒಗ್ಗಟ್ಟು ಪ್ರದರ್ಶನ; ಹಾವು-ಏಣಿ ಆಟದಲ್ಲಿ ಗೆಲ್ಲೋರ್ಯಾರು?
ಸಿದ್ದರಾಮಯ್ಯ- ಪರಮೇಶ್ವರ್- ಡಿಕೆಶಿ- ದಿನೇಶ್ ಗುಂಡೂರಾವ್
  • News18
  • Last Updated: July 13, 2019, 3:23 PM IST
  • Share this:
ಬೆಂಗಳೂರು (ಜು. 13): ಸಾಮೂಹಿಕವಾಗಿ ರಾಜೀನಾಮೆ ನೀಡಿ ಮುಂಬೈ ಸೇರಿಕೊಂಡಿರುವ ಶಾಸಕರಿಂದಾಗಿ ಮೈತ್ರಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಇದೀಗ ವಿಶ್ವಾಸ ಮತ ಯಾಚನೆಗೆ ಅವಕಾಶ ನೀಡಲು ಸಿಎಂ ಕುಮಾರಸ್ವಾಮಿ ಮನವಿ ಮಾಡಿರುವುದರಿಂದ ಅಷ್ಟರೊಳಗೆ ಬಹುಮತ ಸಾಬೀತಿಗೆ ಬೇಕಾದ ಮ್ಯಾಜಿಕ್ ನಂಬರ್ ಸಂಪಾದಿಸಿಕೊಳ್ಳಬೇಕಾಗಿದೆ.

ಹೀಗಾಗಿ, ಅತೃಪ್ತರ ಮನವೊಲಿಕೆಗೆ ಮುಂದಾಗಿರುವ ಕಾಂಗ್ರೆಸ್​ ನಾಯಕರು ಇಂದು ಬೆಳಗ್ಗೆಯಿಂದಲೇ ಕಾರ್ಯಾಚರಣೆ ಶುರುಮಾಡಿದ್ದಾರೆ. ಸೋಮವಾರ ಅಧಿವೇಶನ ಇರುವುದರಿಂದ ಅಷ್ಟರೊಳಗೆ ಅತೃಪ್ತರ ಮನವೊಲಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ. ಶಿವಕುಮಾರ್​, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರು ಅತೃಪ್ತರ ಮನವೊಲಿಕೆಗೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

MTB nagaraj
ಎಂಟಿಬಿ ನಾಗರಾಜ್​​


ಇಂದು ಮುಂಜಾನೆಯೇ ಸಚಿವ ಎಂಟಿಬಿ ನಾಗರಾಜ್ ಮನೆಗೆ ತೆರಳಿದ್ದ ಸಚಿವ ಡಿ.ಕೆ. ಶಿವಕುಮಾರ್ ಸಾಕಷ್ಟು ಸಮಯ ಚರ್ಚೆ ಮಾಡಿ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅತೃಪ್ತರು ರಾಜೀನಾಮೆ ವಾಪಾಸ್​ ಪಡೆಯುವಂತೆ ಮಾಡುವ ಜವಾಬ್ದಾರಿಯನ್ನು ಕಾಂಗ್ರೆಸ್​ ಹೈಕಮಾಂಡ್​ ಡಿ.ಕೆ. ಶಿವಕುಮಾರ್ ಹೆಗಲಿಗೆ ಹೊರಿಸಿತ್ತು. ಇದಕ್ಕಾಗಿ ಮುಂಬೈಗೆ ತೆರಳಿದ್ದ ಡಿ.ಕೆ. ಶಿವಕುಮಾರ್ ಅತೃಪ್ತರನ್ನು ಭೇಟಿಯಾಗುವಲ್ಲಿ ವಿಫಲರಾಗಿದ್ದರು. ಅಲ್ಲಿ ನಡೆದ ಹೈಡ್ರಾಮದಿಂದ ಇಡೀ ದೇಶವೇ ಡಿ.ಕೆ. ಶಿವಕುಮಾರ್ ಕಡೆ ತಿರುಗಿ ನೋಡುವಂತಾಗಿತ್ತು.

ಬಿಜೆಪಿಯ ರಾಷ್ಟ್ರ ರಾಜ್ಯ ನಾಯಕರೆಲ್ಲರೂ ಪಕ್ಷಾಂತರದ ಪಿತಾಮಹರುಗಳೆ; ಲೇವಡಿ ಮಾಡಿದ ವಿಎಸ್ ಉಗ್ರಪ್ಪ

ಮುಂಬೈಗೆ ಹೋಗಿ ಅತೃಪ್ತರ ಸಂಧಾನ ಮಾಡುವ ಪ್ರಯತ್ನ ವಿಫಲವಾದರೂ ಬೆಂಗಳೂರಿನಲ್ಲಿಯೇ ಇರುವ ಮೂರ್ನಾಲ್ಕು ಅತೃಪ್ತ ಶಾಸಕರನ್ನು ಭೇಟಿಯಾಗಿ ಮನವೊಲಿಸಲು ಕಾಂಗ್ರೆಸ್​ ನಾಯಕರು ನಿರ್ಧರಿಸಿದ್ದಾರೆ. ಹೀಗಾಗಿ, ಇಂದು ಬೆಳಗ್ಗೆ ಎಂಟಿಬಿ ನಾಗರಾಜ್ ಮನೆಗೆ ಡಿ.ಕೆ. ಶಿವಕುಮಾರ್ ಹೋದ ಬೆನ್ನಲ್ಲೇ ಸಿದ್ದರಾಮಯ್ಯ, ಜಿ. ಪರಮೇಶ್ವರ್, ಕೃಷ್ಣಬೈರೇಗೌಡ ಕೂಡ ಫೋನ್ ಮೂಲಕ ಸಂಪರ್ಕಿಸಿ ರಾಜೀನಾಮೆ ವಾಪಾಸ್​ ಪಡೆಯಲು ಮನವೊಲಿಸಿದ್ದಾರೆ.

K. Sudhakar
ಕಾಂಗ್ರೆಸ್​ ಶಾಸಕ ಕೆ.ಸುಧಾಕರ್​
ಇದೀಗ ಡಾ. ಸುಧಾಕರ್ ಅವರ ಮನವೊಲಿಕೆಗೆ ಕಾಂಗ್ರೆಸ್​ ನಾಯಕರು ಮುಂದಾಗಿದ್ದಾರೆ. ಎಂಟಿಬಿ ನಾಗರಾಜ್ ಜೊತೆಯಲ್ಲೇ ಡಾ. ಸುಧಾಕರ್ ಕೂಡ ರಾಜೀನಾಮೆ ನೀಡಿದ್ದರು. ಈ ವೇಳೆ ವಿಧಾನಸೌಧದಲ್ಲಿ ಕೈ ನಾಯಕರು ಅವರನ್ನು ಹಿಡಿದು ಎಳೆದಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಡಾ. ಸುಧಾಕರ್ ಮನವೊಲಿಸುವ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯಕ್ಕೆ ತಿರುಪತಿಯಲ್ಲಿರುವ ಸುಧಾಕರ್ ವಾಪಾಸ್​ ಬಂದ ನಂತರ ಮತ್ತೆ ಮನವೊಲಿಕೆಗೆ ಕೈ ನಾಯಕರು ನಿರ್ಧರಿಸಿದ್ದಾರೆ.

First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ