LIVE NOW

Karnataka Political Crisis LIVE: ಸೋಮವಾರಕ್ಕೆ ಕಲಾಪ ಮುಂದೂಡಿಕ; ವಿಶ್ವಾಸಮತ ಯಾಚನೆ ಸಾಧ್ಯತೆ

Vidhansabha Session Highlights: ರಾಜ್ಯಪಾಲರ ನೀಡಿದ ಎರಡನೇ ಗಡುವು ಅಂತ್ಯಗೊಂಡಿದ್ದು, ಇಂದೇ ಚರ್ಚೆ ಅಂತ್ಯಗೊಳಿಸಿ ವಿಶ್ವಾಸಮತ ಯಾಚಿಸಿ ಎಂದು ಸ್ಪೀಕರ್​ ರಮೇಶ್​ ಕುಮಾರ್​ ಆಡಳಿತ ಪಕ್ಷಕ್ಕೆ ತಿಳಿಸಿದ್ದಾರೆ. ಸದನದ ಒಳಗೆ ಮತ್ತು ಹೊರಗೆ ರಾಜಕೀಯ ಲೆಕ್ಕಾಚಾರಗಳು ಕ್ಷಣ ಕ್ಷಣ ಬದಲಾಗುತ್ತಿದೆ. ಅದೆಲ್ಲದರ ಮಾಹಿತಿ ಇಲ್ಲಿದೆ.

Kannada.news18.com | July 19, 2019, 10:14 PM IST
facebook Twitter Linkedin
Last Updated July 19, 2019
auto-refresh
Karnataka Political Crisis LIVE: ವಿಶ್ವಾಸ ಮತಯಾಚನೆ ಮಾಡದ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರು ಸದನದ ಸಭಾಂಗಣದಲ್ಲೇ ಅಹೋರಾತ್ರಿ ಧರಣಿ ನಡೆಸಿದ್ದರು. ಮಧ್ಯಪ್ರವೇಶಿಸಿ ಬಹುಮತ ಸಾಬೀತಿಗೆ ಸೂಚನೆ ನೀಡುವಂತೆ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿತ್ತು. ಅದರಂತೆ ಇಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿಗಳಿಗೆ ಗಡುವು ನೀಡಿದ್ದರು. ಆದರೆ ಇದೀಗ ರಾಜ್ಯಪಾಲರ ಗಡುವು ಅಂತ್ಯಗೊಂಡಿದ್ದು, ಚರ್ಚೆ ಅಂತ್ಯವಾಗದೇ ಬಹುಮತ ಸಾಬೀತು ಪ್ರಕ್ರಿಯೆ ಅಸಾಧ್ಯ ಎಂದು ಸ್ಪೀಕರ್​ ಹೇಳಿದ್ದಾರೆ. ಇಂದು ಸಂಜೆ 6ರೊಳಗೆ ವಿಶ್ವಾಸ ಮತಯಾಚನೆ ಮಾಡುವಂತೆ ಮತ್ತೊಮ್ಮೆ ಡೆಡ್​ಲೈನ್ ನೀಡಿದ್ದರು. ಈಗ ಆ ಸಮಯವೂ ಮೀರಿದೆ. ಆದರೆ ಸದನವನ್ನು ಮುಂದೂಡಲು ಸಾಧ್ಯವಿಲ್ಲ ಎಂದ ಸ್ಪೀಕರ್​ ರಮೇಶ್​ ಕುಮಾರ್​, ವಿಶ್ವಾಸಮತ ಇಂದೇ ಯಾಚಿಸಿ ಎಂಬ ಸೂಚನೆ ನೀಡಿದ್ದಾರೆ. ಕ್ಷಣಕ್ಷಣಕ್ಕೂ ಹೊಸ ಹೊಸ ತಿರುವು ಪಡೆಯುತ್ತಿರುವ ಕರ್ನಾಟಕ ರಾಜ್ಯ ರಾಜಕಾರಣದ ಬೆಳವಣಿಗೆಗಳ ಇಂಚಿಂಚೂ ಮಾಹಿತಿ ಇಲ್ಲಿದೆ. Read More
10:14 pm (IST)
9:40 pm (IST)

RPT136_19072019_Breaking_ramesh

ಸರ್ಕಾರಕ್ಕೆ ಬಹುಮತ ಇಲ್ಲಎಂದು ಸ್ಪಷ್ಟ ಆಗಿದೆ
ಆದ್ರೂ ರಾಜ್ಯಪಾಲರು ಮೂರನೇ ಬಾರಿ ವಿಶ್ವಾಸ ಮತ ಯಾಚಸಲು ಸ್ಪೀಕರ್ ಗೆ ಪತ್ರ ಬರೆದಿದ್ದಾರೆ
ಅದನ್ನ ಸ್ಪೀಕರ್ ಸದನದಲ್ಲಿ ಹೇಳಿಯೂ ಶಾಸಕರಿಗೆ ಮತಾಡಲು ಹೆಚ್ಚು ಸಮಯ ನೀಡಿ ಕಾಲಾಹರಣ ಮಾಡಿದ್ದಾರೆ
ಈಗ ಸ್ಪೀಕರ್ ಯಾವ ಕಾರಣಕ್ಕೂ ಸೋಮವಾರ ಮುಂದೂಡಲ್ಲ
ಸೋಮವಾರ ವಿಶ್ವಾಸ ಮತ ಯಾಚನೆಗೆ ಅಂತ್ಯ ಹಾಡ್ತೇವೆ ಎಂದಿದ್ದಾರೆ
ಸ್ಪೀಕರ್, ಸಿದ್ದರಾಮಯ್ಯ ಎಲ್ಲರೂ ಒಪ್ಪಿದ್ದಾರೆ
ತಾವೂ ಸರ್ಕಾರ ನಾಡ್ತಿಲ್ಲ, ನಮಗೂ ಬಿಡ್ತಿಲ್ಲ
ಇದನ್ನ ದೇಶದ, ರಾಜ್ಯದ ಜನ ಗಮನಿಸ್ತಾ ಇದ್ದಾರೆ
ಅದೇ ಕಾರಣಕ್ಕೆ ಜನಕ್ಕೆ ಗೊತ್ತಾಗಲಿ ಎಂದು ನಿನ್ನೆ ಅಹೋರಾತ್ರಿ ಧರಣಿ ಮಾಡಿದ್ವಿ.
ಸುಪ್ರೀಂ ಕೋರ್ಟ್ ಕೂಡ ಅತೃಪ್ತರ ಬೆಂಬಲಕ್ಕೆ ನಿಂತಿದೆ, ಬಲವಂತ ಮಾಡುವಂತಿಲ್ಲ ಎಂದು ಹೇಳಿದೆ
ಸೋಮವಾರ ಏನಾಗುತ್ತೆ ನೋಡಿಕೊಂಡು ಮುಂದಿನ ಹೆಜ್ಜೆ ಇಡ್ತೇವೆ
ವಿಧಾನ ಸೌಧದಲ್ಲಿ ಯಡಿಯೂರಪ್ಪ ಮಾದ್ಯಮಗಳಿಗೆ ಹೇಳಿಕೆ
====
ರಾಜ್ಯಪಾಲರು ಏನು ಮಾಡಬೇಕು ಅಂತ ಅವರಿಗೆ ಗೊತ್ತಿದೆ.
ಅದನ್ನ ನಾನು ಹೇಳಲ್ಲ
ಆದ್ರೆ ರಾಜ್ಯಪಾಲರು ಈಗಾಗಲೇ ಕೇಂದ್ರಕ್ಕೆ ಏನೇನು ವರದಿ ಮಾಡಬೇಕೋ ಮಾಡಿದ್ದಾರೆ.
ನಾವು ಮತ್ತೆ ರಾಜ್ಯಪಾಲರ ಬಳಿ ಹೋಗಲ್ಲ.
ಯಡಿಯೂರಪ್ಪ ಹೇಳಿಕೆ

8:53 pm (IST)

ಸಾಂವಿಧಾನಿಕ ಬಿಕ್ಕಟ್ಟು, ಗವರ್ನರ್ ಮತ್ತು ಗವರ್ನಮೆಂಟ್ ನಡುವಿನ 

ಸಂಘರ್ಷದಿಂದ ಪಾರಾದ ಸಿಎಂ, ಸ್ಪೀಕರ್ ಕಚೇರಿ
ಗವರ್ನರ್ 2ನೇ ಪತ್ರಕ್ಕೆ ಸಿಎಂ, ಸ್ಪೀಕರ್ ಪ್ರತಿಕ್ರಿಯೆ
ಇಂದೇ ವಿಶ್ವಾಸಮತ ಯಾಚನೆಗೆ ಗವರ್ನರ್ ಗಡುವು
ಸಿಎಂ ಹೆಚ್ಡಿಕೆಗೆ ಗಡುವು ನೀಡಿದ್ದ ರಾಜ್ಯಪಾಲರು
ಎರಡನೇ ಗಡುವು ಮೀರಿದ್ದರೆ ರಾಜ್ಯಪಾಲರಿಗೆ ಸರ್ಕಾರದ ವಿರುದ್ಧ ಏಕಾಏಕಿ ಕ್ರಮ ಕೈಗೊಳ್ಳುವ ಅಧಿಕಾರವಿತ್ತು
ಆದರೆ ರಾಜಭವನ ಮತ್ತು ಸರ್ಕಾರದ ಸಂಘರ್ಷಕ್ಕೆ ಮದ್ದು ಹುಡುಕಿದ ಸಿಎಂ ಮತ್ತು ಸ್ಪೀಕರ್
ರಾಜ್ಯಪಾರು ಸರ್ಕಾರವನ್ನು ಅಮಾನತಯ ಇಡುವ ಮುನ್ಸೂಚನೆ
ಮುನ್ಸೂಚನೆ ಹಿನ್ನಲೆ ಮಹತ್ವದ ಸಲಹೆ ಪಡೆದ ಸಿಎಂ
ಕಾನೂನು ತಜ್ಞರ ಸಲಹೆ ಪಡೆದ ಸಿಎಂ
ರಾಜ್ಯಪಾಲರಿಗೆ ಸಿಎಂ ಪತ್ರ
ವಿಶ್ವಾಸಮತಯಾಚನೆ ಮಂಡಿಸಿದ್ದೇನೆ
ಚರ್ಚೆ ಆರಂಭವಾಗಿದೆ
ಚರ್ಚೆಗೆ ಅವಕಾಶ ಕಲ್ಪಿಸಿಬೇಕಿದೆ
ಬಹುತೇಕ ಸದಸ್ಯರು ಚರ್ಚೆಯಲ್ಲಿ ಭಾಗವಹಸುವ ಇಚ್ಚೆ ಹೊಂದಿದ್ದಾರೆ
ಚರ್ಚೆ ಮುಗಿದ ಬಳಿಕ ವಿಶ್ವಾಸಮತಯಾಚನೆ ಮಾಡುತ್ತೇವೆ
ವಿಶ್ವಾಸಮತಯಾಚನೆ ನಡೆಯುತ್ತಿದೆ
ನಡೆದೆ ನಡೆಯುತ್ತೆ
ಸದನದ ನಡಾವಳಿಗಳ ಪ್ರಕಾರ ನಡೆಯುತ್ತಿದೆ
ಚರ್ಚೆ ಬಳಿಕ ವಿಶ್ವಾಸಮತಯಾಚನೆ ಮಾಡುವುದಾಗಿ ಕುಮಾರಸ್ವಾಮಿ ಪತ್ರ
ರಾಜ್ಯಪಾಲರಿಗೆ ಪತ್ರ ಮುಖೇನಾ ಸ್ಪಷ್ಟನೆ

Load More


corona virus btn
corona virus btn
Loading