Police Arrest: ರಾಜಸ್ಥಾನದಲ್ಲಿ ಕರ್ನಾಟಕ ಪೊಲೀಸಪ್ಪನ ಜೂಜಾಟ, ಕೋಲಾರದ ಸರ್ಕಲ್ ಇನ್ಸ್​ಪೆಕ್ಟರ್ ಅರೆಸ್ಟ್!

ಪೊಲೀಸರು ಅಂದ್ರೆ ಅನ್ಯಾಯಗಳನ್ನು ಮಟ್ಟಹಾಕಿ ಜನರಿಗೆ ರಕ್ಷಣೆ ಕೊಡೋರು. ಆದ್ರೆ ಇಲ್ಲೊಬ್ಬ ಪೊಲೀಸ್​ ಸರ್ಕಲ್ ಇನ್ಸ್​ಪೆಕ್ಟರ್​​ ಅರೆಸ್ಟ್​ ಆಗಿದ್ದಾರೆ. ದೂರದ ರಾಜಸ್ಥಾನದ ಜೂಜು ಅಡ್ಡೆಯಲ್ಲಿ ತಗ್ಲಾಕೊಂಡಿದ್ದಾರೆ. ಇವರ ಜೊತೆ ಉಪನ್ಯಾಸಕ ಕೂಡ ಅರೆಸ್ಟ್​ ಆಗಿದ್ದಾರೆ.

ಬಂಧಿತ ಸೈಬರ್ ಕ್ರೈಂ ಇನ್ಸ್​​ಪೆಕ್ಟರ್​ ಆಂಜಿನಪ್ಪ

ಬಂಧಿತ ಸೈಬರ್ ಕ್ರೈಂ ಇನ್ಸ್​​ಪೆಕ್ಟರ್​ ಆಂಜಿನಪ್ಪ

  • Share this:
ಪೊಲೀಸರೆಂದರೆ ಶಿಸ್ತು. ಖಾಕಿ ಯೂನಿಫಾರಂ ಧರಿಸಿದ ಪೊಲೀಸರೆಂದರೆ (Police) ಎಲ್ಲರಿಗೂ ಗೌರವ (Respect) ಮತ್ತು ಭಯನು ಆಗುತ್ತೆ. ಪೊಲೀಸರು ಕೂಡ ಅಕ್ರಮ, ಅನ್ಯಾಯಗಳನ್ನು ಬಯಲಿಗೆಳೆದು ಜನರ ರಕ್ಷಣೆ ಮಾಡಬೇಕು. ಅದಕ್ಕಾಗಿ ಅವರನ್ನು ಆರಕ್ಷಕರು ಅಂತಾ ಹೇಳ್ತಾರೆ. ಆದ್ರೆ ಇಲ್ಲೊಬ್ಬ ಪೊಲೀಸಪ್ಪನೇ ಜೂಜಾಡಲು ಹೋಗಿ ಅರೆಸ್ಟ್​ ಆಗಿದ್ದಾರೆ. ಕರ್ನಾಟಕದ (Karnataka) ಪೊಲೀಸ್​ ಇನ್ಸ್​ಪೆಕ್ಟರ್​ ದೂರದ ರಾಜಸ್ಥಾನದಲ್ಲಿ (Rajasthan) ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. 3 ದಿನ ರಜಾ ಅಂತಾ ತೆರಳಿದ್ದ ಕೋಲಾರದ ಸರ್ಕಲ್ ಇನ್ಸ್​ಪೆಕ್ಟರ್ ಜೂಜು (Gambling) ಆಡ್ತಾ ಇದ್ರು. ಈ ವೇಳೆ ರಾಜಸ್ಥಾನ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ (Raid) ಬಂಧಿಸಿದ್ದಾರೆ.

ಪೊಲೀಸರು ಅಂದ್ರೆ ಅನ್ಯಾಯಗಳನ್ನು ಮಟ್ಟಹಾಕಿ ಜನರಿಗೆ ರಕ್ಷಣೆ ಕೊಡೋರು. ಆದ್ರೆ ಇಲ್ಲೊಬ್ಬ ಪೊಲೀಸ್​ ಸರ್ಕಲ್ ಇನ್ಸ್​ಪೆಕ್ಟರ್​​ ಅರೆಸ್ಟ್​ ಆಗಿದ್ದಾರೆ. ದೂರದ ರಾಜಸ್ಥಾನದ ಜೂಜು ಅಡ್ಡೆಯಲ್ಲಿ ತಗ್ಲಾಕೊಂಡಿದ್ದಾರೆ. ಇವರ ಜೊತೆ 84 ಮಂದಿಯನ್ನು ಬಂಧಿಸಲಾಗಿದೆ.

Karnataka policeman s gambling in Rajasthan circle inspector of Kolar arrested And suspend
ಬಂಧಿತ ಸೈಬರ್ ಕ್ರೈಂ ಇನ್ಸ್​​ಪೆಕ್ಟರ್​ ಆಂಜಿನಪ್ಪ


ಕೋಲಾರದ ಸೈಬರ್ ಕ್ರೈಂ ಇನ್ಸ್​ಪೆಕ್ಟರ್​ ಅರೆಸ್ಟ್​

ರಾಜಸ್ಥಾನದ ಜೈಪುರದ ಸಾಯಿಪುರ ಎಂಬಲ್ಲಿ ಕೋಲಾರದ ಸೈಬರ್ ಕ್ರೈಂ ಇನ್ಸ್​ಪೆಕ್ಟರ್​ ಆಂಜಿನಪ್ಪ ಎಂಬುವವರನ್ನು ಅರೆಸ್ಟ್​ ಮಾಡಲಾಗಿದೆ. ಆಂಜಿನಪ್ಪ ಜೂಜು ಆಡುತ್ತಿದ್ದಾಗ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

Karnataka policeman s gambling in Rajasthan circle inspector of Kolar arrested And suspend
ಬಂಧಿತ ಬಿಜೆಪಿ ನಗರಸಭೆ ನಾಮಿನಿ ಸದಸ್ಯ ಸತೀಶ್​


ಇದನ್ನೂ ಓದಿ: ಸರ್ಕಾರಿ ಕೆಲಸ ಸಿಗದ್ದಕ್ಕೆ ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ!

3 ದಿನ ರಜೆಯ ಮೇಲೆ ತೆರಳಿದ್ದ ಆಂಜಿನಪ್ಪ

ಜೈಪುರ್ ಜಿಲ್ಲೆಯ ಜೈಸಿಂಗೇಪುರ ಖೋರ್ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆದಿದೆ. ಇನ್ಸ್​ಪೆಕ್ಟರ್ ಆಂಜಿನಪ್ಪ 3 ದಿನ ರಜೆಯ ಮೇಲೆ ತೆರಳಿದ್ದರು. ರಜೆಯಲ್ಲಿ ತೆರಳಿ ಜೂಜಾಡುತ್ತಿದ್ದಾಗ ಜೈಪುರದ ಸಾಯಿಪುರ ಬಾಗ್ ಹೋಟೆಲ್ ಮೇಲೆ ರಾಜಸ್ಥಾನ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

Karnataka policeman s gambling in Rajasthan circle inspector of Kolar arrested And suspend
ಟೊಮ್ಯಾಟೋ ವ್ಯಾಪಾರಿ ಸುಧಾಕರ್


ಉಪನ್ಯಾಸಕ, ಟೊಮ್ಯಾಟೋ ವ್ಯಾಪಾರಿಯೂ ಅರೆಸ್ಟ್

ಸೈಬರ್ ಕ್ರೈಂ ಇನ್ಸ್​ಪೆಕ್ಟರ್​ ಆಂಜಿನಪ್ಪ ಜೊತೆಗೆ ಸಬ್ ರಿಜಿಸ್ಟರ್ ಶ್ರೀನಾಥ್, ಟೊಮ್ಯಾಟೋ ವ್ಯಾಪಾರಿ ಸುಧಾಕರ್, ಒಬ್ಬ ನಗರಸಭೆ ಸದಸ್ಯ ಸತೀಶ್​​ ಎಂಬುವವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಉಪನ್ಯಾಸಕ ರಮೇಶ್, ಆರ್​ಟಿಒ ಸಿಬ್ಬಂದಿ ಶಬರೀಶ್ ಎಂಬುವವರನ್ನು ಕೂಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Karnataka policeman s gambling in Rajasthan circle inspector of Kolar arrested And suspend
ಬಂಧಿತ ಉಪನ್ಯಾಸಕ ರಮೇಶ್


ಬಂಧಿತ ಇನ್ಸ್​ಪೆಕ್ಟರ್​ ಆಂಜಿನಪ್ಪ ಅಮಾನತು

ರಾಜಸ್ಥಾನದಲ್ಲಿ ಬಂಧನಕ್ಕೊಳಗಾದ ಇನ್ಸ್​ಪೆಕ್ಟರ್​ ಆಂಜಿನಪ್ಪನನ್ನು ಅಮಾನತು ಮಾಡಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ. ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಟ್ಟು ತೆರಳಿದ್ದಕ್ಕೆ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಅಂತಾ ಕೋಲಾರ ಎಸ್​​ಪಿ ಡಿ.ದೇವರಾಜ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗಂಡನ ಕೊಲೆಗೆ ಸುಪಾರಿ ಕೊಟ್ರೆ ಆ ಹಂತಕರು ಮಾಡಿದ್ದೇ ಬೇರೆ! ಸಾಯಬೇಕಾದವ ಸೀದಾ ಮನೆಗೇ ಬಂದ!

ಭಟ್ಕಳ ಬಾಲಕನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ

ಭಟ್ಕಳದಲ್ಲಿ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಪೊಲೀಸರು ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ್ದು ಆರೋಪಿ ಅನೀಷ್​ನನ್ನು ಬಂಧಿಸಿದ್ದಾರೆ. ಹಳೆಯ ದ್ವೇಷ ಮತ್ತು ಹಣಕ್ಕಾಗಿ ಈ ಕಿಡ್ನ್ಯಾಪ್ ಪ್ರಕರಣ ನಡೆದಿತ್ತು ಅನ್ನೋದು ಬೆಳಕಿಗೆ ಬಂದಿದೆ.

ಅಪಹರಣಕ್ಕೊಳಗಾದ ಬಾಲಕ ಅಲಿಸಾದ್ ಗೋವಾದ ಪಣಜಿಯ ಕಲ್ಲಂಗುಟ್​​ ಎಂಬಲ್ಲಿ ಪತ್ತೆಯಾಗಿದ್ದಾನೆ. ಬ್ರೆಡ್ ತರಲು ಹೋದ ಸಂದರ್ಭದಲ್ಲಿ ಈತನನ್ನು ಅಪಹರಣ ಮಾಡಲಾಗಿತ್ತು. ಅಪಹರಣದ ಮುಖ್ಯ ರೂವಾರಿ ಬಾಲಕನ ತಾಯಿಯ ಮಾವ ಇನಾಯತುಲ್ಲಾ ಅನ್ನೋದು ಗೊತ್ತಾಗಿದೆ.

ಸೌದಿ ಅರೇಬಿಯಾದಿಂದಲೇ ಸ್ಕೆಚ್!

ಪ್ರಸ್ತುತ ಸೌದಿ ಅರೆಬಿಯಾದಲ್ಲಿ ನೆಲೆಸಿರುವ ಇನಾಯತುಲ್ಲಾ ಅಲ್ಲಿದಂಲೇ ಬಾಲಕನ ಕಿಡ್ನ್ಯಾಪ್​ಗೆ ಸ್ಕೆಚ್ ಹಾಕಿದ್ದ. ಹಣದ ವಿಚಾರವಾಗಿ ಹಿಂದಿನಿಂದ ಬಾಲಕನ ತಂದೆ ಇಸ್ಲಾಂ ಸಾದ್ ಮತ್ತು ಇನಾಯತುಲ್ಲಾ ನಡುವೆ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಬಾಲಕ ಅಲಿಸಾದ್​​ನನ್ನ ಅಪಹರಣ ಮಾಡಲಾಗಿತ್ತು.

ಪ್ರಕರಣದಲ್ಲಿ ಭಾಗಿಯಾದ ಮೂವರು ಎಸ್ಕೇಪ್

ಇನ್ನು ಅಪಹರಣ ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸ್ತಿದ್ದಾರೆ. ಅಪಹರಣಕಾರರು ಪದೇ ಪದೇ ವಾಹನ ಬದಲಾಯಿಸಿ ಹೋಗುವ ಸಂದರ್ಭದಲ್ಲಿ ಬೇರೆ ಬೇರೆ ಭಾಷೆಯಲ್ಲಿ ಮಾತನಾಡುತ್ತಿದ್ದರು. ಸಿಸಿ ಟಿವಿ ಫೂಟೇಜ್ ಆಧರಿಸಿ ಆರೋಪಿಗಳಿಗೆ ಬಲೆ ಹೆಣೆಯಲಾಗಿತ್ತು. ಗೋವಾ ಪೊಲೀಸರ ಸಹಾಯ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ.
Published by:Thara Kemmara
First published: