Transgender: ತೃತೀಯ ಲಿಂಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾದ ಕರ್ನಾಟಕ ಪೊಲೀಸ್ ಇಲಾಖೆ

Transgenders: ತೃತಿಯಲಿಂಗಿಗಳಿಂದಲೂ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಈ ಕ್ರಮವನ್ನು ಎನ್.ಜಿ.ಒ ಸಂಗಮವು ಹೊಗಳಿ ಧನ್ಯವಾದಗಳನ್ನು ತಿಳಿಸಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಗತಿಯ ಸಂಕೇತ ಹಾಗೂ ಸಾಮರಸ್ಯಕ್ಕೆ ಪ್ರತೀಕವಾದ ನಡೆಗೆ ಪೂರಕವಾಗಿ ಕರ್ನಾಟಕ ಪೊಲೀಸ್ ಇಲಾಖೆಯು( Karnataka Police Department) ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ (KSRP) ಹಾಗೂ ಇಂಡಿಯನ್ ರಿಸರ್ವ್ ಬೆಟಾಲಿಯನ್ (IRB) ಗಳಲ್ಲಿ (Indian Reserve Battalion) ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿಗಾಗಿ ಇದೇ ಮೊದಲ (First time) ಬಾರಿಗೆ ಪುರುಷ, ಮಹಿಳೆ ಹಾಗೂ ತೃತಿಯಲಿಂಗಿಗಳಿಂದ (Transgender) ಅರ್ಜಿಗಳನ್ನು ಆಹ್ವಾನಿಸಿದೆ. ಇದೊಂದು ಸ್ವಾಗತಮಯ ಕ್ರಮವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಸೋಮವಾರದಂದು ಸರ್ಕಾರದಿಂದ (Government) ನೇಮಕಾತಿ ಕುರಿತು ಆದೇಶ ಹೊರಡಿಸಲಾಗಿದೆ.

ಜನವರಿ 18 ಕೊನೆ ದಿನಾಂಕ
ಇದರಲ್ಲಿ ಸ್ಪಷ್ಟವಾಗಿ, ಇರುವ 70 ವಿಶೇಷ ಮೀಸಲು ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಈ ಹುದ್ದೆಗಳಿಗಾಗಿ ಪುರುಷ, ಮಹಿಳೆ ಹಾಗೂ ಪ್ರಪ್ರಥಮ ಬಾರಿಗೆ ತೃತಿಯಲಿಂಗಿಗಳು ಮತ್ತು ಸೇವಾನಿರತವಿರುವವರೂ ಸಹ ಇದಕ್ಕಾಗಿ ಅರ್ಜಿ ಸಲ್ಲಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 18, 2022 ಆಗಿದೆ.

ಇದನ್ನೂ ಓದಿ: Madhya Pradesh: ಮಹಿಳಾ ಪೇದೆಗೆ ಪುರುಷನಾಗಿ ಬದಲಾಗಲು ಮಧ್ಯಪ್ರದೇಶ ಪೊಲೀಸ್ ಇಲಾಖೆ ಅನುಮತಿ

ಇದೇ ವರ್ಷ ಜುಲೈ ತಿಂಗಳಿನಲ್ಲಿ ಕರ್ನಾಟಕದ ಉಚ್ಛ ನ್ಯಾಯಾಲಯ ನೀಡಿದ್ದ ಐತಿಹಾಸಿಕ ತೀರ್ಪಿನ ಆದೇಶಕ್ಕನುಗುಣವಾಗಿ ಕರ್ನಾಟಕವು ಸಾರ್ವಜನಿಕ ಅಥವಾ ಸರ್ಕಾರಿ ಕಚೇರಿಯಲ್ಲಿ ಉದ್ಯೋಗ ಸೇವೆ ಸಲ್ಲಿಸಲು ತೃತಿಯಲಿಂಗಿಗಳಿಗೆ ಅರ್ಹತೆ ನೀಡಿ ಅನುವು ಮಾಡಿಕೊಟ್ಟಿರುವುದು ಪ್ರಥಮವಾಗಿದ್ದು ದೇಶದಲ್ಲೇ ಈ ರೀತಿಯ ಕ್ರಮ ತೆಗೆದುಕೊಳ್ಳುವಲ್ಲಿ ಕರ್ನಾಟಕ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೂ ಪಾತ್ರವಾದಂತಾಗಿದೆ.

ಐತಿಹಾಸಿಕ ತೀರ್ಪು
ಕಳೆದ ವರ್ಷ 2,467 ವಿಶೇಷ ಮೀಸಲು ಪೇದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಇದರಲ್ಲಿ ತೃತಿಯಲಿಂಗಿಗಳೂ ಭಾಗವಹಿಸಲು ಶಕ್ತವಾಗುವಂತೆ ನಗರದ ಸಾಮಾಜಿಕ ಕಾರ್ಯಕರ್ತೆಯಾದ ನಿಶಾ ಗುಳೂರ್ ಹಾಗೂ ನಗರದಲ್ಲಿ ನೆಲೆಸಿರುವ ಎನ್.ಜಿ.ಒ ಸಂಗಮವು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಿದ್ದರು. ಇದನ್ನು ವಕೀಲರಾದ ಬಿ.ಟಿ. ವೆಂಕಟೇಶ್ ಪ್ರತಿನಿಧಿಸಿ ವಾದ ಮಂಡಿಸಿದ್ದರು. ತದನಂತರ ಕರ್ನಾಟಕ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ವರ್ಗಗಳ ತೃತಿಯಲಿಂಗಿಗಳಿಗೂ ಶತಪ್ರತಿಶತದಷ್ಟು ಹಾರಿಜಾಂಟಲ್ ರಿಸರ್ವೇಷನ್ ಪಡೆಯಲು ಅರ್ಹರು ಎಂದು ಹೇಳಿ ಐತಿಹಾಸಿಕ ತೀರ್ಪು ನೀಡಿತ್ತು.

ಈ ಮೂಲಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರವೊಂದು ನೇಮಕಾತಿ ಪ್ರಕ್ರಿಯೆಯಲ್ಲಿ ತೃತಿಯಲಿಂಗಿಗಳಿಗೂ ಸಮನವಾದ ಸ್ಥಾನ ನೀಡಲು ಅವಕಾಶ ಮಾಡಿಕೊಟ್ಟಂತಾಗಿದೆ. ಈ ಮೂಲಕ ಸರ್ಕಾರ ನಿಜಕ್ಕೂ ಪ್ರಶಂಸನಾರ್ಹವಾದ ಕೆಲಸ ಮಾಡಿದೆ ಎಂದು ನುಡಿಯುತ್ತಾರೆ ವಕೀಲರಾದ ವೆಂಕಟೇಶ್.

ಕರ್ನಾಟಕ ಪೊಲೀಸ್ ಇಲಾಖೆ ನಿರ್ಧಾರಕ್ಕೆ ಎನ್.ಜಿ.ಒ ಮೆಚ್ಚುಗೆ
ತೃತಿಯಲಿಂಗಿಗಳಿಂದಲೂ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಈ ಕ್ರಮವನ್ನು ಎನ್.ಜಿ.ಒ ಸಂಗಮವು ಹೊಗಳಿದ್ದು ಧನ್ಯವಾದಗಳನ್ನು ತಿಳಿಸಿದೆ. ತನ್ನ ಪ್ರಕಟಣೆಯಲ್ಲಿ ಅದು "2 ದಶಕಗಳಿಂದ ನಾವು ಸಮಾಜದಲ್ಲಿ ತಮ್ಮ ಲಿಂಗ ತಾರತಮ್ಯ ಹಾಗೂ ಬೇಧದಿಂದಾಗಿ ಕೆಳಸ್ತರಕ್ಕೆ ನೂಕಲ್ಪಟ್ಟು ಅಸಹನೀಯ ಜೀವನ ಸಾಗಿಸುತ್ತಿದ್ದವರಲ್ಲಿ ಧೈರ್ಯ ತುಂಬಿ, ವಿಶ್ವಾಸ ಮೂಡಿಸಿ ಅವರು ಮತ್ತೆ ಸಮಾಜದ ಮುಖ್ಯವಾಹಿನಿಯಲ್ಲಿ ಬರೆಯುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ನಾವು ಕೆಲಸ ಮಾಡುತ್ತಿದ್ದು ಈಗ ಕರ್ನಾಟಕ ಪೊಲೀಸ್ ಇಲಾಖೆಯು ಈ ಕ್ರಾಂತಿಕಾರಿಯಾದ ಕ್ರಮ ತೆಗೆದುಕೊಂಡಿದ್ದಕ್ಕೆ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ" ಎಂದು ಬರೆದುಕೊಂಡಿದೆ.

ಸಮುದಾಯದವರಿಗೆ ಕೆಲಸ
ಸಂಗಮ ಎನ್.ಜಿ.ಒ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಶ್ ಉಮಾದೇವಿ ಪ್ರತಿಕ್ರಯಿಸುತ್ತ, "ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪನ್ನು ಗಮನದಲ್ಲಿರಿಸಿಕೊಂಡು ಇತರೆ ಸಂಘ-ಸಂಸ್ಥೆಗಳೂ ಮುಂದೆ ಬಂದು ಸಮಾಜದಲ್ಲಿ ತೀರಸ್ಕರಿಸಲ್ಪಟ್ಟ ಇಂತಹ ಸಮುದಾಯದವರಿಗೆ ಕೆಲಸಗಳನ್ನು ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ ಬೇರೆಯವರ ಹಂಗಿನಲ್ಲಿ ಬಾಳದಂತೆ ಅವಕಾಶಗಳನ್ನು ಕೊಡಬೇಕು ಎಂದು ಹೇಳಿದರು.

 ಇದನ್ನೂ ಓದಿ: Tata Steel: ಅರ್ಥ್ ಮೂವಿಂಗ್ ಮೆಷಿನರಿ ಆಪರೇಟರ್‌ಗಳಾಗಿ LGBTQ ಸಮುದಾಯದವರಿಗೆ ಮಾತ್ರ ಅವಕಾಶ ನೀಡಿದ ಟಾಟಾ ಸಂಸ್ಥೆ

ಈ ಸಂದರ್ಭದಲ್ಲಿ ಸಂಗಮ ಸಂಸ್ಥೆಯು ರಾಜ್ಯದಲ್ಲಿರುವ ಎಲ್ಲ ತೃತಿಯಲಿಂಗಿ ಸಮುದಾಯದವರಿಗೆ ಈಗ ಬಂದೊದಗಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕೋರಿದೆ. ಒಟ್ಟಿನಲ್ಲಿ ಕರ್ನಾಟಕದಿಂದ ಈ ರೀತಿಯ ಸಮಾಜಮುಖಿ ಕೆಲಸ ಪ್ರಾರಂಭವಾಗಿರುವುದು ಉತ್ತಮವಾದ ವಿಚಾರವಾಗಿದೆ ಎಂದು ಜನರ ಅಭಿಪ್ರಾಯವಾಗಿದೆ.
Published by:vanithasanjevani vanithasanjevani
First published: