ಝಡ್​​ ಪ್ಲಸ್​ ಸೆಕ್ಯೂರಿಟಿಯಲ್ಲಿ ಅತೃಪ್ತ ಶಾಸಕರನ್ನು ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಕರೆತರಲಿರುವ ಪೊಲೀಸರು

ಆರು ಗಂಟೆಯೊಳಗೆ ಅವರು ಸ್ಪೀಕರ್​ ಭೇಟಿ ಮಾಡಬೇಕಾಗಿರುವ ಹಿನ್ನೆಲೆ ಅತೃಪ್ತ ಶಾಸಕರಿಗಾಗಿ ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೆ ಝಿರೋ ಟ್ರಾಫಿಕ್​ ವ್ಯವಸ್ಥೆ ಮಾಡಲಾಗಿದೆ

Seema.R | news18
Updated:July 11, 2019, 5:16 PM IST
ಝಡ್​​ ಪ್ಲಸ್​ ಸೆಕ್ಯೂರಿಟಿಯಲ್ಲಿ ಅತೃಪ್ತ ಶಾಸಕರನ್ನು ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಕರೆತರಲಿರುವ ಪೊಲೀಸರು
ರಾಜೀನಾಮೆ ನೀಡಿದ ರೆಬೆಲ್​ ನಾಯಕರು
  • News18
  • Last Updated: July 11, 2019, 5:16 PM IST
  • Share this:
ಬೆಂಗಳೂರು (ಜು.11): ಇಂದು ಸಂಜೆಯೊಳಗೆ ಸ್ಪೀಕರ್​ ಅವರನ್ನು ಖುದ್ದು ಭೇಟಿಯಾಗಿ ರಾಜೀನಾಮೆ ನೀಡಬೇಕು ಎಂದು ಸುಪ್ರೀಂಕೋರ್ಟ್​ ಸೂಚನೆ ಬೆನ್ನಲ್ಲೇ ಅತೃಪ್ತ ಶಾಸಕರು ರಾಜಧಾನಿಗೆ ಪ್ರಯಾಣ ಬೆಳಸಿದ್ದಾರೆ. ​ ವಿಮಾನ ನಿಲ್ದಾಣದಿಂದ ವಿಧಾನಸೌಧಕ್ಕೆ ಬರಲಿರುವ ಅವರಿಗೆ ಝಡ್​ ಪ್ಲಸ್​ ರಕ್ಷಣೆ ನೀಡಲು ಪೊಲೀಸರು ತೀರ್ಮಾನಿಸಿದ್ದಾರೆ.

ಬುಧವಾರ ಕಾಂಗ್ರೆಸ್​ ಶಾಸಕ ಸುಧಾಕರ್​, ಎಂಟಿಬಿ ನಾಗರಾಜ್​ ರಾಜೀನಾಮೆ ಸಲ್ಲಿಕೆ ಬಳಿಕ ವಿಧಾನಸೌಧ ಕುಸ್ತಿ ಅಂಗಳವಾಗಿ ಮಾರ್ಪಟ್ಟಿತ್ತು. ಹೀಗಾಗಿ ಅತೃಪ್ತ ಶಾಸಕರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ರಾಜ್ಯ ಪೊಲೀಸ್​ ಮಹಾ ನಿರ್ದೇಶಕರಿಗೆ ಸುಪ್ರೀಂ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಜೆಡ್​ ಪ್ಲಸ್​ ಮಾದರಿಯ ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಅತೃಪ್ತ ಶಾಸಕರು


ಈಗಾಗಲೇ ಮುಂಬೈನಿಂದ ವಿಶೇಷ ವಿಮಾನದ ಆಗಮಿಸುತ್ತಿರುವ ಅತೃಪ್ತ ಶಾಸಕರು, ಇನ್ನೇನು ಕೆಲವೇ ಕ್ಷಣಗಳಲ್ಲಿ ​​ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಆರು ಗಂಟೆಯೊಳಗೆ ಅವರು ಸ್ಪೀಕರ್​ ಭೇಟಿ ಮಾಡಬೇಕಾಗಿರುವ ಹಿನ್ನೆಲೆ ಅತೃಪ್ತ ಶಾಸಕರಿಗಾಗಿ ವಿಮಾನ ನಿಲ್ದಾಣದಿಂದ ವಿಧಾನಸೌಧದವರೆಗೆ ಝಿರೋ ಟ್ರಾಫಿಕ್​ ವ್ಯವಸ್ಥೆ ಮಾಡಲಾಗಿದೆ.

ಇದನ್ನು ಓದಿ: ಸಂಜೆ 6 ಗಂಟೆಯೊಳಗೆ ಸ್ಪೀಕರ್​ ಮುಂದೆ ಹಾಜರಾಗಿ ಖುದ್ದು ರಾಜೀನಾಮೆ ಸಲ್ಲಿಸಲು ಅತೃಪ್ತ ಶಾಸಕರಿಗೆ ಸುಪ್ರೀಂಕೋರ್ಟ್​ ಸೂಚನೆ

ಅಲ್ಲದೇ, ಇವರನ್ನು ಕರೆತರುವ ಕುರಿತು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸ್ಪೀಕರ್​ ಕಚೇರಿಗೂ ವಿಡಿಯೋ ಅಳವಡಿಸಲಾಗಿದ್ದು, ಅಲ್ಲಿಯೂ ಕೂಡ ಪ್ರತಿಯೊಂದು ಘಟನೆ ವಿಡಿಯೋದಲ್ಲಿ ದಾಖಲಾಗಿದೆ.

ಸ್ಪೀಕರ್​ ಭೇಟಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸ್ಪೀಕರ್​ ಭೇಟಿ ನಂತರ ಸುಪ್ರೀಂ ಕೋರ್ಟ್​ ಸೂಚನೆಯಂತೆ ಶಾಸಕರು ಸೂಚಿಸಿದ ಸ್ಥಳಕ್ಕೆ ಸುರಕ್ಷಿತವಾಗಿ ಬಿಡುವುದು ಕೂಡ ಪೊಲೀಸರ ಜವಾಬ್ದಾರಿಯಾಗಿದೆ.ಈಗಾಗಲೇ ವಿಧಾನಸೌಧದ ಸುತ್ತ ಸೆಕ್ಷನ್​ 144 ಜಾರಿಗೆ ತರಲಾಗಿದ್ದು, ಬಿಗಿ ಭದ್ರತೆ ನೀಡಲಾಗಿದೆ. ಇನ್ನು ಅತೃಪ್ತ ಶಾಸಕರು ಆಗಮಿಸುತ್ತಿರುವ ಹಿನ್ನೆಲೆ ಸ್ವತಣ ಕಮಿಷನರ್​ ಅಲೋಕ್​ ಕುಮಾರ್​ ವಿಧಾನಸೌಧ ಸುತ್ತ ಭದ್ರತೆ ಪರಿಶೀಲನೆ ನಡೆಸಿದರು

First published: July 11, 2019, 4:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading