ಬೆಂಗಳೂರು(ಜೂ.30): ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಮಹಿಳೆಯರು ಇನ್ಮುಂದೆ ತಮ್ಮ ಗಂಡ ಅಥವಾ ಕುಟುಂಬದ ಪುರುಷ ಸದಸ್ಯರೊಂದಿಗೆ ಆಸ್ತಿ ಹಕ್ಕನ್ನು ಹೊಂದುವಂತೆ ಸರ್ಕಾರ ಯೋಜನೆ ರೂಪಿಸುತ್ತಿದೆ. ಮಹಿಳೆಯರನ್ನೊಳಗೊಂಡ ಇಂತಹ ಸಹ-ಮಾಲೀಕತ್ವಕ್ಕೆ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಆದ್ಯತೆ ನೀಡಲಾಗುವುದು.
ಲಿಂಗ ಸಮಾನತೆಯಲ್ಲಿ ಕರ್ನಾಟಕದ ಶ್ರೇಯಾಂಕವನ್ನು ಸುಧಾರಿಸುವ ದೊಡ್ಡ ಪ್ರಯತ್ನದ ಭಾಗ ಇದಾಗಿದೆ. ಸುಸ್ಥಿರ ಅಭಿವೃದ್ಧಿ ಸಾಧಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಈ ಕ್ರಮ ಮಹಿಳೆಯರು ಆರ್ಥಿಕ ಭದ್ರತೆ ಪಡೆಯಲು ಸಹಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:Cauvery Water Supply: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಮತ್ತು ನಾಳೆ ಕಾವೇರಿ ನೀರು ಬರಲ್ಲ
ಮುಖ್ಯಮಂತ್ರಿಗಳ ಕಚೇರಿಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಹೆಂಡತಿಯನ್ನು ಒಳಗೊಂಡಂತೆ ಜಂಟಿ ಮಾಲೀಕತ್ವ ಅಥವಾ ಆಸ್ತಿಯ ಜಂಟಿ ಖಾತಾ ಇರಬೇಕು ಎಂದು ಒತ್ತಾಯಿಸಲು ಸರ್ಕಾರವು ಯೋಜನೆಯೊಂದನ್ನು ರೂಪಿಸುತ್ತಿದೆ. ಆದರೆ ಈ ಯೋಜನೆಯನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ. ಸರ್ಕಾರ ಅದಕ್ಕೆ ಪ್ರೋತ್ಸಾಹ ಧನ ನೀಡಲಿದೆ.
ಉದಾಹರಣೆಗೆ, ಕೃಷಿಯಲ್ಲಿ ಜಂಟಿ ಖಾತೆ ಮಾಡಿಸಿದ್ದರೆ, ಆ ಸಂದರ್ಭದಲ್ಲಿ ಸಬ್ಸಿಡಿಗಳನ್ನು ನೀಡುವಾಗ ಸರ್ಕಾರವು ಅವರಿಗೆ ಆದ್ಯತೆ ನೀಡುತ್ತದೆ. ಇದೇ ರೀತಿಯ ಅನೇಕ ಪ್ರಯೋಜನಗಳನ್ನು ಅವರಿಗೆ ನೀಡಲಾಗುವುದು.
ಎಸ್ಡಿಜಿ ಸೂಚ್ಯಂಕ 2020-21ರಲ್ಲಿ ಕರ್ನಾಟಕ ತನ್ನ ಒಟ್ಟಾರೆ ಶ್ರೇಯಾಂಕವನ್ನು (4ರಿಂದ 3ನೇ ಸ್ಥಾನಕ್ಕೆ ) ಸುಧಾರಿಸಿದೆ. ಆದಾಗ್ಯೂ ಸಹ ಲಿಂಗ ಸಮಾನತೆ, ಹಸಿವು, ಉದ್ಯಮ, ನಾವೀನ್ಯತೆ, ಮೂಲ ಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕರ್ನಾಟಕ ಹಿಂದುಳಿದಿದೆ.
ಇದನ್ನೂ ಓದಿ:Actress Kavitha: ಕೊರೋನಾಗೆ ಹಿರಿಯ ನಟಿ ಕವಿತಾ ಪತಿ ಬಲಿ; 15 ದಿನಗಳಲ್ಲಿ ಗಂಡ-ಮಗ ಇಬ್ಬರನ್ನೂ ಕಳೆದುಕೊಂಡ ನತದೃಷ್ಟೆ
ಮಂಗಳವಾರ, ಸಿಎಂ ಬಿಎಸ್ ಯಡಿಯೂರಪ್ಪನವರು 2030ಕ್ಕೆ ಎಸ್ಡಿಜಿ ಸಾಧನೆ ಕುರಿತು ನೀತಿ ಆಯೋಗ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಗರ್ಭಿಣಿಯರು, ಮಕ್ಕಳು, ಲಿಂಗ ಸಮಾನತೆ, ವಸತಿ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಅಧಿಕಾರಿಗಳು ಸಭೆಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ