ಕೇಂದ್ರದಿಂದ ಬರಬೇಕಾದ ಜಿಎಸ್​​ಟಿ ಪಾಲಿನ ಬಗ್ಗೆ ಸಂಸದರು ಬಾಯಿ ಬಿಡಬೇಕು: ಎಚ್​. ವಿಶ್ವನಾಥ್​​

ನಿಖಿಲ್​ ಕುಮಾರಸ್ವಾಮಿ ನಿಶ್ಚಿತಾರ್ಥಕ್ಕೆ ಬೇರೆ ದೇಶದಿಂದ ಹೂವಿನ ಹಾರ ತರಿಸಿದ್ದರು. ನಮ್ಮ ರಾಜ್ಯದಲ್ಲೇ ಎಂತೆಂಥ ಹೂವುಗಳಿವೆ. ಆದರೆ ನಿಖಿಲ್​ಗೆ ತನ್ನ ಎಂಗೇಜ್​ಮೆಂಟ್​ಗೆ ಬೇರೆ ದೇಶದ ಹಾರವೇ ಬೇಕಾಗಿತ್ತು. ಜನರ ಋಣ ತೀರಿಸಲು ಮಗನ ಮದುವೆಗೆ ಸೀರೆ ಇತ್ಯಾದಿ ಕೊಡುತ್ತೇನೆ ಎಂದು ಎಚ್‌ಡಿಕೆ ಹೇಳುತ್ತಿದ್ದಾರೆ. ಆದರೆ, ಜನ ಅವಕಾಶ ಕೊಟ್ಟಾಗ ಸರ್ಕಾರದ ಕಾರ್ಯಕ್ರಮದ ಮೂಲಕ ಜನರ ಆರ್ಥಿಕ ಸ್ಥಿತಿಯನ್ನು ಬಲ ಮಾಡಬೇಕಿತ್ತು. ಅಧಿಕಾರ ಇದ್ದಾಗ ಆ ಋಣ ರೀತಿ ತೀರಿಸಬೇಕಿತ್ತು.

ಹೆಚ್. ವಿಶ್ವನಾಥ್

ಹೆಚ್. ವಿಶ್ವನಾಥ್

 • Share this:
  ಧಾರವಾಡ(ಮಾ. 07): ರಾಜ್ಯ, ರಾಷ್ಟ್ರದ ಆರ್ಥಿಕ ಸ್ಥಿತಿ ನೋಡಿ ರಾಜ್ಯ ಬಜೆಟ್​ ಬಗ್ಗೆ ವಿಶ್ಲೇಷಣೆ ಮಾಡಬೇಕಿದೆ. ಸತ್ಯದ ರೂಪದಲ್ಲಿ ಸರ್ಕಾರದ ವಿಚಾರ ಹೇಳಬೇಕಿದೆ. ಯಾಕೆಂದರೆ ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದೆ. ರಾಜಕಾರಣಿಗಳ ಆರ್ಥಿಕ‌ ಸ್ಥಿತಿ ಬಲವಾಗುತ್ತಾ ಹೋಗುತ್ತಿದೆ. ರಾಜ್ಯದ ಜಿಎಸ್​ಟಿ ಪಾಲಿನ ಬಗ್ಗೆ ಸಿಎಂ ಬಜೆಟ್‌ನಲ್ಲೇ ಹೇಳಿದ್ದಾರೆ. ಈ ಬಗ್ಗೆ ಸಂಸದರು ಬಾಯಿ ಬಿಡಬೇಕು. ಕೇಂದ್ರದ ಮೇಲೆ ಒತ್ತಡ ಹಾಕಿ ಬಿಎಸ್‌ವೈ ಕೈ ಬಲಪಡಿಸಬೇಕು ಎಂದು ಮಾಜಿ ಸಚಿವ ಎಚ್​.ವಿಶ್ವನಾಥ್​ ಒತ್ತಾಯಿಸಿದ್ದಾರೆ.

  ಧಾರವಾಡದಲ್ಲಿ ಮಾತನಾಡಿದ ಅವರು, ಎರಡೂವರೆ ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದೇವೆ. 4 ಲಕ್ಷ ಕೋಟಿ ಹತ್ತಿರಕ್ಕೆ ಸಾಲ ತಂದಿದ್ದೇವೆ. ಸಾಲಕ್ಕೆ ಬಡ್ಡಿ ಕಟ್ಟೋಕೆ ಆಗುತ್ತಾ? ಅಧಿಕಾರಿಗಳ, ನೌಕರರ ಸಂಬಳಕ್ಕೆ 24 ಸಾವಿರ ಕೋಟಿ ಹೋಗುತ್ತಿದೆ.  ಇಂದು ಜನಕ್ಕೆ ಸತ್ಯ ತಿಳಿಸಬೇಕಾಗಿದೆ. ನನ್ನ ಹತ್ತಿರ ಇರೋದೆ ಹತ್ತು ರೂಪಾಯಿ ಅಂತಾ ಹೇಳುವವರು ಬೇಕಾಗಿದೆ. ಒಂದೆಡೆ ಸಾಲದ ಶೂಲ ಜಾಸ್ತಿ ಆಗುತ್ತಿದ್ದರೆ,  ಮತ್ತೊಂದೆಡೆ ಬಜೆಟ್ ತೂಕವೂ ಜಾಸ್ತಿ ಆಗಿದೆ. ದೆಹಲಿ ಸಿಎಂ ಬಸ್, ವಿದ್ಯುತ್, ನೀರು ಎಲ್ಲವನ್ನೂ ಉಚಿತವಾಗಿ ಕೊಟ್ಟಿದ್ದಾರೆ. ಆದರೆ ನಮಗೆ ದುಂದು ವೆಚ್ಚವನ್ನು ಕಡಿಮೆ ಮಾಡುವ ಸರ್ಕಾರ ಬೇಕಾಗಿದೆ. ಸಿಎಂ, ಮಂತ್ರಿ , ಐಎಎಸ್ ಅಧಿಕಾರಿಗಳ ದುಂದು ವೆಚ್ಚು ಕಡಿಮೆ ಆಗಬೇಕು ಎಂದು ಹೇಳಿದರು.

  ಕಾನೂನುಬದ್ಧ ಪ್ರತಿಭಟನಾಕಾರರಿಗೆ ಬೆಂಬಲ ನೀಡುವ ಎನ್​ಜಿಒಗಳಿಗೆ ವಿದೇಶೀ ದೇಣಿಗೆ ನಿರಾಕರಿಸುವಂತಿಲ್ಲ: ಸುಪ್ರೀಂ ಕೊರ್ಟ್

  ನಿಖಿಲ್​ಗೆ ತನ್ನ ಎಂಗೇಜ್​ಮೆಂಟ್​ಗೆ ಬೇರೆ ದೇಶದ ಹಾರವೇ ಬೇಕಾಗಿತ್ತೇ?

  ಬಜೆಟ್ ಮಂಡನೆ ದಿನವೇ ರಾಮುಲು ಮಗಳ ಮದುವೆ ಆಯ್ತು. ಬಳ್ಳಾರಿಯಿಂದ ಹಿಡಿದು ಬೆಂಗಳೂರುವರೆಗಿನ ಮದುವೆ ಅದು. ಇನ್ನೊಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ಮಗನ ಮದುವೆ ತಯಾರಿ ನಡೆಯುತ್ತಿದೆ. ಅದಕ್ಕಾಗಿ  50 ಎಕರೆ ಜಾಗದಲ್ಲಿ ಪೆಂಡಾಲ್ ಹಾಕುತ್ತಿದ್ದಾರೆ. ನಿಖಿಲ್​ ಕುಮಾರಸ್ವಾಮಿ ನಿಶ್ಚಿತಾರ್ಥಕ್ಕೆ ಬೇರೆ ದೇಶದಿಂದ ಹೂವಿನ ಹಾರ ತರಿಸಿದ್ದರು. ನಮ್ಮ ರಾಜ್ಯದಲ್ಲೇ ಎಂತೆಂಥ ಹೂವುಗಳಿವೆ. ಆದರೆ ನಿಖಿಲ್​ಗೆ ತನ್ನ ಎಂಗೇಜ್​ಮೆಂಟ್​ಗೆ ಬೇರೆ ದೇಶದ ಹಾರವೇ ಬೇಕಾಗಿತ್ತು. ಜನರ ಋಣ ತೀರಿಸಲು ಮಗನ ಮದುವೆಗೆ ಸೀರೆ ಇತ್ಯಾದಿ ಕೊಡುತ್ತೇನೆ ಎಂದು ಎಚ್‌ಡಿಕೆ ಹೇಳುತ್ತಿದ್ದಾರೆ. ಆದರೆ, ಜನ ಅವಕಾಶ ಕೊಟ್ಟಾಗ ಸರ್ಕಾರದ ಕಾರ್ಯಕ್ರಮದ ಮೂಲಕ ಜನರ ಆರ್ಥಿಕ ಸ್ಥಿತಿಯನ್ನು ಬಲ ಮಾಡಬೇಕಿತ್ತು. ಅಧಿಕಾರ ಇದ್ದಾಗ ಆ ಋಣ ರೀತಿ ತೀರಿಸಬೇಕಿತ್ತು. ಇದರ ಬಗ್ಗೆ ಮಾಧ್ಯಮಗಳು ವಿಶ್ಲೇಷಣೆ ಮಾಡಬೇಕಿದೆ ಎಂದು ವಿಶ್ವನಾಥ್ ತಿಳಿಸಿದರು.

   ಯಡಿಯೂರಪ್ಪನವರ ಮೇಲೆ ಮಾತ್ರ ನಮಗೆ ನಂಬಿಕೆ

  ನನಗೆ ಯಾವ ಭಯವೂ ಇಲ್ಲ, ನಮ್ಮ 28 ಸಂಸದರಿಗೆ ಯಾವ ಭಯ ಕಾಡುತ್ತಿದೆಯೋ ಗೊತ್ತಿಲ್ಲ. ನಾವು ಪಕ್ಷಾಂತರ ಮಾಡಿದ್ದು ಒಂದು ಹೋರಾಟ. ಆ ಹೋರಾಟವನ್ನು ಮಾರಾಟ ಎಂದರು. ರಾಜ್ಯದಲ್ಲಿ ಪಕ್ಷ ರಾಜಕಾರಣ ಸತ್ತು‌ ಹೋಗಿ ಬಹಳ ದಿನವಾಗಿದೆ. ಇಲ್ಲಿ ಕುಟುಂಬ, ವ್ಯಕ್ತಿ , ಜಾತಿ, ಗುಂಪು ರಾಜಕಾರಣ ಆಗುತ್ತಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ನಮ್ಮನ್ನೆಲ್ಲ ಮಾರಾಟ ಆಗಿದ್ದಾರೆ ಎಂದರು. ಆದರೆ ಅದು ಅವರ ದುರ್ನಡತೆ ವಿರುದ್ಧ ನಡೆದ ಹೋರಾಟ. ನಾನು ಸಚಿವ ಸ್ಥಾನಕ್ಕಾಗಿ ಹೋರಾಟ ಮಾಡಿದವನಲ್ಲ. ಸಚಿವ ಸ್ಥಾನ ಕೊಡುವುದು ಬಿಡುವುದು ಬಿಎಸ್‌ವೈಗೆ ಬಿಟ್ಟಿದ್ದು. ಸೋತವರಿಗೆ ಕೊಡಬಾರದು ಅಂತಿಲ್ಲ. ಕನ್ನಡ ನಾಡಿನಲ್ಲಿ ನಾಲಿಗೆ ಮೇಲೆ ನಿಂತ ಏಕೈಕ ನಾಯಕ ಯಡಿಯೂರಪ್ಪ.  ಕುಮಾರಸ್ವಾಮಿ ಎಂದಿಗೂ ಇಲ್ಲ. ಯಡಿಯೂರಪ್ಪನವರ ಬಗ್ಗೆ ಮಾತ್ರ ನಮಗೆ ನಂಬಿಕೆ ಇದೆ ಎಂದು ಹೇಳಿದರು.

  ಜೆಡಿಎಸ್​​ಗೆ ರಮೇಶ್​ ಬಾಬು ವಿದಾಯ; ಅವರ ಮುಂದಿನ ಹಾದಿ ರಹಸ್ಯ
  First published: