Textbook Row: ಚಕ್ರತೀರ್ಥ ಸಮಿತಿ ವಿಸರ್ಜನೆ ಬಳಿಕ 8 ತಿದ್ದುಪಡಿಗಳು; ಈಗ ಏನೆಲ್ಲಾ ಬದಲಾಗಿದೆ?

ಬಸವಣ್ಣನವರಿಗೆ ಸಂಬಂಧಿಸಿದ ಅಂಶಗಳನ್ನು ತಿರುಚಲಾಗಿದೆ ಎಂಬ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಲಿಂಗಾಯತ ಧರ್ಮೀಯರಿಂದಲೂ ತೀವ್ರ ಟೀಕೆಗೆ ಒಳಗಾಗಿತ್ತು. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂಬ ಅಂಶವನ್ನು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಕೈಬಿಡಲಾಗಿದ್ದ ಸಂಬಂಧವೂ ವಿವಾದ ಭುಗಿಲೆದ್ದಿತ್ತು.

ರೋಹಿತ್ ಚಕ್ರತೀರ್ಥ

ರೋಹಿತ್ ಚಕ್ರತೀರ್ಥ

  • Share this:
ಬೆಂಗಳೂರು: ಕರ್ನಾಟಕದ ಶಿಕ್ಷಣ ಇಲಾಖೆ (Karnataka’s Education Department) ಶಾಲಾ ಪಠ್ಯಪುಸ್ತಕಗಳಲ್ಲಿ (School Textbooks) 8 ತಿದ್ದುಪಡಿಗಳನ್ನು (Eight Corrections) ಆದೇಶಿಸಿದೆ. ಸಮಾಜ ಸುಧಾರಕರ ಕೃತಿಗಳನ್ನು ಕೈಬಿಡುವ ಮೂಲಕ ಪಠ್ಯಕ್ರಮವನ್ನು ಕೇಸರಿಮಯಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಿದ್ದುಪಡಿಗೆ ಮುಂದಾಗಿದೆ. ಸರ್ಕಾರ ನೇಮಿಸಿದ ಸಮಿತಿಯ ಪರಿಷ್ಕರಣೆಗಳನ್ನು ಲೇಖಕರು, ಶಿಕ್ಷಣ ತಜ್ಞರು, ಧಾರ್ಮಿಕ ಮುಖಂಡರು ಮತ್ತು ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸಿದ್ದವು. ಬಸವಣ್ಣನವರಿಗೆ ಸಂಬಂಧಿಸಿದ ಅಂಶಗಳನ್ನು ತಿರುಚಲಾಗಿದೆ ಎಂಬ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಲಿಂಗಾಯತ ಧರ್ಮೀಯರಿಂದಲೂ ತೀವ್ರ ಟೀಕೆಗೆ ಒಳಗಾಗಿತ್ತು. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂಬ ಅಂಶವನ್ನು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಕೈಬಿಡಲಾಗಿದ್ದ ಸಂಬಂಧವೂ ವಿವಾದ ಭುಗಿಲೆದ್ದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೂನ್‌ನಲ್ಲಿ ಚಕ್ರತೀರ್ಥ ಸಮಿತಿಯನ್ನು ವಿಸರ್ಜಿಸಿದ್ದರು.

8 ತಿದ್ದುಪಡಿಗಳನ್ನು ಗುರುತಿಸಲಾಗಿದೆ

1ರಿಂದ 10ನೇ ತರಗತಿಯ ಕನ್ನಡ ಭಾಷೆಯ ಪಠ್ಯಪುಸ್ತಕಗಳಲ್ಲಿ ಹಾಗೂ 6ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಎಂಟು ತಿದ್ದುಪಡಿಗಳನ್ನು ಗುರುತಿಸಲಾಗಿದೆ. ತಿದ್ದುಪಡಿಗಳನ್ನು ಸಮಿತಿಯ ಮೂಲಕ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಎಚ್.ಎಸ್.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಮಿತಿಯು ಶಿಕ್ಷಕರು ಮತ್ತು ತಜ್ಞರನ್ನು ಒಳಗೊಂಡಿರುತ್ತದೆ, ನಂತರ ಅದನ್ನು ತಜ್ಞರ ತಂಡಕ್ಕೆ ಉಲ್ಲೇಖಿಸಲಾಗುತ್ತದೆ. ಸಮಾಜದ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Bengaluru Traffic Police: ಟ್ರಾಫಿಕ್ ಪೊಲೀಸರು ಈ ಸಂದರ್ಭಗಳಲ್ಲಿ ದಂಡ ಹಾಕುವಂತಿಲ್ಲ! ವಾಹನ ತಡೆಯುವಂತಿಲ್ಲ!

CMಗೆ ಪತ್ರ ಬರೆದಿದ್ದ ದೇವೇಗೌಡರು

ಕಳೆದ ವಾರ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ನಾಯಕ ಎಚ್ ಡಿ ದೇವೇಗೌಡ ಅವರು ವಿವಾದಾತ್ಮಕ ಪಠ್ಯಪುಸ್ತಕವನ್ನು ಹಿಂಪಡೆಯುವಂತೆ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ನಾವು ಅಧ್ಯಾಯಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದೇವೆ ಮತ್ತು ಹಿಂದಿನ ಪಠ್ಯಪುಸ್ತಕಗಳ ಪ್ರಕಾರ ಕೆಲವು ಭಾಗಗಳನ್ನು ಮುಂದುವರಿಸಲು ನಾವು ನಿರ್ಧರಿಸಿದ್ದೇವೆ. ದೇವೇಗೌಡರು ತಮ್ಮ ಪತ್ರದಲ್ಲಿ ತಿಳಿಸಿರುವ ಎಲ್ಲ ಅಂಶಗಳ ಬಗ್ಗೆಯೂ ಕ್ರಮ ಕೈಗೊಳ್ಳುತ್ತೇವೆ. ಸೂಕ್ತ ಸ್ಪಷ್ಟನೆಗಳೊಂದಿಗೆ ನಾನು ಅವರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.

ಪಠ್ಯಪುಸ್ತಕದಲ್ಲಿ ಬದಲಾದ ಅಂಶಗಳು

ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂಬ ಅಂಶವನ್ನು 9ನೇ ತರಗತಿ ಪಠ್ಯಪುಸ್ತಕದಲ್ಲಿ ಸೇರಿಸಲಾಗುವುದು.

7ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಮೊದಲ ಭಾಗದಲ್ಲಿ ಪುರಂದರದಾಸರು ಮತ್ತು ಕನಕದಾಸರ ಕುರಿತು ಭಕ್ತಿಪಂಥದ ಪಾಠದೊಂದಿಗೆ ಭಕ್ತಿ ಪಂಥ ಮತ್ತು ಸೂಫಿ ಸಂತರ ಪಾಠವನ್ನು ಮರುಸ್ಥಾಪಿಸಲಾಗುವುದು.

6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಮೊದಲ ಭಾಗದಲ್ಲಿ ಸಿದ್ದಗಂಗಾ ಮತ್ತು ಆದಿಚುಂಚನಗಿರಿ ಮಠದ ಶ್ರೀಗಳ ಕೃತಿಗಳು ಮತ್ತು ಸೇವೆಗಳನ್ನು “ಕರ್ನಾಟಕ ನಮ್ಮ ಹೆಮ್ಮೆ” ಎಂಬ ಪಾಠದಲ್ಲಿ ಸೇರಿಸಲಾಗುವುದು.

7 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ, ಸುರಪುರ ನಾಯಕರ ಕೊಡುಗೆಗಳನ್ನು "ಮೈಸೂರು ಮತ್ತು ಇತರ ಸಾಮ್ರಾಜ್ಯಗಳು" ಎಂಬ ಅಧ್ಯಾಯಕ್ಕೆ ಸೇರಿಸಲಾಗುತ್ತದೆ.

9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಮೊದಲ ಭಾಗದಲ್ಲಿ “ಭಾರತದ ಧಾರ್ಮಿಕ ಸುಧಾರಕರು” ಎಂಬ ಅಧ್ಯಾಯದಲ್ಲಿ ಸಮಾಜ ಸುಧಾರಕ ಬಸವಣ್ಣನವರ ಕುರಿತಾದ ಭಾಗಗಳನ್ನು ಬದಲಾಯಿಸಲಾಗುವುದು. ಆದಾಗ್ಯೂ, ಹೇಳಿಕೆಯಲ್ಲಿ ಮಾಡಬೇಕಾದ ಬದಲಾವಣೆಗಳನ್ನು ವಿವರಿಸಲಾಗಿಲ್ಲ.

7 ನೇ ತರಗತಿಯ ಸಾಮಾಜಿಕ ಪಠ್ಯಪುಸ್ತಕದ ಎರಡನೇ ಭಾಗದಲ್ಲಿ ಕವಿ ಕುವೆಂಪು ಮತ್ತು ಹುಯಿಲ್ಗೋಳ್ ನಾರಾಯಣರಾವ್ ಅವರ ಕಾಣೆಯಾದ ಚಿತ್ರಗಳನ್ನು "ಕರ್ನಾಟಕದ ಏಕೀಕರಣ ಮತ್ತು ಗಡಿ ವಿವಾದಗಳು" ಎಂಬ ಅಧ್ಯಾಯಕ್ಕೆ ಸೇರಿಸಲಾಗುತ್ತದೆ.

4ನೇ ತರಗತಿಯ ಪರಿಸರ ಅಧ್ಯಯನ ಪಠ್ಯಪುಸ್ತಕದಲ್ಲಿ ಕುವೆಂಪು ಇತರರ ಪ್ರೋತ್ಸಾಹದಿಂದ ಜನಪ್ರಿಯರಾದರು ಎಂಬ ವಿವಾದಾತ್ಮಕ ಸಾಲುಗಳನ್ನು ಕೈಬಿಡಲಾಗುವುದು ಎಂದು ತಿದ್ದುಪಡಿ ಸಮಿತಿ ತಿಳಿಸಿದೆ. ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯು ಸರಿಪಡಿಸಿದ ಭಾಗಗಳನ್ನು ಎಲ್ಲಾ ಶಾಲೆಗಳಲ್ಲಿ ಉಚಿತ ಪುಸ್ತಕದ ರೂಪದಲ್ಲಿ ವಿತರಿಸುತ್ತದೆ.
Published by:Kavya V
First published: