ಬಿಜೆಪಿ ಜೊತೆ ಜೆಡಿಎಸ್​ ಒಳ ಒಪ್ಪಂದ: ಶಂಕೆ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಇನ್ನು ಕೆಪಿಸಿಸಿ ಸಭೆಯಲ್ಲಿ ಸಿದ್ದರಾಮಯ್ಯ ಮುಂದಿಟ್ಟ ಸೂತ್ರದಿಂದಾಗಿ ಕೆಎಚ್​ ಮುನಿಯಪ್ಪ, ಬಿಕೆ ಹರಿಪ್ರಸಾದ್​ ಸಿಟ್ಟಾಗಿ ಸಭೆಯಿಂದ ಹೊರ ನಡೆದ ಘಟನೆ ಕುರಿತ ಪ್ರಶ್ನೆಗೆ ಸಿಟ್ಟಾದ ಅವರು, ಅದೆಲ್ಲಾ ಊಹಾಪೋಹಾ. ನೀವೇನು ಸಭೆಯಲ್ಲಿ ಇದ್ದೀರಾ. ಇದೆಲ್ಲಾ ಸುಳ್ಳು ಎಂದು ಗರಂ ಆದರು. 

Seema.R | news18-kannada
Updated:November 12, 2019, 11:24 AM IST
ಬಿಜೆಪಿ ಜೊತೆ ಜೆಡಿಎಸ್​ ಒಳ ಒಪ್ಪಂದ: ಶಂಕೆ ವ್ಯಕ್ತಪಡಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ
  • Share this:
ವಿಜಯಪುರ (ನ.12): ಉಪಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಬಿಜೆಪಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಅದು ತನ್ನ ಅವಧಿ ಪೂರ್ಣಗೊಳಿಸಲಿದೆ ಎಂಬ ಜೆಡಿಎಸ್​ ವರಿಷ್ಠ ದೇವೇಗೌಡರ ಹೇಳಿಕೆ ಗಮನಿಸಿದರೆ, ಬಿಜೆಪಿ ಜೊತೆ ಜೆಡಿಎಸ್​ ಒಳ ಒಪ್ಪಂದವಾಗಿರುವ ಸಾಧ್ಯತೆ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ. 

ಮೈತ್ರಿ ಸರ್ಕಾರದ ಪತನದ ಬಳಿಕ ಸಿದ್ದರಾಮಯ್ಯ ಮೇಲೆ ದೇವೇಗೌಡರ ಅಭಿಪ್ರಾಯ ಬದಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಕೋಮುವಾದಿ ಪಕ್ಷವನ್ನು ದೂರವಿಡುವ ಉದ್ದೇಶದಿಂದ ಹೈಕಮಾಂಡ್​ ನಿರ್ದೇಶನದಂತೆ ಜೆಡಿಎಸ್​ ಜೊತೆ ಸರ್ಕಾರ ರಚನೆ ಮಾಡಿದೆವು. ಹೈ ಕಮಾಂಡ್​ ಜೊತೆ ದೇವೇಗೌಡರು ಚರ್ಚಿಸುವಾಗಲೂ ನಾನಿರಲಿಲ್ಲ. ಸದ್ಯ ಬಿಜೆಪಿ ಬಗ್ಗೆ ಅವರು ಮೃದು ಧೋರಣೆ ತಾಳಿದ್ದಾರೆ. ಅದು ಯಾಕೆ ಎಂಬುದು ಅವರೇ ಉತ್ತರಿಸಬೇಕು. ಅವರು ಬಿಜೆಪಿ ಜೊತೆ ಒಳ ಒಪ್ಪಂದ ನಡೆಸಿದ್ದಾರೆ ಎಂಬ ಶಂಕೆ ಕೂಡ ಇದೆ ಎಂದರು.

ಉಪಚುನಾವಣೆಯಲ್ಲಿ ನಾವೆಲ್ಲೂ 15 ಸ್ಥಾನ ಗೆಲ್ಲುತ್ತೇವೆ ಎಂಬ ಮಾತುಗಳನ್ನು ಆಡಿಲ್ಲ, ಆದರೆ, 12 ಸ್ಥಾನಗಳಲ್ಲಿ ನಮ್ಮ ಗೆಲುವು ಖಚಿತ, 15 ಸ್ಥಾನ ಗೆದ್ದರೂ ಅಚ್ಚರಿ ಇಲ್ಲ ಎಂದರು.

ಗರಂ ಆದ ಸಿದ್ದರಾಮಯ್ಯ

ಇನ್ನು ನಿನ್ನೆ ಅಭ್ಯರ್ಥಿಗಳ ಆಯ್ಕೆ ಕುರಿತು ಕೆಪಿಸಿಸಿಯಲ್ಲಿ ನಡೆದ ಮಾತಿನ ಕುರಿತು ಸಿಟ್ಟಾದ ಅವರು ಸುದ್ದಿಗೋಷ್ಠಿಯಿಂದ ಎದ್ದು ಹೊರ ನಡೆದರು. ಈಗಾಗಲೇ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಉಳಿದ ಏಳು ಕ್ಷೇತ್ರಗಳಿಗೆ ಚರ್ಚೆ ನಡೆಸಲಾಗಿದೆ ಎಂದರು.

ಇನ್ನು ಕೆಪಿಸಿಸಿ ಸಭೆಯಲ್ಲಿ ಸಿದ್ದರಾಮಯ್ಯ ಮುಂದಿಟ್ಟ ಸೂತ್ರದಿಂದಾಗಿ ಕೆಎಚ್​ ಮುನಿಯಪ್ಪ, ಬಿಕೆ ಹರಿಪ್ರಸಾದ್​ ಸಿಟ್ಟಾಗಿ ಸಭೆಯಿಂದ ಹೊರ ನಡೆದ ಘಟನೆ ಕುರಿತ ಪ್ರಶ್ನೆಗೆ ಸಿಟ್ಟಾದ ಅವರು, ಅದೆಲ್ಲಾ ಊಹಾಪೋಹಾ. ನೀವೇನು ಸಭೆಯಲ್ಲಿ ಇದ್ದೀರಾ. ಇದೆಲ್ಲಾ ಸುಳ್ಳು ಎಂದು ಗರಂ ಆದರು.

 ಸಿಟಿ ರವಿಗೆ ಸವಾಲ್​​

ಬಿಜೆಪಿ ಆಪರೇಷನ್​ ಕಮಲ ಕುರಿತು ಮಾತನಾಡಿದ ಅವರು, ಬಿಜೆಪಿ ಅನೈತಿಕವಾಗಿ ಈಗಾಗಲೇ ಸರ್ಕಾರ ರಚನೆ ಮಾಡಿದೆ. ಅವರ ಬಳಿ ದುಡ್ಡಿದೆ. ಅದಕ್ಕೆ ಇನ್ನು ಆಪರೇಷನ್​ ಕಮಲ ಮಾಡುತ್ತಿದ್ದಾರೆ. ಕಾಂಗ್ರೆಸ್​ ನಾಯಕರನ್ನು ಸೆಳೆಯುವ ಮುನ್ನ, ಬಿಜೆಪಿಯಿಂದ ಕಾಂಗ್ರೆಸ್​ಗೆ ಬರುತ್ತಿರುವವರನ್ನು ಮೊದಲು ಸಿಟಿ ರವಿ ತಡೆಯಲಿ. ನಾವು ಯಾವುದೇ ಕಾರಣಕ್ಕೂ ಆಪರೇಷನ್​ ಹಸ್ತ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ:  ಎಂಟಿಬಿ ಜೊತೆ ಒಪ್ಪಂದವಾಗಿರಲಿಲ್ಲ; ಮಂಜುನಾಥನ ಮೇಲೆ ಆಣೆ ಮಾಡಲಿ: ಶರತ್ ಬಚ್ಚೇಗೌಡ ಸವಾಲು

ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಕಾಂಗ್ರೆಸ್​ ಸೇರ್ಪಡನೆ ಕುರಿತು ಮಾತನಾಡಿದ ಅವರು, ಅವರು ಬಂದು ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್​ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವುದಾದರೆ ಬರಲಿ ಎಂದಿದ್ದೇನೆ. ಉಳಿದವರು ಯಾರು ಇನ್ನು ಚರ್ಚೆ ನಡೆಸಿಲ್ಲ ಎಂದರು

ಸೇನೆ ಜೊತೆ ಕೈ ನಿರ್ಧಾರವಾಗಿಲ್ಲ

 

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಸಂಬಂಧ ಶಿವಸೇನೆಗೆ ಕಾಂಗ್ರೆಸ್​ ಬೆಂಬಲ ನೀಡುವ ಕುರಿತು ಇನ್ನು ಅಂತಿಮ ನಿರ್ಧಾರವಾಗಿಲ್ಲ. ಈ ಕುರಿತು ಹೈ ಕಮಾಂಡ್​ ನಿರ್ಧರಿಸಲಿದೆ ಎಂದರು.
First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ