‘ಕರ್ನಾಟಕದ ಮುಂದಿನ ಸಿಎಂ ಡಿಕೆಶಿ‘: ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್​ ಕಾರ್ಯಕರ್ತರಿಂದ ಹೀಗೊಂದು ಕ್ಯಾಂಪೇನ್

ಕಳೆದ ವರ್ಷ ಮಾಜಿ ಸಿಎಂ ಸಿದ್ದರಾಮಯ್ಯ ಮುಂದೆಯೇ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನನಗೂ ಸಿಎಂ ಆಗುವ ಆಸೆ ಇದೆ. ಅದಕ್ಕೆ ಇನ್ನೂ ಟೈಮ್ ಇದೆ, ಸಿಎಂ ರೇಸ್‍ನಲ್ಲಿ ಇರುವವರಿಗೆ ಆಲ್ ದಿ ಬೆಸ್ಟ್ ಎಂದು ಹೇಳುವ ಮೂಲಕ ತಮ್ಮ ಮನದ ಆಸೆ ಬಿಚ್ಚಿಟ್ಟಿದ್ದರು.

ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್

 • Share this:
  ಬೆಂಗಳೂರು(ಮಾ.11): "ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್"​​ ಎಂಬ ಕ್ಯಾಂಪೇನ್ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಕೆ ಶಿವಕುಮಾರ್​​ ಪರವಾಗಿ ತಮ್ಮ ಬೆಂಬಲಿಗರು ಹೀಗೆ ಅಭಿಯಾನ ಮಾಡುತ್ತಿದ್ದಾರೆ. ಕರ್ನಾಟಕದ ಮುಂದಿನ ಸಿಎಂ ಡಿಕೆಶಿ, ವಿ ಸ್ಟ್ಯಾಂಡ್ ವಿತ್ ಡಿಕೆಶಿ, ಡಿಕೆಶಿ ಫಾರ್ ಸಿಎಂ, ‘ವಾಯ್ಸ್ ಆಫ್ ಕರ್ನಾಟಕ ನಮ್ಮ ಡಿಕೆಶಿ ಎಂದು ಕಾಂಗ್ರೆಸ್​​ ಕಾರ್ಯಕರ್ತರು ಕನಕಪುರ ಬಂಡೆ ಪರ ಫುಲ್​​ ಬ್ಯಾಂಟಿಗ್​​ ನಡೆಸುತ್ತಿದ್ದಾರೆ.

  ಈ ಹಿಂದಿನ ಕರ್ನಾಟಕ ಉಪಚುನಾವಣೆ ಫಲಿತಾಂಶದ ಬಳಿಕ ಸೋಲಿನ ಹೊಣೆ ಹೊತ್ತು ದಿನೇಶ್ ಗುಂಡೂರಾವ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಹೈಕಮಾಂಡ್ ಮಧುಸೂದನ್ ಮಿಸ್ತ್ರಿ ನೇತೃತ್ವದ ನಿಯೋಗದ ಮೂಲಕ ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕು? ಎಂದು ವಿವಿಧ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿತು. ಈ ವೇಳೆ ಬಹುತೇಕರು ಡಿ. ಕೆ. ಶಿವಕುಮಾರ್‌ರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಆಧಾರದ ಮೇಲೆ ಹೈಕಮಾಂಡ್​​​ ಡಿ.ಕೆ ಶಿವಕುಮಾರ್​​ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡಿ ಆದೇಶಿಸಿದೆ.​​ ಇದೀಗ ಡಿಕೆಶಿ ನೂತನ ಕಾಂಗ್ರೆಸ್​ ಅಧ್ಯಕ್ಷ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಅಲ್ಲದೇ ರಾಜ್ಯದ ಮುಂದಿನ ಸಿಎಂ ಡಿಕೆಶಿ ಎಂದು ಅಭಿಯಾನ ಶುರು ಮಾಡಿದ್ದಾರೆ.  ಕಳೆದ ವರ್ಷ ಮಾಜಿ ಸಿಎಂ ಸಿದ್ದರಾಮಯ್ಯ ಮುಂದೆಯೇ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನನಗೂ ಸಿಎಂ ಆಗುವ ಆಸೆ ಇದೆ. ಅದಕ್ಕೆ ಇನ್ನೂ ಟೈಮ್ ಇದೆ, ಸಿಎಂ ರೇಸ್‍ನಲ್ಲಿ ಇರುವವರಿಗೆ ಆಲ್ ದಿ ಬೆಸ್ಟ್ ಎಂದು ಹೇಳುವ ಮೂಲಕ ತಮ್ಮ ಮನದ ಆಸೆ ಬಿಚ್ಚಿಟ್ಟಿದ್ದರು.

  ನಾನು ಸಿಎಂ ಆಗಬೇಕೆಂದು ಆತುರದಲ್ಲಿ ಇಲ್ಲ. ಇನ್ನು ನಾಲ್ಕು ವರ್ಷ ಕಾಯೋಣ. ನಂತರ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ. ಬಳಿಕ ನಮ್ಮ ಪಕ್ಷದ ನಾಯಕರು ಏನು ಮಾಡುತ್ತಾರೆ ನೋಡೋಣ. ಆಗ ನಾನೇ ಸಿಎಂ ಆಗಲು ಪ್ರಯತ್ನಿಸುವೆ ಎಂದಿದ್ದರು.

  ಇದನ್ನೂ ಓದಿ: ಪಕ್ಷಕ್ಕಾಗಿ ನಿಷ್ಠೆ ತೋರಿದ ಕನಕಪುರ ಬಂಡೆ ಕೈ ಹಿಡಿದ ಹೈಕಮಾಂಡ್; ಕೆಪಿಸಿಸಿಗೆ ಡಿಕೆಶಿ ಆಯ್ಕೆ ಹಿಂದಿವೆ ಹತ್ತಾರು ಕಾರಣ

  ಕಾಂಗ್ರೆಸ್ ಪಕ್ಷದಲ್ಲಿ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್, ಹಲವು ಸಂದರ್ಭಗಳಲ್ಲಿ ಪಕ್ಷವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಗಳನ್ನು ಒಂಚೂರು ಚ್ಯುತಿ ಬಾರದ ಹಾಗೆ ಚಾಚುತಪ್ಪದೆ ಪಾಲಿಸಿದ್ದಾರೆ. ಹಲವು ರಾಜ್ಯಗಳಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದಾಗ ಕಾಂಗ್ರೆಸ್ ಶಾಸಕರನ್ನು ರಾಜ್ಯದಲ್ಲಿ ಸುರಕ್ಷಿತವಾಗಿ ನೋಡಿಕೊಂಡಿದ್ದಾರೆ. ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಮರುಆಯ್ಕೆ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಕೆಲಸಗಳಿಗಾಗಿ ಕೇಂದ್ರ ಸರ್ಕಾರದ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಐಟಿ, ಇಡಿ ದಾಳಿಗೂ ಒಳಗಾಗಿ ಜೈಲುವಾಸ ಸಹ ಅನುಭವಿಸಿದ್ದಾರೆ. ಎಂತಹ ಸಂದರ್ಭದಲ್ಲಿಯೂ ಪಕ್ಷದ ವಿರುದ್ಧ ನಡೆದುಕೊಳ್ಳದೆ, ಪಕ್ಷ ತೊರೆಯದೆ ನಿಷ್ಠೆ ತೋರಿರುವುದನ್ನು ಪರಿಗಣಿಸಿ, ಹೈಕಮಾಂಡ್ ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕರುಣಿಸಿದೆ. ಮುಂದೊಂದು ದಿನ ಕಾಂಗ್ರೆಸ್​ ಸಿಎಂ ಅಭ್ಯರ್ಥಿ ಎಂದು ಹೈಕಮಾಂಡ್​​ ಘೋಷಿಸಿದರು ಅಚ್ಚರಿಯಿಲ್ಲ.
  First published: