HOME » NEWS » State » KARNATAKA NEWS NOT ONLY THE OFFICIALS INVOLVE IN THE ILLEGAL TRANSPORT OF RICE IN KOPPALA RH

ಅಕ್ಕಿ ದೋಖಾ ಭಾಗ-1: ಬಡವರಿಗೆ ಸೇರಬೇಕಾದ ಅಕ್ಕಿ ಅಕ್ರಮ ಸಾಗಣೆಯಲ್ಲಿ ಅಧಿಕಾರಿಗಳು ಮಾತ್ರವಲ್ಲ ಬಿಪಿಎಲ್ ಕಾರ್ಡ್ ಹೊಂದಿರುವ ಉಳ್ಳವರೂ ಸಹ ಶಾಮೀಲು!

Koppala News: ಕಿರಣ್ ಟ್ರೇಡರ್ಸ್ ಮೇಲೆ ದಾಳಿ ನಡೆಸಿದಾಗ 6.9 ಕ್ವಿಂಟಾಲ್ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಇದನ್ನ ರೆಡ್ ಹ್ಯಾಂಡ್ ಆಗಿ ಕೊಪ್ಪಳದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ. ಈ ಅಕ್ಕಿ ಎಲ್ಲಿಂದ ಬರುತ್ತಿದೆ ಎಂದು ಮಾಹಿತಿ ಸಂಗ್ರಹಿಸಿದಾಗ ಎಲ್ಲರೂ ಹುಬ್ಬೇರಿಸುವ ಸಂಗತಿ ಬಯಲಾಗಿದೆ.

HR Ramesh | news18-kannada
Updated:May 14, 2020, 7:09 AM IST
ಅಕ್ಕಿ ದೋಖಾ ಭಾಗ-1: ಬಡವರಿಗೆ ಸೇರಬೇಕಾದ ಅಕ್ಕಿ ಅಕ್ರಮ ಸಾಗಣೆಯಲ್ಲಿ ಅಧಿಕಾರಿಗಳು ಮಾತ್ರವಲ್ಲ ಬಿಪಿಎಲ್ ಕಾರ್ಡ್ ಹೊಂದಿರುವ ಉಳ್ಳವರೂ ಸಹ ಶಾಮೀಲು!
ಸಾಂದರ್ಭಿಕ ಚಿತ್ರ
  • Share this:
ಕೊಪ್ಪಳ/ಗದಗ: ಬಡವರು ಹಸಿವಿನಿಂದ ಬಳಲಬಾರದು ಎಂದು ರಾಷ್ಟ್ರದ ಬಹುತೇಕ ರಾಜ್ಯಗಳಲ್ಲಿ ಉಚಿತ ಪಡಿತರ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರಕಾರ ಬಿಪಿಎಲ್ ಪಡಿತರದಾರರಿಗೆ ಉಚಿತ ಅಕ್ಕಿ ನೀಡುತ್ತಿರುವುದು ಹೊಸತೇನಲ್ಲ. ಹಾಗೆಯೇ ಕೊರೋನಾದ ಈ ದಿನಗಳಲ್ಲಿ ಬಡವರಿಗೆ ಸಂಕಷ್ಟ ಬಾರದಿರಲೆಂದು ಕೇಂದ್ರ ಸರಕಾರ ಬಡವರ ಅನುಕೂಲಕ್ಕಾಗಿ ಗರೀಬ್ ಕಲ್ಯಾಣ ಯೋಜನೆಯಡಿ ಮೂರು ತಿಂಗಳು ಉಚಿತ ಅಕ್ಕಿ ವಿತರಣೆಗೆ ಮುಂದಾಗಿದೆ. ಆದರೆ ಈ ಯೋಜನೆ ಬಡವರಿಗೆ ತಲುಪುವುದಕ್ಕಿಂತ ಬಡವರ ಹೆಸರಿನಲ್ಲಿ ಬೇರೆಡೆಗೆ ತಲುಪುತ್ತಿದೆ!

ಗದಗನಲ್ಲಿ ಈಚೆಗೆ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಸಿಕ್ಕಿ ಬಿದ್ದು ಅದರಲ್ಲಿದ್ದ ಅಕ್ಕಿ ಬಡಜನರ ಹಸಿವು ನೀಗಿಸುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರಕಾರ ಪೂರೈಸಿದ್ದ ಅನ್ನಭಾಗ್ಯ ಹಾಗೂ ಗರೀಬ್ ಕಲ್ಯಾಣದ ಅಕ್ಕಿ ಎಂದು ಸಾಬೀತಾಗಿದೆ. ಆದರೂ ಸಹ ಗದಗ ಜಿಲ್ಲೆಯ ಅಧಿಕಾರಿಗಳು ಅದನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದು ಈಗ ಜಗಜ್ಜಾಹೀರಾಗಿದೆ. ಈ ಪ್ರಕರಣದ ಉದ್ದ, ಅಗಲವನ್ನು ಅಳೆದು ಆಳಕ್ಕಿಳಿದಾಗ ಬಯಲಿಗೆ ಬಿದ್ದದ್ದು ಬರೀ ಅಧಿಕಾರಿಗಳು ಮಾತ್ರವಲ್ಲ ಬಿಪಿಎಲ್ ಕಾರ್ಡ್ ಹೊಂದಿರುವ ಉಳ್ಳವರೂ ಸಹ!

ಯಾಕೆ ಇದನ್ನ ದೊಡ್ಡದು ಮಾಡುತ್ತೀರಿ?:

ಗರೀಬ್ ಕಲ್ಯಾಣ ಹಾಗೂ ಅನ್ನಭಾಗ್ಯದ ಅಕ್ಕಿಯನ್ನು ಕಳ್ಳ ಸಾಗಣೆ ಮಾಡುತ್ತಿರುವ ಕುರಿತು ಗದಗ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದಾಗ ಗದಗನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದೇ ಹೆಚ್ಚು. ಈ ಪ್ರಕರಣ ನಮ್ಮ ಕಣ್ಣಿಗೆ ಬಿದ್ದಿದ್ದೇ ತಡ, ಅಧಿಕಾರಿಗಳಿಗೆ ಚಳಿಜ್ವರ ಶುರುವಾಗಿದೆ. ಕೊಪ್ಪಳದಿಂದ ಸಾಗಾಟವಾಗುತ್ತಿದ್ದ ಅಕ್ಕಿ ಕುರಿತು ಕೊಪ್ಪಳ ಜಿಲ್ಲೆಯಲ್ಲೂ ತನಿಖೆ ಮತ್ತು ದಾಳಿ ಆರಂಭವಾಗುತ್ತಿದ್ದಂತೆ, ಗದಗ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳು, ಹೋಗ್ಲಿ ಬಿಡಿ ಯಾಕೆ ಇದನ್ನ ದೊಡ್ಡ ವಿಷಯವನ್ನಾಗಿ ಮಾಡುತ್ತೀರಿ ಎಂದು ಸಮಜಾಯಿಷಿ ನೀಡಿದ್ದಾರೆ.

ದಕ್ಷ ಅಧಿಕಾರಿಗಳು ಎಂದೇ ಹೆಸರು ಗಳಿಸಿರುವ ಕೊಪ್ಪಳದ ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್ ಮಾಗರ್ದರ್ಶನದಲ್ಲಿ ಮತ್ತೊಬ್ಬ ದಕ್ಷ ಅಧಿಕಾರಿ ಕೊಪ್ಪಳ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ನಾರಾಯಣರಡ್ಡಿ ಕನಕರಡ್ಡಿ ಕೊಪ್ಪಳದ ಗಂಜ್​ನಲ್ಲಿರುವ ಹಾಗೂ ಜವಾಹರ ರಸ್ತೆಯ ಕಿರಣ್ ಟ್ರೇಡರ್ಸ್ ಮೇಲೆ ದಾಳಿ ನಡೆಸಿದಾಗ 6.9 ಕ್ವಿಂಟಾಲ್ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಇದನ್ನ ರೆಡ್ ಹ್ಯಾಂಡ್ ಆಗಿ ಕೊಪ್ಪಳದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ. ಈ ಅಕ್ಕಿ ಎಲ್ಲಿಂದ ಬರುತ್ತಿದೆ ಎಂದು ಮಾಹಿತಿ ಸಂಗ್ರಹಿಸಿದಾಗ ಎಲ್ಲರೂ ಹುಬ್ಬೇರಿಸುವ ಸಂಗತಿ ಬಯಲಾಗಿದೆ.

ಇದನ್ನು ಓದಿ: ನ್ಯೂಸ್ 18 ಕನ್ನಡ ವರದಿ ಫಲಶ್ರುತಿ | ಸರ್ಕಾರದ ಅಕ್ಕಿ ಕಾಳಸಂತೆಯಲ್ಲಿ ಮಾರುತ್ತಿದ್ದ ದಂಧೆಕೋರರು ವಶಕ್ಕೆ

ಬಿಪಿಎಲ್ ಕಾರ್ಡ್ದಾರರೇ ಅಕ್ರಮದ ಮೂಲ?:ಕೊಪ್ಪಳದಲ್ಲಿ ನಡೆದ ದಾಳಿ ವೇಳೆ ಕಿರಣ್ ಟ್ರೇಡರ್ಸ್​ನ ಮಾಲೀಕ ರಾಜಾಹುಲಿ ಅಲಿಯಾಸ್ ರಾಜಾವಲಿ ಹಳ್ಳಿ ಜನ ಅಕ್ಕಿಯನ್ನು ತಂದು ಕೊಡುತ್ತಿದ್ದರು. ನಾವು ಇದನ್ನು ಹುಬ್ಬಳ್ಳಿ ಸೇರಿದಂತೆ ಇತರೆಡೆ ಮಾರಾಟ ಮಾಡುತ್ತಿದ್ದೇವು ಎಂಬ ವಿಷಯವನ್ನು ಬಾಯಿ ಬಿಟ್ಟಿದ್ದಾನೆ. ಯಾವ ಯಾವ ಹಳ್ಳಿ ಜನ ಎಂದು ಕೆದಕಿದಾಗ ಗೊಂಡಬಾಳದ ಪ್ರಕಾಶ್ ಎನ್ನುವ ವ್ಯಕ್ತಿಯಿಂದ ಅಕ್ಕಿ ನಮಗೆ ಪೂರೈಕೆಯಾಗುತ್ತಿತ್ತು ಎಂಬುದನ್ನು ರಾಜಾವಲಿ ಬಾಯಿ ಬಿಟ್ಟಿದ್ದಾನೆ. ಈ ಸುಳಿವಿನ ಮೇರೆಗೆ ಮಂಗಳವಾರ ತಡರಾತ್ರಿ ಗೊಂಡಬಾಳ ಗ್ರಾಮದ ಪ್ರಕಾಶ್ ಮನೆ ಮೇಲೆ ದಾಳಿ ನಡೆಸಿದಾಗ ಪ್ರಕಾಶ್ ಮನೆ ಸೇರಿದಂತೆ ಇತರೆ ಒಂಬತ್ತು ಮನೆಗಳಲ್ಲಿ ಸುಮಾರು 450 ಕ್ವಿಂಟಾಲ್ ಅಕ್ಕಿ ಅಕ್ರಮ ಸಾಗಣೆಗೆ ಸಿದ್ಧವಾಗಿದ್ದು ಬೆಳಕಿಗೆ ಬಂದಿದೆ. ಕೊಪ್ಪಳದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ತಡರಾತ್ರಿಯ ದಿಢೀರ್ ದಾಳಿಯಿಂದ ಗೊಂಡಬಾಳ ಗ್ರಾಮಸ್ಥರು ಕಕ್ಕಾಬಿಕ್ಕಿಯಾಗಿ, ಅತ್ತು ಕರೆದು ಸಿಕ್ಕಿ ಬಿದ್ದಿದ್ದಾರೆ. ಕೊನೆಗೂ ಕೊಪ್ಪಳದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಯೋಜನೆಯಡಿ ಲಭ್ಯವಾಗುವ ಅಕ್ಕಿಯ ಅಕ್ರಮ ಸಾಗಣೆ ವಿರುದ್ಧ ಎರಡು ಎಫ್ಐಆರ್ ದಾಖಲಾಗಿವೆ.

  • ವಿಶೇಷ ವರದಿ: ಬಸವರಾಜ ಕರುಗಲ್

First published: May 14, 2020, 7:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading