ಸಿಗರೇಟ್​ ಯಾಕೆ ಸೇದುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಕ್ಕೆ ಯುವಕನ ಕೊಲೆಗೈದ ಹಂತಕರು

ವಿಷಯ ತಿಳಿದ ಟೌ‌ನ್ ಠಾಣಾ ಪೊಲೀಸ್ರು ಕೂಡಲೇ ಎಣ್ಣೆ ನಶೆಯಲ್ಲಿ ಕೊಲೆಗೈದು ಅಲ್ಲೇ ಅಡ್ಡಾಡುತ್ತಿದ್ದ ಮೂವರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

news18-kannada
Updated:August 7, 2020, 7:34 AM IST
ಸಿಗರೇಟ್​ ಯಾಕೆ ಸೇದುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಕ್ಕೆ ಯುವಕನ ಕೊಲೆಗೈದ ಹಂತಕರು
ಕ್ರೈಮ್​
  • Share this:
ನೆಲಮಂಗಲ(ಆ.07): ರಸ್ತೆ ಪಕ್ಕದಲ್ಲಿ ನಿಂತಿಕೊಂಡು ಸಿಗರೇಟ್ ಸೇದುತ್ತಿದ್ದದ್ದನ್ನ ಪ್ರಶ್ನಿಸಿ ಬುದ್ದಿವಾದ ಹೇಳಿದ್ದಕ್ಕೆ ಮೂರು ಜನರ ಗೊಂಪೊಂದು ಯುವಕನಿಗೆ ಚಾಕುವಿನಿಂದ ಹಿರಿದು ಕೊಲೆಗೈದಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಜಯನಗರದಲ್ಲಿ ಈ ಘಟನೆ ನಡೆದಿದೆ. ಜಯನಗರ ನಿವಾಸಿ ಅರುಣ್(25) ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ. ಇನ್ನೂ ಕೊಲೆ ಆರೋಪಿಗಳು ಬೆಂಗಳೂರಿನ ಬನಶಂಕರಿ ನಿವಾಸಿ ಸಲ್ಮಾನ್, ಇಮ್ರಾನ್, ಹಾಗೂ ಸುಝೈನ್ ಎನ್ನಲಾಗಿದೆ.

ಘಟನೆ ವಿವರ: ಈ ಮೂರು ಜನ ಅರೊಪಿಗಳು ನೆನ್ನೆ ಸಂಬಂಧಿಕರ ಮನೆಗೆ ಬಂದಿದ್ರು. ಮೂವರು ತಡರಾತ್ರಿ 11 ಗಂಟೆ ಸಮಯದಲ್ಲಿ ಜಯನಗರದ ಬೇಕರಿಯೊಂದರ ಪಕ್ಕದಲ್ಲಿ ಗಾಂಜಾ ಅಮಲಿನಲ್ಲಿ ಸಿಗರೇಟ್ ಸೇದಿಕೊಂಡು ಕೂಗಾಟ ನಡೆಸುತ್ತಿದ್ದರು. ಆಗ ಸ್ಥಳೀಯರಾದ ಮೃತ ಅರುಣ್, ಅಭಿ, ರವಿ ಇದನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಇದೇ ವೇಳೆ ಪರಸ್ಪರ ಮಾತುಕತೆ ನಡೆದು, ಗಲಾಟೆ ವಿಕೋಪಕ್ಕೆ ಏರಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಗಲಾಟೆ ವೇಳೆ ಚಾಕುವಿನಿಂದ ಮೃತ ಅರುಣ್ ಎದೆಯ ಎಡ ಭಾಗಕ್ಕೆ ಇರಿದು, ಮರ್ಮಾಂಗಕ್ಕೆ ಹೊಡೆದು ಹತ್ಯೆಗೈದಿದ್ದಾರೆ

ಹತ್ಯೆಯ ನಂತರ ರಕ್ತದ ಮಡುವಿನಲ್ಲಿದ್ದ ಅರುಣ್ ಒದ್ದಾಡುತ್ತಿದ್ದರ ಬಗ್ಗೆ ಕೂಡಲೇ ರವಿ ಹಾಗೂ ಸ್ನೇಹಿತ ಅಭಿ  ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅರುಣ್​​ನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಗಾಯಾಳು ಕರೆದೊಯ್ಯುಲು ಮುಂದಾಗಿದ್ದಾರೆ. ಆದ್ರೆ ದುರದೃಷ್ಟವಶಾತ್ ಆಸ್ಪತ್ರೆ ಮಾರ್ಗಮಧ್ಯೆ ಅರುಣ್ ಧಾರುಣವಾಗಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರ - ಸಿಎಂ ಯಡಿಯೂರಪ್ಪ ಘೋಷಣೆ


ಇನ್ನೂ ವಿಷಯ ತಿಳಿದ ಟೌ‌ನ್ ಠಾಣಾ ಪೊಲೀಸರು ಕೂಡಲೇ ಎಣ್ಣೆ ನಶೆಯಲ್ಲಿ ಕೊಲೆಗೈದು ಅಲ್ಲೇ ಅಡ್ಡಾಡುತ್ತಿದ್ದ ಮೂವರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೆಲಮಂಗಲ ಟೌನ್ ಪೊಲೀಸ್ ಠಾಣಾ ಕೂಗಳೆತೆ ದೂರದಲ್ಲೇ ಈ ಘಟನೆ ನೆಡೆದಿದ್ದು ಜಯನಗರ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಸದ್ಯ ಘಟನೆ ಸಂಬಂಧವಾಗಿ ಬೆಂಗಳೂರು ಗ್ರಾಮಾಂತರ ಎಸ್​​ಪಿ ರವಿ. ಡಿ ಚನ್ನಣ್ಣವರ್, ಹೆಚ್ಚುವರಿ ಎಸ್​​ಪಿ ಸಜೀತ್, ಸರ್ಕಲ್​​​ ಇನ್ಸ್​ಪೆಕ್ಟರ್​​​ ಶಿವಣ್ಣ ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌
ಕೊರೋನಾದಿಂದ ಠಾಣೆಯಲ್ಲಿ ಸ್ವಲ್ಪ ಸ್ವಲ್ಪ ಗಸ್ತು ಕಮ್ಮಿ ಆಗುತ್ತಿದ್ದಂತೆ ರಾತ್ರಿ ಸಮಯದಲ್ಲಿ ನೆಲಮಂಗಲ ನಗರ ಸುತ್ತ ಮುತ್ತ ಎಣ್ಣೆ, ಗಾಂಜಾ, ಡ್ರಗ್ಸ್ ಹಾವಳಿ ಜಾಸ್ತಿಯಾಗಿದೆ ಎಂದು ಹೇಳಲಾಗುತ್ತಿದೆ. ಇಂತ ಒಂದು ಘಟನೆಗಳಿಂದಲೇ ಯುವಕನ ಕೊಲೆಯಾಗಿದೆ ಅಂತಾರೆ ಸ್ಥಳೀಯ ಜನರು. ಕೊಲೆ ಪ್ರಕರಣದಲ್ಲಿ ತಗಲಾಕಿಕೊಂಡ ಮೂರು ಜನ ಅರೋಪಿಗಳನ್ನ ನೆಲಮಂಗಲ ಟೌನ್ ಪೋಲಿಸರು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Published by: Ganesh Nachikethu
First published: August 7, 2020, 7:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading