Karnataka: PG MDS 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ, ರಿಸಲ್ಟ್​ ನೋಡಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ನೀಟ್​​ ಪಿಜಿ ಎಂಡಿಎಸ್​ 2021 ಕೌನ್ಸೆಲಿಂಗ್(Counselling)​ ಡಿಸೆಂಬರ್ 5, 2021ರಂದು ಆಯ್ಕೆಯ ಪ್ರವೇಶದೊಂದಿಗೆ ಪ್ರಾರಂಭವಾಯಿತು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka NEET PG MDS 2021: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಅಥವಾ NEET PG MDS 2021 ನ ಕೌನ್ಸೆಲಿಂಗ್​ನ್ನು ನಡೆಸುತ್ತಿದೆ.  ಪಿಜಿ ಡೆಂಟಲ್​​(MDS) ಕೋರ್ಸ್​ ಪ್ರವೇಶಕ್ಕೆ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಡಿಸೆಂಬರ್ 23, 2021 ರಂದು ಪ್ರಕಟವಾಗಿದ್ದು, ಅಭ್ಯರ್ಥಿಗಳು PGCET ಫಲಿತಾಂಶವನ್ನು ಅಧಿಕೃತ ವೆಬ್​ಸೈಟ್​ kea.kar.nic.in ನಲ್ಲಿ ನೋಡಬಹುದು.

 ಕರ್ನಾಟಕ ನೀಟ್​​ ಪಿಜಿ ಎಂಡಿಎಸ್​ 2021 ಕೌನ್ಸೆಲಿಂಗ್(Counselling)​ ಡಿಸೆಂಬರ್ 5, 2021ರಂದು ಆಯ್ಕೆಯ ಪ್ರವೇಶದೊಂದಿಗೆ ಪ್ರಾರಂಭವಾಯಿತು. ನಂತರ ಅಣುಕು ಸೀಟು ಹಂಚಿಕೆ ಮತ್ತು 1ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: Karnataka Dams Water Level: ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಿದ ಬಳಿಕ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ?

ಅಭ್ಯರ್ಥಿಗಳು ತಮ್ಮ ಸೀಟು ಹಂಚಿಕೆ ಫಲಿತಾಂಶಗಳನ್ನು ಪರಿಶೀಲಿಸಿದ ನಂತರ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಡಿಸೆಂಬರ್ 27, 2021ರವರೆಗೆ ಶುಲ್ಕ ಪಾವತಿಸಬಹುದು. ನಂತರ ಕಾಲೇಜುಗಳಿಗೆ ರಿಪೋರ್ಟಿಂಗ್​ ಮಾಡಬೇಕು. ಅತ್ಯಂತ ಸುಲಭವಾಗಿ PGCET ಫಲಿತಾಂಶವನ್ನು ಹೇಗೆ ನೋಡುವುದು ಎಂದು ಯೋಚಿಸುತ್ತಿದ್ದರೆ, ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ.

Karnataka NEET PG MDS 2021: ಸೀಟು ಹಂಚಿಕೆ ಫಲಿತಾಂಶ ನೋಡುವುದು ಹೇಗೆ?

1. 2 ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಪರಿಶೀಲಿಸಲು, ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ - kea.kar.nic.in ಗೆ ಭೇಟಿ ನೀಡಬೇಕು.

2. ಮುಖಪುಟದಲ್ಲಿ ಕಾಣಸಿಗುವ, 'NEET PG MDS - ಎರಡನೇ ಸುತ್ತಿನ ಫಲಿತಾಂಶ' ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ.

3. ಅಥವಾ, ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸಲು ಇಲ್ಲಿ ಹಂಚಿಕೊಂಡಿರುವ ನೇರ ಲಿಂಕ್ ಅನ್ನು ಕ್ಲಿಕ್ ಮಾಡಬಹುದು - ಕರ್ನಾಟಕ NEET PG MDS 2021.

4. PGET ಸಂಖ್ಯೆಯಂತಹ ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ನಂತರ ಸಲ್ಲಿಸು(Submit) ಕ್ಲಿಕ್ ಮಾಡಿ.

ಇದನ್ನೂ ಓದಿ: Karnataka Bandh: ಕರ್ನಾಟಕ ಬಂದ್ ಡಿಸೆಂಬರ್ 30 ಅಥವಾ 31? ಬಂದ್ ಬಗ್ಗೆ ಎಲ್ಲಾ ಗೊಂದಲಗಳಿಗೆ ಇಲ್ಲಿದೆ ಉತ್ತರ

5. ಬಳಿಕ, ನಿಮ್ಮ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಲಭ್ಯವಾಗುತ್ತದೆ.

6. ಕಾಲೇಜು ಅಡ್ಮಿಶನ್​​ ಉದ್ದೇಶಗಳಿಗಾಗಿ ಫಲಿತಾಂಶದ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

7. ಕರ್ನಾಟಕದ ಕಾಲೇಜುಗಳು ನೀಡುವ ವಿವಿಧ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಕರ್ನಾಟಕ NEET PG MDS 2021 ಕೌನ್ಸೆಲಿಂಗ್ ಮಾಡಲಾಗುತ್ತಿದೆ.

8.ಕಾಲೇಜುಗಳಿಗೆ ರಿಪೋರ್ಟಿಂಗ್​ ಮಾಡಲು ಕೊನೆಯ ದಿನಾಂಕ ಡಿಸೆಂಬರ್ 28, 2021.
Published by:Latha CG
First published: