Karnataka Monsoon 2021: ಕರ್ನಾಟಕದಲ್ಲಿ ಮುಂಗಾರು ಮಳೆ ಯಾವಾಗ ಶುರು? ಎಲ್ಲೆಲ್ಲಿ ಯಾವತ್ತು ಮಳೆಯಾಗುತ್ತೆ?

ಜೂನ್​ ತಿಂಗಳ ಮಧ್ಯಭಾಗದಿಂದ ಆಚೆಗೆ ಮುಂಗಾರು ಮಳೆಯ ಪ್ರಭಾವ ಹೆಚ್ಚಾಗುವ ಸಾಧ್ಯತೆ ಇದೆ. ಜೂನ್​ ತಿಂಗಳ ಮೂರನೇ ವಾರದಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಜೂ.04): ಕರ್ನಾಟಕದಲ್ಲಿ ಮುಂಗಾರು ಮಳೆ ಆಗಮನಕ್ಕಾಗಿ ಕ್ಷಣಗಣನೆ ಶುರುವಾಗಿದೆ. ರೈತವರ್ಗ ಆಕಾಶದತ್ತ ಮುಖಮಾಡಿ ಮಳೆರಾಯನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇದೇ ವೇಳೆ ಇದೇ ಜೂನ್​ 6 ಅಥವಾ7ರಂದು ಮುಂಗಾರು ಮಳೆ ಕರ್ನಾಟಕ ಪ್ರವೇಶಿಸಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.ಈಗಾಗಲೇ ನಿನ್ನೆ ಕೇರಳಕ್ಕೆ ಮಾನ್ಸೂನ್​ ಎಂಟ್ರಿ ಕೊಟ್ಟಿದೆ. ಮುಂಬರುವ ದಿನಗಳಲ್ಲಿ ಕರ್ನಟಕದಲ್ಲಿಯೂ ಮುಂಗಾರು ಮಳೆಯ ಆರ್ಭಟ ಶುರುವಾಗಲಿದೆ. ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಮಾನ್ಸೂನ್​ ಮಳೆಯಾಗಲಿದೆ.

  ಈ ಬಾರಿ ಸ್ವಲ್ಪ ತಡವಾಗಿ ಮುಂಗಾರು ಮಳೆ ಕರ್ನಾಟಕ ಪ್ರವೇಶ ಮಾಡಲಿದೆ.ಮುಂದಿನ ವಾರ ರಾಜ್ಯದಲ್ಲಿ ಮುಂಗಾರು ಮಳೆಯ ಸಿಂಚನ ಆರಂಭವಾಗಲಿದೆ. ಈ ವರ್ಷ ಹೆಚ್ಚು ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.

  ಜೂನ್​ ಮೊದಲಾರ್ಧ ತಿಂಗಳಿನಲ್ಲಿ ಮಾನ್ಸೂನ್ ನಿಧಾನಗತಿಯಲ್ಲಿ ಇರುತ್ತದೆ. ಕಳೆದ ತಿಂಗಳು ಮೇ 21 ಮತ್ತು 27ರ ನಡುವೆ ಎರಡು ಚಂಡಮಾರುತಗಳು ಅಬ್ಬರಿಸಿದ್ದವು. ತುಕ್ತೆ ಮತ್ತು ಯಾಸ್ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೂ ಬೀರಿತ್ತು. ಇದರ ಪರಿಣಾಮವಾಗಿ ಮೇ 31 ರಿಂದ ಜೂನ್​ 3ರ ನಡುವೆ ಕೇರಳಕ್ಕೆ ಮುಂಗಾರು ಮಳೆ ಪ್ರವೇಶ ಆಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರೀಕ್ಷಿಸಿತು. ಅದೇ ರೀತಿಯಾಗಿ ನಿನ್ನೆ ಕೇರಳಕ್ಕೆ ಮುಂಗಾರು ಮಳೆ ಕಾಲಿಟ್ಟಿದೆ.

  ಇದನ್ನೂ ಓದಿ:ರಾಮನಗರ ಕ್ಷೇತ್ರಕ್ಕೆ ನೆರವಿನ ಹಸ್ತ; ಅಂಬ್ಯುಲೆನ್ಸ್​ ಬಳಿಕ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡಿದ ನಿಖಿಲ್​

  ಜೂನ್​ ತಿಂಗಳ ಮಧ್ಯಭಾಗದಿಂದ ಆಚೆಗೆ ಮುಂಗಾರು ಮಳೆಯ ಪ್ರಭಾವ ಹೆಚ್ಚಾಗುವ ಸಾಧ್ಯತೆ ಇದೆ. ಜೂನ್​ ತಿಂಗಳ ಮೂರನೇ ವಾರದಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಜೂನ್​ ತಿಂಗಳ ಮೊದಲ ಎರಡು ವಾರಗಳಲ್ಲಿ ಮುಂಗಾರು ಮಳೆಯ ಪ್ರಭಾವ ಕಡಿಮೆ ಇರುತ್ತದೆ.

  ಈ ಮೊದಲು ಜೂನ್ 1ರಂದು ನೈರುತ್ಯ ಮಾನ್ಸೂನ್​ ಕೇರಳಕ್ಕೆ ಆಗಮಿಸುತ್ತದೆ. ಬಳಿಕ ನೆರೆಯ ರಾಜ್ಯವಾದ ಕರ್ನಾಟಕಕ್ಕೆ ಕಾಲಿಡಲು 2-3 ದಿನ ಬೇಕು ಎನ್ನಲಾಗಿತ್ತು. ಆದರೆ ಎರಡು ದಿನ ತಡವಾಗಿ ಮಾನ್ಸೂನ್​ ಕೇರಳಕ್ಕೆ ಪ್ರವೇಶಿಸಿದೆ. ಹೀಗಾಗಿ ಕರ್ನಾಟಕಕ್ಕೂ ಮಾನ್ಸೂನ್ ಆಗಮನ ತಡವಾಗಲಿದೆ. ಜೂನ್​ 7ರಂದು ಕರುನಾಡಿಗೆ ಮುಂಗಾರು ಮಳೆ ಬರುವ ನಿರೀಕ್ಷೆ ಇದೆ.

  ನಿನ್ನೆ ನೈಋತ್ಯ ಮುಂಗಾರು ಕೇರಳವನ್ನು ಪ್ರವೇಶಿಸಲಿದೆ. ಹೀಗಾಗಿ, ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಕರ್ನಾಟಕಕ್ಕೆ ಜೂನ್ 6 ಅಥವಾ 7ರಂದು ಮುಂಗಾರು ಆಗಮನವಾಗುವ ನಿರೀಕ್ಷೆಯಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಜಾಸ್ತಿಯಾದ ಹಿನ್ನೆಲೆ ಮಳೆಯಾಗುತ್ತಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಇನ್ನು ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆಗಳಿವೆ.

  ಇದನ್ನೂ ಓದಿ:ಶುಭ ಶುಕ್ರವಾರದ ದಿನ ಲಕ್ಷ್ಮಿ ನಿಮಗೆ ಒಲಿಯಬೇಕೆಂದರೆ ಏನು ಮಾಡಬೇಕು ? ಸ್ಪಷ್ಟ ಉತ್ತರ ಇಲ್ಲಿದೆ !

  ಜೂನ್ 5ರವರೆಗೆ ಕೇರಳ ಮತ್ತು ಮಾಹೆ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮೂರು ದಿನ ಭಾರೀ ಮಳೆಯಾಗಲಿದೆ. ಈಗಾಗಲೇ ಕೇರಳ, ಅಸ್ಸಾಂ, ಮೇಘಾಲಯ, ಆಂಧ್ರಪ್ರದೇಶದ ಕರಾವಳಿ ಪ್ರದೇಶ, ಅರುಣಾಚಲ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲೂ ಇಂದು ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  ಕರ್ನಾಟಕದ ಧಾರವಾಡ, ಬೆಳಗಾವಿ, ಗದಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಶಿವಮೊಗ್ಗ, ಹಾಸನ, ಕೊಡಗು, ಕೋಲಾರ, ಚಾಮರಾಜನಗರ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರ್ಗಿ, ಬೀದರ್, ಚಿಕ್ಕಮಗಳೂರಿನಲ್ಲಿ ಇಂದಿನಿಂದ ಮಳೆಯ ಅಬ್ಬರ ಹೆಚ್ಚಾಗಲಿದೆ.

  ಕರ್ನಾಟಕದಲ್ಲಿ ಇನ್ನು ಮೂರು ದಿನಗಳೊಳಗೆ ಮುಂಗಾರು ಪ್ರವೇಶವಾಗಲಿದ್ದು, ಮಳೆಗಾಲ ಶುರುವಾಗಲಿದೆ ಎಂದು ಕರ್ನಾಟಕ ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಣೆ ಆಗಿರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಇಂದು ಕರ್ನಾಟಕ ಮಾತ್ರವಲ್ಲದೆ ಕೇರಳ, ಗುಜರಾತ್, ಮಹಾರಾಷ್ಟ್ರ, ಅರುಣಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
  Published by:Latha CG
  First published: