ವಿಧಾನಪರಿಷತ್ ಚುನಾವಣೆ ದಿನಾಂಕ ಪ್ರಕಟ: ಜೂನ್ 29ಕ್ಕೆ 7 ಸ್ಥಾನಗಳಿಗೆ ಚುನಾವಣೆ

ಈ ಏಳು ಸ್ಥಾನಗಳ ಪೈಕಿ ಸದ್ಯದ ವಿಧಾನಸಭೆ ಬಲಾಬಲದ ಆಧಾರದ ಮೇಲೆ ಬಿಜೆಪಿಗೆ 4 ಸ್ಥಾನ ಸಿಗುವುದು ಖಚಿತವಾಗಿದೆ. ಕಾಂಗ್ರೆಸ್​ಗೆ 2 ಸ್ಥಾನ ಸಿಗಬಹುದು. ಜೆಡಿಎಸ್​ಗೆ ಒಂದು ಸ್ಥಾನ ದಕ್ಕಬಹುದು.

 ವಿಧಾನಸೌಧ

ವಿಧಾನಸೌಧ

  • Share this:
ಬೆಂಗಳೂರು(ಜೂನ್ 09): ರಾಜ್ಯಸಭಾ ಚುನಾವಣೆಯಾದ 10 ದಿನದಲ್ಲಿ ವಿಧಾನಪರಿಷತ್ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಇವತ್ತು ವಿಧಾನಪರಿಷತ್ ಚುನಾವಣೆಯ ದಿನಾಂಕ ಪ್ರಕಟಿಸಿದೆ. ಜೂನ್ 29ಕ್ಕೆ ಎಂಎಲ್​ಸಿ ಎಲೆಕ್ಷನ್ಸ್ ನಡೆಯಲಿದೆ. ಒಟ್ಟು ಏಳು ಸ್ಥಾನಗಳಿಗೆ ಚುನಾವಣೆಯಾಗಲಿದೆ. ಜೂನ್ 29ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.

ನಸೀರ್ ಅಹ್ಮದ್, ಜಯಮ್ಮ, ಎಂ.ಸಿ. ವೇಣುಗೋಪಾಲ್, ಹೆಚ್.ಎಂ. ರೇವಣ್ಣ, ಟಿ.ಎ. ಸರವಣ, ಡಿ.ಯು. ಮಲ್ಲಿಕಾರ್ಜುನ್, ಎನ್.ಎಸ್. ಬೋಸರಾಜು ಅವರ ಪರಿಷತ್ ಸದಸ್ಯತ್ವವ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಆ ಸ್ಥಾನ ಭರ್ತಿಗೆ ಚುನಾವಣೆಯಾಗುತ್ತಿದೆ.

ಈ ಏಳು ಸ್ಥಾನಗಳ ಪೈಕಿ ಸದ್ಯದ ವಿಧಾನಸಭೆ ಬಲಾಬಲದ ಆಧಾರದ ಮೇಲೆ ಬಿಜೆಪಿಗೆ 4 ಸ್ಥಾನ ಸಿಗುವುದು ಖಚಿತವಾಗಿದೆ. ಕಾಂಗ್ರೆಸ್​ಗೆ 2 ಸ್ಥಾನ ಸಿಗಬಹುದು. ಜೆಡಿಎಸ್​ಗೆ ಒಂದು ಸ್ಥಾನ ದಕ್ಕಬಹುದು. ಈಗಾಗಲೇ ಈ ಮೂರೂ ಪಕ್ಷಗಳಲ್ಲಿ ಎಂಎಲ್​ಸಿ ಟಿಕೆಟ್​ಗಾಗಿ ವಿಪರೀತ ಸ್ಪರ್ಧೆ ಏರ್ಪಟ್ಟಿದೆ.

ಇದನ್ನೂ ಓದಿ: ಬಗೆದು ತೋರಿಸಲಾ?: ಯಡಿಯೂರಪ್ಪ ವಿಚಾರಕ್ಕೆ ಎದೆ ಮುಟ್ಟಿಕೊಂಡ ರೇಣುಕಾಚಾರ್ಯ

ಬಿಜೆಪಿಯಲ್ಲಿ ಆಕಾಂಕ್ಷಿಗಳು:

ಬಿಜೆಪಿಯಲ್ಲಂತೂ ಆಕಾಂಕ್ಷಿಗಳ ಪಟ್ಟಿ ಸಾಕಷ್ಟು ದೊಡ್ಡದೇ ಇದೆ. ಅವರ ಪೈಕಿ ಆರ್. ಶಂಕರ್, ಎಂ.ಟಿ.ಬಿ. ನಾಗರಾಜ್, ಹೆಚ್. ವಿಶ್ವನಾಥ್, ಸಿ.ಪಿ. ಯೋಗೇಶ್ವರ್, ಎ.ಹೆಚ್. ಆನಂದ್, ನಿರ್ಮಲ್ ಕುಮಾರ್ ಸುರಾನ, ಮಾಲಿಕಯ್ಯ ಗುತ್ತೇದಾರ್, ಭಾರತಿ ಶೆಟ್ಟಿ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.

ಕಳೆದ ವಿಧಾನಸಭೆಯಲ್ಲಿ ರಾಣೆಬೆನ್ನೂರು ಸೀಟು ತ್ಯಾಗ ಮಾಡಿದ್ದ ಆರ್. ಶಂಕರ್ ಅವರು ಪ್ರಬಲ ಆಕಾಂಕ್ಷಿ ಎನಿಸಿದ್ಧಾರೆ. ಬಿಜೆಪಿಯ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿ.ಪಿ. ಯೋಗೇಶ್ವರ್ ಕೂಡ ಪರಿಷತ್ ಸದಸ್ಯರಾಗುವ ನಿರೀಕ್ಷೆಯಲ್ಲಿದ್ಧಾರೆ. ಬಿ.ಎಲ್. ಸಂತೋಷ್ ಜೊತೆ ಉತ್ತಮ ಸಂಬಂಧ ಹೊಂದಿರುವ ಅವರು ಈ ಬಾರಿ ನಿರೀಕ್ಷೆ ಹುಸಿಯಾಗುವುದಿಲ್ಲ ಎಂದು ನಂಬಿದ್ಧಾರೆ. ವಿಧಾನಸಭೆಯಲ್ಲಿ ಸೋಲುಂಡಿದ್ದ ಎಂಟಿಬಿ ನಾಗರಾಜ್ ಮತ್ತು ಹೆಚ್ ವಿಶ್ವನಾಥ್ ಅವರೂ ಟಿಕೆಟ್ ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹೆಚ್ ಡಿ ದೇವೇಗೌಡ

ಕಾಂಗ್ರೆಸ್​ನಲ್ಲಿನ ಟಿಕೆಟ್ ಆಕಾಂಕ್ಷಿಗಳು:

ಕಾಂಗ್ರೆಸ್​ನಲ್ಲೂ ಬಹಳಷ್ಟು ಮಂದಿ ಹಿಂಬಾಗಿಲ ಮೂಲಕ ವಿಧಾನಸೌಧ ಪ್ರವೇಶಿಸಲು ಇಚ್ಛಿಸಿದ್ಧಾರೆ. ಹೆಚ್.ಎಂ. ರೇವಣ್ಣ, ಎಂ. ರಾಮಚಂದ್ರಪ್ಪ, ನಸೀಸ್ ಅಹ್ಮದ್, ಎಂ.ಡಿ. ಲಕ್ಷ್ಮೀನಾರಾಯಣ, ಐವಾನ್ ಡಿಸೋಜ, ವಿ.ಎಸ್. ಉಗ್ರಪ್ಪ, ಜಯಮಾಲಾ, ಭಾರತಿ ಶಂಕರ್ ಅವರು ಪರಿಷತ್ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆನ್ನಲಾಗಿದೆ. ಕಾಂಗ್ರೆಸ್ ಪಾಲಿಗೆ ಸಿಗುವ ಎರಡು ಟಿಕೆಟ್ ಪೈಕಿ ಒಂದು ಹೆಚ್.ಎಂ. ರೇವಣ್ಣ ಪಾಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸರ್ಕಾರ ಇರೋದು ಕಾರ್ಖಾನೆ ನಡೆಸುವುದಕ್ಕಲ್ಲ- ಎಲ್ಲ ಸಕ್ಕರೆ ಕಾರ್ಖಾನೆಗಳನ್ನ ಖಾಸಗೀಕರಣ ಮಾಡಲಿ; ಮುರುಗೇಶ ನಿರಾಣಿ

ಜೆಡಿಎಸ್ ಆಕಾಂಕ್ಷಿಗಳು:

ಜೆಡಿಎಸ್​ಗೆ ದಕ್ಕುವ ಒಂದು ಸ್ಥಾನಕ್ಕಾಗಿ ಮೂವರು ಪ್ರಬಲ ಪೈಪೋಟಿ ನಡೆಸಿದ್ದಾರೆ. ಹಾಲಿ ಎಂಎಲ್​ಸಿ ಟಿಎ ಸರವಣ ಅವರು ಮರುಆಯ್ಕೆ ಬಯಸಿದ್ದಾರೆ. ಕೋನರೆಡ್ಡಿ ಮತ್ತು ಕುಪೇಂದ್ರ ರೆಡ್ಡಿ ಕೂಡ ಟಿಕೆಟ್ ಪಡೆಯಲು ಇಚ್ಛಿಸಿದ್ದಾರೆನ್ನಲಾಗಿದೆ.
First published: