HOME » NEWS » State » KARNATAKA MLC ELECTION SAVADI AND ANIL KUMAR IN CONTENTION AS NOMINATION OF PADMARAJAN GETS REJECTED SNVS

ವಿಧಾನಪರಿಷತ್ ಚುನಾವಣೆ: ಪದ್ಮರಾಜನ್ ನಾಮಪತ್ರ ತಿರಸ್ಕೃತ; ಸವದಿ, ಅನಿಲ್ ಮಾತ್ರ ಕಣದಲ್ಲಿ

ಫೆ. 17ರಂದು ಚುನಾವಣೆ ನಡೆಯಲಿದೆ. ವಿಧಾನಸಭೆಯಲ್ಲಿ ಒಬ್ಬ ನಾಮನಿರ್ದೇಶಿತ ಸದಸ್ಯರು ಸೇರಿ ಸದ್ಯದ ಬಲಾಬಲ 223 ಇದೆ. ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದರಿಂದ ಮತಮೌಲ್ಯದ ಲೆಕ್ಕಾಚಾರದ ಬದಲು ಗರಿಷ್ಠ ಸಂಖ್ಯೆಯಲ್ಲಿ ಮತಗಳನ್ನು ಪಡೆದವರು ಜಯಶಾಲಿಯಾಗಲಿದ್ದಾರೆ.

news18
Updated:February 7, 2020, 4:52 PM IST
ವಿಧಾನಪರಿಷತ್ ಚುನಾವಣೆ: ಪದ್ಮರಾಜನ್ ನಾಮಪತ್ರ ತಿರಸ್ಕೃತ; ಸವದಿ, ಅನಿಲ್ ಮಾತ್ರ ಕಣದಲ್ಲಿ
ಡಿಸಿಎಂ ಲಕ್ಷ್ಮಣ ಸವದಿ.
  • News18
  • Last Updated: February 7, 2020, 4:52 PM IST
  • Share this:
ಬೆಂಗಳೂರು(ಫೆ. 07): ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾಗಿರುವ ಒಂದು ಪರಿಷತ್​ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಅಂತಿಮವಾಗಿ ಇಬ್ಬರು ಸ್ಪರ್ಧಿಗಳು ಉಳಿದುಕೊಂಡಿದ್ಧಾರೆ. ಬಿಜೆಪಿಯ ಲಕ್ಷ್ಮಣ ಸವದಿ ಮತ್ತು ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬಿ.ಆರ್. ಅನಿಲ್ ಕುಮಾರ್ ಅವರು ಮಾತ್ರ ಕಣದಲ್ಲಿದ್ಧಾರೆ. ಮೂರನೇ ಅಭ್ಯರ್ಥಿ ಪದ್ಮರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಇಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ನಾಮಪತ್ರ ಪರಿಶೀಲನೆ ನಡೆಸಿದರು. ಪದ್ಮರಾಜನ್ ಅವರಿಗೆ ಸೂಚಕರಿಲ್ಲದಿರುವುದು ಅವರ ನಾಮಪತ್ರ ತಿರಸ್ಕೃತಗೊಳ್ಳಲು ಕಾರಣವೆನ್ನಲಾಗಿದೆ.

ಈಗ ಲಕ್ಷ್ಮಣ ಸವದಿ ಮತ್ತು ಅನಿಲ್ ಕುಮಾರ್ ಮಧ್ಯೆ ನೇರ ಪೈಪೋಟಿ ನಡೆಯುವುದು ನಿಶ್ಚಿತವಾಗಿದೆ. ಅವಿರೋಧ ಆಯ್ಕೆಯ ಗುಂಗಿನಲ್ಲಿದ್ದ ಲಕ್ಷ್ಮಣ ಸವದಿಗೆ ಈಗ ಮುಜುಗರದ ಕ್ಷಣಗಳು ಎದುರಾಗಿವೆ. ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯೊಳಗೆ ಎದ್ದಿರುವ ಅಸಮಾಧಾನದ ಹೊಗೆಯನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಗೆಲುವಿನ ಸಾಧ್ಯತೆಯನ್ನು ಗ್ರಹಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಮ್ಮತದಿಂದ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿವೆ. ಸವದಿ ಅವರ ಸುಲಭ ಗೆಲುವಿನ ಓಟಕ್ಕೆ ತೊಡರುಗಾಲು ಹಾಕಿವೆ.

ಇದನ್ನೂ ಓದಿ: ಯಡಿಯೂರಪ್ಪ ಅತ್ಯಂತ ದುರ್ಬಲ ಸಿಎಂ - ಕೇಂದ್ರದ ಬಳಿ ಹಣ ಕೇಳುವ ತಾಕತ್ತಿಲ್ಲ ; ಸಿದ್ಧರಾಮಯ್ಯ ಕಿಡಿ

ಫೆ. 17ರಂದು ಚುನಾವಣೆ ನಡೆಯಲಿದೆ. ವಿಧಾನಸಭೆಯಲ್ಲಿ ಒಬ್ಬ ನಾಮನಿರ್ದೇಶಿತ ಸದಸ್ಯರು ಸೇರಿ ಸದ್ಯದ ಬಲಾಬಲ 223 ಇದೆ. ಒಂದೇ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದರಿಂದ ಮತಮೌಲ್ಯದ ಲೆಕ್ಕಾಚಾರದ ಬದಲು ಗರಿಷ್ಠ ಸಂಖ್ಯೆಯಲ್ಲಿ ಮತಗಳನ್ನು ಪಡೆದವರು ಜಯಶಾಲಿಯಾಗಲಿದ್ದಾರೆ. ಹಾಗೆಯೇ, ಗೌಪ್ಯ ಮತದಾನ ನಡೆಯಲಿರುವುದೂ ಕೂಡ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದರಿಂದಾಗಿ ಕ್ರಾಸ್ ವೋಟಿಂಗ್ ಸುಲಭವಾಗಲಿದೆ. ಈ ಹಿನ್ನೆಲೆಯಲ್ಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಗೆಲುವಿನ ವಾಸನೆ ಹಿಡಿದಿವೆ.

ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿರುವುದು ಪಕ್ಷದಲ್ಲಿ ಅನೇಕರಿಗೆ ನಿದ್ದೆಗೆಡಿಸಿದೆ. ಮೂಲ ಬಿಜೆಪಿಗರಲ್ಲೂ ಅಸಮಾಧಾನಗಳಿವೆ. ಪಕ್ಷಾಂತರ ಮಾಡಿದವರಲ್ಲೂ ಕೆಲವರು ಬುಸುಗುಡುತ್ತಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Youtube Video
First published: February 7, 2020, 4:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories