Basavaraj Horatti: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 8ನೇ ಬಾರಿಗೆ ಗೆದ್ದು ದಾಖಲೆ ಬರೆದ ಬಸವರಾಜ ಹೊರಟ್ಟಿ

ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಶಿಕ್ಷಕರ ಬೇಡಿಕೆ ಈಡೇರಿಕೆಗೆ ನಾನು ಸದಾ ಬದ್ದ. ಸಭಾಪತಿ ಆಗಿದ್ದರಿಂದ ಹೋರಾಟ ನಡೆಸಲು ಆಗಿರಲಿಲ್ಲ. ಈಗ ಮತ್ತಷ್ಟು ಹೋರಾಟ ನಡೆಸಲಿದ್ದೇನೆ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಬಸವರಾಜ ಹೊರಟ್ಟಿ

ಬಸವರಾಜ ಹೊರಟ್ಟಿ

  • Share this:
ಬೆಳಗಾವಿ (ಜೂ 15): ಶಿಕ್ಷಕರ ಮತಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ಪಶ್ಚಿಮ ಶಿಕ್ಷಕರ ಮತಕ್ಷೇತ್ರದಲ್ಲಿ (West Teachers Constituency) ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ (Basavaraj Horatti) ಅವರು ಗೆಲವು ಸಾಧಿಸುವ ಮೂಲಕ 8ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ದಾರೆ. ಗೆಲುವಿನ ಬೇಕಾಗಿದ್ದ ಮತಗಳನ್ನು ಸುಲಭವಾಗಿ ಪಡೆದ ಹೊರಟ್ಟಿ ಇನ್ನೂ 4 ಸಾವಿರ ಮತಗಳ ಎಣಿಕೆ ಬಾಕಿ ಇರುವಾಗಲೇ ಜಯದ ನಗೆ ಬೀರಿದ್ದಾರೆ. ಗೆಲುವಿನ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ವೇಳೆಗೆ ಹೊರಟ್ಟಿ ಅವರು 7500 ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ. ವಿಧಾನಪರಿಷತ್​ನ 2 ಶಿಕ್ಷಕರು ಹಾಗೂ 2 ಪದವೀಧರರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆಯ (Election) ಮತ ಎಣಿಕೆ ಇಂದು ಬೆಳಗ್ಗೆ ಆರಂಭಗೊಂಡಿದ್ದು, ಸಂಜೆಯೊಳಗೆ ನಾಲ್ಕು ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.

ಕಾಂಗ್ರೆಸ್​, ಜೆಡಿಎಸ್​ ಸ್ಪರ್ಧಿಗಳಿಗೆ ಮುಖಭಂಗ

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ 76ರ ಹರೆಯದ ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಜೆಡಿಎಸ್ ನ ಶ್ರೀಶೈಲ ಗಡದಿನ್ನಿ, ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಕಣದಲ್ಲಿದ್ದರು. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಬಸವರಾಜ್ ಹೊರಟ್ಟಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್​​ನ ಬಸವರಾಜ್ ಗುರಿಕಾರ ಹಾಗೂ ಜೆಡಿಎಸ್‌ನ ಶ್ರೀಶೈಲ ಗಿಡದಿನ್ನಿ ಮುಖಭಂಗ ಅನುಭವಿಸಿದ್ದಾರೆ.

ಆದರೆ, ಹೆಚ್ಚಿನ ತಿರಸ್ಕಾರಗೊಂಡ ಮತಗಳಿಂದ ಹೊರಟ್ಟಿಯವರ ಲೀಡ್ ಪ್ರಮಾಣ ಕುಸಿತ ಕಂಡಿದೆ. ತಿರಸ್ಕಾರಗೊಂಡ ಬಹುತೇಕ ಮತಗಳು ಹೊರಟ್ಟಿಗೆ ಚಲಾವಣೆಗೊಂಡಿದ್ದವು ಎಂದು ತಿಳಿದುಬಂದಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರ ಬಸವರಾಜ ಹೊರಟ್ಟಿ - 7076 ಬಸವರಾಜ ಗುರಿಕಾರ- 3314 ಮತ ಬಂದಿದೆ.

ಇದನ್ನೂ ಓದಿ: MLC Election Results: ಇಂದು ವಿಧಾನ ಪರಿಷತ್ ಚುನಾವಣೆ ಫಲಿತಾಂಶ; 4 ಸ್ಥಾನ, 49 ಅಭ್ಯರ್ಥಿಗಳು

ಶಿಕ್ಷಕರಿಗೆ ಉಂಟಾಗೋ ಸಮಸ್ಯೆ ಎದುರಿಸುವೆ

'ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರಿಗೆ ಕಾಲಕಾಲಕ್ಕೆ ಎದುರಾಗುವ ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡುತ್ತೇನೆ' ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 8ನೇ ಬಾರಿ ಗೆಲುವು ಸಾಧಿಸಿದ ಬಸವರಾಜ ಹೊರಟ್ಟಿ ಹೇಳಿದರು. ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಶಿಕ್ಷಕರ ಬೇಡಿಕೆ ಈಡೇರಿಕೆಗೆ ನಾನು ಸದಾ ಬದ್ದ. ಸಭಾಪತಿ ಆಗಿದ್ದರಿಂದ ಹೋರಾಟ ನಡೆಸಲು ಆಗಿರಲಿಲ್ಲ. ಈಗ ಮತ್ತಷ್ಟು ಹೋರಾಟ ನಡೆಸಲಿದ್ದೇನೆ ಎಂದರು. ಮುಂದೆ ಸಭಾಪತಿ ಅಥವಾ ಸಚಿವ ಸ್ಥಾನ ಪಕ್ಷಕ್ಕೆ ಬಿಟ್ಟ ವಿಷಯ ಎಂದು ಪ್ರಶ್ನೆಯೊಂದಕ್ಕೆ ಹೇಳಿದರು.

ಮೈಸೂರಲ್ಲಿ ಕಾಂಗ್ರೆಸ್​ಗೆ ಮುನ್ನಡೆ

ಮೈಸೂರು: ವಿಧಾನಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪರಿಗಣಿಸಲಾಗುತ್ತಿದೆ. ಇಲ್ಲಿನ ಮಹರ್ಷಿ ವಾಲ್ಮೀಕಿ ರಸ್ತೆಯ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಎಣಿಕೆ ನಡೆಯುತ್ತಿದ್ದು, ಮಧ್ಯಾಹ್ನ 1.10ರ ವೇಳೆಗೆ ಎಣಿಕೆಯಾಗಿರುವ ಮತಗಳ ಪ್ರಮಾಣವನ್ನು ಗಮನಿಸಿದರೆ ಕಾಂಗ್ರೆಸ್ (ಮಧು ಜಿ.ಮಾದೇಗೌಡ) ಮುನ್ನಡೆ ಕಾಯ್ದುಕೊಂಡಿದೆ. 2ನೇ ಸ್ಥಾನದಲ್ಲಿ ಬಿಜೆಪಿ (ಮೈ.ವಿ. ರವಿಶಂಕರ್ ) ಇದೆ. 28 ಟೇಬಲ್‌ಗಳಲ್ಲಿ ಎಣಿಕೆ ನಡೆಯುತ್ತಿದ್ದು, ಪ್ರತಿ ಟೇಬಲ್‌ಗಳಲ್ಲೂ ನೂರು ಮತಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಬಹುತೇಕ ಮತಗಳು ಕಾಂಗ್ರೆಸ್ ಪಾಲಾಗಿವೆ. ಬಿಜೆಪಿಯಿಂದಲೂ ತೀವ್ರ ಪೈಪೋಟಿ ಕಂಡುಬಂದಿದೆ.

ಇದನ್ನು ಓದಿ:  Chitradurga: ಕಾಂಗ್ರೆಸ್​​​ನವರಿಗೂ ನೋವು ಗೊತ್ತಾಗಲಿ! ಪ್ರತಿಭಟನೆಗೆ ರಾಮುಲು ಟಾಂಗ್

ಜೆಡಿಎಸ್‌ನ ಎಚ್.ಕೆ. ರಾಮು 3ನೇ ಸ್ಥಾನದಲ್ಲಿದ್ದಾರೆ. ರೈತ- ದಲಿತ ಚಳವಳಿಗಳ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪ್ರಸನ್ನ ಎನ್. ಗೌಡ ಅವರಿಗೂ ಪ್ರಥಮ ಪ್ರಾಶಸ್ತ್ಯದ ಮತಗಳು ಸಿಕ್ಕಿವೆ. ಪಕ್ಷೇತರರಲ್ಲಿ ಪ್ರಸನ್ನ ಮುಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿದವರು ಬಿಜೆಪಿಗೆ 2ನೇ ಪ್ರಾಶಸ್ತ್ಯದ ಮತಗಳನ್ನು ಕೊಟ್ಟಿರುವುದು ಕಂಡುಬಂದಿದೆ. ಬಿಜೆಪಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿದವರಲ್ಲಿ ಹೆಚ್ಚಿನವರು 2ನೇ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್‌ಗೆ ನೀಡಿದ್ದಾರೆ.
Published by:Pavana HS
First published: