ವಿಧಾನ ಪರಿಷತ್ ಚುನಾವಣೆ; ಬಿಜೆಪಿಯ ಅತಿ ಶ್ರೀಮಂತ ಅಭ್ಯರ್ಥಿ ಎಂಟಿಬಿ ನಾಗರಾಜ್ ಆಸ್ತಿ ಮೌಲ್ಯ 1,224 ಕೋಟಿಗೂ ಅಧಿಕ!

ವಿಧಾ‌ನ ಪರಿಷತ್ತಿಗೆ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿಗಳ ಆಸ್ತಿ ವಿವರದ ಮಾಹಿತಿ ಪ್ರಕಾರ, ಎಂಟಿಬಿ ನಾಗರಾಜ್ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಎಂಟಿಬಿ ನಾಗರಾಜ್ 1,224 ಕೋಟಿ ರೂ.ಗಿಂತ ಅಧಿಕ ಆಸ್ತಿ ಹೊಂದಿದ್ದಾರೆ.

ಎಂಟಿಬಿ ನಾಗರಾಜ್​​​

ಎಂಟಿಬಿ ನಾಗರಾಜ್​​​

  • Share this:
ಬೆಂಗಳೂರು (ಜೂ. 19): ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳು ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ. ಅತಿ ಶ್ರೀಮಂತ ಅಭ್ಯರ್ಥಿಯಾಗಿರುವ ಎಂಟಿಬಿ ನಾಗರಾಜ್ 1,224 ಕೋಟಿ ರೂ.ಗೂ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್​, ಕಾಂಗ್ರೆಸ್, ಬಿಜೆಪಿ ಪಕ್ಷಗಳ ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಎಂಟಿಬಿ ನಾಗರಾಜ್, ಪ್ರತಾಪ್ ಸಿಂಹ ನಾಯಕ್, ಸುನೀಲ್ ವಲ್ಯಾಪುರೆ, ಆರ್. ಶಂಕರ್, ಕಾಂಗ್ರೆಸ್​ನಿಂದ ಬಿ.ಕೆ. ಹರಿಪ್ರಸಾದ್, ನಜೀರ್ ಅಹಮದ್, ಜೆಡಿಎಸ್​ನಿಂದ ಇಂಚರ ಗೋವಿಂದರಾಜು ಅಭ್ಯರ್ಥಿಗಳಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ವಿಧಾ‌ನ ಪರಿಷತ್ತಿಗೆ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ನೀಡಿದ್ದಾರೆ. ಅದರ ಮಾಹಿತಿ ಇಲ್ಲಿದೆ. ನಾಮಪತ್ರ ಸಲ್ಲಿಕೆ ವೇಳೆ ನೀಡಿರುವ ಆಸ್ತಿ ವಿವರದ ಮಾಹಿತಿ ಪ್ರಕಾರ ಬಿಜೆಪಿಯ ಎಂಟಿಬಿ ನಾಗರಾಜ್ ಅತಿ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.  ಎಂಟಿಬಿ ನಾಗರಾಜ್ 1,224 ಕೋಟಿ ರೂ.ಗಿಂತ ಅಧಿಕ ಆಸ್ತಿಯನ್ನು ಹೊಂದಿದ್ದಾರೆ. ಅಪಾರ ಮೌಲ್ಯದ ಡೈಮೆಂಡ್, ಪ್ಲಾಟಿನಂ ಸೇರಿದಂತೆ ಚಿನ್ನಾಭರಣಗಳನ್ನು ಹೊಂದಿದ್ದಾರೆ. ಇದರ ಮಾಹಿತಿಯನ್ನು ಅವರು ಆಸ್ತಿ ವಿವರದಲ್ಲಿ ನೀಡಿದ್ದಾರೆ. ಎಂ.ಟಿ.ಬಿ.ನಾಗರಾಜ್ ಹೆಸರಲ್ಲಿ 884 ಕೋಟಿ ರೂ.ಗಿಂತ ಹೆಚ್ಚು ಆಸ್ತಿ ಇದೆ. ಪತ್ನಿ ಶಾಂತಕುಮಾರಿ ಹೆಸರಲ್ಲಿ 331 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಆಸ್ತಿಯಿದೆ. ಎಂಟಿಬಿ ನಾಗರಾಜ್ ಹೆಸರಲ್ಲಿ 461 ಕೋಟಿ ರೂ. ಮೌಲ್ಯದ ಚರಾಸ್ತಿ, 416 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಹೆಂಡತಿ 160 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 179 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಎಂಟಿಬಿ ನಾಗರಾಜ್ 52.75 ಕೋಟಿ ರೂ. ಸಾಲ ಹೊಂದಿದ್ದಾರೆ. ಅವರ ಪತ್ನಿ ಹೆಸರಲ್ಲಿ 1.97 ಕೋಟಿ ರೂ. ಸಾಲ ಇದೆ. ನಾಗರಾಜ್ ಅವರು 2.23 ಕೋಟಿ ರೂ. ಮೌಲ್ಯದ ಡೈಮೆಂಡ್, ಪ್ಲಾಟಿನಂ ಸೇರಿದಂತೆ ಚಿನ್ನಾಭರಣ ಹೊಂದಿದ್ದಾರೆ. ಪತ್ನಿಯ ಬಳಿ 1.48 ಕೋಟಿ ರೂ. ಮೌಲ್ಯದ ಡೈಮೆಂಡ್, ಪ್ಲಾಟಿನಂ ಸೇರಿದಂತೆ ಚಿನ್ನಾಭರಣ ಇದೆ. ನಾಗರಾಜ್ ಬಳಿ 32.60 ಲಕ್ಷ ರೂ. ನಗದು ಇದ್ದರೆ, ಪತ್ನಿ ಬಳಿ 45.60 ಲಕ್ಷ ರೂ. ನಗದು ಇದೆ. ಇವರು 2.48 ಕೋಟಿ ರೂ. ಮೌಲ್ಯದ ಐದು ಕಾರ್‌ಗಳನ್ನು ಹೊಂದಿದ್ದಾರೆ. ಈ ಪೈಕಿ 51.50 ಲಕ್ಷ ರೂ. ಮೌಲ್ಯದ ಲ್ಯಾಂಡ್ ರೋವರ್, 96.12 ಲಕ್ಷ ರೂ. ಮೌಲ್ಯದ ಮರ್ಸಿಡೀಸ್ ಬೆನ್ಜ್ ಕಾರ್, 29 ಲಕ್ಷ ರೂ. ಮೌಲ್ಯದ ಫಾರ್ಚೂನರ್ ದುಬಾರಿ ಮೌಲ್ಯದ ಕಾರ್‌ಗಳಿವೆ.

ಇದನ್ನೂ ಓದಿ: ಕಾಂಗ್ರೆಸ್​ನಿಂದ ನಸೀರ್, ಹರಿಪ್ರಸಾದ್ ಆಯ್ಕೆಯನ್ನ ಸಮರ್ಥಿಸಿಕೊಂಡ ಸಿದ್ದರಾಮಯ್ಯ, ಡಿಕೆಶಿ

ಬಿಜೆಪಿಯ ಇನ್ನೋರ್ವ ಅಭ್ಯರ್ಥಿ ಆರ್. ಶಂಕರ್ ವಿರುದ್ಧ ಮೂರು ಪ್ರಕರಣಗಳಿವೆ. ಅವರ ಬಳಿ ಒಟ್ಟು 166 ಕೋಟಿ ರೂ. ಆಸ್ತಿಯಿದೆ. 35,10,728 ರೂ. ನಗದು, ಪತ್ನಿ ಲಕ್ಷ್ಮಿ ಬಳಿ 27,77,600 ರೂ. ನಗದು, ನಗದು ಸೇರಿದಂತೆ ಬ್ಯಾಂಕ್‌ ಠೇವಣಿ, ಬಾಂಡ್ಸ್, ಷೇರ್ಸ್, ವಾಹನ, ಚಿನ್ನ ಆಭರಣ ಸೇರಿ‌ ಒಟ್ಟು ಮೌಲ್ಯ- 28,90,81,186 ರೂ. ಇದೆ ಎಂದು ವಿವರ ನೀಡಿದ್ದಾರೆ. ಹೆಂಡತಿಯ ಬಳಿ ನಗದು ಸೇರಿದಂತೆ ಬ್ಯಾಂಕ್‌ ಠೇವಣಿ, ಬಾಂಡ್ಸ್, ಷೇರ್ಸ್, ವಾಹನ, ಚಿನ್ನ ಆಭರಣ ಸೇರಿ‌ ಒಟ್ಟು ಮೌಲ್ಯ- 13,90,98,905 ರೂ. ಇದೆ. ಆರ್.ಶಂಕರ್ ಸ್ಥಿರಾಸ್ತಿ, ಜಮೀನು, ಮನೆ, ಕೃಷಿಯೇತರ ಆಸ್ತಿ‌ ಸೇರಿ 1,66,30,64,215 ರೂ. ಮೌಲ್ಯದ ಸಂಪತ್ತಿದೆ. ಹಾಗೇ, 44,63,35,597 ರೂ. ಸಾಲವಿದೆ. ಸ್ವಯಾರ್ಜಿತ ಆಸ್ತಿ‌ ಮೌಲ್ಯ - 12,83,21,876 ರೂ. ಪತ್ನಿ‌ ಹೆಸರಿನಲ್ಲಿರುವ ಆಸ್ತಿ ಮೌಲ್ಯ - 92,25,59,473 ರೂ., ಸಾಲ- 21,09,36,565 ರೂ. ಆರ್. ಶಂಕರ್ ಬ್ಯಾಂಕ್ ಉಳಿತಾಯ- 3,57,478 ರೂ. ಬಾಂಡ್, ಡಿಬೆಂಚೆರ್ಸ್, ಷೇರು ಮೌಲ್ಯ: 5,79,68,262 ರೂ. ಪತ್ನಿ‌ ಉಳಿತಾಯ ಹಣ- 94,619 ರೂ. ಬಾಂಡ್ಸ್, ಡಿಬೆಂಚರ್ಸ್, ಷೇರ್, ಮ್ಯೂಚ್ಯುಯಲ್ ಫಂಡ್ಸ್- 3,12,32,718 ರೂ. ಆರ್.ಶಂಕರ್ ವಾಹನಗಳ ಮೌಲ್ಯ: 1,27,28,795 ರೂ ಇದೆ.

ಇದನ್ನೂ ಓದಿ: ಬಿಜೆಪಿಗೆ ನಾನು ಹೈಕಮಾಂಡ್ ಅಲ್ಲ, ಹೆಚ್​. ವಿಶ್ವನಾಥ್​ಗೆ ಬುದ್ಧಿಯಿಲ್ಲ; ಸಿದ್ದರಾಮಯ್ಯ ತಿರುಗೇಟು

ಪ್ರತಾಪ್‌ ಸಿಂಹ ನಾಯಕ್ ಈ ಬಾರಿಯ ಬಿಜೆಪಿ ಅಭ್ಯರ್ಥಿಯಾಗಿದ್ದು, 1987ರಲ್ಲಿ ಮಂಗಳೂರು ವಿವಿಯಿಂದ ಎಲ್​ಎಲ್​ಬಿ ಪದವಿ ಪಡೆದಿದ್ದಾರೆ. ಇವರ ಬಳಿ ಚರಾಸ್ತಿ- 45,53,445 ರೂ. ಸ್ವಯಾರ್ಜಿತ ಆಸ್ತಿ-1,31,85,000, ನಗದು -40,000 ರೂ., ಡೆಪಾಸಿಟ್, ಸೇವಿಂಗ್ಸ್, ವಿಮೆ, ವಾಹನ ಎಲ್ಲ ಸೇರಿ ಒಟ್ಟು ಮೌಲ್ಯ - 45,53,443 ರೂ. ಇರುವುದಾಗಿ ಆಸ್ತಿ ವಿವರ ನೀಡಿದ್ದಾರೆ. ಪ್ರತಾಪ್ ಸಿಂಹ ನಾಯಕ್ ಅವರ ಹೆಂಡತಿ ಹೆಸರಿನಲ್ಲಿ 5 ಸಾವಿರ ರೂ. ನಗದು, ಡೆಪಾಸಿಟ್, ಸೇವಿಂಗ್ಸ್, ವಿಮೆ, ವಾಹನ ಒಟ್ಟು ಮೌಲ್ಯ- 52,36,950 ರೂ. ಮನೆ, ಸ್ಥಿರಾಸ್ತಿಯ ಒಟ್ಟು‌ಮೌಲ್ಯ- 1,31,85,000 ರೂ. ಇರುವುದಾಗಿ ಮಾಹಿತಿ ಸಲ್ಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಸುನೀಲ್ ವಲ್ಯಾಪುರೆ ಒಟ್ಟು ಆಸ್ತಿ ಮೌಲ್ಯ 20.02 ಕೋಟಿ ರೂ. ಸುನೀಲ್ ವಲ್ಯಾಪುರೆ ಹೆಸರಲ್ಲಿ 2.50 ಲಕ್ಷ ರೂ. ನಗದು ಇದ್ದು, ಪತ್ನಿ ವಿಜಯಲಕ್ಷ್ಮೀ ಬಳಿ 2 ಲಕ್ಷ ರೂ. ನಗದು ಇದೆ. ಸುನೀಲ್ ಹೆಸರಲ್ಲಿ 18.3 ಕೋಟಿ ರೂ. ಆಸ್ತಿ ಇದ್ದು, ಪತ್ನಿ ಹೆಸರಲ್ಲಿ 1.98 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಸುನೀಲ್ ಹೆಸರಲ್ಲಿ 1.44 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 16.59 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಹೆಸರಲ್ಲಿ 60.43 ಲಕ್ಷ ರೂ. ಮತ್ತು 1.38 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ.ಸುನೀಲ್ ಅವರಿಗೆ 20.48 ಲಕ್ಷ ರೂ. ಸಾಲ ಇದೆ. ಸುನೀಲ್ ಬಳಿ 29.19 ಲಕ್ಷ ರೂ. ಮೌಲ್ಯದ 600 ಗ್ರಾಂ ಚಿನ್ನ, 48,860 ರೂ. ಮೌಲ್ಯದ 1 ಕೆಜಿ ಬೆಳ್ಳಿ ಇದೆ. ಪತ್ನಿ ವಿಜಯಲಕ್ಷ್ಮಿ ಬಳಿ 26.76 ಲಕ್ಷ ರೂ. ಮೌಲ್ಯದ 550 ಗ್ರಾಂ ಚಿನ್ನ, 48 ಸಾವಿರ ರೂ. ಮೌಲ್ಯದ 1 ಕೆಜಿ ಬೆಳ್ಳಿ ಇದೆ.
First published: