Karnataka MLC Election: ಶಾಂತಿಯುತ ಮತದಾನ:  ರಾಮನಗರದಲ್ಲಿ 12 ಗಂಟೆ ನಂತರ ಮತದಾನ ಅಂದ್ರು ಜನರು

ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ಮತದಾರರು (Voters) ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯ (Assembly Election 2023) ದಿಕ್ಸೂಚಿಯಂದು ವ್ಯಾಖ್ಯಾನಿಸಲಾಗಿದೆ.

ಮತ

ಮತ

  • Share this:
ಇಂದು ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಎಲ್ಲ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ಮತದಾರರು (Voters) ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. 2023ರ ವಿಧಾನಸಭಾ ಚುನಾವಣೆಯ (Assembly Election 2023) ದಿಕ್ಸೂಚಿಯಂದು ವ್ಯಾಖ್ಯಾನಿಸಲಾಗಿದೆ. ಹೀಗಾಗಿ ಮೂರು ಪಕ್ಷಗಳು ಕೊನೆ ಕ್ಷಣದವರೆಗೂ ಪ್ರಚಾರ ನಡೆಸಿ  ಮತಯಾಚನೆ ಮಾಡಿದ್ದರು. ಇಂದು ಮತ ಚಲಾಯಿಸುವ ಮೂಲಕ ಗೆಲ್ಲುವ ವಿಶ್ವಾಸವನ್ನ ಎಲ್ಲ ಅಭ್ಯರ್ಥಿಗಳು ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 8ಕ್ಕೆ ಮತದಾನ ಆರಂಭವಾದ್ರೂ ರಾಮನಗರದಲ್ಲಿ (Ramanagara) ಜನರು ಮತಗಟ್ಟೆಯತ್ತ ಆಗಮಿಸುತ್ತಿಲ್ಲ. ರಾಹುಕಾಲ ಮುಗಿದ ಬಳಿಕವೇ ಮತ (Voting) ಹಾಕೋದಾಗಿ ಹೇಳುತ್ತಿದ್ದಾರೆ. ರಾಮನಗರದಲ್ಲಿ ಬೆಳಗ್ಗೆ 10 ಗಂಟೆವರೆಗೆ ಶೇ.7ರಷ್ಟು ಮಾತ್ರ ಮತದಾನ ನಡೆದಿದೆ.

ಹದಿನಾಲ್ಕನೇ ತಾರೀಖು ಅತಿ ಹೆಚ್ಚಿನ ಲೀಡ್ ನಲ್ಲಿ ಸೂರಜ್ ರೇವಣ್ಣ ಅವರು ಆಯ್ಕೆಯಾಗಿ ಬರುತ್ತಾರೆ. ಬಹಳಷ್ಟು ಬೂತ್ ಗಳಲ್ಲಿ ಮತದಾನ ಮುಗಿದು ಹೋಗಿದೆ. ಎಲ್ಲಾ ಕಡೆ ಒಳ್ಳೆಯ ರೀತಿ ರೆಸ್ಪಾನ್ಸ್ ಇದೆ. ಅವನೇನು ರಾಜಕಾರಣ ಹೊಸ‌ಬನಲ್ಲ. ಮೊದಲಿನಿಂದಲೂ ಚಿರಪರಿಚಿತನಾಗಿ ಕೆಳಮಟ್ಟದಿಂದ ಕಾರ್ಯಕರ್ತರನ್ನು ಗುರುತಿಸಿ ಅವರ ವಿಶ್ವಾಸ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.

ಈ ಜಿಲ್ಲೆಗೆ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎನ್ನುವ ಅವನ ಯೋಚನೆಗಳು,  ಯೋಜನೆಗಳಿವೆ. ರೈತರ ಸಮಸ್ಯೆ, ಬಡವರಿಗೆ ಮನೆಗಳನ್ನು ಕೊಡಿಸುವುದು ಎಲ್ಲದರ ಬಗ್ಗೆ ವಿಧಾನ ಪರಿಷತ್ ನಲ್ಲಿ ಗಮನ ಸೆಳೆಯುತ್ತಾನೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೊಳೆನರಸೀಪುರದಲ್ಲಿ ಹೇಳಿದರು.

ಇದನ್ನೂ ಓದಿ:  ಪರಿಷತ್​​ನ 25 ಸ್ಥಾನಗಳಿಗೆ ಇಂದು ಚುನಾವಣೆ: ಜಿಲ್ಲಾವಾರು ಸಂಪೂರ್ಣ ಮಾಹಿತಿ ಇಲ್ಲಿದೆ

ಮತ ಚಲಾವಣೆ ಬಳಿಕ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ                                                   

ಮೊದಲಿನಿಂದಲೂ ಐದು, ಒಂಭತ್ತು ನಮಗೆ ಲಕ್ಕಿ ನಂಬರ್. ನಂಬರ್ ನಂಬೋದು ಪ್ರಶ್ನೆ ಅಲ್ಲ. ಆದರೆ ಎಲ್ಲರಿಗೂ ಒಂಭತ್ತು ಒಳ್ಳೆಯ ಸಂಖ್ಯೆ ಅಷ್ಟೇ. ನನಗೆ, ರೇವಣ್ಣ ಅವರಿಗೆ ಅಷ್ಟೇ ಅಲ್ಲಾ ಎಲ್ಲರಿಗೂ ಒಳ್ಳೆಯ ಸಂಖ್ಯೆ. ಮೊದಲನೇ ಬಾರಿ ನನ್ನ ಅಣ್ಣನಿಗೆ ವೋಟು ಹಾಕುತ್ತಿರುವುದರಿಂದ ಒಳ್ಳೆಯ ನಂಬರ್ ನಲ್ಲಿ ಹಾಕಿದೆ. ಒಂಭತ್ತು, ಐದು ನಾನು ನಂಬಲ್ಲ.

ಐದು ನನ್ನ ಹುಟ್ಟಿದಹಬ್ಬ, ನಾನು ಹುಟ್ಟಿದ ದಿನ ಒಳ್ಳೆಯ ದಿನ ಅಂಥಾ ನಾನು ಭಾವಿಸುತ್ತೇನೆ. ಅದರಲ್ಲಿ ಯಾವ ಮೂಢನಂಬಿಕೆ ಏನಿಲ್ಲ. ಐದು, ಒಂಭತ್ತು ಎಲ್ಲರಿಗೂ ವಿಶೇಷವಾದ ನಂಬರ್. ನಾಲ್ಕರಿಂದ ಐದು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಮಸ್ಕಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಿರಿಕ್

ಮಸ್ಕಿ ತಾಲೂಕಿನ ಗುಡದೂರು ಗ್ರಾಮ ಪಂಚಾಯತ ಮತಗಟ್ಟೆಯಲ್ಲಿ ಚುನಾವಣೆ ಕಾರ್ಯ ನಿರತ ಪೋಲಿಸರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ ನಡೆಸಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಮಾಡಿ ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಬಂದಿದ್ದರು. ಮತಗಟ್ಟೆಯಿಂದ ಹೊರ ಹೋಗಲು ಸೂಚಿಸಿದ್ದಕ್ಕೆ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ರು.

ಕೊಡಗು ಜಿಲ್ಲೆಯಲ್ಲಿ ಬೆಳಗ್ಗೆ 10 ಗಂಟೆವರೆಗೆ ಶೇ.36ರಷ್ಟು ಮತದಾನವಾಗಿದೆ. ಹಾಸನ ಶೇ.14.11. ರಾಯಚೂರು ಶೇ.12.70, ಚಿಕ್ಕಮಗಳೂರು  ಶೇ.28.01ರಷ್ಟು ಮತದಾನವಾಗಿದೆ.

ಇದನ್ನೂ ಓದಿ:  ದಟ್ಟ ಮಂಜು, ಆಗಸದಲ್ಲೇ 4 ಸುತ್ತು ಸುತ್ತಿದ ಸಿಎಂ ಬೊಮ್ಮಾಯಿ ವಿಮಾನ

ಮಂಗಳೂರು ಮಹಾನಗರಪಾಲಿಕೆ ಮತಕೇಂದ್ರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ ಚಲಾವಣೆ ಮಾಡಿದರು. ನಂತರ ಮಾತನಾಡಿದ ಕಟೀಲ್, ವಿಧಾನ ಪರಿಷತ್ ನ 25 ಸ್ಥಾನಗಳ ಪೈಕಿ 20 ರಲ್ಲಿ ಬಿಜೆಪಿ ಸ್ಪರ್ಧಿಸಿದೆ.15 ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಲಿದೆ . ದಕ್ಷಿಣ ಕನ್ನಡ ಉಡುಪಿ ದ್ವಿಸದಸ್ಯ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಜಯಗಳಿಸಲಿದ್ದಾರೆ. ಪ್ರಥಮ ಪ್ರಾಶಸ್ತ್ಯದ ಮತಗಳ ಮೂಲಕ ಕೋಟಾ ಶ್ರೀನಿವಾಸ್ ಪೂಜಾರಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Published by:Mahmadrafik K
First published: