MLA's Salary: ಏರಿಕೆಯಾಯ್ತು ಜನ ಪ್ರತಿನಿಧಿಗಳ ಸಂಬಳ; ಈಗ ನಮ್ಮ ಶಾಸಕರ ಸ್ಯಾಲರಿ 2 ಲಕ್ಷ!

ನಮ್ಮನ್ನು ಆಳುವ ಜನ ಪ್ರತಿನಿಧಿಗಳ ಸ್ಯಾಲರಿ ಏರಿಕೆಯಾಗಿದೆ. ವಿಧಾನಸಭೆಯ (Assembly) ಸದಸ್ಯರು (Member) ಅಂದರೆ ನಮ್ಮ ಶಾಸಕರ (MLA) ಮಾಸಿಕ ವೇತನ ಪರಿಷ್ಕರಣೆ ಆಗಿದೆ. ಸದ್ಯ ಇದೀಗ ಶಾಸಕರು 2.05 ಲಕ್ಷ ರೂಪಾಯಿ ಮಾಸಿಕ ಸಂಬಳ (Monthly Salary) ಪಡೆಯಲಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ದೇಶದೆಲ್ಲೆಡೆ ಬೆಲೆ ಏರಿಕೆ (Price Hike) ಆಗುತ್ತಿದೆ. ತರಕಾರಿ (Vegetables), ಅಡುಗೆ ಎಣ್ಣೆ (Cooking Oil), ಅಡುಗೆ ಅನಿಲ (Gas) ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಮತ್ತೊಂದೆಡೆ ಪೆಟ್ರೋಲ್ (Petrol), ಡೀಸೆಲ್ (Diesel), ಚಿನ್ನ (Gold), ಬೆಳ್ಳಿಯ ದರ (Silver Price) ಕೂಡ ಏರುತ್ತಿದೆ. ಇದರಿಂದ ಜನಸಾಮಾನ್ಯರು ಸಂಕಷ್ಟ ಪಡುತ್ತಿದ್ದಾರೆ. ಇಷ್ಟೆಲ್ಲಾ ಬೆಲೆ ಏರಿಕೆ ಆದ್ರೂ ನಮ್ಮ ಸಂಬಳ (Salary) ಮಾತ್ರ ಏರುತ್ತಿಲ್ಲ ಅಂತ ಜನರು ಚಿಂತಿತರಾಗಿದ್ದಾರೆ. ಈ ನಡುವೆಯೇ ನಮ್ಮನ್ನು ಆಳುವ ಜನ ಪ್ರತಿನಿಧಿಗಳ ಸ್ಯಾಲರಿ ಮಾತ್ರ ಯಾವುದೇ ತೊಂದರೆ ಇಲ್ಲದಂತೆ ಏರಿಕೆಯಾಗಿದೆ. ಹೌದು, ವಿಧಾನಸಭೆಯ (Assembly) ಸದಸ್ಯರು (Member) ಅಂದರೆ ನಮ್ಮ ಶಾಸಕರ (MLA) ಮಾಸಿಕ ವೇತನ ಪರಿಷ್ಕರಣೆ ಆಗಿದೆ. ಸದ್ಯ ಇದೀಗ ಶಾಸಕರು 2.05 ಲಕ್ಷ ರೂಪಾಯಿ ಮಾಸಿಕ ಸಂಬಳ (Monthly Salary) ಪಡೆಯಲಿದ್ದಾರೆ.

ಶಾಸಕರ ಮಾಸಿಕ ವೇತನ 2,05,000 ರೂಪಾಯಿ!

ರಾಜ್ಯ ವಿಧಾನಮಂಡಲ ಸದಸ್ಯರ ವೇತನ ಪರಿಷ್ಕರಣೆಯಾಗಿದೆ. ಇದರ ಅನ್ವಯ ರಾಜ್ಯದ ಶಾಸಕರು ಮಾಸಿಕ 2.05 ಲಕ್ಷ ರೂ. ಪಡೆಯಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಬಜೆಟ್ ಅಧಿವೇಶನಕ್ಕೂ ಮುನ್ನ ಕರ್ನಾಟಕ ವಿಧಾನಸಭೆ ವೇತನ, ಪಿಂಚಣಿ, ಭತ್ಯೆ (ತಿದ್ದುಪಡಿ) ಕಾಯ್ದೆಯನ್ನು ಉಭಯ ಸದನಗಳಲ್ಲಿ ಅಂಗೀಕರಿಸಲಾಗಿತ್ತು.

ಕಳೆದ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕಾರ

ಈ ಹಿಂದೆ ವಿಧಾನಸಭಾ ಅಧಿವೇಶನದಲ್ಲಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ಧರಣಿ, ಕೂಗಾಟ ಮತ್ತು ಗದ್ದಲ ನಡೆಸುತ್ತಿದ್ದರು. ಈ ಮಧ್ಯೆಯೇ, ‘ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2022’ ಹಾಗೂ ‘ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2022’ ಅನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಮಂಡಿಸಿ, ಅಂಗೀಕಾರ ಪಡೆದಿದ್ದರು.

ಇದನ್ನೂ ಓದಿ: SSLCಯಲ್ಲಿ Rank ಪಡೆದಿದ್ದೀರಾ? ಹಾಗಾದ್ರೆ ನಿಮಗೆ BBMP ಕೊಡುತ್ತಿದೆ ಬಿಗ್ ಆಫರ್! ಏನದು ಅಂತ ತಿಳಿದುಕೊಳ್ಳಲು ಇಲ್ಲಿ ಓದಿ

ಶಾಸಕರ ಸಂಬಳದ ಹಂಚಿಕೆ ಹೇಗೆ?

ಶಾಸಕರ ಮೂಲ ವೇತನ  40,000 ರೂ. ಗಳಿದ್ದು, ಕ್ಷೇತ್ರ ಭತ್ಯೆ 60,000 ರೂ,  ಕ್ಷೇತ್ರ ಪ್ರವಾಸ ಭತ್ಯೆ 60,000 ರೂ, ಸಿಬ್ಬಂದಿ ಮತ್ತು ಸಹಾಯಕರ ವೇತನ ಭತ್ಯೆ  20,000 ರೂ.  ಪೋಸ್ಟಲ್ ಭತ್ಯೆ 5,000 ರೂ., ಫೋನ್ ಭತ್ಯೆ 20,000 ರೂ. ಅಂತ ನಿಗದಿಪಡಿಸಲಾಗಿದೆ.

ಸಂಬಳ ಶೇಕಡಾ ಎಷ್ಟು ಹೆಚ್ಚಾಗಿದೆ?

ಹೊಸ ಸಂಬಳದನ್ವಯ ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರ ವೇತನದಲ್ಲಿ ಶೇ 60, ಮುಖ್ಯಮಂತ್ರಿ ಮತ್ತು ಸಚಿವರ ವೇತನದಲ್ಲಿ ಶೇ 50, ಸಭಾಧ್ಯಕ್ಷರು, ಸಭಾಪತಿ ಮತ್ತು ವಿರೋಧ ಪಕ್ಷಗಳ ನಾಯಕರ ವೇತನದಲ್ಲಿ ಶೇ 50ರಷ್ಟು ಹೆಚ್ಚಳವಾಗಿದೆ. ಆದರೆ, ವೇತನಕ್ಕಿಂತ ವಿವಿಧ ರೀತಿಯ ಭತ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದ್ದು, ವೇತನಕ್ಕಿಂತ ಭತ್ಯೆಗಳ ಗಳಿಕೆಯೇ ಹೆಚ್ಚಾಗಿದೆ.

ಏಪ್ರಿಲ್ 1ರಿಂದಲೇ ನೂತನ ಸಂಬಳ ಜಾರಿ

ಈ ತಿದ್ದುಪಡಿ ಕಾಯ್ದೆ ಅಂಗೀಕಾರಗೊಳ್ಳುವ ಮೂಲಕ ಶಾಸಕರ ವೇತನ, ಭತ್ಯೆಗಳಲ್ಲಿ ಶೇ.50ರಷ್ಟು ಏರಿಕೆ ಮಾಡಲು ಉಭಯ ಸದನಗಳಲ್ಲಿ ಅನುಮೋದನೆ ದೊರೆತಿತ್ತು. ಅಷ್ಟೇ ಅಲ್ಲದೇ, 5 ವರ್ಷಗಳಲ್ಲಿ ಒಮ್ಮೆ ಸ್ವಯಂ ಚಾಲಿತವಾಗಿ ಏರಿಕೆಗೂ ಈ ತಿದ್ದುಪಡಿ ಕಾಯ್ದೆಯ ಮೂಲಕ ಅನುಮೋದನೆ ನೀಡಲಾಗಿತ್ತು. 2022 ರ ಏ.1 ರಿಂದ ಪರಿಷ್ಕೃತ ವೇತನ ಜಾರಿಗೆ ಬಂದಿದೆ.



ಇದನ್ನೂ ಓದಿ: Text Book Controversy: "ಮಕ್ಕಳಿಗೆ ಗೋಡ್ಸೆ ಬಗ್ಗೆಯೂ ಪಾಠ ಬರಬಹುದು"! ಪರಿಷ್ಕೃತ ಪಠ್ಯ ವಿರೋಧಿಸಿ ಸರ್ಕಾರಕ್ಕೆ ಸಾಹಿತಿಗಳಿಂದ ಪತ್ರ

ಸರ್ಕಾರದ ಬೊಕ್ಕಸಕ್ಕೆ ಹೊರೆ

ಈ ಎರಡೂ ಮಸೂದೆಗಳು ರಾಜ್ಯಪಾಲರ ಅಂಕಿತ ಪಡೆದು ಕಾಯ್ದೆಯಾದ ಬಳಿಕ, ವೇತನ ಹೆಚ್ಚಳವಾಗಿದೆ. 2022 ರ ಏ.1 ರಿಂದ ಪರಿಷ್ಕೃತ ವೇತನ ಜಾರಿಗೆ ಬಂದಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 92.40 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ ಪ್ರಜಾವಾಣಿ ವೆಬ್‌ ಸೈಟ್‌ ವರದಿ ಮಾಡಿದೆ.
Published by:Annappa Achari
First published: