• Home
  • »
  • News
  • »
  • state
  • »
  • ಡಿಕೆ ಶಿವಕುಮಾರ್ ಮಾತನ್ನು ಸಿದ್ದರಾಮಯ್ಯನೇ ಕೇಳಲ್ಲ; ಸಚಿವ ಎಸ್​ಟಿ ಸೋಮಶೇಖರ್ ಲೇವಡಿ

ಡಿಕೆ ಶಿವಕುಮಾರ್ ಮಾತನ್ನು ಸಿದ್ದರಾಮಯ್ಯನೇ ಕೇಳಲ್ಲ; ಸಚಿವ ಎಸ್​ಟಿ ಸೋಮಶೇಖರ್ ಲೇವಡಿ

ಎಸ್.ಟಿ. ಸೋಮಶೇಖರ್

ಎಸ್.ಟಿ. ಸೋಮಶೇಖರ್

ಡಿಕೆ ಶಿವಕುಮಾರ್ ಮಾತನ್ನು ಸಿದ್ದರಾಮಯ್ಯನವರೇ ಕೇಳಲ್ಲ. ನಾವೆಲ್ಲ ಕಾಂಗ್ರೆಸ್​ನಿಂದ ಹೊರ ಬರೋಕೆ ಕಾರಣ ಯಾರು ಎಂದು ಎಲ್ಲರಿಗೂ ಗೊತ್ತಿದೆ ಎಂದು ಡಿಕೆ ಶಿವಕುಮಾರ್ ವಿರುದ್ದ ಸಚಿವ ಎಸ್.ಟಿ. ಸೋಮಶೇಖರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

  • Share this:

ಮೈಸೂರು (ಅ. 25): ಆರ್​ಆರ್ ನಗರ ವಿಧಾನಸಭಾ ಉಪಚುನಾವಣೆ ಸಮರಕ್ಕೆ ಸಂಬಂಧಿಸಿದಂತೆ ತಾಯಿಗೆ ದ್ರೋಹ ಮಾಡಿದವರಿಗೆ ಮತ ಹಾಕಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಎಸ್​ಟಿ ಸೋಮಶೇಖರ್, ಡಿ.ಕೆ. ಶಿವಕುಮಾರ್ ಮಾತಿಗೆ ಎಲ್ಲೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರ ಮಾತನ್ನು ಸಿದ್ದರಾಮಯ್ಯನೇ ಕೇಳುವುದಿಲ್ಲ. ಹಾಗಿದ್ದಮೇಲೆ ನಾವು ಡಿಕೆ ಶಿವಕುಮಾರ್ ಮಾತಿಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.


ನಾನು, ಮುನಿರತ್ನ, ಭೈರತಿ ಕಾಂಗ್ರೆಸ್​ನ ನಿಷ್ಟಾವಂತ ಕಾರ್ಯಕರ್ತರಾಗಿದ್ದೆವು. ನಾವು ಪಕ್ಷ ತೊರೆಯುವಾಗ ಇವರೆಲ್ಲಾ ಎಲ್ಲಿ ಹೋಗಿದ್ದರು? ಆಗ ಎಲ್ಲಾ ವಿಚಾರವನ್ನು ನಾವು ಇವರಿಗೆ ತಿಳಿಸಿರಲಿಲ್ವ? ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಗೆ ಕಾರ್ಯಕರ್ತರಿಲ್ಲ. ಎಲ್ಲರೂ ಮುನಿರತ್ನನವರ ಹಿಂದೆ ಬಂದಿದ್ದಾರೆ. ಕಾಂಗ್ರೆಸ್ ಹೊರಗಿನಿಂದ ಜನರನ್ನು ಕರೆತಂದು ಭಿತ್ತಿ ಪತ್ರ ಹಂಚಿಸುತ್ತಿದೆ. ಇದನ್ನೇ ನಮ್ಮ ಅಭ್ಯರ್ಥಿ ಭಯದ ವಾತಾವರಣ ಎಂದು ಹೇಳಿರುವುದು. ಮುನಿರತ್ನ ಕಳೆದ 6 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅಭಿವೃದ್ಧಿ ವಿಚಾರ ಇಟ್ಟುಕೊಂಡು ಮತ ಕೇಳುತ್ತಿದ್ದೇವೆ. ಹೀಗಾಗಿ ನಮ್ಮ ಅಭ್ಯರ್ಥಿ ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಬೆಂಗಳೂರಲ್ಲಿ ಗಗನಕ್ಕೇರಿದ ಹೂವು-ಹಣ್ಣಿನ ಬೆಲೆ; ಕೆಆರ್​ ಮಾರ್ಕೆಟ್​ನಲ್ಲಿಂದು ಜನಸಾಗರ!


ಡಿ.ಕೆ. ಶಿವಕುಮಾರ್ ಮಾತನ್ನು ಯಾರು ಕೇಳುತ್ತಾರೆ? ಶಿವಕುಮಾರ್ ಮಾತನ್ನು ಸಿದ್ದರಾಮಯ್ಯನವರೇ ಕೇಳಲ್ಲ. ನಾವೆಲ್ಲ ಕಾಂಗ್ರೆಸ್​ನಿಂದ ಹೊರ ಬರೋಕೆ ಕಾರಣ ಯಾರು? ನಾವೆಲ್ಲಾ ಕಾಂಗ್ರೆಸ್‌ ಬಿಡೋಕೆ‌ ಏನು ಕಾರಣ ಎಂದು ಎಲ್ಲರಿಗೂ ಗೊತ್ತಿದೆ ಎಂದು ಡಿಕೆ ಶಿವಕುಮಾರ್ ವಿರುದ್ದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.


ಆರ್​ಆರ್​ ನಗರ ಉಪಚುನಾವಣೆಯಲ್ಲಿ ಮುನಿರತ್ನ ಗೆಲ್ಲುತ್ತಾರೆ ಅಂತ ಇಲ್ಲ ಸಲ್ಲದ ಕಸರತ್ತು ಮಾಡುತ್ತಿದ್ದಾರೆ. ಒಕ್ಕಲಿಗ ಅದು ಇದು ಅಂತ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಈ ಉಪ ಚುನಾವಣೆಯಲ್ಲಿ ಯಾವ ಜಾತಿ ರಾಜಕಾರಣದ ಆಟ‌ವೂ ನಡೆಯುವುದಿಲ್ಲ. ಜಾತಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್​ಗೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಎಸ್​.ಟಿ. ಸೋಮಶೇಖರ್ ಸವಾಲು ಹಾಕಿದ್ದಾರೆ.

Published by:Sushma Chakre
First published: