ಜಾರಕಿಹೊಳಿ ಸಿಡಿ ಹಿಂದೆ ಕಾಂಗ್ರೆಸ್ ಕೈವಾಡ, ನಮ್ಮ ವಿರುದ್ಧ ಸಂಚು ನಡೆದಿದೆ; ಸಚಿವ ಎಸ್​.ಟಿ ಸೋಮಶೇಖರ್ ಆಕ್ರೋಶ

ನಮ್ಮನ್ನು ಡ್ಯಾಮೇಜ್ ಮಾಡಬೇಕು, ಸಚಿವ ಸ್ಥಾನದಿಂದ ರಾಜೀನಾಮೆ ಕೊಡಿಸಬೇಕು ಅಂತ ಕಾಂಗ್ರೆಸ್​ನಿಂದ ಸಂಚು ನಡೆದಿದೆ. ರಮೇಶ್ ಜಾರಕಿಹೊಳಿ ಅವರ ಸಿ.ಡಿಯ ಹಿಂದೆ ಕಾಂಗ್ರೆಸ್​ನವರ ಕೈವಾಡವಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಸಚಿವ ಎಸ್. ಟಿ. ಸೋಮಶೇಖರ್

ಸಚಿವ ಎಸ್. ಟಿ. ಸೋಮಶೇಖರ್

  • Share this:
    ಬೆಂಗಳೂರು (ಮಾ. 10): ರಾಜಕೀಯದಲ್ಲಿ ತೀವ್ರ ಸಂಚಲನ ಉಂಟುಮಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸೆಕ್ಸ್​ ವಿಡಿಯೋ ಸಿ.ಡಿಯ ಹಿಂದೆ ಕಾಂಗ್ರೆಸ್​ನವರ ಕೈವಾಡವಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೊಸ ಬಾಂಬ್ ಸಿಡಿಸಿದ್ದಾರೆ. ಜಾರಕಿಹೊಳಿ ಅವರ ತೇಜೋವಧೆಗೆ ಕಾಂಗ್ರೆಸ್​ನವರೇ ಸಿ.ಡಿ ಮಾಡಿಸಿದ್ದಾರೆ. ನೂರಕ್ಕೆ ನೂರರಷ್ಟು ಇದರ ಹಿಂದೆ ಕಾಂಗ್ರೆಸ್​ನವರದ್ದೇ ಕೈವಾಡವಿದೆ. ಇನ್ಯಾರು ಈ ರೀತಿ ಮಾಡಲು ಸಾಧ್ಯ? ಇಂತಹ ಮನೆಹಾಳು ತೇಜೋವಧೆ ಕೆಲಸವನ್ನು ಅವರೇ ಮಾಡೋದು ಎಂದು ಎಸ್​.ಟಿ. ಸೋಮಶೇಖರ್ ಆಕ್ರೋಶ ಹೊರಹಾಕಿದ್ದಾರೆ.

    ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ. ಅವರು ಏನೇನು ಮಾಡುತ್ತಾರೆಂದು ನನಗೆ ಗೊತ್ತಿದೆ. ಸಿ.ಡಿ ಪ್ರಕರಣವನ್ನು ಸಿಬಿಐಗೆ ಕೊಡಲಿ ಎಂಬುದು ನಮ್ಮ ಒತ್ತಾಯ. ಸಿಬಿಐ‌ ತನಿಖೆಯಿಂದ ಎಲ್ಲವೂ ಬಯಲಾಗುತ್ತದೆ. ರಾಜಕೀಯವಾಗಿ ಸವಾಲು ಹಾಕಲಿ, ನಾವು ಅದನ್ನು ಎದುರಿಸುತ್ತೇವೆ. ಅದರ ಬದಲು ಈ ರೀತಿಯ ತಂತ್ರಗಳನ್ನು ಉಪಯೋಗಿಸೋದು ನೈತಿಕತೆಯಲ್ಲ ಎಂದು ಸಚಿವ ಎಸ್​.ಟಿ. ಸೋಮಶೇಖರ್ ಸವಾಲು ಹಾಕಿದ್ದಾರೆ.

    ಕಾಂಗ್ರೆಸ್​ನವರಿಗೆ ತಾಕತ್ತಿದ್ದರೆ ನನ್ನ ವಿರುದ್ಧ, ರಮೇಶ್ ಜಾರಕಿಹೊಳಿ ಅವರ ವಿರುದ್ಧ ಸ್ಪರ್ಧಿಸಲಿ. ನಮ್ಮ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲಲಿ. ಅದನ್ನು ಬಿಟ್ಟು ಸಿ.ಡಿ ರಾಜಕಾರಣ ಮಾಡೋದು ಸರಿಯಲ್ಲ. ನಾವು ಕೋರ್ಟ್​ಗೆ ಹೋಗಿದ್ದೇ ಕಾಂಗ್ರೆಸ್​ನವರು ನನ್ನ ವಿರುದ್ಧ ತೇಜೋವಧೆ ಮಾಡುತ್ತಾರೆ ಅಂತ. ತೇಜೋವಧೆ ಬೇರೆ ಏನಾದರೂ ಇದ್ದರೆ ನಾವು ಎದುರಿಸ್ತೇವೆ. ಆದರೆ, ಕಾಂಗ್ರೆಸ್​ನವರಿಗೆ ನೈತಿಕತೆ ಇಲ್ಲ. ಅಂಥದ್ದರಲ್ಲಿ ಅವರು ನಮ್ಮನ್ನೇನು ಕೇಳೋದು ಎಂದು ಸಚಿವ ಎಸ್​.ಟಿ. ಸೋಮಶೇಖರ್ ಕಿಡಿ ಕಾರಿದ್ದಾರೆ.

    ಇದನ್ನೂ ಓದಿ: Tirath Singh Rawat: ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ತಿರಾತ್ ಸಿಂಗ್ ರಾವತ್ ಇಂದು ಸಂಜೆ ಪ್ರಮಾಣವಚನ ಸ್ವೀಕಾರ

    ಕಾಂಗ್ರೆಸ್​ನವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಆದರೂ ನಮ್ಮ ತಟ್ಟೆಯಲ್ಲೇನು ಬಿದ್ದಿದೆ ಎಂದು ನೋಡೋಕೆ ಬರ್ತಾರೆ. ನಾವು ಕೋರ್ಟ್ ಗೆ ಹೋದರೆ ಅಪರಾಧಿಗಳಾಗಿ ಬಿಟ್ಟೆವಾ? ಕೋರ್ಟ್ ಗೆ ಹೋಗೋದು ಅಪರಾಧಾನಾ? ಅವತ್ತು ನಾವು 6 ಸಚಿವರು ಕೋರ್ಟ್ ಗೆ ಅರ್ಜಿ ಹಾಕಿದ್ದೆವು. ಉಳಿದವರು ಬೇರೆ ದಿನ ಅರ್ಜಿ ಹಾಕ್ತಾರೆ ಅಂತ ಇತ್ತು. ಆದರೆ, ಮಾಧ್ಯಮಗಳಲ್ಲಿ ನಾವು ಕೋರ್ಟ್​ಗೆ ಹೋಗಿದ್ದಕ್ಕೆ ಸಾಕಷ್ಟು ಚರ್ಚೆಯಾಯಿತಲ್ಲ ಎಂದು ಉಳಿದ ಸಚಿವರು ಸುಮ್ಮನಾಗಿರಬಹುದು ಎಂದು ಎಸ್​.ಟಿ. ಸೋಮಶೇಖರ್ ವಿವರಿಸಿದ್ದಾರೆ.

    ನಮ್ಮನ್ನು ಡ್ಯಾಮೇಜ್ ಮಾಡಬೇಕು, ಸಚಿವ ಸ್ಥಾನದಿಂದ ರಾಜೀನಾಮೆ ಕೊಡಿಸಬೇಕು ಅಂತ ಕಾಂಗ್ರೆಸ್​ನಿಂದ ಸಂಚು ನಡೆದಿದೆ. ಅದಕ್ಕಾಗಿ ನಾವು ‌ಕೋರ್ಟ್ ಗೆ ಹೋದೆವೇ ವಿನಃ ನಮ್ಮ ವಿರುದ್ಧವೂ ಸಿ.ಡಿ ಬರುತ್ತದೆ ಅಂತ ನಾವು ಕೋರ್ಟಿಗೆ ಹೋಗಲಿಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
    Published by:Sushma Chakre
    First published: