ಸ್ವಾರ್ಥ ರಾಜಕಾರಣಕ್ಕಾಗಿ ಪಕ್ಷದ ಹಿತವನ್ನೇ ಬಲಿಕೊಟ್ಟವರು ಸಿದ್ದರಾಮಯ್ಯ; ಶ್ರೀರಾಮುಲು ಲೇವಡಿ

ಸಿದ್ದರಾಮಯ್ಯ ತಮ್ಮ ಪಕ್ಷದ ಅಸಮಾಧಾನಿತ ಶಾಸಕರ ನೋವಿನ ಮಾತನ್ನು ಕೇಳಿಸಿಕೊಂಡಿದ್ದರೆ ಅನೇಕ ಶಾಸಕರು ಕಾಂಗ್ರೆಸ್ ಬಿಡಬೇಕಾದ ಪ್ರಮೇಯ ಬರುತ್ತಿರಲಿಲ್ಲ ಎಂದು ಶ್ರೀರಾಮುಲು ಚಾಟಿ ಬೀಸಿದ್ದಾರೆ.

ಸಚಿವ ಶ್ರೀರಾಮುಲು ಹಾಗೂ ಸಿದ್ದರಾಮಯ್ಯ

ಸಚಿವ ಶ್ರೀರಾಮುಲು ಹಾಗೂ ಸಿದ್ದರಾಮಯ್ಯ

  • Share this:
ಬೆಂಗಳೂರು (ಜೂ. 3): ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಕೆಸರೆರಚಾಟ ಶುರುವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲು ನಡುವೆ ಟ್ವೀಟ್ ವಾರ್ ನಡೆದಿದ್ದು, ಬಿಜೆಪಿಯಲ್ಲಿನ ಭಿನ್ನಮತದ ಬಗ್ಗೆ ಟೀಕಿಸಿದ್ದ ಸಿದ್ದರಾಮಯ್ಯ ವಿರುದ್ಧ ಬಿ. ಶ್ರೀರಾಮುಲು ಕಿಡಿಕಾರಿದ್ದಾರೆ. ನಿಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಪಕ್ಷದ ಹಿತವನ್ನೇ ಬಲಿ ಕೊಟ್ಟವರು ನೀವು ಎಂದು ಸಚಿವ ಶ್ರೀರಾಮುಲು ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಟ್ವಿಟ್ಟರ್​ನಲ್ಲಿ ಬಿಜೆಪಿಯ ಭಿನ್ನಮತದ ಬಗ್ಗೆ ಪ್ರಸ್ತಾಪಿಸಿದ್ದ ಸಿದ್ದರಾಮಯ್ಯ, ಸಂವಿಧಾನೇತರ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಇದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಯಡಿಯೂರಪ್ಪ ಹೆಸರಿಗಷ್ಟೇ ಸಿಎಂ, ಸಹಿ ಮಾಡೋದು ವಿಜಯೇಂದ್ರ ಎಂದೂ ಮಾತನಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯ ಸಾಕಷ್ಟು ಅಸಮಾಧಾನಿತ ಶಾಸಕರು ನನ್ನನ್ನು ಭೇಟಿಯಾಗಿ, ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು.ಬಿಜೆಪಿಯಲ್ಲಿ ಭಿನ್ನಮತ ಇರುವುದು ನಿಜ. ಆ ಭಿನ್ನಮತ ಮುಂದುವರೆಯಲಿದೆ. ಬಿಜೆಪಿಯ ಆಂತರಿಕ ಕಿತ್ತಾಟದಲ್ಲಿ ನಾವು ಕೈಹಾಕುವುದಿಲ್ಲ. ಸರ್ಕಾರ ಅದರಷ್ಟಕ್ಕೆ ಅದೇ ಪತನವಾದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಬಿಜೆಪಿ ಸರ್ಕಾರದ ಪತನದ ಬಗ್ಗೆಯೂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದರು.ಅದಕ್ಕೆ ಟ್ವಿಟ್ಟರ್​ನಲ್ಲಿಯೇ ಕಿಡಿಕಾರಿರುವ ಸಚಿವ ಶ್ರೀರಾಮುಲು, ಕಾಂಗ್ರೆಸ್ ಕಂಡ ಮಹಾನ್ ನಾಯಕ ಸಿದ್ದರಾಮಯ್ಯನವರೇ, ಜನರ ಮತ್ತು ಬಿಜೆಪಿ ಶಾಸಕರ ಹೆಸರು ಹೇಳಿ ನಿಮ್ಮ ಕಲ್ಪಿತ ಅಸಮಾಧಾನಗಳನ್ನು ವ್ಯಕ್ತಪಡಿಸುವ ಮುನ್ನ ನಿಮ್ಮದೇ ಪಕ್ಷದ ಅಸಮಾಧಾನಿತ ಶಾಸಕರ ನೋವಿನ ಮಾತನ್ನು ಕೇಳಿಸಿಕೊಂಡಿದ್ದರೆ ನಿಮಗೆ ಈ ಸ್ಥಿತಿ ಬರುತ್ತಿರಲಿಲ್ಲ. ಅನೇಕ ಶಾಸಕರು ಕಾಂಗ್ರೆಸ್ ಬಿಡಬೇಕಾದ ಪ್ರಮೇಯವೂ ಇರುತ್ತಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಪಕ್ಷದ ಹಿತವನ್ನೇ ಬಲಿಕೊಟ್ಟವರು ನೀವು. ಈಗ ಕಪೋಲಕಲ್ಪಿತ ಸುದ್ದಿಗಳ ಮೂಲಕ ತಮ್ಮ ತಪ್ಪುಗಳನ್ನು ಮರೆಮಾಚಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರ ಹತಾಶ ಪ್ರಯತ್ನಗಳನ್ನು ನೋಡಿದರೆ ಅವರ ಮೇಲೆ ಕನಿಕರ ಮೂಡುತ್ತಿದೆ. ಅವರು ತಮ್ಮ ಪಕ್ಷದ ಶಾಸಕರ ಅಭಿಪ್ರಾಯಕ್ಕೆ ಸ್ಪಂದಿಸಿ ಮನ್ನಣೆ ನೀಡಿದ್ದರೆ, ಸಿದ್ದರಾಮಯ್ಯನವರಿಗೆ ಇಂತಹ ದುಃಸ್ಥಿತಿ ಬರುತ್ತಿರಲಿಲ್ಲ ಎಂದು ಶ್ರೀರಾಮುಲು ಚಾಟಿ ಬೀಸಿದ್ದಾರೆ. First published: