ನಾನೆಲ್ಲೂ ಎಸ್​ಎಸ್​ಎಲ್​ಸಿ ಪಾಸ್​ ಎಂದು ನಮೂದಿಸಿಲ್ಲ: ಸ್ಪಷ್ಟನೆ ನೀಡಿದ ಸಚಿವ ಶಿವರಾಮ್​ ಹೆಬ್ಬಾರ್​​

ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ಆರೋಪ  ಸತ್ಯಕ್ಕೆ ದೂರವಾದದ್ದು. ನಾನೆಲ್ಲೂ ಎಸ್​ಎಸ್​ಎಲ್​ಸಿ ಪಾಸ್​ ಅಂತ ನಮೂದಿಸಿಲ್ಲ. ಕೇವಲ ಎಸ್​ಎಸ್​ಎಲ್​ಸಿ ಎಂದಷ್ಟೇ ನಮೂದಿಸಿದ್ದೇನೆ. ಈಗಾಗಲೇ 3 ಬಾರಿ ಚುನಾವಣೆ ಗೆದ್ದಿದ್ದೇನೆ. ನನ್ನ ಶಿಕ್ಷಣದ ಬಗೆಗಿನ ಸುದ್ದಿಗಳೆಲ್ಲಾ ತಪ್ಪು

Seema.R | news18-kannada
Updated:February 26, 2020, 1:24 PM IST
ನಾನೆಲ್ಲೂ ಎಸ್​ಎಸ್​ಎಲ್​ಸಿ ಪಾಸ್​ ಎಂದು ನಮೂದಿಸಿಲ್ಲ: ಸ್ಪಷ್ಟನೆ ನೀಡಿದ ಸಚಿವ ಶಿವರಾಮ್​ ಹೆಬ್ಬಾರ್​​
ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​
  • Share this:
ಬೆಂಗಳೂರು(ಫೆ. 26): ಬಿಜೆಪಿ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಹೊಸ ವಿವಾದಕ್ಕೆ ಗುರಿಯಾಗಿದ್ಧಾರೆ. ಚುನಾವಣಾ ಅಫಿಡವಿಟ್​ನಲ್ಲಿ ಸುಳ್ಳು ದಾಖಲೆ ಸಲ್ಲಿಸಿದ ಆರೋಪ ಎದುರಿಸುತ್ತಿದ್ದಾರೆ.


ಶಾಲಾ ದಾಖಲಾತಿ ಪ್ರಕಾರ ಅವರು ಎಸ್​ಎಸ್​ಎಲ್​ಸಿ ಫೇಲ್​ ಆಗಿದ್ದರೂ, 2013, 2018, 2019ರ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಸುಳ್ಳು ಅಫಿಡವಿಟ್​ ನೀಡಿದ್ದಾರೆ  ಎನ್ನಲಾಗಿದೆ. ಈ ಅಫಿಡವಿಟ್​ಗಳ ಪ್ರಕಾರ ಹೆಬ್ಬಾರ್ ಎಸ್ಸೆಸ್ಸೆಲ್ಸಿಯಲ್ಲಿ ಪಾಸ್ ಆಗಿದ್ದಾರೆನ್ನಲಾಗಿದೆ. ಆದರೆ, ಸಚಿವರು ಈ ಆರೋಪವನ್ನು ಸಚಿವರು ತಳ್ಳಿಹಾಕಿದ್ದು, ನಾನು ಎಸ್​ಎಸ್​ಎಲ್​ಸಿ ಪಾಸ್​ ಎಂದು ಎಲ್ಲಿಯೂ ದಾಖಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ಧಾರೆ.

ಈ ಕುರಿತು ಮಾತನಾಡಿದ  ಸಚಿವರು, ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ಕೊಟ್ಟಿರುವ ಆರೋಪ ಸತ್ಯಕ್ಕೆ ದೂರವಾದದ್ದು. ನಾನೆಲ್ಲೂ ಎಸ್​ಎಸ್​ಎಲ್​ಸಿ ಪಾಸ್​ ಅಂತ ನಮೂದಿಸಿಲ್ಲ. ಕೇವಲ ಎಸ್​ಎಸ್​ಎಲ್​ಸಿ ಎಂದಷ್ಟೇ ನಮೂದಿಸಿದ್ದೇನೆ. ಈಗಾಗಲೇ 3 ಬಾರಿ ಚುನಾವಣೆ ಗೆದ್ದಿದ್ದೇನೆ. ನನ್ನ ಶಿಕ್ಷಣದ ಬಗೆಗಿನ ಸುದ್ದಿಗಳೆಲ್ಲಾ ತಪ್ಪು ಎಂದಿದ್ದಾರೆ.

ಇದನ್ನು ಓದಿ: ಮಾಲೂರಿಗೆ ಕೆಸಿ ವ್ಯಾಲಿ ಯೋಜನೆ ನೀರು ಹರಿಸುವಲ್ಲಿ ತಾರತಮ್ಯ: ಹೋರಾಟದ ಎಚ್ಚರಿಕೆ ನೀಡಿದ ಶಾಸಕ ಕೆವೈ ನಂಜೇಗೌಡ

ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿರುವ ನಾನು ಮೂರು ಬಾರಿ ಗೆದ್ದು ಶಾಸಕನಾಗಿದ್ದೇನೆ. ಯಾವ ಚುನಾವಣೆ ವೇಳೆಯೂ ಸುಳ್ಳು ಮಾಹಿತಿ ನೀಡಿಲ್ಲ. ಸುಖಾಸುಮ್ಮನೆ ಇದನ್ನು ದೊಡ್ಡ ಸುದ್ದಿ ಮಾಡಲಾಗುತ್ತಿದೆ ಎಂದು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.

(ವರದಿ: ದರ್ಶನ್​ ನಾಯ್ಕ್​)

 
First published:February 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading