HOME » NEWS » State » KARNATAKA MINISTER SHASHIKALA JOLLE BATTING FOR DK SHIVAKUMAR OVER RAMESH JARKIHOLI SEX CD CASE SCT

ಆ ಯುವತಿ ಡಿಕೆ ಶಿವಕುಮಾರ್ ಹೆಸರು ಹೇಳಿದ ಮಾತ್ರಕ್ಕೆ ಅವರದೇ ಕೈವಾಡ ಎನ್ನಲಾಗದು; ಸಚಿವೆ ಶಶಿಕಲಾ ಜೊಲ್ಲೆ

ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್​ನವರು ಆ ಯುವತಿಯ ಪರ ನಿಂತಿದ್ದರಿಂದ ಆಕೆ ಆ ರೀತಿ ಹೇಳಿಕೆ ನೀಡಿರಬಹುದು. ಆ ಮಾತ್ರಕ್ಕೆ ಇದರ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ ಎನ್ನಲು ಸಾಧ್ಯವಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

news18-kannada
Updated:March 27, 2021, 3:50 PM IST
ಆ ಯುವತಿ ಡಿಕೆ ಶಿವಕುಮಾರ್ ಹೆಸರು ಹೇಳಿದ ಮಾತ್ರಕ್ಕೆ ಅವರದೇ ಕೈವಾಡ ಎನ್ನಲಾಗದು; ಸಚಿವೆ ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ
  • Share this:
ಬಾಗಲಕೋಟೆ (ಮಾ. 27): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಯ ಆಡಿಯೋವೊಂದು ನಿನ್ನೆ ಲೀಕ್ ಆಗಿದೆ. ಅದರಲ್ಲಿ ಆಕೆ ತನ್ನ ಮನೆಯವರೊಂದಿಗೆ ಮಾತನಾಡುವಾಗ ತಾನು ಡಿಕೆ ಶಿವಕುಮಾರ್ ಭೇಟಿಗೆ ಬಂದಿದ್ದೇನೆ ಎಂದು ಹೇಳಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದ್ದಕ್ಕಿದ್ದಂತೆ ಈ ಪ್ರಕರಣ ಕಾಂಗ್ರೆಸ್​ ಕಡೆಗೆ ತಿರುಗಿದ್ದಕ್ಕೆ ಕಾಂಗ್ರೆಸ್ ನಾಯಕರು ಮೌನ ವಹಿಸಿದ್ದರು. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಚಿವೆ ಶಶಿಕಲಾ ಜೊಲ್ಲೆ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್​ನವರು ಆ ಯುವತಿಯ ಪರ ನಿಂತಿದ್ದರಿಂದ ಆಕೆ ಆ ರೀತಿ ಹೇಳಿಕೆ ನೀಡಿರಬಹುದು. ಆ ಮಾತ್ರಕ್ಕೆ ಇದರ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಸಿಡಿ ಯುವತಿ ಆಡಿಯೋದಲ್ಲಿ ಡಿಕೆಶಿ ಅಣ್ಣನ ಹೆಸರು ಪ್ರಸ್ತಾಪ ಮಾಡಿರುವ ವಿಚಾರವನ್ನು ನಾನೂ ನೋಡಿದ್ದೇನೆ. ಆದರೆ, ಆಕೆ ಯಾವ ಉದ್ದೇಶಕ್ಕೆ ಅವರ ಹೆಸರು ಪ್ರಸ್ತಾಪ ಮಾಡಿದ್ದಾಳೆಂದು ನನಗೆ ಗೊತ್ತಿಲ್ಲ. ಇದೊಂದೇ ಕಾರಣಕ್ಕೆ ಅವರೇ ಅವಳಿಗೆ ಸಪೋರ್ಟ್ ಮಾಡಿ, ಇದೆಲ್ಲ ಮಾಡಿಸಿದ್ದಾರೆ ಎಂದು ಹೇಳಲು ಬರೋದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾನು ಡಿಕೆಶಿ ಮನೆಗೆ ಹೋಗಿದ್ದು ನಿಜ, ರಮೇಶ್ ಜಾರಕಿಹೊಳಿ ನಮ್ಮ ತಲೆ ತೆಗೆಯೋಕೂ ಹೇಸಲ್ಲ; ಸಿಡಿ ಯುವತಿ ಆತಂಕ

ಸದನದಲ್ಲಿ ಕಾಂಗ್ರೆಸ್ ಮುಖಂಡರೆಲ್ಲ ತನಗೆ ಸಪೋರ್ಟ್ ಮಾಡಿದ್ದರಿಂದ ಆಕೆ ಸಿದ್ದರಾಮಯ್ಯ, ರಮೇಶ್ ಕುಮಾರ, ಡಿಕೆ ಶಿವಕುಮಾರ್ ಅವರ ಹೆಸರು ಪ್ರಸ್ತಾಪ ಮಾಡಿದ್ದಾಳೆ ಎನಿಸುತ್ತಿದೆ. ಆ ಉದ್ದೇಶದಿಂದ ಡಿಕೆಶಿ ಹೆಸರನ್ನು ಹೇಳಿರಬಹುದು. ಹೀಗೆ ಅಂತ ಯಾವುದನ್ನೂ ನಾವು ಹೇಳೋಕಾಗಲ್ಲ. ಅಷ್ಟು ಮಾತ್ರಕ್ಕೆ ಅವರೇ ಹೇಳಿಸಿ ಇದೆಲ್ಲ ಮಾಡಿಸಿದ್ದಾರೆ ಅಂತನೂ ಹೇಳೋದಕ್ಕೆ ಬರೋದಿಲ್ಲ. ತನಿಖೆಯಾಗೋವರೆಗೂ ನಾನು ಉತ್ತರ ಕೊಡೋಕೆ ಬರೋದಿಲ್ಲ. ನನಗನಿಸಿದ ಮಟ್ಟಿಗೆ ಅವರು ಆಕೆಯ ಪರವಾಗಿ ನಿಂತಿರೋದರಿಂದ ಅವರ ಹೆಸರು ಉಲ್ಲೇಖ ಮಾಡಿರಬಹುದು ಎಂದು ಪರೋಕ್ಷವಾಗಿ ಡಿಕೆಶಿ ಪರವಾಗಿ ಶಶಿಕಲಾ ಜೊಲ್ಲೆ ಮಾತನಾಡಿದ್ದಾರೆ.

ಸಿಡಿ ಪ್ರಕರಣದಿಂದ ಬೆಳಗಾವಿಗೆ ಮುಜುಗರವಾಗುತ್ತಿರುವ ವಿಚಾರವಾಗಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯದಲ್ಲಿ ಬೆಂಗಳೂರಿನ ನಂತರ ದೊಡ್ಡ ಜಿಲ್ಲೆ ಮತ್ತು ರಾಜಕೀಯ ಸೇರಿದಂತೆ ಎಲ್ಲ ವ್ಯವಸ್ಥೆ ಇರೋದು ಬೆಳಗಾವಿಯಲ್ಲೇ. ಈ ಸಿಡಿ ಪ್ರಕರಣದಿಂದ ಬೆಳಗಾವಿ ಜನರು ಮುಜುಗರಪಟ್ಟುಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಎಸ್ಐಟಿ ತನಿಖೆ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದಿದ್ದಾರೆ.
Youtube Video

ರಾಜ್ಯದಲ್ಲಿ ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವೆ ಶಶಿಕಲಾ ಜೊಲ್ಲೆ, ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಬೆಳಗಾವಿಯಲ್ಲಿ ದಿ. ಸುರೇಶ ಅಂಗಡಿ ಅವರ ಧರ್ಮಪತ್ನಿ ಮಂಗಳಾ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಮಂಗಳಕ್ಕ ಅವರನ್ನ ಗೆಲ್ಲಿಸುತ್ತೇವೆ. ನಾವೆಲ್ಲರೂ ಸೇರಿ ಅವರನ್ನ ಗೆಲ್ಲಿಸೋ ಪ್ರಯತ್ನ ಮಾಡುತ್ತೇವೆ. ಹಿಂದೆ ತೇಜಶ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿದರೂ ನಮ್ಮ ರಾಷ್ಟ್ರೀಯ ಸಂಘಟನೆಯಲ್ಲಿ ಅವರಿಗೆ ಅವಕಾಶ ಕೊಟ್ಟಿದ್ದಾರೆ. ಮುಂದೆ ಅವರಿಗೂ ಸಹ ಪಕ್ಷದಲ್ಲಿ ಯೋಗ್ಯ ಸ್ಥಾನಮಾನ ಕೊಡ್ತಾರೆ ಎನ್ನುವ ವಿಶ್ವಾಸ ಇದೆ ಎಂದಿದ್ದಾರೆ.
Published by: Sushma Chakre
First published: March 27, 2021, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories