ಯುದ್ಧಕ್ಕೆ ಮೊದಲೇ ಡಿಕೆ ಶಿವಕುಮಾರ್ ಪಲಾಯನ ಮಾಡಿದ್ದಾರೆ; ಸಚಿವ ಆರ್​. ಅಶೋಕ್ ಲೇವಡಿ

ಒಕ್ಕಲಿಗ ಎಂದು ಹೇಳಿಕೊಂಡು ಜಾತಿ ರಾಜಕಾರಣ ಮಾಡುತ್ತಿರುವ ಡಿಕೆ ಶಿವಕುಮಾರ್ ಕಪಾಲ ಬೆಟ್ಟ ಕಾಲಭೈರವನ ಬೆಟ್ಟವೋ ಅಥವಾ ಏಸುವಿನ ಬೆಟ್ಟವೋ ಎಂದು ಸ್ಪಷ್ಟಪಡಿಸಲಿ. ಇದು ನಮ್ಮ ಸವಾಲು ಎಂದು ಸಚಿವ ಆರ್​. ಅಶೋಕ್ ಗುಡುಗಿದ್ದಾರೆ.

news18-kannada
Updated:October 28, 2020, 11:40 AM IST
ಯುದ್ಧಕ್ಕೆ ಮೊದಲೇ ಡಿಕೆ ಶಿವಕುಮಾರ್ ಪಲಾಯನ ಮಾಡಿದ್ದಾರೆ; ಸಚಿವ ಆರ್​. ಅಶೋಕ್ ಲೇವಡಿ
ಸಚಿವ ಆರ್. ಅಶೋಕ್
  • Share this:
ಬೆಂಗಳೂರು (ಅ. 28): ಬಿಜೆಪಿ ಪಕ್ಷದಲ್ಲಿ ಸಿಎಂ ಯಡಿಯೂರಪ್ಪ ಒಬ್ಬರೇ ರಾಜಾಹುಲಿ. ಕಾಂಗ್ರೆಸ್​ನಲ್ಲಿ ಯಾರು ರಾಜ ಯಾರು ಹುಲಿ ಎಂದು ಅವರಿಗೇ ಗೊತ್ತಿಲ್ಲ. ಒಕ್ಕಲಿಗ ಎಂದು ಹೇಳಿಕೊಂಡು ಜಾತಿ ರಾಜಕಾರಣ ಮಾಡುತ್ತಿರುವ ಡಿಕೆ ಶಿವಕುಮಾರ್ ಕಪಾಲ ಬೆಟ್ಟ ಕಾಲಭೈರವನ ಬೆಟ್ಟವೋ ಅಥವಾ ಏಸುವಿನ ಬೆಟ್ಟವೋ ಎಂದು ಸ್ಪಷ್ಟಪಡಿಸಲಿ. ಇದು ನಮ್ಮ ಸವಾಲು ಎಂದು ಸಚಿವ ಆರ್​. ಅಶೋಕ್ ಗುಡುಗಿದ್ದಾರೆ. ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಆರ್ ಅಶೋಕ್, ಎಸ್ ಟಿ ಸೋಮಶೇಖರ್, ಗೋಪಾಲಯ್ಯ, ನಾರಾಯಣಗೌಡ ಕಾಂಗ್ರೆಸ್​ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಡಿಕೆ ಶಿವಕುಮಾರ್ ಈ ಕುರುಕ್ಷೇತ್ರದಲ್ಲಿ ಜಾತಿ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. ಪ್ರತಿ ಸುದ್ದಿಗೋಷ್ಠಿಯಲ್ಲಿ ನಮ್ಮ ತಂದೆ ಒಕ್ಕಲಿಗ, ನಾನು ಒಕ್ಕಲಿಗ, ನಾನು ಬಂಡೆ ಅಂತ ಅವರೇ ಕರೆದುಕೊಳ್ಳುತ್ತಿದ್ದಾರೆ. ಕಾಲಭೈರವ ಬೆಟ್ಟ ಒಡೆದು ಏಸು ಪ್ರತಿಮೆ ಮಾಡಲು ಹೊರಟಿದ್ದೀರಲ್ಲ ಆಗ ಒಕ್ಕಲಿಗರು ನೆನಪಾಗಲಿಲ್ಲವೇ? ವ್ಯಾಟಿಕನ್​ಗೆ ಹೋಗಿ ನೂರಡಿಯ ಬಾಲಗಂಗಾಧರ ಸ್ವಾಮೀಜಿಯ ಪ್ರತಿಮೆ ಮಾಡಿದ್ದರೆ ಓಕೆ ಹೇಳಬಹುದಿತ್ತು. ಕಪಾಲಿ ಬೆಟ್ಟವನ್ನು ಏಸು ಬೆಟ್ಟ ಮಾಡಲು ಜಮೀನು ಕೊಟ್ಟವರು ಯಾರು? ಬಿಜೆಪಿಯಾ ಅಥವಾ ನೀವಾ? ಹೇಳಿ. ಸಾವಿರ ಅಡಿ ಶಿಲೆ‌ಯನ್ನು ನಿಲ್ಲಿಸುವ ಬಗ್ಗೆ ಮಾತನಾಡುತ್ತೀರ. ಕಪಾಲಿ ಬೆಟ್ಟ ಕಾಲಭೈರವನ ಬೆಟ್ಟವೋ ? ಏಸು ಬೆಟ್ಟವೋ ಎಂದು ಡಿಕೆಶಿ ಅಣ್ಣನವರೇ ಸ್ಪಷ್ಟಪಡಿಸಿ ಇದು ನಮ್ಮ ಸವಾಲ್ ಎಂದು ಸಚಿವ ಆರ್​. ಅಶೋಕ್ ಗುಡುಗಿದ್ದಾರೆ.

ಇದನ್ನೂ ಓದಿ: Bihar Assembly Elections 2020: ಕೊರೋನಾ ಬಿಕ್ಕಟ್ಟಿನ ನಡುವೆಯೂ ಬಿಹಾರದಲ್ಲಿ ಆರಂಭವಾದ ಮೊದಲ ಹಂತದ ಮತದಾನ: ಯಾರ ಪಾಲಾಗಲಿದೆ ಗೆಲುವು?

ಕಾಂಗ್ರೆಸ್​ನಲ್ಲಿ ಹುಲಿ ಯಾರು? ರಾಜ ಯಾರು ? ಎಂಬುದು ಅವರಿಗೆ ಗೊತ್ತಿಲ್ಲ. ವಿಧಾನಸೌಧಕ್ಕೆ ಡಿಕೆ ಶಿವಕುಮಾರ್ ಚಪ್ಪಡಿ ಹಾಕಲು ಹೊರಟಿದ್ದಾರೆ. ಇಂತಹ ವ್ಯಕ್ತಿ ಬರ್ತಾರೆ ಅಂತ ಕೆಂಗಲ್ ಹನುಮಂತರಾಯರಿಗೆ ಗೊತ್ತಿತ್ತೇನೋ. ಹಾಗಾಗಿಯೇ ನಾಲ್ಕೈದು ಬಾಗಿಲನ್ನು ಅಂದೇ ಹಾಕಿದ್ದಾರೆ. ಆದ್ದರಿಂದ ಡಿಕೆ ಶಿವಕುಮಾರ್ ಎಲ್ಲಿ ಬಾಗಿಲು ಹಾಕಬೇಕು ಅಂತ ನೋಡುತ್ತಿದ್ದಾರೆ. ಪ್ರಚಾರದ ಸಭೆಯಲ್ಲಿ ತಾಯಿಯನ್ನು ಮಾರಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.ತಾಯಿಯ ಬಗ್ಗೆ ಮಾತಾಡಿದ್ದು ತಪ್ಪು, ಇದು ಕಾಂಗ್ರೆಸ್ ಸಂಸ್ಕೃತಿ ಎಂದು ಆರ್​ ಅಶೋಕ್ ಆರೋಪಿಸಿದ್ದಾರೆ. ಕಾಂಗ್ರೆಸ್​ಗೆ ಬೂತ್ ಏಜೆಂಟ್ ಕೂಡ ಇಲ್ಲ. ನಮ್ಮಲ್ಲಿ ರಾಜಾ ಹುಲಿಯೆಂದರೆ ಸಿಎಂ ಯಡಿಯೂರಪ್ಪ ಒಬ್ಬರೇ. ಕಾಂಗ್ರೆಸ್​ ಪಕ್ಷದಲ್ಲಿದ್ದಂತೆ ನೂರಾರು ಹುಲಿಗಳು ನಮ್ಮಲ್ಲಿ ಇಲ್ಲ ಎಂದು ಸಚಿವ ಆರ್​. ಅಶೋಕ್ ಲೇವಡಿ ಮಾಡಿದ್ದಾರೆ.

ಸೋಲಿನ ಭೀತಿಯಿಂದ ಕಾಂಗ್ರೆಸ್ ಪ್ರೊಟೆಸ್ಟ್ ರಾಜಕಾರಣ ಮಾಡುತ್ತಿದೆ. ಯುದ್ಧಕ್ಕೆ ಮೊದಲೇ ಕಾಂಗ್ರೆಸ್ ಸೋತಿದೆ.‌ ಡಿಕೆ ಶಿವಕುಮಾರ್ ಪಲಾಯನ‌ ಮಾಡಿದ್ದಾರೆ. ರವಿ ಅಣ್ಣ, ಅಶೋಕ ಅಣ್ಣ ಎಂಬುದನ್ನು ಬಿಟ್ಟು ಡಿಕೆಶಿ ಬೇರೇನೂ ಮಾಡಲಿಲ್ಲ. ಯುದ್ಧ ಕಣದಿಂದ ಡಿಕೆಶಿ ಪಲಾಯನ‌ ಮಾಡಿದ್ದಾರೆ. ಇನ್ನು, ಸಿದ್ದರಾಮಯ್ಯ ಕೇವಲ‌ ಸವಾಲು ಹಾಕುತ್ತಿದ್ದಾರೆ. ನಿಮಗೆ ಧಂ ಇದೆಯಾ ಅಂತ ಕೇಳುತ್ತಿದ್ದಾರೆ. ನಮಗೆ ಧೈರ್ಯ ಇರುವುದರಿಂದಲೇ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಮುಂದಾಗಿದ್ದೇವೆ ಎಂದಿದ್ದಾರೆ.
Published by: Sushma Chakre
First published: October 28, 2020, 11:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading