• Home
  • »
  • News
  • »
  • state
  • »
  • ಕಾಂಗ್ರೆಸ್, ಜೆಡಿಎಸ್​ನಿಂದ ಬಂದ ಅರ್ಹರಿಗೆಲ್ಲ ಮಂತ್ರಿ ಸ್ಥಾನ ಸಿಕ್ಕಿದೆ; ಸಚಿವ ಕೆಎಸ್​ ಈಶ್ವರಪ್ಪ

ಕಾಂಗ್ರೆಸ್, ಜೆಡಿಎಸ್​ನಿಂದ ಬಂದ ಅರ್ಹರಿಗೆಲ್ಲ ಮಂತ್ರಿ ಸ್ಥಾನ ಸಿಕ್ಕಿದೆ; ಸಚಿವ ಕೆಎಸ್​ ಈಶ್ವರಪ್ಪ

ಸಚಿವ ಕೆ.ಎಸ್‌. ಈಶ್ವರಪ್ಪ.

ಸಚಿವ ಕೆ.ಎಸ್‌. ಈಶ್ವರಪ್ಪ.

KS Eshwarappa: ಜೆಡಿಎಸ್-ಕಾಂಗ್ರೆಸ್‍ನಿಂದ ಬಂದ ಅರ್ಹತೆ ಇದ್ದ ಅಷ್ಟೂ ಶಾಸಕರನ್ನು ಮಂತ್ರಿ ಮಾಡಲಾಗಿದೆ. ಹೆಚ್. ವಿಶ್ವನಾಥ್ ಮೇಲೆ ಟೆಕ್ನಿಕಲ್ ಸಮಸ್ಯೆ ಇದೆ, ಕೇಸ್ ಕೂಡ ನಡೆಯುತ್ತಿದೆ. ಮುನಿರತ್ನ ಮೇಲೂ ಕೇಸಿದೆ. ಅವೆರಡು ಕ್ಲಿಯರ್ ಆದಮೇಲೆ ಏನಾಗುತ್ತೋ ನೋಡೋಣ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. 

ಮುಂದೆ ಓದಿ ...
  • Share this:

ಚಿಕ್ಕಮಗಳೂರು (ಜ. 14): ಕಾಂಗ್ರೆಸ್-ಜೆಡಿಎಸ್‍ನಿಂದ ಬಂದ ಯಾರ್ಯಾರಿಗೆ ಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದೆವೋ ಅವರನ್ನೆಲ್ಲ ಸಚಿವರನ್ನಾಗಿ ಮಾಡಿ ಋಣ ತೀರಿಸಿದ ಪಕ್ಷ ಬಿಜೆಪಿ. ಮುನಿರತ್ನ ಮತ್ತು ಹೆಚ್ ವಿಶ್ವನಾಥ್ ಮೇಲೆ ಕೇಸ್​ಗಳಿದ್ದ ಕಾರಣದಿಂದ ಅವರನ್ನು ಸದ್ಯಕ್ಕೆ ಸಚಿವರನ್ನಾಗಿ ಮಾಡಲು ಸಾಧ್ಯವಾಗಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆದ ಜನಸೇವಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 


ಸಿ.ಡಿ ಇಟ್ಕೊಂಡು ಹೆದರಿಸಿ ಮಂತ್ರಿ ಆಗಿದ್ದಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆಎಸ್ ಈಶ್ವರಪ್ಪ, ಯಾವ ಸಿಡಿಯೂ ಇಲ್ಲ. ಪಾಡಿಯೂ ಇಲ್ಲ. ಸುಮ್ಮನೆ ಹಾಗೆಲ್ಲ ಹೇಳಿಕೊಂಡು ತಿರುಗುತ್ತಿದ್ದಾರೆ. ಯತ್ನಾಳ್ ಅವರಿಗೆ ಸಚಿವ ಸ್ಥಾನ ಸಿಕ್ಕಿದರೆ ಈ ರೀತಿ ಮಾತನಾಡುತ್ತಿದ್ದರೋ ಇಲ್ವೋ ಗೊತ್ತಿಲ್ಲ. ಅವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ನೋವಿನಿಂದ ಈ ರೀತಿ ಹೇಳುತ್ತಿದ್ದಾರೆ. ಅಸಮಾಧಾನ ಇರೋರು ಎಲ್ಲರೂ ಒಂದೊಂದು ರೀತಿ ಆಕ್ರೋಶ ಹೊರಹಾಕುತ್ತಾರೆ. ಈಗಾಗಲೇ ಸಚಿವ ಸಂಪುಟ ವಿಸ್ತರಣೆ ಆಗಿದೆ. ಅಲ್ಲೊಬ್ರು-ಇಲ್ಲೊಬ್ರಿಗೆ ಅಸಮಾಧಾನ ಇದೆ. ಅವರಿಗೆ ಸಮಾಧಾನ ಮಾಡೋ ಶಕ್ತಿ ನಮಗೂ ಇದೆ. ನಾವು ಸಮಾಧಾನ ಮಾಡಿಕೊಳ್ಳುತ್ತೇವೆ ಎಂದರು.


ಕಾಂಗ್ರೆಸ್-ಜೆಡಿಎಸ್‍ನಿಂದ ಬಂದವರಿಗೆ ಅಧಿಕಾರ ಕೊಡಬೇಕು, ಮಂತ್ರಿ ಸ್ಥಾನ ಕೊಡಬೇಕು ಎಂದು ಅವರಿಗೆ ಕೊಟ್ಟು ಉಳಿದ ಸ್ಥಾನ ಹಂಚಿಕೊಂಡಿದ್ದೇವೆ. ಆದ್ದರಿಂದ ಅಲ್ಲೊಬ್ರಿಗೆ ಇಲ್ಲೊಬ್ರಿಗೆ ಬೇಸರ ಆಗಿರೋದು ನಿಜ. ನಾನು ಇಲ್ಲ ಅನ್ನಲ್ಲ. ಬಿಜೆಪಿಗೆ ಯಾರ್ಯಾರು ಜೆಡಿಎಸ್-ಕಾಂಗ್ರೆಸ್‍ನಿಂದ ಬಂದ ಅರ್ಹತೆ ಇದ್ದ ಅಷ್ಟೂ ಶಾಸಕರನ್ನು ಮಂತ್ರಿ ಮಾಡಲಾಗಿದೆ. ಹೆಚ್. ವಿಶ್ವನಾಥ್-ಮುನಿರತ್ನ ಇಬ್ಬರನ್ನು ಸಚಿವರನ್ನಾಗಿ ಮಾಡಿಲ್ಲ. ವಿಶ್ವನಾಥ್ ಅವರ ಮೇಲೆ ಟೆಕ್ನಿಕಲ್ ಸಮಸ್ಯೆ ಇದೆ. ಕೇಸ್ ಕೂಡ ನಡೆಯುತ್ತಿದೆ. ಮುನಿರತ್ನ ಮೇಲೂ ಕೇಸಿದೆ. ಅವೆರಡು ಕ್ಲಿಯರ್ ಆದಮೇಲೆ ಏನಾಗುತ್ತೋ ನೋಡೋಣ ಎಂದರು.


ಇದನ್ನೂ ಓದಿ: Makara Sankranti: ಮಕರ ಸಂಕ್ರಾಂತಿ; ಇಂದು ಸಂಜೆ ಗವಿ ಗಂಗಾಧರೇಶ್ವರ ದೇವಾಲಯದ ಶಿವಲಿಂಗವನ್ನು ಸ್ಪರ್ಶಿಸಲಿದೆ ಸೂರ್ಯರಶ್ಮಿ


ರಾಮ ಮಂದಿರ ನಿರ್ಮಾಣದ ಸವಾಲುಗಳ ಬಗ್ಗೆ ಪ್ರಸ್ತಾಪಿಸಿದ ಸಚಿವ ಕೆ.ಎಸ್. ಈಶ್ವರಪ್ಪ, ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದಾನೆ ಅನ್ನೋದಕ್ಕೆ ಸಾಕ್ಷಿ ಏನು ಎಂದು ಕಾಂಗ್ರೆಸ್​ನವರು ಹಿಂದೊಮ್ಮೆ ನನ್ನನ್ನು ಪ್ರಶ್ನೆ ಮಾಡಿದ್ದರು. ಹಾಗಾದರೆ, ನೀನು ನಿನ್ನಪ್ಪನಿಗೇ ಹುಟ್ಟಿದ್ದಿ ಎಂದು ಹೇಳಲು ಸಾಕ್ಷಿ ಏನು? ಅದೆಲ್ಲ ನಂಬಿಕೆಯಷ್ಟೇ ಎಂದು ಚಿಕ್ಕಮಗಳೂರು ನಗರದಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ಹೇಳಿದ್ದಾರೆ.


ಬುಧವಾರ ಚಿಕ್ಕಮಗಳೂರಿನಲ್ಲಿ ಮತ್ತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ. ಸಿದ್ದರಾಮಯ್ಯ ಗೋಮಾಂಸ ತಿಂತೀನಿ, ನಾಟಿ ಕೋಳಿ ತಿಂತೀನಿ ಎಂದು ಹೇಳುತ್ತಾರೆ. ಅವರು ಏನಾದರೂ ತಿಂದು ಸಾಯಲಿ, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.


ಇದೇ ವೇಳೆ, ಸಿಎಂ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ ಅನ್ನೋ ಬಸನಗೌಡ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಿರಾಕರಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ಈ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ ಎಂದರು. ಆದರೆ, ಯೋಗ ಇರುವವರಿಗೆ ಸಚಿವ ಸ್ಥಾನ ಸಿಕ್ಕಿದೆ ಯೋಗ್ಯತೆ ಇರುವವರು ಬಹಳ ಜನ ಇದ್ದಾರೆ. ಅವರಿಗೆ ಮುಂದಿನ ಬಾರಿ ಅವಕಾಶ ಸಿಗಲಿದೆ ಎಂದರು. ಹೆಚ್ಚು ಜನ ಆಕಾಂಕ್ಷಿಗಳು ಹಾಗೂ ಅರ್ಹರು ಇದ್ದಾಗ ಅಸಮಾಧಾನ ಸ್ವಾಭಾವಿಕ. ಹೀಗಿದ್ದು ಕೂಡ ಕೆಲವು ಅನಿವಾರ್ಯತೆಯಿಂದ ಮುಂಚೆ ಕೆಲವರಿಗೆ ಮಾತು ಕೊಟ್ಟ ಕಾರಣಕ್ಕೆ ಕೆಲವರಿಗಷ್ಟೆ ಸಚಿವ ಸ್ಥಾನ ನೀಡಲಾಗಿದೆ, ಅದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದರು.

Published by:Sushma Chakre
First published: