HOME » NEWS » State » KARNATAKA MINISTER K SUDHAKAR APPEALS TO NON RESIDENT KANNADIGAS TO COOPERATE IN TOURISM LG

ಅನಿವಾಸಿ ಕನ್ನಡಿಗರು ಪ್ರವಾಸೋದ್ಯಮಕ್ಕೆ ಸಹಕರಿಸಿ; ಸಚಿವ ಡಾ. ಕೆ.ಸುಧಾಕರ್ ಮನವಿ

ಚೀನಾ ದೇಶಕ್ಕೆ‌ ಸೆಡ್ಡು ಹೊಡೆಯಲು ಕರ್ನಾಟಕದಲ್ಲಿ ಆಟಿಕೆಗಳ ಉತ್ಪಾದನಾ ಘಟಕ ತೆರೆಯುತ್ತಿದ್ದು, ಇದಕ್ಕೆ ಮೋದಿ ಅವರು ಚಾಲನೆ ಕೊಟ್ಟಿದ್ದಾರೆ. ಚನ್ನಪಟ್ಟಣ ಹಾಗೂ ಈ ಆಟಿಕೆ ಘಟಕಗಳ ಮೂಲಕ ನಮ್ಮ‌ ಆಟಿಕೆ ಉತ್ಪಾದನೆಯಲ್ಲಿ ನಮ್ಮ ದೇಶ ಸ್ವಾವಲಂಬನೆ ಹೊಂದಲಿದೆ ಎಂದು ತಿಳಿಸಿದರು.

news18-kannada
Updated:September 9, 2020, 11:14 AM IST
ಅನಿವಾಸಿ ಕನ್ನಡಿಗರು ಪ್ರವಾಸೋದ್ಯಮಕ್ಕೆ ಸಹಕರಿಸಿ; ಸಚಿವ ಡಾ. ಕೆ.ಸುಧಾಕರ್ ಮನವಿ
ಸಚಿವ ಡಾ.ಕೆ.ಸುಧಾಕರ್
  • Share this:
ಬೆಂಗಳೂರು(ಸೆಪ್ಟೆಂಬರ್ 9): ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದು, ಅನಿವಾಸಿ‌ ಕನ್ನಡಿಗರು ಜಾಗತಿಕ ಮಟ್ಟದಲ್ಲಿ ಇದನ್ನು ಪರಿಚಯಿಸಬೇಕು‌ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದರು. ವರ್ಚುವಲ್ ಕಾರ್ಯಕ್ರಮದಲ್ಲಿ ಅಕ್ಕಾ ಸಮಾವೇಶದ ಸಮಾರೋಪ‌ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸುಧಾಕರ್, ಅನಿವಾಸಿ ಕನ್ನಡಿಗರಿಗೆ ಮನವಿ ಮಾಡಿದ್ದಾರೆ. ಕರ್ನಾಟಕದಲ್ಲಿ ವೈವಿಧ್ಯಮಯ ನೈಸರ್ಗಿಕ ಸಂಪನ್ಮೂಲ ಹೇರಳವಾಗಿದೆ. ಅಲ್ಲದೇ ನಮ್ಮ ರಾಜ್ಯ ಪ್ರವಾಸೋದ್ಯಮಕ್ಕೆ ಸೂಕ್ತವಾದ ಸ್ಥಳವಾಗಿದೆ. ಕರ್ನಾಟಕದಿಂದ ಅಮೆರಿಕಾಗೆ ತೆರಳುವ ಕನ್ನಡಿಗರು ಇಲ್ಲಿರುವ ಸಂಪನ್ಮೂಲಗಳ ಬಗ್ಗೆ ಅಲ್ಲಿನ ಜನರಿಗೆ ಪ್ರಚುರಪಡಿಸಿ, ರಾಜ್ಯದ ಪ್ರವಾಸೋದ್ಯಮವನ್ನು ವಿಶ್ವದ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಮನವಿ ಮಾಡಿದರು. ವಿಶ್ವದಲ್ಲೇ ಅಮೆರಿಕಾ ಕೊರೋನದಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾದ ದೇಶವಾಗಿದೆ. ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣವನ್ನು ಕಟ್ಟುನಿಟ್ಟಿನಿಂದ ಮಾಡಿದ್ದೇವೆ ಎಂದರು.

Coronavirus India Updates: ಭಾರತದಲ್ಲಿ 43 ಲಕ್ಷ ದಾಟಿದ‌ ಕೊರೋನಾ ಸೋಂಕಿತರ ಸಂಖ್ಯೆ

ಮುಂದುವರೆದ ಅವರು, ವಿಶ್ವದಲ್ಲೇ ಕರ್ನಾಟಕ‌ದ ಸಾವಿನ‌ ಪ್ರಮಾಣ ಶೇ.1.6 ಇದೆ. ಕೊರೋನಾ ಸಂಕಷ್ಟದಲ್ಲೂ ಆರ್ಥಿಕತೆಯನ್ನು ಸಬಲವಾಗಿ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.

ಚೀನಾ ದೇಶಕ್ಕೆ‌ ಸೆಡ್ಡು ಹೊಡೆಯಲು ಕರ್ನಾಟಕದಲ್ಲಿ ಆಟಿಕೆಗಳ ಉತ್ಪಾದನಾ ಘಟಕ ತೆರೆಯುತ್ತಿದ್ದು, ಇದಕ್ಕೆ ಮೋದಿ ಅವರು ಚಾಲನೆ ಕೊಟ್ಟಿದ್ದಾರೆ. ಚನ್ನಪಟ್ಟಣ ಹಾಗೂ ಈ ಆಟಿಕೆ ಘಟಕಗಳ ಮೂಲಕ ನಮ್ಮ‌ ಆಟಿಕೆ ಉತ್ಪಾದನೆಯಲ್ಲಿ ನಮ್ಮ ದೇಶ ಸ್ವಾವಲಂಬನೆ ಹೊಂದಲಿದೆ ಎಂದು ತಿಳಿಸಿದರು.

ಕನ್ನಡ ಭಾಷೆಗೆ 5 ಸಾವಿರ ವರ್ಷಗಳ ಇತಿಹಾಸವಿದೆ. ಇಲ್ಲಿನ ಸಾಂಸ್ಕೃತಿಕ ವೈಭವ ಅತ್ಯುನ್ನತವಾದದ್ದು. ಕನ್ನಡಿಗರು‌ ಸಹೃದಯಿಗಳು. ನಮ್ಮಲ್ಲಿನ‌ ಯುವಕರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೆರಿಕಾಗೆ ತೆರಳಿ ಅಲ್ಲಿನ ಜನರಿಗೆ ಸ್ವಂತ ಶಕ್ತಿಯಿಂದ ವಿವಿಧ ವೃತ್ತಿಯಲ್ಲಿ ತೊಡಗಿ ಕನ್ನಡ ನಾಡಿಗೆ ಕೀರ್ತಿ ತರುತ್ತಿದ್ದಾರೆ.‌ ಕರ್ನಾಟಕಕ್ಕೆ ಮರಳಿ ಕೆಲವರು ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ಕ್ಷೇತ್ರವನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಮೇಲಿನ ನಿಮ್ಮ ಅಭಿಮಾನಕ್ಕೆ ಧನ್ಯವಾದಗಳನ್ನು ತಿಳಿಸಿದರು.
Published by: Latha CG
First published: September 9, 2020, 11:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories