ವಿಧಾನಸೌಧದಲ್ಲಿ ವಿಡಿಯೋ ನೋಡಿದ್ದು ತಪ್ಪಾದರೂ ದೇಶದ್ರೋಹದ ಕೆಲಸವಲ್ಲ, ಅದೊಂದು ಆಕಸ್ಮಿಕ: ಲಕ್ಷ್ಮಣ ಸವದಿ ಪರ ಸಚಿವ ಮಾಧುಸ್ವಾಮಿ ಬ್ಯಾಟಿಂಗ್

ದ್ವೇಷದ ರಾಜಕಾರಣ ಮಾಡುವ ಅನಿವಾರ್ಯತೆ ನಮಗೆ ಬಂದಿಲ್ಲ. ಡಿ ಕೆ ಶಿವಕುಮಾರ್​​ ಅವರು ತನಿಖೆಗೆ ಸಹಕರಿಸಿಲ್ಲ ಎಂದು ಬಂಧಿಸಿದ್ದರು. ಆದರೆ ಇದರಲ್ಲಿ ಬಿಜೆಪಿ ಪಾತ್ರ ಏನೂ ಇಲ್ಲ ಎಂದರು

G Hareeshkumar | news18
Updated:September 6, 2019, 9:41 AM IST
ವಿಧಾನಸೌಧದಲ್ಲಿ ವಿಡಿಯೋ ನೋಡಿದ್ದು ತಪ್ಪಾದರೂ ದೇಶದ್ರೋಹದ ಕೆಲಸವಲ್ಲ, ಅದೊಂದು ಆಕಸ್ಮಿಕ: ಲಕ್ಷ್ಮಣ ಸವದಿ ಪರ ಸಚಿವ ಮಾಧುಸ್ವಾಮಿ ಬ್ಯಾಟಿಂಗ್
ಸಚಿವ ಮಾಧುಸ್ವಾಮಿ
G Hareeshkumar | news18
Updated: September 6, 2019, 9:41 AM IST
ತುಮಕೂರು(ಸೆ. 05): ವಿಧಾನಸೌಧದಲ್ಲಿ ವಿಡಿಯೋ ನೋಡಿದ್ದು ದೇಶದ್ರೋಹದ ಕೆಲಸವಲ್ಲ. ಅದೊಂದು ಆಕಸ್ಮಿಕ ಘಟನೆ. ಆದರೂ ಅದು ತಪ್ಪು. ಅದನ್ನೇ ಇಟ್ಟುಕೊಂಡು ಡಿಸಿಎಂ ಪದವಿ ಕೊಟ್ಟಿದ್ದು ತಪ್ಪು ಎನ್ನುವಂತಿಲ್ಲ. ಮಹಾರಾಷ್ಟ್ರದ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿ ಅವರು ಪ್ರಮುಖ ಪಾತ್ರ ವಹಿಸಿದ್ರು. ಹಾಗಾಗಿ ಅವರಿಗೆ ಡಿಸಿಎಂ ಪದವಿ ಕೊಟ್ಟಿದ್ದಾರೆ ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ಹಿಂದಿನ ಬಿಎಸ್​ವೈ ಸರ್ಕಾರದ ಅವಧಿಯಲ್ಲಿ ಲಕ್ಷ್ಮಣ ಸವದಿ ಮತ್ತು ಸಿಸಿ ಪಾಟೀಲ್ ಇಬ್ಬರೂ ವಿಧಾನಸೌಧದ ಅಧಿವೇಶನದ ವೇಳೆ ಅಶ್ಲೀಲ ವಿಡಿಯೋಗಳನ್ನ ನೋಡುತ್ತಿದ್ದುದು ದೊಡ್ಡ ಸುದ್ದಿಯಾಗಿ ಪ್ರಕರಣ ಕೂಡ ದಾಖಲಾಗಿತ್ತು. ಈಗ ಸವದಿ ಅವರು ಡಿಸಿಎಂ ಆದ ಬಳಿಕ ಸಿದ್ದರಾಮಯ್ಯ ಮತ್ತಿತರ ಕಾಂಗ್ರೆಸ್ ಮುಖಂಡರು ಲಕ್ಷ್ಮಣ ಸವದಿಯನ್ನು ಇದೇ ವಿಚಾರವಾಗಿ ಕಾಲೆಳೆಯುತ್ತಿರುವುದಕ್ಕೆ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸುತ್ತಾರೆ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅದೇ ಕಾರಣ ಇಟ್ಟುಕೊಂಡು ಹೇಳಿಕೆ ನೀಡುತ್ತಿದ್ದಾರೆ. ಅವರ ಪ್ರತಿಯೊಂದು ಹೇಳಿಕೆಗೂ ಪ್ರತಿಕ್ರಿಯೆ ನೀಡಬಹುದು. ಅದನ್ನ ಮಾಡಲಿಕ್ಕೆ ನಾವು ಹೋಗೋಲ್ಲ ಎಂದು ಮಾಧುಸ್ವಾಮಿ ತಿರುಗೇಟು ನೀಡಿದರು.

ಡಿಕೆಶಿ ಬಂಧನದ ವಿಚಾರವಾಗಿ ಬಿಜೆಪಿ ಮೇಲೆ ಬರುತ್ತಿರುವ ಆರೋಪಗಳನ್ನು ತಳ್ಳಿಹಾಕಿದ ಮಾಧುಸ್ವಾಮಿ, ದ್ವೇಷದ ರಾಜಕಾರಣ ಮಾಡುವ ಅನಿವಾರ್ಯತೆ ನಮಗೆ ಬಂದಿಲ್ಲ. ಡಿ ಕೆ ಶಿವಕುಮಾರ್​​ ಅವರು ತನಿಖೆಗೆ ಸಹಕರಿಸಿಲ್ಲ ಎಂದು ಬಂಧಿಸಿದ್ದಾರೆ. ಆದರೆ ಇದರಲ್ಲಿ ಬಿಜೆಪಿ ಪಾತ್ರ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ನಾನು‌ ಡಿಕೆಶಿ ಅಭಿಮಾನಿ, ಅವರ ಶೈಲಿಯನ್ನು ಅನುಕರಣೆ ಮಾಡುತ್ತಿದ್ದೇನೆ; ಜೆಡಿಎಸ್​ ಶಾಸಕ ಬಿ.ಸಿ.ಗೌರಿಶಂಕರ್

ಎಲ್ಲಾ ರಾಜಕೀಯ ನಾಯಕರ ಮೇಲೂ ದಾಳಿ ನಡೆದಿದೆ. ಬಿಜೆಪಿಯನ್ನು ಗುರಿಯಾಗಿಸಿಕೊಂಡು ಪ್ರತಿಭಟನೆ ಮಾಡುವ ಅಗತ್ಯತೆ ಇಲ್ಲ. ನಮ್ಮ ಬೆಂಬಲಿಗರಿಗೆ ನಮ್ಮ ತಪ್ಪು ಗೊತ್ತಾಗೋದಿಲ್ಲ ಹಾಗಾಗಿ ಅನ್ಯಾಯ ಆಗಿದೆ ಎಂದು ಪ್ರತಿಭಟನೆ ಮಾಡ್ತಾರೆ. ಅದನ್ನ ನಮಗೆ ನಾವೇ ವಿಮರ್ಶೆ ಮಾಡಿಕೊಳ್ಳಬೇಕು. ನಾವೇ ತೀರ್ಪುಕೊಡುವ ಹಂತಕ್ಕೆ ಹೋಗಬಾರದು. ಅನ್ಯಾಯವಾಗಿದ್ರೆ ಇಡಿ ವಿರುದ್ಧ ಸುಪ್ರಿಂ ಕೋರ್ಟ್​ವರೆಗೂ ಹೋಗಬಹುದು. ಇ.ಡಿ.ಯನ್ನ ಪ್ರಶ್ನೆ ಮಾಡುವ ಅಧಿಕಾರ ನಮಗಿಲ್ಲ ಎಂದು ಹೇಳಿದರು.

ಸ್ವಲ್ಪ ಮಟ್ಟಿಗೆ ಅರ್ಥಿಕ ಹಿಂಜರಿತ ಆಗಿರೋದು ನಿಜ. ಉತ್ಪಾದನಾ ಘಟಕದಲ್ಲಿ ಅದರ ಪರಿಣಾಮ ಬೀರಿದೆ. ಅದನ್ನ ಮೇಲೆತ್ತುವ ಕೆಲಸ ನಡೆಯುತ್ತಿದ್ದು, ಇದಕ್ಕೆ ಸರ್ಕಾರದ ಆರ್ಥಿಕ ನೀತಿಗಳೇ ಕಾರಣ ಎಂದು ಹೇಳಲಿಕ್ಕೆ ಆಗೋದಿಲ್ಲ. ಅವೆಲ್ಲವೂ ಸ್ವಾಭಾವಿಕವಾಗಿ ನಡೀತಿದೆ. ಸ್ವಲ್ಪ ಮಟ್ಟಿಗೆ ಜಿಎಸ್​ಟಿ ಹೊರೆ ಇದೆ. ಮುಂದಿನ ದಿನದಲ್ಲಿ ಎಲ್ಲಾ ಸರಿ ಹೋಗಲಿದೆ ಎಂದು ಮಾಧುಸ್ವಾಮಿ ಅಭಿಪ್ರಾಯಪಟ್ಟರು.
Loading...

ಡಿಕೆಶಿ ನನಗೆ ಒಳ್ಳೆಯ ಸ್ನೇಹಿತರು :  ಸೋಮಣ್ಣ

ಡಿಕೆಶಿ ವಿಚಾರವಾಗಿ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿಲ್ಲ ಎಂದು ಬಿಜೆಪಿಯ ಮತ್ತೊಬ್ಬ ನಾಯಕ ವಿ. ಸೋಮಣ್ಣ ಕೂಡ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ. ಯಾವತ್ತೂ ಕೂಡ ಬಿಜೆಪಿ ಸೇಡಿನ ರಾಜಕಾರಣ ಮಾಡಿಲ್ಲ. ಯಾಕಾಗಿ ಕಾಂಗ್ರೆಸ್‌ನವರು ನಮ್ಮ ಮೇಲೆ ಆರೋಪ ಮಾಡ್ತಿದ್ದಾರೋ ಗೊತ್ತಿಲ್ಲ. ಡಿಕೆಶಿಯವರು ಹೊರಗೆ ಬರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ಡಿಕೆಶಿ ನನಗೆ ಒಳ್ಳೆಯ ಸ್ನೇಹಿತರು.
ಅವರ ಬಗ್ಗೆ ನನಗೆ ಗೌರವ ಇದೆ. ಕಾಂಗ್ರೆಸ್‌ನವರ ಆರೋಪಗಳ ಬಗ್ಗೆ ನಾನು ಮಾತನಾಡೋಲ್ಲ‌ ಎಂದು ಸಚಿವ ವಿ. ಸೋಮಣ್ಣ ಹೇಳಿದರು.

ಕೋರ್ಟ್​​​ನಲ್ಲಿ ವಿಸ್ತೃತ ವಿಚಾರಣೆ ನಡೆದಿದೆ : ಬಸವರಾಜ್​​ ಬೊಮ್ಮಾಯಿ

ಡಿ.ಕೆ. ಶಿವಕುಮಾರ್ ಬಂಧನ ನಮಗೆ ಖುಷಿ, ಸಂತೋಷದ ಪ್ರಶ್ನೆಯೇ ಇಲ್ಲ, ಕಾನೂನು ಕಾಪಾಡಬೇಕಲ್ವಾ? ಇದನ್ನು ರಾಜಕೀಯ ಪ್ರೇರಿತ ಅನ್ನೋದೇ ರಾಜಕೀಯ. ಮೊನ್ನೆ ರಾತ್ರಿಯಿಂದ ಅಹಿತಕರ ಘಟನೆಗಳು ನಡೆದಿವೆ. ರಾಜ್ಯದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಮನಗರ, ಕನಕಪುರದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಡಿಕೆಶಿ ಪ್ರಕರಣದ ಕುರಿತು ಎರಡೂವರೆ ವರ್ಷದಿಂದ ಕೋರ್ಟ್​​​ನಲ್ಲಿ ವಿಸ್ತೃತ ವಿಚಾರಣೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

First published:September 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...