ವಯಸ್ಸಿಗೆ ಬಂದವರಿಗೆಲ್ಲಾ ಐಶ್ವರ್ಯ ರೈ ಬೇಕಂದ್ರೆ ಹೇಗೆ? ಆಕೆ ಇರುವುದು ಒಬ್ಬಳೇ ತಾನೇ; ಕೆ.ಎಸ್​ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಉಪ ಮುಖ್ಯಮಂತ್ರಿ ಹುದ್ದೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಎಲ್ಲರಿಗೂ ಡಿಸಿಎಂ ಆಗಬೇಕೆಂಬ ಆಸೆ ಇರುತ್ತದೆ. ವಯಸ್ಸಿಗೆ ಬಂದೋರಿಗೆಲ್ಲಾ ಐಶ್ವರ್ಯ ರೈ ಬೇಕೆಂದು ಕೇಳುತ್ತಾರೆ. ಆದರೆ, ಐಶ್ವರ್ಯ ಇರುವುದು ಒಬ್ಬಳೇ ತಾನೇ? ಎಂದಿದ್ದಾರೆ.

news18-kannada
Updated:December 6, 2019, 8:50 PM IST
ವಯಸ್ಸಿಗೆ ಬಂದವರಿಗೆಲ್ಲಾ ಐಶ್ವರ್ಯ ರೈ ಬೇಕಂದ್ರೆ ಹೇಗೆ? ಆಕೆ ಇರುವುದು ಒಬ್ಬಳೇ ತಾನೇ; ಕೆ.ಎಸ್​ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ
ಸಚಿವ ಕೆ ಎಸ್ ಈಶ್ವರಪ್ಪ
  • Share this:
ಬೆಂಗಳೂರು(ಡಿ.06): ಡಿಸಿಎಂ ಪೋಸ್ಟ್​ ಆಕಾಂಕ್ಷಿಗಳ ಕುರಿತಂತೆ ಮಾತಾಡುವಾಗ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್​​ ರಾಜ್​​ ಸಚಿವ ಕೆ.ಎಸ್​​ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ಧಾರೆ. ಉಪ ಮುಖ್ಯಮಂತ್ರಿ ಹುದ್ದೆಯನ್ನು ಬಾಲಿವುಡ್​​ ನಟಿ ಐಶ್ವರ್ಯ ರೈಗೆ ಹೋಲಿಸಿ ನಾಲಿಗೆ ಹರಿಬಿಟ್ಟಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಬಿಜೆಪಿ ಹಿರಿಯ ನಾಯಕ ಕೆ.ಎಸ್​ ಈಶ್ವರಪ್ಪ, ರಾಜ್ಯದಲ್ಲಿ ಇನ್ನಷ್ಟು ಡಿಸಿಎಂ ಹುದ್ದೆ ಸೃಷ್ಟಿಸುವ ಸಾಧ್ಯತೆಯಿದೆಯಾ? ಎಂಬ ಪ್ರಶ್ನೆ ಉತ್ತರಿಸಿದರು. ಉಪ ಮುಖ್ಯಮಂತ್ರಿ ಹುದ್ದೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಎಲ್ಲರಿಗೂ ಡಿಸಿಎಂ ಆಗಬೇಕೆಂಬ ಆಸೆ ಇರುತ್ತದೆ. ವಯಸ್ಸಿಗೆ ಬಂದೋರಿಗೆಲ್ಲಾ ಐಶ್ವರ್ಯ ರೈ ಬೇಕೆಂದು ಕೇಳುತ್ತಾರೆ. ಆದರೆ, ಐಶ್ವರ್ಯ ಇರುವುದು ಒಬ್ಬಳೇ ತಾನೇ? ಎಂದಿದ್ದಾರೆ. ಐಶ್ವರ್ಯ ರೈಗೆ ಡಿಸಿಎಂ ಪೋಸ್ಟ್​ ಹೋಲಿಕೆ ಮಾಡಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ಧಾರೆ.

ಇನ್ನು ಅನರ್ಹ ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಾಗಾಗಿ ನಾವು ಅನರ್ಹ ಶಾಸಕರ ಋಣ ತೀರಿಸಬೇಕಿದೆ. ಯಾವುದೇ ಕಾರಣಕ್ಕೂ ನಮ್ಮಿಂದ ಅನ್ಯಾಯವಾಗಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ: ಎನ್​ಕೌಂಟರ್ ಮಾಡಿ ಶಿಳ್ಳೆ ಗಿಟ್ಟಿಸಿದ ಪೊಲೀಸರಿಗೆ ಅಪರಾಧ ತಡೆಯುವ ಉತ್ಸಾಹ ಇರಲಿಲ್ಲವಾ? ಆ ಘಟನೆ ದಿನ ಆದ ಯಡವಟ್ಟುಗಳೇನು?

ಸದ್ಯ ಬಿಜೆಪಿ ಹಿರಿಯ ನಾಯಕ ಕೆ.ಎಸ್​ ಈಶ್ವರಪ್ಪ ಐಶ್ವರ್ಯ ರೈ ಹೆಸರು ಬಳಸಿ ನೀಡಿರುವ ಹೇಳಿಕೆ ಸುತ್ತ ಭಾರೀ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್​-ಜೆಡಿಎಸ್​ ಸೇರಿಂದತೆ ಹಲವರು ಸಾಮಾಜಿಕ ಜಾಲತಾಣದಲ್ಲೀಗ ಕೆ.ಎಸ್​​ ಈಶ್ವರಪ್ಪ ಹೇಳಿಕೆಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
First published: December 6, 2019, 8:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading