ರಾಷ್ಟ್ರ ಮಟ್ಟದಲ್ಲಿ ಚಾಲ್ತಿಗೆ ಬರಲು ಡಿಕೆಶಿ ಯತ್ನ?; ದೆಹಲಿಯಲ್ಲಿ ನಡೆಯಲಿದೆ ಡಿನ್ನರ್ ಪಾಲಿಟಿಕ್ಸ್

ರಾಜ್ಯದ ಅಭಿವೃದ್ಧಿ ಯೋಜನೆಗಳ ಚರ್ಚೆಯ ನೆಪದಲ್ಲಿ ಡಿಕೆ ಭಾರೀ ಪ್ಲ್ಯಾನ್​ ಹಾಕಿಕೊಂಡಿದ್ದಾರೆ. ಬಿಜೆಪಿ ಸಂಸದರೊಂದಿಗೆ ಆಪ್ತರಾಗಲು ಡಿಕೆಶಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

news18
Updated:June 18, 2019, 2:49 PM IST
ರಾಷ್ಟ್ರ ಮಟ್ಟದಲ್ಲಿ ಚಾಲ್ತಿಗೆ ಬರಲು ಡಿಕೆಶಿ ಯತ್ನ?; ದೆಹಲಿಯಲ್ಲಿ ನಡೆಯಲಿದೆ ಡಿನ್ನರ್ ಪಾಲಿಟಿಕ್ಸ್
ಡಿ.ಕೆ ಶಿವಕುಮಾರ್​​
news18
Updated: June 18, 2019, 2:49 PM IST
ಬೆಂಗಳೂರು (ಜೂ. 18): ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್​​ನ ಟ್ರಬಲ್​ ಶೂಟರ್​ ಎಂದೇ ಖ್ಯಾತಿ ಪಡೆದುಕೊಂಡವರು ಸಚಿವ ಡಿಕೆ ಶಿವಕುಮಾರ್​. ಇವರು ಕಾಂಗ್ರೆಸ್​​ನ ಹೈ ಕಮಾಂಡ್​ಗಳ ಜೊತೆಯೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈಗ ಅವರು ದೆಹಲಿ ಮಟ್ಟದಲ್ಲಿ ಚಾಲ್ತಿಗೆ ಬರಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆಚ್​​ ಮುನಿಯಪ್ಪ ಸ್ಪರ್ಧೆ ಮಾಡಿ ಸೋತಿದ್ದರು. ಹೀಗಾಗಿ ದೆಹಲಿಯಲ್ಲಿ ಡಿಕೆಶಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರಂತೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಆಲೋಚನೆ ಅವರದ್ದು.

ರಾಜ್ಯದ ಎಲ್ಲ ಸಂಸದರಿಗೆ ಡಿಕೆಶಿ ದೆಹಲಿಯಲ್ಲಿ ಔತಣಕೂಟ ಆಯೋಜಿಸಿದ್ದಾರೆ. ಈಗಾಗಲೇ ರಾಜ್ಯ ಕಾಂಗ್ರೆಸ್ ರಾಜ್ಯಸಭಾ ಸದಸ್ಯರಿಗೆ ಆಹ್ವಾನ ಹೋಗಿದೆ. ಇಂದು ಬಿಜೆಪಿ ಸಂಸದರಿಗೆ ಆಹ್ವಾನ ಸಿಗುವ ಸಾಧ್ಯತೆ ಇದೆ. ಈ ವೇಳೆ ಮಂಡ್ಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾರನ್ನೂ ಡಿಕೆಶಿ ಔತಣಕೂಟಕ್ಕೆ ಕರೆಯಲಿದ್ದಾರೆ ಎನ್ನಲಾಗಿದೆ.

ರಾಜ್ಯದ ಅಭಿವೃದ್ಧಿ ಯೋಜನೆಗಳ ಚರ್ಚೆಯ ನೆಪದಲ್ಲಿ ಡಿಕೆ ಭಾರೀ ಪ್ಲ್ಯಾನ್​ ಹಾಕಿಕೊಂಡಿದ್ದಾರೆ. ಬಿಜೆಪಿ ಸಂಸದರೊಂದಿಗೆ ಆಪ್ತರಾಗಲು ಡಿಕೆಶಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.  ಇನ್ನು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ದೆಹಲಿಯಲ್ಲೇ ಇದ್ದಾರೆ. ಹಾಗಾಗಿ, ಅವರಿಗೆ ಈ ಔತಣ ಕೂಟಕ್ಕೆ ಆಹ್ವಾನ ಸಿಗಲಿದೆಯೇ ಅಥವಾ ಇಲ್ಲವೇ ಎನ್ನುವ ಕುತೂಹಲ ಮೂಡಿದೆ.

(ವರದಿ: ಧರಣೀಶ್​ ಬೂಕನಕೆರೆ)

First published:June 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...