HOME » NEWS » State » KARNATAKA MINISTER CP YOGEESHWAR LASHES OUT AT HD KUMARASWAMY IN RAMANAGAR ATVR SCT

ಅವನು ಸಿಎಂ ಆಗಿದ್ದಾಗ ಯಾರಿಗೂ ಅಧಿಕಾರ ಕೊಡಲಿಲ್ಲ; ಕುಮಾರಸ್ವಾಮಿ ವಿರುದ್ಧ ಸಚಿವ ಯೋಗೇಶ್ವರ್ ಏಕವಚನದಲ್ಲಿ ವಾಗ್ದಾಳಿ

ಮತ್ತೆ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ನಾಲಿಗೆ ಹರಿಬಿಟ್ಟಿರುವ ಸಚಿವ ಯೋಗೇಶ್ವರ್ ಚನ್ನಪಟ್ಟಣದ ನಿನ್ನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. 

news18-kannada
Updated:February 26, 2021, 9:40 AM IST
ಅವನು ಸಿಎಂ ಆಗಿದ್ದಾಗ ಯಾರಿಗೂ ಅಧಿಕಾರ ಕೊಡಲಿಲ್ಲ; ಕುಮಾರಸ್ವಾಮಿ ವಿರುದ್ಧ ಸಚಿವ ಯೋಗೇಶ್ವರ್ ಏಕವಚನದಲ್ಲಿ ವಾಗ್ದಾಳಿ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್
  • Share this:
ರಾಮನಗರ (ಫೆ. 26): ರಾಮನಗರದ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಸಿಪಿ. ಯೋಗೇಶ್ವರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.  ಕುಮಾರಸ್ವಾಮಿ ಈಗ ಅಭಿವೃದ್ಧಿಯ ಬಗ್ಗೆ ಬಹಳ ವ್ಯಾಖ್ಯಾನ ಮಾಡುತ್ತಿದ್ದಾನೆ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಅವರೇ ಸಿಎಂ ಆಗಿದ್ದರು. ಆದರೂ ಸಹ ಅವರ ಪಕ್ಷದ ಯಾವ ಕಾರ್ಯಕರ್ತರಿಗೂ ಅಧಿಕಾರ ಕೊಡಲಿಲ್ಲ. 14 ತಿಂಗಳುಗಳ ಕಾಲ ಯೋಜನಾ ಪ್ರಾಧಿಕಾರ ಸ್ಥಾನ ಖಾಲಿ ಇತ್ತು ಎಂದು ಟಾಂಗ್ ಕೊಟ್ಟಿದ್ದಾರೆ.

ಮತ್ತೆ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ನಾಲಿಗೆ ಹರಿಬಿಟ್ಟಿರುವ ಸಚಿವ ಯೋಗೇಶ್ವರ್ ಚನ್ನಪಟ್ಟಣದ ನಿನ್ನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಗೆ ಹೋದರೂ ಜನರನ್ನು ಮನೆಗೆ ಸೇರಿಸುತ್ತಿರಲಿಲ್ಲ. ಆದರೆ, ಅವನು ಅಧಿಕಾರ ಕಳೆದುಕೊಂಡಾಗ 6 ಗಂಟೆಗೆ ಚನ್ನಪಟ್ಟಣಕ್ಕೆ ಬರುತ್ತಿದ್ದಾನೆ. ಜನರ ಮುಂದೆ ಅವನ ದುರಹಂಕಾರ ನಡೆಯುವುದಿಲ್ಲ ಎಂದು ಅವನಿಗೆ ಈಗ ಗೊತ್ತಾಗಿದೆ. ಅಭಿವೃದ್ಧಿ ಮಾಡಿದರಷ್ಟೇ ಜನ ಮತ ಹಾಕುತ್ದುತಾರೆಂದು ಈಗ ಅವನಿಗೆ ಗೊತ್ತಾಗಿದೆ. ಕುಮಾರಸ್ವಾಮಿ ಬಂದಾಗ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಲ್ಲು ಗಿಂಜುತ್ತಾರೆ, ಹೂವಿನ ಹಾರ ಹಿಡಿದುಕೊಂಡು ಹೋಗುತ್ತಾರೆ. ಆದರೆ ಅವನು ಅಧಿಕಾರದಲ್ಲಿದ್ದಾಗ ಯಾರಿಗೆ ಅಧಿಕಾರ ಕೊಟ್ಟಿದ್ದಾನೆ? ಎಂದು ಸಚಿವ ಸಿಪಿ ಯೋಗೇಶ್ವರ್ ಪ್ರಶ್ನಿಸಿದ್ದಾರೆ.

ಇನ್ನು ರೇಷ್ಮೆ ಮಾರ್ಕೆಟ್ ಸ್ಥಳಾಂತರ ರೈತರ ಅನುಕೂಲಕ್ಕಾಗಿ ಮಾಡಲಾಗ್ತಿದೆ. ಇದರಲ್ಲಿ ಯಾವುದೇ ಬೇರೆ ಉದ್ದೇಶ ಇಲ್ಲ, ಇದು ನಮ್ಮ ಸರ್ಕಾರದ ಯೋಜನೆ, ಆಗಲಿದೆ ಎಂದರು. ಇನ್ನು ‌ಮೀಸಲಾತಿ ಬಗ್ಗೆಯೂ ನಾನು ಚರ್ಚೆ ಮಾಡಲ್ಲ. ಒಕ್ಕಲಿಗ ಮೀಸಲಾತಿ ಬಗ್ಗೆ ಸ್ವಾಮೀಜಿಯವರು ಅವರ ಅಭಿಪ್ರಾಯ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ಸೂಕ್ತ ನಿರ್ಧಾರ ಮಾಡಲಿದೆ ಎಂದರು.

ಇದನ್ನೂ ಓದಿ: ಇಂಧನ ಬೆಲೆ ಏರಿಕೆ ಬಿಸಿ: ಇಂದು ದೇಶಾದ್ಯಂತ ಲಾರಿ ಮುಷ್ಕರ; ರಾಜ್ಯದಲ್ಲೂ ಬೆಂಬಲ

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಲಾಬಿ ನಡೆಸಿ ಕೊನೆಗೂ ಸಚಿವ ಸ್ಥಾನ ಗಿಟ್ಟಿಸಿಕೊಂಡವರು ಸಿ.ಪಿ.ಯೋಗೇಶ್ವರ್. ಆದರೂ ಸಹ ಸಣ್ಣ ನೀರಾವರಿ ಖಾತೆಯನ್ನ ಕಸಿದು ಪ್ರವಾಸೋದ್ಯಮ ಇಲಾಖೆಗೆ ಸಚಿವರಾಗಿ ಮಾಡಲಾಯಿತು. ಈ ನಡುವೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಇದು ಸಹ ಯೋಗೇಶ್ವರ್ ರವರ ರಾಜಕೀಯ ಲೆಕ್ಕಾಚಾರ ಅಂದರೆ ತಪ್ಪಿಲ್ಲ. ಯಾಕೆಂದರೆ ಈ ಹಿಂದೆಯೂ ಸಹ ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ವಾಗ್ದಾಳಿ ನಡೆಸಿದ್ದರಿಂದ ಬಿಜೆಪಿ ಹೈಕಮಾಂಡ್ ಎದುರು ಗುರುತಿಸಿಕೊಂಡಿದ್ದರು. ಇದನ್ನೇ ಬಳಸಿಕೊಂದ ಯೋಗೇಶ್ವರ್ ಕೇಂದ್ರ ಬಿಜೆಪಿ ನಾಯಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು.

ಸದ್ಯ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಿ.ಪಿ.ಯೋಗೇಶ್ವರ್ ಸಚಿವರಾಗಿದ್ದಾರೆ. ಜೊತೆಗೆ ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಹಾಲಿ ಶಾಸಕರಿದ್ದಾರೆ. ಹಾಗಾಗಿ ಚನ್ನಪಟ್ಟಣದಲ್ಲಿ ಬಿಜೆಪಿ ಪಕ್ಷ ಸಂಘಟನೆಯ ದ್ಱಷ್ಟಿಯಿಂದ ಹೆಚ್ಡಿಕೆ ವಿರುದ್ಧ ಯುದ್ಧ ಮಾಡಿದರಷ್ಟೇ ಅದು ಸಾಧ್ಯ. ಯಾಕೆಂದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಕಾರ್ಯಗಳು ಸರಾಗವಾಗಿ ನಡೆಯುತ್ತಿದೆ. ಇನ್ನು ಕಾಂಗ್ರೆಸ್ ವಿರುದ್ಧ ಮಾತನಾಡಲು ಇಲ್ಲಿ ಕಾಂಗ್ರೆಸ್ ನ ಪ್ರಬಲ ನಾಯಕತ್ವ ಇಲ್ಲ. ಉಳಿದಂತೆ ಜೆಡಿಎಸ್ ಪಕ್ಷ ಬಲವಾಗಿರುವ ಕಾರಣ ಹೆಚ್ಡಿಕೆ ವಿರುದ್ಧ ಮಾತನಾಡಿದರೆ ಪಕ್ಷ ಸಂಘಟನೆಯ ಜೊತೆಗೆ ಬಿಜೆಪಿ ಹೈಕಮಾಂಡ್ ನಲ್ಲೂ ಗುರುತಿಸಿಕೊಳ್ಳುವ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಸಿ.ಪಿ‌.ಯೋಗೇಶ್ವರ್.
ಜೊತೆಗೆ ಈ ಹಿಂದಿನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಯೋಗೇಶ್ವರ್ ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿ ನಾನೇ ಎಂದು ಸ್ವತಃ ಯೋಗೇಶ್ವರ್ ಹೇಳಿಕೊಂಡಿದ್ದಾರೆ. ಹಾಗಾಗಿ ಈಗಿಂದಲೇ ಕ್ಷೇತ್ರದಲ್ಲಿ ತನ್ನ ಹೆಸರು ಸದಾ ಚಾಲ್ತಿಯಲ್ಲಿರುವಂತೆ ಯೋಗೇಶ್ವರ್ ತಂತ್ರಗಾರಿಕೆಯನ್ನು ರೂಪಿಸಿದ್ದಾರೆ.

(ವರದಿ : ಎ.ಟಿ. ವೆಂಕಟೇಶ್)
Published by: Sushma Chakre
First published: February 26, 2021, 9:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories