HOME » NEWS » State » KARNATAKA MINISTER CP YOGEESHWAR ACCUSES KANAKAPURA AND BELAGAVI LEADERS BEHIND RAMESH JARKIHOLI SEX CD ISSUE SCT

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ಬೆಳಗಾವಿ, ಕನಕಪುರದವರ ಕೈವಾಡ; ಸಚಿವ ಸಿ.ಪಿ ಯೋಗೇಶ್ವರ್ ಆರೋಪ

Ramesh Jarkiholi Sex Scandal | ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಕನಕಪುರ ಮತ್ತು ಬೆಳಗಾವಿಯವರ ರಾಜಕೀಯ ಷಡ್ಯಂತ್ರವಿದೆ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ತಕ್ಕ ಶಾಸ್ತಿಯನ್ನು ಅವರು ಅನುಭವಿಸುತ್ತಾರೆ ಎಂದು ಸಚಿವ ಸಿ.ಪಿ‌ ಯೋಗೇಶ್ವರ್ ಹೇಳಿದ್ದಾರೆ.

news18
Updated:March 6, 2021, 2:22 PM IST
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ಬೆಳಗಾವಿ, ಕನಕಪುರದವರ ಕೈವಾಡ; ಸಚಿವ ಸಿ.ಪಿ ಯೋಗೇಶ್ವರ್ ಆರೋಪ
ಸಿ.ಪಿ. ಯೋಗೇಶ್ವರ್
  • News18
  • Last Updated: March 6, 2021, 2:22 PM IST
  • Share this:
ಬೆಂಗಳೂರು (ಮಾ. 6): ತಮ್ಮ ಅಶ್ಲೀಲ ಸಿಡಿ ರಿಲೀಸ್ ಆಗಿ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಬಳಿಕ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಗೊತ್ತೇ ಇದೆ. ಆ ಸಿಡಿ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ತಮ್ಮ ಕುರಿತು ಮಾನನಷ್ಟದ ಅಥವಾ ಅವಹೇಳನಕಾರಿಯಾದ ಯಾವ ಸುದ್ದಿಯನ್ನೂ ಪ್ರಸಾರ ಮಾಡದಂತೆ 6 ಸಚಿವರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಆ 6 ಸಚಿವರ ಬಗ್ಗೆಯ ಬಗ್ಗೆ ಖುದ್ದು ಬಿಜೆಪಿ ನಾಯಕರಲ್ಲೇ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಇನ್ನು, ರಮೇಶ್ ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣದ ಬಗ್ಗೆ ಹೊಸ ಬಾಂಬ್ ಹಾಕಿರುವ ಸಚಿವ ಸಿ.ಪಿ. ಯೋಗೇಶ್ವರ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್​ ವಿಡಿಯೋ ಪ್ರಕರಣದ ಹಿಂದೆ ಕನಕಪುರ ಮತ್ತು ಬೆಳಗಾವಿ ಕಡೆಯವರು ಇದ್ದಾರೆ ಎಂದಿದ್ದಾರೆ.

ಕನಕಪುರ ಹಾಗೂ ಬೆಳಗಾವಿಯವರೇ ರಮೇಶ್ ಜಾರಕಿಹೊಳಿ ಅವರ ವಿಡಿಯೋ ಬರಲು ಕಾರಣ ಎನ್ನುವ ಮೂಲಕ ಸಚಿವ ಸಿ.ಪಿ. ಯೋಗೇಶ್ವರ್ ಪರೋಕ್ಷವಾಗಿ ಡಿಕೆಶಿ ಬ್ರದರ್ಸ್​ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಕಡೆಗೆ ಬೆರಳು ಮಾಡಿ ತೋರಿಸಿದ್ದಾರೆ. ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಕನಕಪುರ ಮತ್ತು ಬೆಳಗಾವಿಯವರ ರಾಜಕೀಯ ಷಡ್ಯಂತ್ರವಿದೆ. ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ತಕ್ಕ ಶಾಸ್ತಿಯನ್ನು ಅವರು ಅನುಭವಿಸುತ್ತಾರೆ ಎಂದಿದ್ದಾರೆ.

ಆರು‌ ಜನ ಸಚಿವರು ಕೋರ್ಟ್ ಗೆ ಹೋಗಿದ್ಯಾಕೆ ಅಂತ ಗೊತ್ತಿಲ್ಲ. ಆ ಬಗ್ಗೆ ಆ ಸಚಿವರನ್ನೇ ಕೇಳಬೇಕು. 6 ಜನ ಮಂತ್ರಿಗಳು ಕೋರ್ಟ್ ಮೊರೆ ಹೋಗಿರುವ ವಿಚಾರವಾಗಿ ನನಗೇನೂ ಮಾಹಿತಿಯಿಲ್ಲ. ಅವರ ವೈಯಕ್ತಿಕ ರಕ್ಷಣೆಗೆ ಕೋರ್ಟ್ ಗೆ ಮೊರೆ ಹೋಗಿದ್ದಾರೆ. ಯಾರು ಕೋರ್ಟ್ ಮೊರೆ ಹೋಗಿದ್ದಾರೋ ಅವರನ್ನೇ ಈ ಬಗ್ಗೆ ಕೇಳಬೇಕು. ರಮೇಶ್ ಜಾರಕಿಹೊಳಿ‌ ಪ್ರಕರಣದಲ್ಲಿ ರಾಜಕೀಯ ಪಿತೂರಿ ನಡೆದಿದೆ. ರಾಜಕೀಯ ಷಡ್ಯಂತ್ರದಿಂದ ನಡೆದಿದೆ. ಈ ವಿವಾದದಲ್ಲಿ ನನ್ನನ್ನೂ ಎಳೆಯಬಿಡಿ ಎಂದು ಸಚಿವ ಸಿ.ಪಿ‌ ಯೋಗೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: 6 ಸಚಿವರು ಕೋರ್ಟ್​ ಮೆಟ್ಟಿಲೇರಿದ್ದು ಸರಿಯಲ್ಲ; ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅಸಮಾಧಾನ!

ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಹೋದ ಸಚಿವರಾದ ಶಿವರಾಮ್ ಹೆಬ್ಬಾರ್, ಎಸ್​.ಟಿ ಸೋಮಶೇಖರ್​, ನಾರಾಯಣ ಗೌಡ, ಭೈರತಿ ಬಸವರಾಜ್​, ಬಿ.ಸಿ ಪಾಟೀಲ್​, ಡಾ. ಕೆ. ಸುಧಾಕರ್​​ ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್​ ಮೊರೆ ಹೋಗಿದ್ದಾರೆ. 67 ಸುದ್ದಿ ಸಂಸ್ಥೆಗಳನ್ನು ಪ್ರತಿವಾದಿಯಾಗಿ ಮಾಡಲಾಗಿದೆ. ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಯನ್ನು 68ನೇ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಇನ್ನೂ ಕೆಲವು ರಾಜಕಾರಣಿಗಳ ಸಿಡಿ ಬಿಡುಗಡೆಯ ಸಾಧ್ಯತೆ ಬಗ್ಗೆ ಹೇಳಿಕೆ ನೀಡಿದ್ದ ರಾಜಶೇಖರ್ ಮುಲಾಲಿ ಅವರನ್ನು ಕೂಡ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಜೊತೆಗೆ, ಫೇಸ್ ಬುಕ್, ಟ್ವಿಟರ್, ವಾಟ್ಸಾಪ್, ಯೂಟ್ಯೂಬ್ ಅನ್ನು ಸಹ ಸಚಿವರ ಪರ ವಕೀಲರು ಪ್ರತಿವಾದಿಯನ್ನಾಗಿ ಮಾಡಿದ್ದಾರೆ.
Youtube Video

ಸಿಡಿ ಪ್ರಕರಣದಿಂದ ಪಕ್ಷಕ್ಕೆ ಮುಜುಗರ ಆಗಿರುವುದು ಹೌದು. ಆರೋಪ ಎದುರಿಸುತ್ತಿರುವವರು ಅಧಿಕಾರದಿಂದ ದೂರ ಉಳಿದು ತನಿಖೆಗೆ ಸಹಕರಿಸಬೇಕು. 6 ಸಚಿವರು ಕೋರ್ಟ್​ಗೆ ಹೋಗಿರೋದು ಅವರವರ ವೈಯಕ್ತಿಕ ವಿಚಾರ. ಆದರೆ, ಅನವಶ್ಯಕವಾಗಿ ಕೋರ್ಟ್​ಗೆ ಹೋಗಿ ವಿಚಾರವನ್ನು ಇನ್ನಷ್ಟು ಗೋಜಲು ಮಾಡೋದು ಸರಿಯಲ್ಲ. ಕೋರ್ಟ್ ಗೆ ಹೋಗಿ ವಿಚಾರವನ್ನು ಗೋಜಲು ಮಾಡಿಕೊಳ್ಳೋದು ನನ್ನ ಪ್ರಕಾರ ಸರಿಯಲ್ಲ ಎನ್ನುವ ಮೂಲಕ ಸಚಿವರು ಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ಪರೋಕ್ಷವಾಗಿ ಸಚಿವ ಸದಾನಂದ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published by: Sushma Chakre
First published: March 6, 2021, 2:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories