ಸರ್ಕಾರ ದಿವಾಳಿಯಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಶ್ರೀರಾಮುಲು ತಿರುಗೇಟು

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಕುರ್ಚಿ ಮಾತ್ರ ಕಾಣುತ್ತಿದೆ. ಅವರು ಮುಖ್ಯಮಂತ್ರಿ ಕುರ್ಚಿಗೆ ಹಾರಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಬಿ ಶ್ರೀರಾಮುಲು

ಬಿ ಶ್ರೀರಾಮುಲು

  • Share this:
ಗದಗ (ಫೆ. 12): ಸರ್ಕಾರ ದಿವಾಳಿಯಾಗಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆ ವಿಚಾರವಾಗಿ ಗದಗದಲ್ಲಿ ಸಚಿವ ಬಿ. ಶ್ರೀ ರಾಮುಲು ತಿರುಗೇಟು ನೀಡಿದ್ದಾರೆ. ನಮ್ಮ ಸರ್ಕಾರದ ಹಣಕಾಸಿನಲ್ಲಿ ದಿವಾಳಿಯಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯನವರ ಕ್ಷೇತ್ರವಾದ ಬಾದಾಮಿಯಲ್ಲಿ ಇಂದು 20 ಕೋಟಿ ಕಾಮಗಾರಿ ಶಂಕು ಸ್ಥಾಪನೆ ಮಾಡಲಾಗುತ್ತಿದೆ ಎಂದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಕುರ್ಚಿ ಮಾತ್ರ ಕಾಣುತ್ತಿದೆ. ಅವರು ಮುಖ್ಯಮಂತ್ರಿ ಕುರ್ಚಿಗೆ ಹಾರಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ.

ನಮ್ಮ ಸರ್ಕಾರದ ಉದ್ದೇಶ ಜನರ ಹಿತಾಸಕ್ತಿ ಕಾಪಾಡುವುದು. ಜನರಿಗೆ ಒಳ್ಳೆಯ ಕೆಲಸ ಮಾಡಬೇಕು ಎನ್ನುವದು ನಮ್ಮ ಉದ್ದೇಶವಾಗಿದೆ. ಆದರೆ ಸಿದ್ದರಾಮಯ್ಯ ವಿರೋಧ ಪಕ್ಷದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಹಾರಬೇಕು ಎನ್ನುವ ಉದ್ದೇಶವಾಗಿದೆ. ಹಾರಬೇಕು ಅಂದ್ರೆ ಇಂತಹ ಆರೋಪಗಳನ್ನು ಮಾಡ್ತಾಯಿದ್ದಾರೆ‌.ಯಾವುದೇ ಚುನಾವಣೆ ಗೆದ್ರು ನಾನು ಸಿಎಂ ಆಗಬೇಕು ಅಂತಾ ಸಿದ್ದರಾಮಯ್ಯನವರ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಸಾಕಷ್ಟು ಒಡಕು ಇದೆ. ಒಂದು ಕಡೆ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಅಂತಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಅಂತಾರೆ. ಇನ್ನೊಂದೆಡೆ ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಅಂತಾರೆ. ಅವರಲ್ಲಿ ಯಾವುದೂ ಸರಿಯಿಲ್ಲ ಎಂದು ಶ್ರೀರಾಮುಲು ಟೀಕಿಸಿದ್ದಾರೆ.

ಇದನ್ನೂ ಓದಿ: Areca nut Price: ಕ್ವಿಂಟಾಲ್​ಗೆ 50 ಸಾವಿರ ಮುಟ್ಟಿದ ಚಾಲಿ ಬೆಲೆ; ಅಡಿಕೆ ಬೆಳೆಗಾರರಿಗೆ ಭಾರೀ ಲಾಭದ ನಿರೀಕ್ಷೆ

ಸಿದ್ದರಾಮಯ್ಯ ಅಹಿಂದ ನಂತರ ಹಿಂದು ಜನರನ್ನು ಒಂದುಗೂಡಿಸಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕುರುಬ ಸಮುದಾಯ ಸಮಾವೇಶಕ್ಕೆ ಸಿದ್ದರಾಮಯ್ಯ ಹಾಜರಾಗದ ವಿಚಾರ ಹಾಗೂ ಕುರುಬ ಮೀಸಲಾತಿ ವಿಚಾರದಲ್ಲಿ ಆರ್ ಎಸ್ ಎಸ್ ಕೈವಾಡ ವಿಚಾರಕ್ಕೆ ಪ್ರತಿಕ್ರಿಯೆಸಿದ್ಧಾರೆ. ಕುಣಿಯಲು ಬಾರದವರು ನೆಲಡೊಂಕು ಅಂದರಂತೆ. ಹಾಗೇ ಸಿದ್ದರಾಮಯ್ಯ ಇದ್ದಾರೆ. ಬೇರೆ ಬೇರೆ ಕಾರಣಗಳಿಂದ ಸಿದ್ದರಾಮಯ್ಯ ಕುರುಬ ಸಮಾಜದಲ್ಲಿ ಗುರುತಿಸಿಕೊಳ್ಳಲು ಆಗುತ್ತಿಲ್ಲ. ಯಾಕೆಂದು ಅದರ ಬಗ್ಗೆ ವಿಶ್ಲೇಷಣೆ ಮಾಡಲು ಹೋಗುವದಿಲ್ಲ ಎಂದಿದ್ದಾರೆ.

ಸಚಿವ ಕೆ ಎಸ್ ಈಶ್ವರಪ್ಪನವರು ಕುರುಬ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಯಾಕೇ ಗುರುತಿಸಿಕೊಳ್ಳುತ್ತಿಲ್ಲಾ ಎನ್ನುವುದಕ್ಕೆ ಉತ್ತರ ಇಲ್ಲಾ ಎಂದು ಶ್ರೀರಾಮುಲು ಹೇಳಿದ್ದಾರೆ. ಇದರಲ್ಲಿ ಆರ್ ಎಸ್ ಎಸ್ ಕೈವಾಡ ಇಲ್ಲ. ಯಾರದೋ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹೊಡೆಯುವ ಕೆಲಸ ಆಗಬಾರದು ಎಂದಿದ್ದಾರೆ‌.

ವಿಜಯಪುರ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ ಹೇಳಿಕೆ ವಿಚಾರಕ್ಕೆ  ಶ್ರೀ ರಾಮುಲು ಅವರು, ನಾನು ವೈಯಕ್ತಿಕವಾದ ವಿಚಾರದ ಕುರಿತು ನಾನು ಉಲೇಖ ಮಾಡುವದಿಲ್ಲ. ಯತ್ನಾಳ ಅವರ ಬಗ್ಗೆ ನಾನು ಯಾವುದೇ ಉತ್ತರ ಕೊಡುವುದಿಲ್ಲ ಎಂದಿದ್ದಾರೆ.

(ವರದಿ: ಸಂತೋಷ ಕೊಣ್ಣೂರ)
Published by:Sushma Chakre
First published: